Skip to main content

ವಿವಾದಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಬರೆದಿದ್ದುJanuary 12, 2009
21ಅನಿಸಿಕೆಗಳು

ಕರ್ನಾಟಕ ಸರ್ಕಾರದ ಬಹು ನಿರೀಕ್ಷಿತ 2007-08 ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ.
ಎಂದಿನಂತೆ ಈ ಸಾಲಿನ ಪ್ರಶಸ್ತಿಗಳೂ ಸಹ ವಿವಾದಗಳಿಂದ ದೂರವೇನು ಅಲ್ಲ. ಅದಾಗಲೇ ಗಂಡುಗಲಿ ಕೆ.ಮಂಜು ಮತ್ತು ಅಗ್ನಿ ಶ್ರೀಧರ್ , ತಮಗೆ ಬಂದಿರುವ ಪ್ರಶಸ್ತಿಗಳನ್ನು ತಿರಸ್ಕರಿಸಿದ್ದಾರೆ. ಇವರಿಬ್ಬರಲ್ಲಿ ಕೆ.ಮಂಜು " ಮಾತಾಡ್ ಮಾತಾಡ್ ಮಲ್ಲಿಗೆ " ಗೆ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಬರಬೇಕಿತ್ತು ಎಂದಿರುವುದು ಸರಿಯೆನಿಸಿದೆ. ಕೇವಲ 10-15 ಲಕ್ಷದಲ್ಲಿ , ಪ್ರಶಸ್ತಿಗೋಸ್ಕರವೇ ಸಿನಿಮಾ ಮಾಡಿ, ಥಿಯೇಟರ್ ಮುಖವೇ ಕಾಣದ , ಸರಿಯಾಗಿ ನೂರು ಜನ ಸಹ ನೋಡದ ಗುಲಾಬಿ ಟಾಕೀಸ್, ಮೊಗ್ಗಿನ ಜಡೆ ಯಂತಹ ಚಿತ್ರಗಳಿಗಿಂತ ಕೋಟ್ಯಾಂತರ ರೂಪಾಯಿ ಸುರಿದು ಜನರಲ್ಲಿ ಒಂದು ಮಟ್ಟದ ತಿಳುವಳಿಕೆ ಮೂಡಿಸಲು ಸಹಕಾರಿಯಾದ ಮಾಮಾಮ ಗೆ ಪ್ರಶಸ್ತಿ ನೀಡಬೇಕಿತ್ತು ಎಂದಿರುವುದು ಖಂಡಿತ ನಿಜ. ಇನ್ನು ಅಗ್ನಿ ಶ್ರೀಧರ್ ರವರು ತಮ್ಮ ಭೂಗತ ಕಥೆಗೂ ಪ್ರಶಸ್ತಿ ಬೇಕು ಎಂದಿರುವುದು ಎಷ್ಟು ಸರಿಯೋ ಕಾಲವೇ ಉತ್ತರಿಸಲಿದೆ.
ಈ ವರ್ಷದ ಮತ್ತೊಂದು ಮುಖ್ಯಾಂಶವೇನೆಂದರೆ ತೆಲುಗು ತಮಿಳು ಚಿತ್ರಗಳ ಕಲಸುಮೇಲೋಗರವಾಗಿದ್ದ ಮಿಲನ ಚಿತ್ರದಲ್ಲಿ ಅಭಿನಯಿಸಿದ್ದಕ್ಕಾಗಿ ಶ್ರೀ. ಪುನೀತ್ ರವರಿಗೆ ಅತ್ಯುತ್ತಮ ಪ್ರಶಸ್ತಿ ಬಂದಿರುವುದು. ಬಿಡಿ ಹೇಗಾದ್ರೂ ಅವರು " ಪವರ್" ಸ್ಟಾರ್ ' ಅಲ್ವಾ..?

ಇನ್ನಿತರ ಪಟ್ಟಿ ಕೆಳಕಂಡಂತಿದೆ.
ಡಾ.ರಾಜ್ ಕುಮಾರ್ ಪ್ರಶಸ್ತಿ: ಡಾ. ವಿಷ್ಣುವರ್ಧನ್.
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ನಿರ್ದೇಶಕ ರೇಣುಕಾ ಶರ್ಮ.
(ಸುಬ್ಬಯ್ಯ ನಾಯ್ಡು ಪ್ರಶಸ್ತಿ)ಶ್ರೇಷ್ಠ ನಟ: ಪುನೀತ್ ರಾಜ್ ಕುಮಾರ್ (ಚಿತ್ರ: ಮಿಲನ)
ಶ್ರೇಷ್ಠ ನಟಿ: ಉಮಾಶ್ರೀ (ಚಿತ್ರ: ಗುಲಾಬಿ ಟಾಕೀಸು)
ಶ್ರೇಷ್ಠ ಬಾಲನಟ: ಲಿಖಿತ್ (ಚಿತ್ರ: ನಾನು ಗಾಂಧಿ)
ಶ್ರೇಷ್ಠ ಬಾಲನಟಿ: ಪ್ರಕೃತಿ( ಚಿತ್ರ:ಗುಬ್ಬಚ್ಚಿಗಳು)
ಜೀವಮಾನ ಶ್ರೇಷ್ಠ ಪ್ರಶಸ್ತಿ: ಪಾರ್ವತಮ್ಮ ರಾಜ್ ಕುಮಾರ್.
ಅತ್ಯುತ್ತಮ ಚಿತ್ರ1: ಗುಲಾಬಿ ಟಾಕೀಸು (ನಿರ್ದೇಶಕ: ಗಿರೀಶ್ ಕಾಸರವಳ್ಳಿ, ನಿರ್ಮಾಪಕ:ಬಸಂತ್ ಕುಮಾರ್ ಪಾಟೀಲ್)
ಅತ್ಯುತ್ತಮ ಚಿತ್ರ2: ಮೊಗ್ಗಿನಜಡೆ (ನಿರ್ದೇಶಕ: ಪಿ.ಆರ್ .ರಾಮದಾಸ್ ನಾಯ್ಡು,ನಿರ್ಮಾಪಕರು: ಪಿ.ಆರ್ .ರಾಮದಾಸ್ ನಾಯ್ಡು,ಬೀರಪ್ಪ)
ಅತ್ಯುತ್ತಮ ಚಿತ್ರ3: ಮಾತಾಡ್ ಮಾತಾಡು ಮಲ್ಲಿಗೆ (ನಿರ್ದೇಶಕ:ನಾಗತಿಹಳ್ಳಿ ಚಂದ್ರಶೇಖರ್ ,ನಿರ್ಮಾಪಕ:ಕೆ.ಮಂಜು)
ಸಾಮಾಜಿಕ ಕಳಕಳಿಯ ಚಿತ್ರ:ಬನದ ನೆರಳು (ನಿರ್ದೇಶಕ ಮತ್ತು ನಿರ್ಮಾಪಕ: ಉಮಾಶಂಕರ ಸ್ವಾಮಿ)
ಮಕ್ಕಳ ಚಿತ್ರ:ಏಕಲವ್ಯ (ನಿರ್ದೇಶಕ:ಬರಗೂರು ರಾಮಚಂದ್ರಪ್ಪ,ನಿರ್ಮಾಣ: ಅಭಿರುಚಿ ಚಿತ್ರ)
ಅತ್ಯುತ್ತಮ ಪ್ರಾದೇಶಿಕ ಚಿತ್ರ: ಬಿರ್ಸೆ( ತುಳು)

