Skip to main content

ಅಮೃತ ಮಹೋತ್ಸವದ ಸುದ್ದಿ & ಪೋಟೋಗಳು.

ಬರೆದಿದ್ದುMarch 2, 2009
5ಅನಿಸಿಕೆಗಳು

ನ್ನಡ ವಾಕ್ಚಿತ್ರದ 75 ನೇ ವರ್ಷದ ನೆನಪಿಗಾಗಿ ಕನ್ನಡ ಚಲನಚಿತ್ರದವರು ಆಯೋಜಿಸಿದ್ದ ಅಮೃತ ಮಹೋತ್ಸವಕ್ಕೆ ಭಾನುವಾರ ಸಂಜೆ ನಾನು ಸಹ ಹೋಗಿದ್ದೆ. ನನ್ನ ಮಾಧ್ಯಮ ಮಿತ್ರರಿಂದಾಗಿ ಒಂದು ವಿ.ಐ.ಪಿ. ಪಾಸ್ ಸಿಕ್ಕಿತ್ತು. ಸರಿ ಇನ್ನೇನು ಪಾಸ್ ಇದೆಯಲ್ಲ ಅಂತ ಶಾಂತಚಿತ್ತದಿಂದ ನಾನು ನನ್ನ ಮಾದ್ಯಮ ಮಿತ್ರ ಕೆ.ವಿನಯ್. ಜೊತೆ ಹೊರಟರೆ ಅಲ್ಲಿ ಕಾಣಸಿಕ್ಕಿದ್ದು ಅವ್ಯವಸ್ಥೆಗಳ ಮಹಾಪೂರ. ವಿ.ಐ.ಪಿ ಪಾಸ್ ದಾರರು ಒಂದು ಕಡೆ ಇರಲಿ, ಸಿನಿರಂಗದ ಖ್ಯಾತ ಕಲಾವಿದರೆ ಒಳಗಡೆ ಹೋಗಲಾಗದೆ ಪರಿತಪಿಸುತ್ತಿದುದನ್ನು ನೋಡಿ ವಾಪಸ್ಸು ಬಂದುಬಿಡೋಣ ಅಂದುಕೊಂಡೆವು. ಅವ್ಟರಲ್ಲಿ ಅಲ್ಲಿಗೆ ನಟ ಶೋಬ್ ರಾಜ್ ಬಂದರು ಹ್ಯಾಗೋ ಅವರ ಜೊತೆ ವೇದಿಕೆಯ ಮುಂಬಾಗ ತಲುಪಿಕೊಂಡೆವು. 5.30 ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ 6.45 ಕ್ಕೆ ಶುರುವಾಯಿತು.

