ಲೂಟಿಕೋರರಿಗಿಲ್ಲ ಅಚ್ಚೆದಿನ್..!
ಅರವತ್ತು ವರ್ಷಗಳಷ್ಟು ಕಾಲ ನಮ್ಮ ದೇಶವನ್ನು ಗೆಬರಿ ಗೆಬರಿ ತಿಂದು ಹಾಕಿ... ಸ್ವಚ್ಚ ಮಾಡಲು ಬಾರದಷ್ಟು ಹೊಲಸು ಮಾಡಿಟ್ಟು ಹೋದ ಕಾಂಗಿಗಳು..ಒಂದೆ ವರ್ಷದಲ್ಲಿ ನರೇಂದ್ರ ಮೋದಿಯವರಿಗೆ ಎಲ್ಲಿದೆ ಅಚ್ಚೆದಿನ್ ಅಂತಾ ಬಡಬಡಾಯಿಸುವುದನ್ನು ನೋಡಿದ್ರೆ..ಪಾಪ ಅವೆಷ್ಟು ಕಂಗಾಲಾಗಿ ಹೋಗಿವೆ ಅನ್ನೊದನ್ನು ಊಹಿಸಬಹುದು ನೋಡಿ..! ಅರವತ್ತು ವರ್ಷಗಳಷ್ಟು ಸುದೀರ್ಘ ಕಾಲ ಕಾಂಗಿಗಳಿಗೆ ಅಧಿಕಾರ ಕೊಟ್ಟು ನಮಗೆಲ್ಲಾ ಒಳ್ಳೆ ಕಾಲ ಬಂದಾವ... ಅಂತಾ ಕಣ್ಣು ಬಾಯಿ ಬಿಟ್ಟುಕೊಂಡು ಕಾದಿದ್ದ ಬಡಪಾಯಿ ಜನಸಾಮಾನ್ಯರು ಒಂದೇ ವರ್ಷದಲ್ಲಿ ಮೋದಿ ಅದೇನೊ ಮ್ಯಾಜಿಕ್ ಮಾಡಿ ಅಚ್ಚೆದಿನ್ ತಂದು ಬಿಡ್ತಾರೆ ಅಂತ ತಿಳಿದುಕೊಳ್ಳುವಷ್ಟು ಮೂರ್ಖರಲ್ಲ..! ಮೋದಿಯವರಿಗೆ ಜನಸಾಮಾನ್ಯರು ನೀಡಿದ್ದು ಐದು ವರ್ಷಗಳ ಕಾಲದ ಅಧಿಕಾರ..! ಅವರದಿನ್ನು ಆರಂಭದ ಆಡಳಿತ..ಅಷ್ಟಕ್ಕೆ ಪತರಗುಟ್ಟಿರುವ ಕಾಂಗಿಗಳು ಲಬೋ ಲಬೋ ಅಂತಾ ಕಿರುಚಾಡುತ್ತಿರುವುದನ್ನು ನೋಡಿದ್ರೆ ಅವರಿಗಾಗ್ಲೆ ಬೂರೆದಿನ್ ಶುರುವಾಗೈತೆನೊ ಅನಿಸುತ್ತಿದೆ..! ಅದಕ್ಕೆ ನೋಡಿ ಮೋದಿಯವರು ಲೂಟಿಕೋರರಿಗಿಲ್ಲ ಅಚ್ಚೆದಿನ್ ಅಂತಾ ಮಾರ್ಮಿಕವಾಗಿ ಹೇಳಿದ್ದು...!