ಅತ್ಯುತ್ತಮ ಪೋಷಕ ನಟ:ರಾಜೇಶ್ (ಚಿತ್ರ:ಮೊಗ್ಗಿನಜಡೆ )
ಅತ್ಯುತ್ತಮ ಪೋಷಕ ನಟಿ:ಸ್ಮಿತಾ (ಚಿತ್ರ: ಅವ್ವ)
ಅತ್ಯುತ್ತಮ ಸಂಗೀತ ನಿರ್ದೇಶಕ: ಸಾಧುಕೋಕಿಲ (ಚಿತ್ರ:ಇಂತಿ ನಿನ್ನ ಪ್ರೀತಿಯ )
ಅತ್ಯುತ್ತಮ ಹಿನ್ನೆಲೆ ಗಾಯಕ: ಎಸ್ ಪಿ ಬಾಲಸುಬ್ರಮಣ್ಯ (ಚಿತ್ರ: ಸವಿಸವಿನೆನಪು ಚಿತ್ರದ 'ನೆನಪು.. ನೆನಪು..')
ಅತ್ಯುತ್ತಮ ಹಿನ್ನೆಲೆ ಗಾಯಕಿ: ವಾಣಿ (ಚಿತ್ರ: ಇಂತಿ ನಿನ್ನ ಪ್ರೀತಿಯ ಚಿತ್ರದ 'ಮಧುವನ ಕರೆದರೆ....')
ಅತ್ಯುತ್ತಮ ಗೀತೆ ರಚನೆಕಾರ: ಗೊಲ್ಲಹಳ್ಳಿ ಶಿವಪ್ರಸಾದ್( "ಝುಣ ಝುಣ ಕಾಂಚನ..".ಚಿತ್ರ: ಮಾತಾಡ್ ಮಾತಾಡು ಮಲ್ಲಿಗೆ)
ಅತ್ಯುತ್ತಮ ಕಥೆಗಾರ: ಪಿ ಲಂಕೇಶ್( ಚಿತ್ರ: ಅವ್ವ)
ಅತ್ಯುತ್ತಮ ಚಿತ್ರಕಥೆ: ಗಿರೀಶ್ ಕಾಸರವಳ್ಳಿ( ಚಿತ್ರ: ಗುಲಾಬಿ ಟಾಕೀಸು)
ಅತ್ಯುತ್ತಮ ಕಲಾ ನಿರ್ದೇಶಕ: ಜಿ. ಮೂರ್ತಿ( ಚಿತ್ರ: ಕುರುನಾಡು)
ಅತ್ಯುತ್ತಮ ನಿರ್ದೇಶಕ: ಗಿರೀಶ್ ಕಾಸರವಳ್ಳಿ (ಚಿತ್ರ: ಗುಲಾಬಿ ಟಾಕೀಸು)
ಅತ್ಯುತ್ತಮ ಛಾಯಾಗ್ರಾಹಕ: ಹೆಚ್ ಸಿ.ವೇಣು (ಚಿತ್ರ: ಆ ದಿನಗಳು )
ಅತ್ಯುತ್ತಮ ಸಂಕಲನಕಾರ: ಸುರೇಶ್ ಅರಸ್ (ಚಿತ್ರ:ಸವಿಸವಿನೆನಪು )
ಅತ್ಯುತ್ತಮ ಸಂಭಾಷಣಾಕಾರ: ಅಗ್ನಿಶ್ರೀಧರ್(ಚಿತ್ರ: ಆ ದಿನಗಳು)
ಅತ್ಯುತ್ತಮ ಧ್ವನಿಗ್ರಹಣ: ಎನ್ ಕುಮಾರ್ (ಚಿತ್ರ: ಆಕ್ಸಿಡೆಂಟ್)
ಅತ್ಯುತ್ತಮ ಕಂಠದಾನ ಕಲಾವಿದ: ಸುದರ್ಶನ್(ಚಿತ್ರ : ಆ ದಿನಗಳು)
ಅತ್ಯುತ್ತಮ ಕಂಠದಾನ ಕಲಾವಿದೆ: ಚಂಪಾ ಶೆಟ್ಟಿ (ಚಿತ್ರ: ಕುರುನಾಡು)

ಪಟ್ಟಿ ಕೃಪೆಃ ವಿಜಯಕರ್ನಾಟಕ ಕನ್ನಡ ದಿನ ಪತ್ರಿಕೆ.