ಅಲ್ಲಿವರೆಗೆ ಎಲ್ಲವೂ ಸರಿಯಾಗಿಯೇ ಇತ್ತು, ಆದರೆ ಯಾವಾಗ ಸಾ.ರಾ.(ಸಾರಾಯಿ) ಗೋವಿಂದ್. ಸ್ವಾಗತ ಭಾಷಣಕ್ಕೆ ಶುರುಮಾಡಿದರೋ ಅಲ್ಲಿಂದ ಎಲ್ಲವೂ ಅಯೋಮಯವಾಗಿಹೋಯಿತು. ಗೋವಿಂದನ ಕೆಲವು ಮಂಗಾಟದ ತುಣುಕುಗಳು ಹೀಗಿವೆ
. 1.ಶೋಭಾ ಕರಂದ್ಲಾಚೆ ಯನ್ನು , ಪ್ರೇಮಾ ಕರಂದ್ಲಾಚೆ ಎಂದರು.
2. ದಕ್ಷಿಣ ಭಾರತದ ಚಲನಚಿತ್ರ ಒಕ್ಕೂಟದ ಅಧ್ಯಕ್ಷರಿಗೆ ಈಗ ಮಾಲಾರ್ಪಣೆ ಎಂದಾಗ, ಯಾರೋ ಒಬ್ಬರು ಹಾರ ತೆಗೆದುಕೊಂಡುಬಂದರು, ಆದರೆ ಅವರಿಗೆ ಹಾರ ಯಾರಿಗೆ ಹಾಕಬೇಕು ಎಂಬುದು ತಿಳಿಯದಿದ್ದಾಗ, ಗೋವಿಂದ ಹೇಳಿದ್ದು. ಆ ಕೊನೆಯಲ್ಲಿ ಇರೋ ಮುದುಕನಿಗೆ ಹಾಕು.
3. ಡಾ.ಸರೋಜ ದೇವಿಗೆ ಮಾಲಾರ್ಪಣೆ ಎಂದರೂ ಅವರಿಗೆ ಯಾರೂ ಮಾಲೆ ಹಾಕಲಿಲ್ಲ.
4. ಸ್ವಾಗತ ಭಾಷಣದ ಮದ್ಯೆ ಈ ಕುಡುಕ ಹೇಳ್ತಿದುದು ' ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಮುಗಿಯಲಿದೆ. ಆಗಮಿಸಿದ ಎಲ್ಲರಿಗೂ ಧನ್ಯವಾದಗಳು.
5. ಸಾಹುಕಾರ್ ಜಾನಕಿ ಯವರಿಗೆ ಕಮಲ ಹಾಸನ್ ನೆನಪಿಸೋವರೆಗೂ ಹಾರ ಹಾಕಲೇ ಇಲ್ಲ. ಅದೂ ಅವರು ಮುಖ್ಯಮಂತ್ರಿ ಪಕ್ಕ ಕೂತಿದ್ದರು ಕೂಡ.
ಕೆಲವು ಹೈಲೈಟ್ಸ್.
1. ಕಾರ್ಯಕ್ರಮ ಶುರುವಾಗುವ ಮುನ್ನ ಡಾ.ವಿಷ್ಣು & ಮತ್ತು ಅಂಬಿ ವೇದಿಕೆಗೆ ರವಿ ಜೊತೆ ಬಂದಾಗ ಎಲ್ಲಾ ಪ್ರೇಕ್ಷಕರಲ್ಲು ವಿದ್ಯುತ್ ಸಂಚಾರವಾದಂತೆ, ಒಮ್ಮೆಲೆ ಎದ್ದು ಓಹ್. ಎನ್ನುತ್ತಾ ಸಿಳ್ಳೆ ಹಾಕಿದ್ದು.
2. ಡಾ.ಕಮಲ ಹಾಸನ್ ವೇದಿಕೆಗೆ ಬಂದದ್ದು ಮತ್ತು ಭಾಷಣ ಶುರುಮಾಡುವ ಮುನ್ನ ಬರ್ತೀನಿ ಬರ್ತೀನಿ ಅಲ್ಲಿಗೇ ಬರ್ತೀನಿ ಅಂತ ಕನ್ನಡದಲ್ಲಿ ಹೇಳಿದ್ದು ಆಮೇಲೆ ನಿರರ್ಗಳವಾಗಿ ಕನ್ನಡದಲ್ಲಿ 1/2 ಘಂಟೆ ಮಾತನಾಡಿದ್ದು.
3. ಅಂಬಿ....ಹೇ ಜೀವದ ಗೆಳೆಯ ಎಲ್ಲಿದ್ದಿಯೋ ಬಾರೋ... ನೋಡುಬಾರೋ ನಮ್ಮ ಜನಸಾಗರಾನ..!! ಅಂದಾಗ ಡಾ.ವಿಷ್ಣು ನಾನು ಇಲ್ಲೇ ಇದ್ದೀನಿ ಕಣೋ ಕುಚುಕು. ಜನಸಮುದ್ರ ನೋಡಿ ಜೀವನ ಧನ್ಯವಾಯಿತು ಕಣೋ ಎಂದಾಗ ಅಭಿಮಾನಗಳಲ್ಲಿ ಉತ್ಸಾಹ ಇಮ್ಮಡಿಸಿತ್ತು.

4. ಅರ್ಜುನ ಸರ್ಜಾ ಅಂಗಿಯಿಲ್ಲದೇ ಶಿವತಾಂಡವ ನೃತ್ಯ ಆಡಿದ್ದು.

5.ದರ್ಶನ್ ಮತ್ತು ಪುನೀತ್ ಮದ್ಯೆ ಯಾರು ತಿಳಿಯರು ನಿನ್ನ ಭುಜಭಲದ ಪರಾಕ್ರಮ ಹಾಡಿನ ಮೋಡಿಗೆ ಎಲ್ಲರೂ ಸುಸ್ತು.

