
ನೂತನ ಪದಾಧಿಕಾರಿಗಳ ಪ್ರಮಾಣ ವಚನ
ಗದಗ ನಗರದ ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಡಂಬಳ-ಗದಗ ೨೪೨೯ ಶಿವಾನುಭವ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ವಾರ್ಷಿಕೋತ್ಸವ ಮತ್ತು ಸೇವಾ ಹಸ್ತಾಂತರ ಸಮಾರಂಭ ೨೦೧೯-೨೦ರ ಕಾರ್ಯಕ್ರಮ ದಿ.೨೨ ರಂದು ತ್ರಿವಿಧ ದಾಸೋಹಿ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ವೇದಿಕೆಯಲ್ಲಿ ಜರುಗಿತು.
ಸಾನಿಧ್ಯವನ್ನು ಪೂಜ್ಯ ಶ್ರೀ ಮ.ನಿ.ಪ್ರ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ಅತಿಥಿಗಳಾಗಿ ಹೊಸಪೇಟೆಯ ವಿಚಾರವಾದಿಗಳು ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಶಿವಾನಂದ ಆಗಮಿಸಿದ್ದರು.ಈ ಸಂದರ್ಭದಲ್ಲಿ ೨೦೧೯-೨೦ನೇ ಸಾಲಿಗೆ ಆಯ್ಕೆಯಾದ ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಪದಾಧಿಕಾರಿಗಳಾದ ಅಧ್ಯಕ್ಷ ಮಲ್ಲಿಕಾರ್ಜುನ ಚನ್ನಬಸಪ್ಪ ಐಲಿ, ಉಪಾಧ್ಯಕ್ಷರಾದ ಸಂಗಮೇಶ ತೋಟಪ್ಪ ದುಂದೂರ, ಗೌರಕ್ಕ ನಾಗಭೂಷಣ ಬಡಿಗಣ್ಣವರ, ಕಾರ್ಯದರ್ಶಿಗಳಾದ ವೀರಣ್ಣ ಈಶ್ವರಪ್ಪ ಗೊಡಚಿ, ಸಹಕಾರ್ಯದರ್ಶಿಗಳಾದ ಡಾ.ಪ್ರಭು ಅನ್ನದಾನಿ ಗಂಜಿಹಾಳ, ಕೋಶಾಧ್ಯಕ್ಷರಾದ ಶಶಿಧರ ಸಂಗಪ್ಪ ಬೀರನೂರ, ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ ತಿಪ್ಪಣ್ಣ ಅಸುಂಡಿಯವರಿಗೆ ಶ್ರೀಗಳು ಪ್ರಮಾಣ ವಚನ ಬೋಧಿಸಿದರು.ಪ್ರಸಕ್ತ ಸಾಲಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಐಲಿಯವರು ಕಾರ್ಯಕ್ರಮಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೆ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳು ಮತ್ತು ಮಾಜಿ ಪದಾಧಿಕಾರಿಗಳನ್ನು ಮತ್ತು ಅತಿಥಿ ಡಾ. ಎಸ್. ಶಿವಾನಂದ ಅವರನ್ನು ಶ್ರೀಗಳು ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಆಶೀರ್ವದಿಸಿದರು. ಪ್ರಸಕ್ತ ಸಾಲಿನಲ್ಲಿ ವಿವೇಕಾನಂದಗೌಡ ಶಂಕರಗೌಡ ಪಾಟೀಲ ಶಿವಾನುಭವ ಸಮಿತಿಯ ಚೇರಮನ್ ಆಗಿ ಆಯ್ಕೆಯಾಗಿದ್ದು, ಕಳೆದ ಸಾಲಿನ ಅಧ್ಯಕ್ಷ ಶೇಖಣ್ಣ ಮಲ್ಲೇಶಪ್ಪ ಕವಳಿಕಾಯಿ ತಮ್ಮ ಸಾಲಿನಲ್ಲಿ ಕೈಗೊಂಡ ಕಾರ್ಯಗಳ ಕುರಿತು ವರದಿ ಮಂಡಿಸಿದರು. ಶ್ರೀಮತಿ ದೀಪ್ತಿ ಪಾಠಕ ಹಾಗೂ ತಂಡದವರು ವಚನ ಸಂಗೀತ ನೀಡಿದರು. ಕಾರ್ಯಕ್ರಮವನ್ನು ಪ್ರೊ.ಬಾಹುಬಲಿ ಜೈನರ್ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಸದ್ಭಕ್ತರು, ಜಾತ್ರಾ ಸಮಿತಿ ಸದಸ್ಯರು ಗುರು ಹಿರಿಯರು ಪಾಲ್ಗೊಂಡಿದ್ದರು.
ವರದಿ: ಡಾ.ಪ್ರಭು ಅ ಗಂಜಿಹಾಳ
ಮೊ: ೯೪೪೮೭೭೫೩೪೬
ಸಾಲುಗಳು
- 37 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