ಲೇಖಕರು

ವಿ.ಎಂ.ಶ್ರೀನಿವಾಸ

ಭಾವ ಲಹರಿ

ನನ್ನ ಹೆಸರು ವೀರಕಪುತ್ರ ಶ್ರೀನಿವಾಸ,

ಅನಿಸಿಕೆಗಳು

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/12/2009 - 10:04

ಪುನೀತ್ ರಾಜ್ ಕುಮಾರ್ ಮಿಲನದಲ್ಲಿ ಚೆನ್ನಾಗಿ ಆಕ್ಟಿಂಗ ಮಾಡಿದ್ದಾರ ?

praveen sooda ಸೋಮ, 09/21/2009 - 22:07

ಖಂಡಿತಾ ಸ್ವಾಮಿ ಏನಾಗಿದೆ ಹೇಳಿ ಪುನೀತ್ ಆಕ್ಟಿಂಗ್ ಗೆ

ರಾಜೇಶ ಹೆಗಡೆ ಸೋಮ, 01/12/2009 - 10:10

ಆ ದಿನಗಳು ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಬರಬೇಕಿತ್ತು ಅಂತಾ ನನ್ನ ಅಭಿಪ್ರಾಯ. :( ಮಾತಾಡ್ ಮಾತಾಡು ಮಲ್ಲಿಗೆ ಕೂಡಾ ಚೆನ್ನಾಗಿದೆ. 8) ಗುಲಾಬಿ ಟಾಕೀಸ್ ಮತ್ತು ಮೊಗ್ಗಿನಜಡೆ ನಾನಿನ್ನೂ ನೋಡಿಲ್ಲ.

ವಿ.ಎಂ.ಶ್ರೀನಿವಾಸ ಸೋಮ, 01/12/2009 - 15:24

ಆ ದಿನಗಳು ಚೆನ್ನಾಗಿದೆ . ರೌಡಿ ಜಗತ್ತಿನ ಬಗ್ಗೆ ತುಂಬಾ ಪರಿಣಾಮಕಾರಿ ಹೇಳಿದ ಚಿತ್ರ ಅದು. ಆದರೆ ಮಾತಾಡ್ ಮಾತಾಡ್ ಮಲ್ಲಿಗೆ ಯಲ್ಲಿರುವಂತಹ ಸಾಮಾಜಿಕ ಕಳಕಳಿ, ರೈತಪರ ಕಾಳಜಿ ಆ ದಿನಗಳು ಚಿತ್ರದಲ್ಲಿಲ್ಲ. SEZ (ವಿಶೇಷ ಆರ್ಥಿಕ ವಲಯ) ಗಳ ಮೂಲಕ, ರಾಜಕಾರಣಿಗಳು, ಉದ್ದಿಮೆದಾರರು ಹೇಗೆ ರೈತರನ್ನು ವಂಚಿಸುತ್ತಿದ್ದಾರೆ ಎಂಬುದನ್ನು ತೀರಾ ಪರಿಣಾಮಕಾರಿಯಾಗಿ ತಿಳಿಸಿದ ಚಿತ್ರ ಮಾ.ಮಾ.ಮ. ಪ್ರಶಸ್ತಿ ಯ ದೃಷ್ಟಿಯಿಂದ ಮಾ.ಮಾ.ಮ ಗಿಂತ ಆ ದಿನಗಳು ಉತ್ತಮವಲ್ಲ ಎಂಬುದು ನನ್ನ ಅಭಿಪ್ರಾಯ.

Mahantesh ಸೋಮ, 01/12/2009 - 10:19

ದುಡ್ಡೇ ದೊಡ್ಡಪ್ಪ.....
ಯಾರ ಹತ್ರ ದುಡ್ಡ ಇದೆ ಮತ್ತೆ influence ಇದೆ ಅವರಿಗೆ ಪ್ರಶಸ್ತಿ....

praveen sooda ಸೋಮ, 09/21/2009 - 22:14

ರೀ ನಿಮ್ಗೆ ಎಲ್ಲೋ ರಾಜ್‍ಕುಮಾರ್ ವಂಶದ ಮೇಲೆ ಸಾಮ್ಯಾನ ಅನಾಗರಿಕರಿಗೀರೋ ಹೊಟ್ಟೆಕಿಚ್ಚು ಅನ್ಸತ್ತೆ... ಕೋಪ ಮಾಡ್ಕೊಬೆಡಿ. ಮಿಲನನ ತೆಲುಗು ತಮಿಳು ಬೆರಕೆ ಅನ್ದಿದಿರಲ್ಲ. ದಯವಿಟ್ಟು ಸಾಕ್ಷಿ ಕೊಡ್ತಿರ... ನಿಮ್ ಮನೇಲಿ ಕೆಲಸ ಮಾಡ್ಕೊನ್ಡಿರ್ತಿನಿ. ಪವರ್ ಸ್ಟಾರ್ ಅಂತ ಹೀಯಾಲಿಸ್ತಿರಲ್ಲ. ನಿಜಕ್ಕೂ ರೀಮೇಕ್ ಮಾಡೋ ಅನ್ಥೊರ್ನ ಹಿಡ್ದು ಬರಿರಿ. ಏನ್ರೀ ಕಮ್ಮಿ ಪುನೀತ್ ಗೆ ಹೆಳಿ ಒಳ್ಳೇ ನಟ. ಎಲ್ಲೋ ವ್ಯವಹಾರಿಕ ಚಿತ್ರಗಳಿಗೆ ಅಂತ ತನ್ನ ಸ್ವಂತ ಪ್ರತಿಭೇನ ಹೊರಗೆ ಹಾಕಿಲ್ಲ ಅಷ್ಟೇ. ಒಳ್ಳೇ ನಿರ್ಧೇಷಕನ ಕೈಲಿ ಕೊಡಿ ಆಮೇಲೆ ನೊಡಿ ಪುನೀತ್ ಏನು ಅಂತ.