6. ಸುದೀಪ್ -ರಕ್ಷಿತ, ಸಾಧು-ಮಾಲಾಶ್ರೀ, ಉಮಾಶ್ರೀ-ಮಯೂರ್ ಪಟೇಲ್, ಸುಮಿತ್ರ-ಪ್ರಜ್ವಲ್, ಜಯಂತಿ-ರವಿಚಂದ್ರನ್. ಈ ಜೋಡಿಗಳು ಕುಣಿದದ್ದು.

6. ಕೊನೆಯಲ್ಲಿ 75 ವರ್ಷಗಳ ಎಲ್ಲಾ ಜನಪ್ರಿಯ ಗೀತೆಗಳಿಗೆ ಒಬ್ಬೊಬ್ಬರಾಗಿ ಹಿರಿನಟಿಯರ ಜೊತೆ ಯುವನಾಯಕ ನಟರು ಹೆಜ್ಜೆಹಾಕಿದಾಗ, ಅಭಿಮಾನಿಗಳ ಸಂತಸ ಮೇರೆಮೀರಿತು ಅದರ ಪ್ರಯುಕ್ತ ಪೋಲೀಸರ ಬೆತ್ತದ ರುಚಿನೋಡಬೇಕಾಯಿತು.

[img_assist|nid=3643|title=ಬಬ್ರುವಾಹನದ ಹಾಡಿಗೆ ದರ್ಶನ್ & ಪುನೀತ್ ಒಂದಾದ ಘಳಿಗೆ.|desc=|link=none|align=center|width=640|height=563]

[img_assist|nid=3641|title=ಡಾ.ಕಮಲ್, ಜೂಲಿಲಕ್ಷ್ಮಿ|desc=|link=none|align=center|width=640|height=517]

[img_assist|nid=3638|title=ವೇದಿಕೆಯಲ್ಲಿ ವಿಷ್ಣು|desc=|link=none|align=center|width=640|height=381]

[img_assist|nid=3640|title=ಕಾರ್ಯಕ್ರಮದ ಶುರುವಾಗುವ ಮುನ್ನ|desc=|link=none|align=center|width=640|height=365]

[img_assist|nid=3637|title=ಅಮೃತ ಮಹೋತ್ಸವ.|desc=|link=none|align=center|width=640|height=398]

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

konkubhatta ಸೋಮ, 03/02/2009 - 13:51

1. ಶೋಭಾ ಕರಂದ್ಲಾಚೆ ಯನ್ನು , ಪ್ರೇಮಾ ಕರಂದ್ಲಾಚೆ ಎಂದರು. :D :D :D :D :D :D :D :D :D

2. ದಕ್ಷಿಣ ಭಾರತದ ಚಲನಚಿತ್ರ ಒಕ್ಕೂಟದ ಅಧ್ಯಕ್ಷರಿಗೆ ಈಗ ಮಾಲಾರ್ಪಣೆ ಎಂದಾಗ, ಯಾರೋ ಒಬ್ಬರು ಹಾರ ತೆಗೆದುಕೊಂಡುಬಂದರು, ಆದರೆ ಅವರಿಗೆ ಹಾರ ಯಾರಿಗೆ ಹಾಕಬೇಕು ಎಂಬುದು ತಿಳಿಯದಿದ್ದಾಗ, ಗೋವಿಂದ ಹೇಳಿದ್ದು. ಆ ಕೊನೆಯಲ್ಲಿ ಇರೋ ಮುದುಕನಿಗೆ ಹಾಕು. :D :D :D :D :D :D :D :D :D
ಯಾರ ಕಿವಿಗೆ ಬೀಳದಿದ್ದರೆ ಹತ್ತಿರ ಹತ್ತಿರ 50ರ (ಅಥವಾ ಹೆಚ್ಚೇ ಏನೋ?) ಈ ಹೊಂತಕಾರಿ ಯುವಕ ಡಾ.ರಾಜ್ ಬಗ್ಗೂ ಹೀಗೇ ಎನ್ನುತ್ತಿದ್ದರೋ ಏನೋ.

