Skip to main content

ಗುಬ್ಬಿಯಂಥ ಜೀವಾ

ಇಂದ Madhav Kulkarni
ಬರೆದಿದ್ದುJune 30, 2017
noಅನಿಸಿಕೆ

ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
 
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
 
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ
"ಸಾಕು , ಮಲಕೋ ಪುಟ್ಟಾ"
ಅಂತ ಹೇಳೋರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
 
ಎದಕೋ ಏನೋ ಯಾರಿಗೆ ಗೊತ್ತು
ಕೊಡತಾರ ಯಾಕ ಸಾಲಿಗಿ ಸುಟ್ಟಿ
ಮಾತಾಡ್ಲಿಕ್ಕೂ ಯಾರೂ ಇಲ್ಲಾ
ನನಗ ನಾನ ಹೇಳೀನಿ ಕಟ್ಟೀ
ಆಟಗಿ ಎಲ್ಲಾ ಹಚ್ಚಿಟ್ಟೀನಿ
ಆಡವರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
 
ಹೊರಗಿನ ಜಗಾ ಕಿಡಿಕ್ಯಾಗಿಂದ
ಕಾಣಸ್ತದ ಭಾಳ ಛಂದ
ಬಾಗಲಾ ತಗದು ಹೊರಹೋಗಬೇಕಂದ್ರ
ನನ್ನ ಮುಶ್ಟ್ಯಾಗ ಯಾರದೂ ಬೆರಳಿಲ್ಲಾ
ಮನ್ಯಾಗ ಯಾರೂ ಇಲ್ಲಾ
 
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ

ಮನ್ಯಾಗ ಯಾರೂ ಇಲ್ಲಾ

ಲೇಖಕರು

Madhav Kulkarni

ಮಾಕುಜ

ನಾನೂ ಕವನ,ಲೇಖನಗಳನ್ನು ಅಗಾಗ ಗೀಚುವ ಕನ್ನಡ ಪ್ರೇಮಿ.
ವೃತ್ತಿಯಲ್ಲಿ ಅಭಿಯಂತರ.
ವೃತ್ತಿಯಲ್ಲಿ ಅಭಿಯಂತರ.
ಬೇರೆ ಭಾಷೆಗಳ ಉತ್ತಮ ಕವನ, ಲೇಖನಗಳನ್ನು ಕನ್ನಡದಲ್ಲಿ ಭಾವಾನುವಾದ ಮಾಡುವದು ನನ್ನ ಇಷ್ಟವಾದ ಕಾಯಕ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.