ವಿ.ಎಂ.ಶ್ರೀನಿವಾಸ ಮಂಗಳ, 09/22/2009 - 12:10

ನಮಸ್ತೇ ಸಾರ್.
ಕೇವಲ ನಾನು ನನ್ನ ಅಭಿಪ್ರಾಯ ಹೇಳಿದ ಮಾತ್ರಕ್ಕೆ "ನನ್ನನ್ನು ಅನಾಗರೀಕ ಎಂದ ನಿಮ್ಮ ನಾಗರೀಕತೆ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ".

praveen sooda ಸೋಮ, 09/21/2009 - 22:19

ಕೇವಲ ಪ್ರಶಸ್ತಿಗೆ ಅಂತೀರಲ್ಲ ಸರಿ ಕಾಸರವಳ್ಳಿ ಅಷ್ಟು cಪರಿಣಾಮಕಾರಿಯಾಗಿ ಸಿನಿಮಾ ಮಾಡೋ ಒಬ್ಬ ನಿರ್ದೇಶಕನ ತೋರ್ಸಿ ನೊಡನ.. ಕಥೆ ಎನ್ ಕೇಳತ್ತೆ ಅದಕ್ಕೆ ಮಾತ್ರ ಖರ್ಚು ಮಾಡ್ಬೇಕು. ಅದು ಬಿಟ್ಟು ಆದ್ಧೂರಿ ಹೆಸರಲ್ಲಿ ದುಡ್ಡು ಹೋಮ ಮಾಡೊದಲ್ಲ. ಕಾಸರವಳ್ಳಿ ಅವರ ಚಿತ್ರಗಳಿಗೆ ಆಯ್ಕೆಯಾಗೊ ಕಥೆ ನೋಡಿ ಒಂದು ಸರಿ. ಅಂತ ಕಥೆ ಚಿತ್ರ ಮಾಡೋ ಧೈರ್ಯ ಇಲ್ದೇ ಕನ್ನಡದಲ್ಲಿ ಕಥೆ ಇಲ್ಲ ಅನ್ನೋ ಕೆಟ್ಟ ನಿರ್ಮಾಪಕ ನಿರ್ಧೇಷಕರ ಪರ ಮಾತಾಡ್ತಿರಲ್ಲ. ಶಿಕ್ಷಿತರ ಹಾಗೆ ನಿಮ್ ಅಭಿಪ್ರಾಯ ಇಲ್ಲಾರೀ.

ವಿ.ಎಂ.ಶ್ರೀನಿವಾಸ ಮಂಗಳ, 09/22/2009 - 12:25

ನನ್ನಿಂದ ತಪ್ಪಾಗಿದ್ದರೆ, ನೋವಾಗಿದ್ದರೆ ಕ್ಷಮಿಸಿ ಸಾರ್. ಕ್ಷಮಿಸಿದ ನಂತರ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಿ.
ನಮ್ಮ ಕಾಸರವಳ್ಳಿ ಸಾರ್ ರವರ ಎಷ್ಟು ಚಿತ್ರಗಳನ್ನು ನೀವು ನಿಮ್ಮ ಮನೆಯವರೊಂದಿಗೆನೋಡಿದ್ದೀರಿ.
ಎಷ್ಟು ಸಿನಿಮಾಗಳ ಬಗ್ಗೆ ಗೆಳೆಯರೊಂದಿಗೆ ಗಂಭೀರವಾಗಿ ಚರ್ಚಿಸಿದ್ದೀರಿ.
ಎಷ್ಟು ಸಿನಿಮಾಗಳು 100 ದಿನದ ಆಚರಣೆಯನ್ನು ಮಾಡಿಕೊಂಡಿದ್ದಾವೆ.? ಎಷ್ಟು ಜನ ಹೊಸ ಕಲಾವಿದರನ್ನು ಹುಟ್ಟು ಹಾಕಿವೆ.?
ಎಷ್ಟು ನಿರ್ಮಾಪಕರನ್ನು, ಸಿನಿಮಾ ಕುಟುಂಬಗಳನ್ನು ಲಾಭದಾಯಕವನ್ನಾಗಿಸಿವೆ.?
ಎಷ್ಟು ಸಿನಿಮಾಗಳು ಸಾಮಾಜಿಕ ಕ್ರಾಂತಿ ಮಾಡಿವೆ.?
ಕೊನೆಮಾತು: ಉತ್ತರಗಳು ನನ್ನನ್ನು ವಂಚಿಸಿದರೂ ಪರವಾಗಿಲ್ಲ ನಿಮ್ಮ ಆತ್ಮಸಾಕ್ಷಿಯನ್ನು ವಂಚಿಸದಿರಲಿ, ಯಾಕೆಂದರೆ ಆತ್ಮಸಾಕ್ಷಿಗೆ ಸುಳ್ಳು ಹೇಳಿಕೊಳ್ಳುವ ಮನುಷ್ಯ ನೈತಿಕವಾಗಿ ಬದುಕುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ.(ಎಲ್ಲೋ ಕೇಳಿದ್ದು)

praveen sooda ಸೋಮ, 09/21/2009 - 22:24

ಮಾ ಮಾ ಮ ಚಿತ್ರ ಒಳ್ಳೆ ಚಿತ್ರ ಒಪ್ಕೊತಿನಿ ಆದ್ರೆ ಅಷ್ಟು ಪರಿಣಾಮಕರಿಯಾಗಿ ಬನ್ದಿಲ್ಲ.... ಕಥೆ ಅಯ್ಕೆ ಅಲ್ಲಿ ಮಾತ್ರ ಅದು ಉತ್ತಮ. ಆ ದಿನಗಳು ತುಮ್ಬ ಪರಿಣಾಮಕರಿಯಾಗಿ ಬನ್ದಿದೆ ಆದ್ರೆ ಕಥೆ ಪ್ರಶಸ್ತಿ ಅಯ್ಕೆಗೆ ಸೊಕ್ತ ಅಲ್ಲ ಅನ್ನೊದು ನನ್ನ ಅಭಿಪ್ರಾಯ