3. ಡಾ.ಸರೋಜ ದೇವಿಗೆ ಮಾಲಾರ್ಪಣೆ ಎಂದರೂ ಅವರಿಗೆ ಯಾರೂ ಮಾಲೆ ಹಾಕಲಿಲ್ಲ. :D :D ಸಾರಾಗೋ ಆ ಮುದುಕಿಗೆ ಹಾಕು ಎನ್ನಲಿಲ್ಲವಲ್ಲ. ಮಾಲೆ ಹಾಕುವವರು confuse ಆಗಿರಬೇಕು.

4. ಸ್ವಾಗತ ಭಾಷಣದ ಮದ್ಯೆ ಈ ಕುಡುಕ ಹೇಳ್ತಿದುದು ' ಇನ್ನೇನು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಮುಗಿಯಲಿದೆ. ಆಗಮಿಸಿದ ಎಲ್ಲರಿಗೂ ಧನ್ಯವಾದಗಳು. :D :D :D :D :D

ಸಾರಾಗೋ ಇದ್ದರೆ ಸಾಕು ನೋಡಿ. ಆಮೇಲಿನ ಮನೋರಂಜನಾ ಕಾರ್ಯಕ್ರಮಗಳು ಅಗತ್ಯವೇ ಇಲ್ಲ.

ರಾಜೇಶ ಹೆಗಡೆ ಸೋಮ, 03/02/2009 - 17:10

ಹಾಯ್ ಶ್ರೀನಿವಾಸ್,

ತುಂಬಾ ಚೆನ್ನಾಗಿ ಸಂಕ್ಷಿಪ್ತವಾಗಿ ಕಾರ್ಯಕ್ರಮದ ಸಾರವನ್ನು ಹೇಳಿದ್ದೀರಿ. ನಾನು ನಿನ್ನೆ ಉದಯ ವಾರ್ತೆ ಟಿವಿಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ವೀಕ್ಷಿಸಿದ್ದೆ.

ನನಗೆ ಇಷ್ಟವಾಗಿದ್ದು ಕಮಲ್ ಹಾಸನ್ ಅವರ ಭಾಷಣ. :)

ಗೊಂದಲದ ಗೂಡಾಗಿತ್ತು ಈ ಕಾರ್ಯಕ್ರಮದ ನಿರ್ವಹಣೆ.
ಅಂಬಿ, ವಿಷ್ಣು ಇತ್ಯಾದಿ ಸಿನಿಮಾ ನಟರನ್ನು ನೋಡಿ ಖುಷಿಯಾಯಿತು.

ರಾಜಕುಮಾರರ 75 ಚಿತ್ರಗಳ ಪಾತ್ರಧಾರಿಗಳನ್ನು ನೋಡಿ ಅವರ ಹಳೆಯ ಚಿತ್ರಗಳ ನೆನಪು ಕಣ್ಮುಂದೆ ಬಂದವು.

ಧನ್ಯವಾದಗಳು :)

ಕೆಎಲ್ಕೆ ಸೋಮ, 03/02/2009 - 18:41

ಶ್ರೀನಿವಾಸರೆ, ಮೊದಲು ನೀವು ಬರೆದದ್ದನ್ನು ಓದಿ ನಂಬಲಾಗಲಿಲ್ಲ. ನಂತರ ಸಾರಾಗೋವಿನ ಮುಖ ನೆನಪಿಸಿಕೊಂಡು ಇದ್ದರೂ ಇರಬಹುದೆಂದು ಕೊಂಡೆ !! ಉಳಿದೆಲ್ಲ ಮಾಧ್ಯಮಗಳಲ್ಲಿ ನೋಡಿ, ಓದಿ ತಿಳಿದ ಅಮೃತ ಮಹೋತ್ಸವದ ಸುದ್ದಿಗಿಂತ ನಿಮ್ಮ ಲೇಖನ ಚೆನ್ನಾಗಿದೆ!! ಧನ್ಯವಾದಗಳು.

ಅಶ್ವಿನಿ ಮಂಗಳ, 03/03/2009 - 14:48

ನಮಸ್ಕರ ಶ್ರಿನಿವಸ ರವರಿಗೆ,
ವಿಮರ್ಶೆ ಚೆನ್ನಾಗಿ ಮುಡಿ ಬನ್ದಿಧೆ

ನಾನು ಸಹಾ ಇದರ ಬಗ್ಗೆ ಬರೆದಿದ್ದೇನೆ, ಓದಿ
http://sampada.net/article/17597

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.