ಕಾಂಗಿಗಳ ದರ್ಬಾರಿನಲ್ಲಿ ಹಗರಣಗಳು ನಡೆದಿದ್ದು ಒಂದಾ...ಎರಡಾ...? ಅವುಗಳಿಂದ ಇಡಿ ದೇಶಕ್ಕೆ ದೇಶವೇ ತಲೆತಗ್ಗಿಸಿತ್ತು..! ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರು ಭ್ರಷ್ಟಾಚಾರಿಗಳು ಅನ್ನುವ ಬಿರುದು ಬಾವಲಿಗಳನ್ನು ತಗುಲಿಸಿಕೊಂಡಿದ್ದರು...! ಆದರೆ ಈಗ ಮೋದಿ ಸಾರಥ್ಯದಲ್ಲಿ ಭಾರತೀಯರು ಎಂದರೆ ಇಡಿ ವಿಶ್ವವೇ ಹೆಮ್ಮೆಪಡುವಂತಾಗಿದೆ..! ಇದೆಲ್ಲಾ ಕಾಂಗಿಗಳಿಗೆ ಸಾಧ್ಯವಿತ್ತಾ...? ಮೈ ಕೈ ಎಲ್ಲಾ ಹೊಲಸು ಮಾಡಿಕೊಂಡು ಅದನ್ನೆ ನೆಕ್ಕಿ ನೆಕ್ಕಿ..ಸವಿಸಿದ್ದ ಕಾಂಗಿಗಳಿಗೆ ಈಗ ಭಾರತದಲ್ಲಿ ನಿರ್ಮಾಣವಾಗುತ್ತಿರುವ ಶುಭ್ರ ವಾತಾವರಣ ಕಂಡು ಸಹಿಸಲು ಆಗುತ್ತಿಲ್ಲ ಯಾಕೆ..? ಶುಭ್ರ ವಾತಾವರಣ ಅವರಿಗೆ ಬೇಕಿಲ್ಲವೇ...? ಮೊದಲು ಅವರು ತಮ್ಮ ತಮ್ಮ ಮನಸ್ಸುಗಳನ್ನು ಶುಭ್ರಗೊಳಿಸಿಕೊಳ್ಳಲಿ...ನಂತರ ದೇಶವನ್ನು ಶುಭ್ರಗೊಳಿಸುವ ಪ್ರಯತ್ನಮಾಡಲಿ..!
ರೈತರ ಪರ ಮೊಸಳೆ ಕಣ್ಣೀರು ಸುರಿಸುವ ಕಾಂಗಿಗಳು ಅರವತ್ತು ವರ್ಷಗಳಷ್ಟು ಸುದೀರ್ಘ ಕಾಲ ಮಾಡಿದ್ದೇನು...? ಈಗ ಬೊಂಬಡಾ ಬಜಾಯಿಸುತ್ತೀರುವ ರಾಹುಲ್ ಗಾಂಧಿಯವರಿಗೆ ಅಷ್ಟು ವರ್ಷಗಳ ಕಾಲ ತಮ್ಮ ಅಮ್ಮ, ಅಪ್ಪ, ಅಜ್ಜಿ, ಮುತ್ತಜ್ಜ ರೈತರ ಪರವಾಗಿ ಅದೇಷ್ಟು ಘನಂದಾರಿ ಕೆಲಸ ಮಾಡಿದ್ದಾರೆ ಅಂತಾ ತಿಳಿದುಕೊಳ್ಳಲಾರದಷ್ಟು ಅವಿವೇಕತನೆ..? ಅಥವಾ ತಾವೇನೆ ಹೇಳಿದ್ರೂ ಜನ ನಂಬಿಬಿಡ್ತಾರೆ ಅನ್ನೊ ಮೂರ್ಖತನವೇ..? ಜನರೇನೂ ಈಗ ಮೊದಲಿನಂತಿಲ್ಲ..ಸರಿ ಯಾವುದು ತಪ್ಪು ಯಾವುದು ಅಂತಾ ಯೋಚನೆ ಮಾಡೊವಷ್ಟು ವಿವೇಕ ಬೆಳಿಸಿಕೊಂಡಿದ್ದಾರೆ...