ವಿ.ಎಂ.ಶ್ರೀನಿವಾಸ ಮಂಗಳ, 09/22/2009 - 12:44

ಮಾ ಮಾ ಮ ಪರಿಣಾಮಕಾರಿಯಾಗಿ ಬಂದಿಲ್ಲ ಅಂದರೆ ಅರ್ಥವೇನು.?
ಈ ಚಿತ್ರದ ಬಿಡುಗಡೆಯ ನಂತರ ಎಸ್.ಇ.ಜೆಡ್. ವಿರುದ್ದ. 8 ಸಾಕ್ಷ್ಯಚಿತ್ರಗಳು ನಿರ್ಮಾಣವಾದವು ಹೊಸಕೋಟೆಯ ನಂದಗುಡಿಯಿಂದ , ಚಾಮಲಾಪುರದ ತನಕ ಹೋರಾಟಗಳು ತೀಕ್ಷ್ಣಗೊಂಡವು. ಎಲ್ಲಕ್ಕೂ ಮಿಗಿಲಾಗಿ ರೈತರಿಗೆ ಎಸ್.ಇ.ಜೆಡ್. ಎಂದರೇನು..? ಅದರಿಂದಾಗುವ ಅನಾಹುತಗಳೇನು..? ಎಂಬುದನ್ನು ಸೂಕ್ಷ್ಮವಾಗಿ ತಿಳಿಹೇಳಿದ ಚಿತ್ರವಿದು. ಇವೆಲ್ಲಕ್ಕಿಂತ ಮಿಗಿಲಾದುದೆಂದರೆ ಕರ್ನಾಟಕ ರಕ್ಷಣಾ ವೇದಿಕೆಯವರೇ ಮುಂದೆ ನಿಂತು ಸುಮಾರು 1000 ಜನ ರೈತ ಮುಖಂಡರಿಗೆ ಈ ಚಿತ್ರವನ್ನು ಸಂತೋಷ್ ಥೀಯೇಟರ್ ನಲ್ಲಿ ತೋರಿಸಿದರು. ಎಷ್ಟೋ ಜನ ರೈತರು ಸ್ವಯಂಪ್ರೇರಿತರಾಗಿ ಬಂದು ಈ ಚಿತ್ರ ನೋಡಿ ಹೋದರು. ಜಮೀನು ಮಾರುವ ರೈತರ ದುಡುಕುತನ ಕಮ್ಮಿಯಾಯಿತು. ಇಷ್ಟೆಲ್ಲಾ ಆದರೂ ಈ ಚಿತ್ರಕ್ಕೆ ಪ್ರಶಸ್ತಿಯಿಲ್ಲ, ಆದರೆ ಮನರಂಜನಾತ್ಮಕ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆಯೆಂದರೆ ಯಾವುದೋ ಕಾಣದ ಪವರ್ ಬಗ್ಗೆ ಅನುಮಾನ ಬಂದರೇ ತಪ್ಪೇ ಸ್ವಾಮಿ. ಎನೋ ನಾವು ನಿಮ್ಮಷ್ಟು ಬುದ್ದಿವಂತರಲ್ಲ ತಿಳಿದದ್ದನ್ನು ಹೇಳಿದ್ದೇವೆ. ಇನ್ನು ನಿಮಿಷ್ಟ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 09/22/2009 - 15:36

ಲೇ ಸೂಡಾ.. ನೀ ಪೋಡಾ..

ನಮ್ ಯಿಷ್ಣುಸಾರ್ಗೇನಾದ್ರೂ ಅಂದ್ರೆ ಸೀನಣ್ಣಂಗೆಂತಾ ಕ್ವಾಪ ಗೊತ್ತೇನ್ಲಾ? ಯಿಶ್ಣು ಸಾರು ಸಾವಸಸಿಮ್ಮಾ ಕನ್ಲಾ ಅವ್ನು. ಮುದುಕಾಗಿ ಬ್ಯಾಳೆ ಬಿದ್ದೋಕ್ಕಗಾದ್ರೂ ಸಾವಸಸಿಮ್ಮ.

ಆಲಾ...ನಿನ್ನ ಇಲ್ಲೀ ತಂಕ ಸೀನಣ್ಣ ಸಯಿಸ್ಕಂಡಿದ್ದೇ ದ್ವಡ್ಡಾ ಕನ್ಲಾ. ನೀಯಿನ್ನೂ ಸೀನಣ್ಣನಾ ಕ್ಯಣಕೋ ಲೆವೆಲ್ಲು ಅಂದ್ಕಬ್ಯಾಡ. ಇನ್ನೀ ರಾಜ್ಕುಮಾರು, ಪುನೀತು ಯಲ್ಲಾರ್ನೂ ಸೀನಣ್ಣ ನೋಡಿ ಬಿಟ್ಟವೇ. ಅಲ್ಲೇನೈತೆ? ಅವ್ರೇನು ದ್ಯಾವ್ರೇನ್ಲಾ?

ಕಾಸರ್ವಳ್ಳಿ ಜನಾ ನೋಡೋ ಫಿಲಮ್ಮು ಮಾಡಂಗಿಲ್ಲ ಅಂತ ಸೀನಣ್ಣ ಅಂದಾನು. ಅದುಮ್ಕಂಡು ಕೇಳ್ಕಾ. ನಿನ್ ರಾಜ್ಕುಮಾರು, ಪುನೀತು ಜನ ನೋಡೊ ಸಿಲೀಮಾ ಮಾಡಿದ್ರುನು ನಂ ಸೀನಣ್ಣಂಗೆ ಆಗಿ ಬರಾಣೀಲ್ಲಲೇ. ಆದ್ರೆ ಆದುನ್ನೂ ಅದುಕಮ್ಕಂಡು ಕೇಳ್ಕಾ.

