Skip to main content

ಹಳ್ಳಿಹಬ್ಬ-೨೦೧೮

ಹಳ್ಳಿ ಸೊಗಡಿನ ಹಬ್ಬ
ಇಂದ prabhu
ಬರೆದಿದ್ದುFebruary 18, 2018
noಅನಿಸಿಕೆ

ನಗರ ಜೀವನಕ್ಕಿಂತ ಹಳ್ಳಿಸೊಗಡು ಅನುಭವದ ಖುಷಿ ಅಪರಿಮಿತ.ಗ್ರಾಮೀಣ ಭಾಗದ ರೋಣ ತಾಲೂಕಿನ ಹೊಳೆಆಲೂರಿನ ಎಸ್.ಕೆ.ವಿ.ಪಿ ಸಮಿತಿಯ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ದಿನಾಂಕ ೧೬-೦೨-೨೦೧೮ ರಂದು ಆವರಣದ ತುಂಬೆಲ್ಲ ಸಡಗರವೇ ಸಡಗರ. ನಿತ್ಯ ಕಾಲೇಜಿನ ಸಮವಸ್ತ್ರದಲ್ಲಿ ಬರುತ್ತಿದ್ದ ವಿದ್ಯಾರ್ಥಿಗಳು ಯುವಕರು ಪಂಚೆ, ಧೋತರ, ಪಟ್ಟಗ, ಟೊಪಿಗೆ ಧರಿಸಿದ್ದರೆ, ಯುವತಿಯರು ಇಳಕಲ್ ಸೀರೆ, ಲಂಗ-ದಾವಣಿ, ನಡಕ್ಕೆ ಡಾಬು, ಬೋರಮಾಳ ಸರ, ಗುಂಡಿನಟೀಕೆ , ನತ್ತು ಹಾಕಿಕೊಂಡು , ಕೊಲ್ಹಾರಿ ಬಂಡಿಗೆ ಸಿಂಗಾರಗೊಂಡ ಎತ್ತುಗಳ ಕಟ್ಟಿಕೊಂಡು ಭಜನೆ, ಡೊಳ್ಳುಗಳ ಮೇಳದೊಂದಿಗೆ ಹೆಜ್ಜೆ ಹಾಕಿ ಹಳ್ಳಿ ಹಬ್ಬದ ವಾತಾವರಣ ನಿರ್ಮಿಸಿದ್ದೌ ವಿಶೇಷವಾಗಿತ್ತು.
ಸಾಂಸ್ಕೃತಿಕ ವಿಭಾಗದಿಂದ ನಡೆದ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ವಾಯ್.ಎಸ್.ಬೇಲಿ , ಕಾರ್ಯದರ್ಶಿ ಶಿವಣ್ಣ ಕಲ್ಯಾಣಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶ್ರೀಪತಿ ಉಡುಪಿ ಅತಿಥಿಗಳಾಗಿ ಆಗಮಿಸಿದ್ದರು. ಕೇಶಾಲಂಕಾರ, ಚಿಗಳಿ, ಕೋಸಂಬರಿ , ವೇಷಭೂಷಣ ಸ್ಪರ್ಧೆಗಳ ಜೊತೆಗೆ ಸಕ್ಕಸರಗಿ,ಕುಂಟಲಿಪಿ, ಚಿಣ್ಣಿದಾಂಡು, ಜಾನಪದ ಆಟ, ಮನರಂಜನಾ ಕಾರ್ಯಕ್ರಮಗಳು ನಡೆದವು. ಡಾ.ಎಸ್.ಎಸ್.ಹುರಕಡ್ಲಿ, ಡಾ.ಎಸ್.ಬಿ.ಸಜ್ಜನರ್, ಡಾ.ಪ್ರಭು ಗಂಜಿಹಾಳ್,ಡಾ.ಪಿ.ಎಸ್.ಕಣವಿ, ಪ್ರೊ.ಗಂಗಾಧರ ಚಕ್ರಸಾಲಿ ,ಪ್ರೊ.ರೇಶ್ಮಾ ಟೆಕ್ಕೇದ್ ಮತ್ತು ಸ್ಪರ್ಧೆಗಳಲ್ಲಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿ ಪಾಲ್ಗೊಂಡು ವಿವಿಧ ವಿಭಾಗಗಳ ಕಾರ್ಯ ನಿರ್ವಹಿಸಿದರು.

-ಡಾ.ಪ್ರಭು.ಗಂಜಿಹಾಳ್-೯೪೪೮೭೭೫೩೪೬

ಲೇಖನದ ಬಗೆ

ಲೇಖಕರು

prabhu

ಸಿನಿಪ್ರಿಯ

ಬಾಗಲಕೋಟ ಜಿಲ್ಲೆ ಹುನಗು೦ದ ತಾಲೂಕ್ ಗುಡೂರು ಜನ್ಮಸ್ಥಳ.ತ೦ದೆ ಜಿ.ಎಸ್ .ಅನ್ನದಾನಿ ವಿಶ್ರಾ೦ತ ಬಿಡಿಓ.ಚುಟುಕು ಕವಿ,ಕತೆಗಾರರು.ನಾನು ಕವಿ,ಕತೆಗಾರ,ಸಿನೆಮಾ,ಟಿವಿ ಗ್]ಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ಮಾಡಿದ್ದೇನೆ.ಹಲವು ಪುಸ್ತಕಗಳು,ಹಾಡಿನ ಕ್ಯಾಸೆಟ್ ಗಳು ಬಿಡುಗಡೆಯಾಗಿವೆ..ಕನ್ನಡ ವ್ರುತ್ತಿರ೦ಗಭೂಮಿ ಮತ್ತು ಚಿತ್ರರ೦ಗ ಕುರಿತು ಕವಿವಿ ಇ೦ದ ೨೦೦೩ ರಲ್ಲಿ ಪಿ ಎಚ್ ಡಿ ಆಗಿದೆ.ಧಾರವಾಡ,ಚೆನ್ಯೆ ರೆಡಿಯೋ ಕೇ೦ದ್ರದಿ೦ದ ಸ್ವರಚಿತ ಕವಿತೆ ವಾಚನ,ಭಾಷಣ ಪ್ರಸಾರವಾಗಿವೆ,ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ , ಕಲಾ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಕಸಾಪ ಆಜೀವ ಸದಸ್ಯ್,ರೋಣ ತಾಲೂಕ ಮಾಜಿ ಕಸಾಪ ಕಾರ್ಯದರ್ಶಿ.೨೦೧೩-೧೪ನೇ ಸಾಲಿಗೆ ಗದಗ ಜಿಲ್ಲಾ ಪದವಿ ಕಾಲೇಜ್ ಕನ್ನಡ ಅಧ್ಯಾಪಕರ ಪರಿಷತ್ ಉಪಾಧ್ಯಕ್ಷ 2014-15,ಗದಗ ಜಿಲ್ಲಾ ಕನಾ೯ಟಕ ಜಾನಪದ ಪರಿಷತ್ತು ಕಾಯ೯ದಶಿ೯ 2014-15,ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು-೨೦೧೪,ರೋಟರಿ ಗದಗ ಸೆಂಟ್ರಲ್ ಸದಸ್ಯ್, ಕವಿವಿ ಧಾರವಾಡ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ ಸಹಕಾರ್ಯದರ್ಶಿ ೨೦೧೬. ರಾಜ್ಯ-ಹೊರರಾಜ್ಯ್ಗಗ ಳಲ್ಲಿ ಹಲವಾರು ಮಿತ್ರರಿದ್ದಾರೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.