ಅದರ ಪರಿಣಾಮವೇ ಅಲ್ಲವೇ ಜನರು ನರೇಂದ್ರ ಮೋದಿಯರನ್ನು ಪ್ರಧಾನಿಯನ್ನಾಗಿ ಮಾಡಿದ್ದು..! ಮೋದಿಯವರಿಗೂ ಕಾಲವಕಾಶ ಕೊಟ್ಟು ಆಮೇಲೆ ಮಾತನಾಡೊಣ.... ! ಒಳ್ಳೆಯ ಕೆಲಸ ಯಾರೇ ಮಾಡಲಿ ನಮ್ಮ ಸ್ವಾಗತವಿದೆ..! ಅದು ಬಿಟ್ಟು ಅಭಿವೃದ್ದಿಯ ಕೆಲಸ ಕಾರ್ಯಗಳಲ್ಲಿ ಅಡ್ಡಗಾಲು ಹಾಕಿದರೆ ಯಾರೂ ಸಹಿಸೊದಿಲ್ಲ..! ಕಾಂಗಿಗಳಿಂದಾದ ದುರ್ನಾತ ತೊಳೆಯಲು ಮೋದಿಯವರಿಗೆ ಕನಿಷ್ಟ ಹತ್ತು ವರ್ಷಗಳಾದ್ರೂ ಬೇಕಾದಿತೇನೊ...? ದೇವ್ರು ಅವರಿಗೆ ಆ ಶಕ್ತಿ ಕೊಡಲಿ ಅಂತಾ ಪ್ರಾರ್ಥಿಸೋಣ..! ಅಂದಹಾಗೇಯೆ ದೇವರು ಕಾಂಗಿಗಳಿಗೂ ದೇಶದ ಶುಭ್ರ ವಾತಾವರಣ ಸೈರಿಸುವ ಶಕ್ತಿ ಕೊಡಲಿ ಅಂತಾನೂ ಪ್ರಾರ್ಥಿಸೋಣಾ...!
ಸಾಲುಗಳು
- Add new comment
- 835 views
ಅನಿಸಿಕೆಗಳು
ಮೋದೀಜಿ ಪ್ರತಿ ಹೆಜ್ಜೆ ತುಂಬಾ
ಮೋದೀಜಿ ಪ್ರತಿ ಹೆಜ್ಜೆ ತುಂಬಾ ಜಾಗರೂಕತೆಯಿಂದ ಇಡುತ್ತಿದ್ದಾರೆ. ಅವರು ಅಲ್ಪಸಂಖ್ಯಾತರ ಹೃದಯ ಕದ್ದು ಬಿಡುವರೇನೋ ಎಂಬ ಭಯ!
ಈಗಾಗಲೇ ಲಕ್ಷಾಂತರ ಶಾಂತಿಪ್ರಿಯ ಭಾರತೀಯರಿಗೆ ಮೋದೀಜಿ ಪ್ರಿಯರಾಗಿ ಬಿಟ್ಟಿದ್ದಾರೆ. ಧರ್ಮಿಷ್ಟರೆಂದಿಗೂ ಮೋದೀಜಿಯನ್ನು ಟೀಕಿಸಲಾರರು. ಜನಮನ ಮಂದಿರದೊಳಗೆ ಮನೆ ಮಾಡಿದಾತನನ್ನು ಸೋಲಿಸಲು ಮುಂದಿನ ದಿನಗಳಲ್ಲಿ ಕಷ್ಟವಿದೆ. ಅದಕ್ಕೇ ಈ ಆರ್ಭಟ!
ಸರ್ ನಿಮ್ಮ ಗ್ರಹಿಕೆ ಅಕ್ಷರಸಹ
ಸರ್ ನಿಮ್ಮ ಗ್ರಹಿಕೆ ಅಕ್ಷರಸಹ ಸತ್ಯ..! ಅಭಿವೃದ್ದಿಪರವಾಗಿದ್ದವರು ಯಾರೂ ನರೇಂದ್ರ ಮೋದಿಯವರನ್ನು ವಿರೋಧಿಸುವುದಿಲ್ಲ.. ಅಭಿವೃದ್ದಿ ಬೇಕಿಲ್ಲದವರು ಮಾತ್ರ ಅವರ ವಿರುದ್ದ ಲಬೋ... ಲಬೋ... ಅಂತಾ ಬಾಯಿ ಬಡ್ಕೋತಿದಾರೆ..! ಧನ್ಯವಾದಗಳೊಂದಿದೆ ಪ್ರವೀಣ್.