ಹೂಂ ಮತೆ..ಈ ಸೀನಣ್ಣನ ತಾವ ಅಭಿರುಚಿ, ಸಂಸ್ಕಾರ ಅಂದೆಲ್ಲ ಶುರು ಅಚ್ಕಬೇಡಾ. ಮೊದ್ಲ್ ಓಡತ್ಲಾಗೆ ಮಕಾ ತಕ್ಕಂಡು. ಇಲ್ಲಾಂದ್ರೆ ನಂ ಸೀನಣ್ಣ ಯಡ್ಗೈನಾಗಿರೋ ಕಡಗ ಯೇರಿಸ್ಕಂಡು ವದ್ದಾನು. ಉಸಾರ್.

praveen sooda ಧ, 09/23/2009 - 09:45

ನಿಮ್ಗೆ ಒಂದ್ ಮಾತ್ ಹೇಳ್ತೀನಿ ಇಲ್ಲಿ ಯಾರು ಸಮಾಜನ ಬದಲಾಯಿಸ್ತೀನಿ ಅಂತ ಚಿತ್ರ ಮಾಡಲ್ಲ. ಕಾರ್ನಾಡ್, ಆಗ್ಲೀ, ಕಾಸರವಳ್ಳಿ ಅವ್ರೆ ಆಗ್ಲೀ, ಸಮಾಜದಲ್ಲಿ ಹೂಲ್ಕು ಎಲ್ಲಿದೆ ಅಂತ ತೋರಿಸ್ತಾರೆ ಹೋರ್ತು ಅದ್ರಿಂದ ಎಲ್ಲೋ ಏನೋ ಬದಲಾವಣೆ ಆಗತ್ತೆ ಅಂತ ಅಲ್ಲ.... ಯಾವ್ಡೇ ಪ್ರಬುದ್ಧ ಕಲಾವಿದ ಅಷ್ಟೇ ಮಾಡೊಕೆ ಆಗೋದು. ನಂ ಸಾಹಿತಿಗಳೆ ತಗೋಳಿ. ಕಾರಂತ್ ಅವ್ರೆ ಹೇಳೋ ಪ್ರಕಾರ ನಾನು ನನ್ ಅನುಭವ ಹೇಳೋಕೆ ಸಾಹಿತ್ಯ ಬರೀತ್ನಿ ಹೊರತು ಬದಲಾವಣೆ ಆಸೆ ಇಂದ ಅಲ್ಲ ಅಂತ. ಅದು ಬೀದಿ ನೀವು ಸಿನಿಮಾ ಪರಿಣಮಕರಿ ಆಗಿದೆ ಇಲ್ಲ ಅಂತ ಯಾವ್ ದೃಷ್ಟಿಲಿ ಹೇಳ್ತಾ ಇದಿರಾ ... ಮಾ ಮಾ ಮ ಹಿಟ್ ಚಿತ್ರ ಅಲ್ಲ ನೀವ್ ಹೇಳಿಡ್ ಪರಿಣಾಮಗಳು ಕೇವಲ ಪ್ರಚಾರಕ್ಕೆ ಬಳಸಿದ ಒಂದು ತಂತ್ರ ಅಷ್ಟೇ... ನೆನಪಿರಲಿ ತಂತ್ರ ಕುತಂತ್ರ ಅಲ್ಲ. ಇನ್ನೂ ಕರ್ನಾಟಕ ರಕ್ಷಣ ವೇದಿಕೆ ಒಂದು ಕೆಲ್ಸಾ ಮಾಡ್ತ ಇದೆ ಅಂದ್ರೆ ಅದು ಕೇವಲ ಪ್ರಚಾರಕ್ಕೆ ಮಾತ್ರ ಅನ್ನೋದು ಇಲ್ಲಿ ಯಾರಿಗೂ ತಿಳೀದೇ ಇಲ್ಲ. ಈ ಕಡೆ ಜನ ನೊಡ್ದೆ ಇರೋ ಚಿತ್ರದ ಬಗ್ಗೆ ತಿರಸ್ಕಾರವಾಗಿ ಮಾತಾಡ್ತೀರಾ ಇತ್ತ ಇತ್ತ ವ್ಯವಹಾರಿಕ ಕಾರಣಕ್ಕೆ ನಿರ್ಮಾಣವಾಗಿ ವ್ಯವಹಾರಿಕವಾಗೆ ಸೋತ ಚಿತ್ರದ ಪರ ಮಾತಾಡ್ತೀರಾ. ಬರಿಜನ ನೊಡೊ ಚಿತ್ರಕ್ಕೆ ಪ್ರಶಸ್ತಿ ಕೊಡ್ಬೆಕು ಅಂದ್ರೆ ಮಾ ಮಾ ಮ ಗೆ ಹೆಗ್ ಕೊಡ್ತಿರ. ಇದಕ್ಕೂ ಮುಂಚೆ ಕೇಳಿ ನಾನು ಮಾ ಮಾ ಮ ಚಿತ್ರಣ ಮೊದಲ ದಿನಾಂಎ ನೊಡಿ ನಂ ಫ್ರ್ಂಡ್ಸ್ ಎಲ್ಲ ಕರ್ಕೊಂಡ್ ಹೋಗಿದ್ದೆ. ನಂಗೆ ಆ ಚಿತ್ರ ಇಷ್ಟ ಆಗಿತ್ತು... ಆದ್ರೆ ಅಲ್ಲಿ ನಿರ್ದೇಶಕನ ಕೆಲಸ ಪರಿಣಾಮಕಾರಿಯಾಗಿ ಬಂದಿಲ್ಲ ಅಂದೇ... ನಾನು ನಾಗತಿ ಅಭಿಮಾನಿ ಹಾಗಂತ ಸತ್ಯ ಮುಚ್ಚಿಡೊಕೆ ಆಗಲ್ಲ. ಆ ಚಿತ್ರದ ಚಿತ್ರಕಥೆ ನಿಜವಾಗ್ಲೂ ಚಾನಗಿದೆ ಆದ್ರೆ ಸೋತೀರೋದು ಮೇಕಿಂಗ್ ಅಲ್ಲಿ....

