Skip to main content

ಬೆಂಗಳೂರು ಅಂತರಾಷ್ಥ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು

ಬರೆದಿದ್ದುFebruary 27, 2009
2ಅನಿಸಿಕೆಗಳು

ಒಕ್ಕಲಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಬಾಲಗಂಗಾಧರ ಸ್ವಾಮಿಗಳು ಹೇಳಿದ ಬೆನ್ನಲ್ಲೆ , ಹೇಗಾದರೂ ಸರಿ ಒಕ್ಕಲಿಗರನ್ನು ಓಲೈಸಬೇಕೆಂದು ನಿರ್ಧರಿಸಿರುವ ನಮ್ಮ ಯಡಿಯೂರಪ್ಪನವರು, ಅದಕ್ಕಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸ್ವಾಮಿಗಳು ಹಾಗೆಂದ ಮಾರನೇ ದಿನವೇ ಅವರ ಕಾಲಿಗೊಂದು ಡೈ ಹೊಡೆದುಬಂದಿದ್ದ ಯಡ್ಡಿ, ಈಗ ಬೆಂಗಳೂರು ಅಂತರಾಷ್ಥ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನಿಡಬೇಕೆಂದು ಇವತ್ತು ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಒಕ್ಕಲಿಗರನ್ನು ಶಾಂತಿಗೊಳಿಸಲು ಇನ್ನೂ ಏನೆಲ್ಲಾ ಮಾಡಬೇಕಾಗುತ್ತೋ ಈ ಸರ್ಕಾರ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಮಹೇಶ ಪ್ರಸಾದ ನೀರ್ಕಜೆ ಶುಕ್ರ, 02/27/2009 - 17:13

ಮಾಡಿದ್ರೂ ಬೈತೀರ ಮಾಡ್ದೇ ಇದ್ರೂ ಬೈತೀರ.. ಬೇರೆ ಕೆಲ್ಸ ಇಲ್ವ??

ನನ ಕೇಳಿದ್ರೆ ಸರ ಎಮ ವಿಶ್ವೇಶ್ವರಯ್ಯ ಹೆಸ್ರು ಇಡೋದ ಒಳ್ಳೇದಿತ್ತು. ಹಾಗಂತ ಒಕ್ಕಲಿಗರನ್ನ ಒಲೈಸೋದು ಅಂತ ಯಡ್ಡಿನ ಜರೆಯೋದು ಸರಿ ಇರಲ್ಲ.

ವಿ.ಎಂ.ಶ್ರೀನಿವಾಸ ಶುಕ್ರ, 02/27/2009 - 17:23

ಹಾಗಲ್ಲ ಮಹೇಶ್, ನೋಡಿ ಬೆಂಗಳೂರು ಅಂತರಾಷ್ಥ್ರೀಯ ವಿಮಾನ ನಿಲ್ದಾಣ ಉದ್ಘಾಟಿಸುವಾಗ, ಎಷ್ಟು ದೊಡ್ಡ ಹೋರಾಟ ಆಯಿತು. ಸ್ವಾಮಿಗಳೇ ಹೋರಾಟ ಮಾಡಿದ್ರು ಕೆಂಪೇಗೌಡರ ಹೆಸರು ಇಡಲಿಲ್ಲ. ಆದರೆ ಈಗ ನೋಡಿ, ಒಂದೇ ಸಾರಿ ಕೆಂಪೇಗೌಡರ ಮೇಲೆ ಪ್ರೀತಿ ಬಂದುಬಿಟ್ಟಿದೆ. ಇದನ್ನೇ ನಾನು ಹೇಳಿದ್ದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.