ಒಂದು ಚಿತ್ರದಿಂದಾಗುವ ಸಾಮಾಜಿಕ ಪರಿಣಾಮಗಳನ್ನು ಸಹ ಪ್ರಚಾರದ ತಂತ್ರ ಎನ್ನುವ ನಿಮ್ಮೆಡೆಗೆ ನನಗೆ ಕನಿಕರವಿದೆ. ನಿಮ್ಮ ಒಟ್ಟು ಮಾತಿನ ಅರ್ಥ ಮಾ.ಮಾ.ಮ ಗಿಂತ ಮಿಲನ ಚೆನ್ನಾಗಿದೆ, ಪರಿಣಾಮಕಾರಿಯಾಗಿದೆ ಅಂತ ತಾನೆ. ಸರಿ ಬಿಡಿ. ಮಿಲನವೇ ಸೈ

praveen sooda ಧ, 09/23/2009 - 09:47

ಪುನೀತ್ ಗೆ ಅವರ್ಡ್ ಬಗ್ಗೆ ಅನುಮಾನ ಯಾಕೆ... ನೀವು ಮಿಲನ ನೊಡಿಲ್ವ... ಏನಾಗಿದೆ ಅವ್ರ್ ಆಕ್ಟಿಂಗ್ ಗೆ....

praveen sooda ಧ, 09/23/2009 - 09:51

ನನ್ ಹತ್ರ ಈಗ್ಲೂ ದ್ವೀಪ ಸೀಡೀ ಇದೆ... ತಬ್ಬಲಿ ನೀನಾದೆ ಮಗನೆ, ಅವಸ್ಥೆ, ಮುನ್ನುಡಿ, ಅಥಿತಿ, ನಾಗ ಮಂಡಲ, ಇನ್ನೂ ಎಷ್ಟೊಂದು ಮನೇಲೆ ನೋಡಿದೀನಿ. ಒಂದಾನೊಂದು ಕಾಲದಲ್ಲಿ, ವಂಶವೃಕ್ಷ, ಮೈಸೂರು ಮಲ್ಲಿಗೆ ಎಲ್ಲ ಒಳ್ಳೇ ಚಿತ್ರಗಳು ಯಾವಾಗ್ಲೂ ಣೊಡ್ತ ಇರ್ತೀನಿ.... ಅದರ ಮೇಕಿಂಗ್ ಬಗ್ಗೆ, ದೃಷ್ಟಿ ಬಗ್ಗೆ ನಿಜವಾಗ್ಲೂ ಚರ್ಚೆ ನೆಡಿಯಾತ್ತೆ..,

ನಿಮ್ಮ ಬಳಿ ಸಿ.ಡಿ ಇದ್ದರೆ ಸಂತೋಷ. ಆದರೆ ಎಷ್ಟು ಜನರ ಹತ್ತಿರ ನಿಮ್ಮ ಹಾಗೇ ಅಂತ ಸಿ.ಡಿ.ಗಳು ಇರೋಕೆ ಸಾಧ್ಯ ಹೇಳಿ.?

praveen sooda ಶುಕ್ರ, 09/25/2009 - 08:40

ಮಿಲನ ಒಂದು ಪಕ್ಕಾ ಕಮರ್ಶಿಯಲ್ ಚಿತ್ರ ಅದ್ರಲ್ಲಿ 2ನೇ ಮಾತಿಲ್ಲ ಹಾಗೆ ಮಾ ಮಾ ಮ ಸಾಮಾಜಿಕ ಕಳಕಳಿ ಇರೋ ಚಿತ್ರ ಆದ್ರೆ ಇಲ್ಲಿ ಅದು ಎಷ್ಟು ಜನರಿಗೆ ತಲುಪಿದೆ ಅನ್ನೋ ನಿಮ್ಮ ದೃಷ್ಟಿ ಕೋನದಲ್ಲೇ ನೊಡಿ. ಮನರಂಜನೆ ಅನ್ನೋ ಒಂದು ಮಾತು ಬಿಟ್ರೆ ನಂ ಪ್ರಕಾರ ಮಾ ಮಾ ಮ ಒಳ್ಳೇ ಪ್ರಯತ್ನ... ಆ ದಿನಗಳು, ಮಿಲನ ಮಾ ಮಾ ಮ ಎರಡನ್ನ್ನು ಮೀರಿಸೋ ಅಷ್ಟು ಚನ್ನಾಗಿ ಬಂದಿದೆ ಆದ್ರೆ ಅದು ಮಾ ಮಾ ಮ ಆಂತೋ ಒಂದು ಪ್ರಾಮಾಣಿಕ ಪ್ರ್ರಾಯತ್ನ ಅಲ್ಲ. ನಾನ್ ಎನ್ ಹೇಳೋಕೆ ಇಷ್ಟ ಪಡ್ತಾ ಇದೀನಿ ಅಂದ್ರೆ ಇಲ್ಲಿ ಬಾರಿ ಕಥೆಗಿಂತ ಅದು ಎಷ್ಟು ಚನ್ನಾಗಿ ಬಂದಿದೆ ಅನ್ನೋದು ಮುಖ್ಯ ಆಗತ್ತೆ. ನೊಡಿ ಒಂದು ಶಾಲೆ ಇದೆ ೫೦ ಮಕ್ಕಳಿಗೂ ಪಾಠ ಹೇಳ್ತಾರೆ ಆದ್ರೆ ತಟ್ಟೋದು ಕೆಲವರಿಗೆ ಮಾತ್ರ ಹಾಗೆ ಇಲ್ಲಿ ಕಾಸರವಳ್ಳಿ ಅವರ ಪ್ರಯತ್ನ . ಜನ ಮೊದಲು ಇಂಥ ಚಿತ್ರನ ಗೆಲ್ಲಿಸಿದರೆ. ನಾಂದಿ, ಸಂಸ್ಕಾರ ಇಂಥವೆಲ್ಲ ಗೆದ್ದ ಚಿತ್ರಗಳೆ. ಆದ್ರ ಈಗ ಕೆಲವು ಕೆಟ್ಟ ನಿರ್ದೇಶಕರು ಜನರ ಅಭಿರುಚಿನ ಬದಲಾಯಿಸಿದರೆ. ಹಾಗಂತ ಒಳ್ಳೇ ಪೇಾಯಾತ್ಣನ ನಿಲ್ಲಿಸ ಬಾರ್ದೂ ಅಲ್ವಾ. ನಾನು ಕಮರ್ಶಿಯಲ್ ಚಿತ್ರಣ ನೊಡೊ ಅಷ್ಟೇ ಕಾಳಜಿ ಇಂದ ಕಲಾತ್ಮಕ ಚಿತ್ರ ನೊಡ್ತಿನಿ. ಆದ್ರೆ ಎಷ್ಟು ಕಮರ್ಶಿಯಲ್ ಚಿತ್ರಗಳು ಚನ್ನಾಗಿ ಮೂಡಿ ಬರತ್ತೆ ಹೇಳಿ ನೀವೇ??

praveen sooda ಶುಕ್ರ, 09/25/2009 - 08:42

ನೀವು ಕರ್ನಾಟಕ ರಕ್ಷಣ ವೇಧಿಕೆ ಇಂದ ಒಂದು ಸಮಾಜಮುಖಿ ಕಾರ್ಯ ಆಗತ್ತೆ ಅಂದ್ರೆ ನಂಬ್ತೀರಾ

praveen sooda ಶುಕ್ರ, 09/25/2009 - 08:46

ಎಷ್ಟು ಜನರ ಬಳಿ ಸೀಡೀ ಇದೆ ಅಂತ ಕೆಳಿದ್ರಿ.. ಒಂದು ಕೆಲ್ಸಾ ಮಾಡಿ ಆವನ್ಯೂ ರಸ್ತೆ ಕಡೆ ಹೋದಾಗ ಸೀಡೀ ಶಾಪ್ ಅಲ್ಲಿ ಕೆಳಿ ಎಷ್ಟು ಜನ ಬಂದು ತಗೋನ್ದು ಹೋಗ್ತಾರೆ ಅಂತ. ಒಳ್ಳೇ ಚಿತ್ರ ನೊಡೊರು ಇರ್ತಾರೆ ಸರ್... ಅದಕ್ಕೆ ಇವತ್ತಿಗೂ ಅಲ್ಲಿ ಇಲ್ಲಿ ಒಳ್ಳೇ ಚಿತ್ರ ಬರ್ತಾ ಇರೋದು. ಒಂದು ತಿಳಿರಿ ನಂಗೂ ಮಾ ಮಾ ಮ ಸೊತ್ತಿದಕ್ಕೆ ಬೇಜಾರ್ ಇದೆ. ಆದ್ರೆ ಅದು ಸೋಳತ್ತೆ ಅಂತ ಚಿತ್ರ ನೊಡಿ ಹೊರಗೆ ಬಂದ ತಕ್ಷಣ ನಂಗ್ ಗೊತ್ತಾಗಿತ್ತು... ಕಾರಣ ಅದು ಬಂದಿರೋ ರೀತಿ ನಂ ಜನರ ಅಭಿರುಚಿ ಬೇರೆ ಬೇರೆ. ಇವತ್ತು ನಾಗತಿ ಮೇಷ್ಟ್ರು ಇನ್ ಇಂಥ ಚಿತ್ರ ಮಡೊಕೆ ಹಿಂಜರಿತಾರೆ ಆದ್ರೆ ಕಾಸರವಳ್ಳಿ ಅವರು ಹಾಗಲ್ಲ ಎಷ್ಟೇ ಸೋತರೂ ಎಷ್ಟೇ ಜನ ಹಿಯಳಿಸಿದ್ರು ಅವರು ಮಾಡೊದು ಅಂತ ಚಿತ್ರನೇ.

praveen sooda ಶುಕ್ರ, 09/25/2009 - 10:16

ಅಂದ ಹಾಗೆ ನಿಮ್ಮಲ್ಲಿ ನನ್ನದೊಂದು ಕ್ಷಮೆ.. ಕಾರಣ ನಾನು ಒಮ್ಮೆ ಅನಾಗರಿಕ ಅನ್ನೋ ಪದ ಬಳಸಿದಕ್ಕೆ. ನಂ ಉದ್ದೇಶ ಅದಗಿರಲಿಲ್ಲ. ಆದರೆ ಪದ ಬಳಕೆಯಲ್ಲಿ ತಪ್ಪಾಯ್ತು. ಆದ್ರೆ ಅದು ಕೋಪದಲ್ಲಿ ಅಂದದ್ದು. ಮಿಲನ ಅಂತ ಚಿತ್ರಣ ನೀವು ತೆಲಗು ತಮಿಳೈನ ಬೆರಕೆ ಅಂದ್ರಲ್ಲ ಅದಕ್ಕೆ. ಮತ್ತೊಮ್ಮೆ ದಯವಿಟ್ಟು ಕ್ಷಮಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.