ವಾರೆ...ವ್ಹಾ..! ಎಂಥಾ ಸ್ಪಂದನೆ...!!
ಮನುಷ್ಯನ ದುರಾಸೆಗೆ ಪ್ರಕೃತಿ ಅಗಾಗ ಮುನಿಯುವುದು ಸಾಮಾನ್ಯ.. ಅದರ ಪ್ರತಿಫಲವೇ ಭೂಕಂಪ,ಚಂಡಮಾರುತ,ಸುನಾಮಿ,ಪ್ರವಾಹ ಎಲ್ಲವೂ ಕೂಡ..! ಇದಕ್ಕೆ ಪ್ರಪಂಚದ ಭೂಪಟದಲ್ಲಿರೊ ಯಾವುದೇ ದೇಶಗಳು ಹೊರತಾಗಿಲ್ಲ..! ಮನುಷ್ಯತ್ವ.ಮಾನವೀಯತೆಯನ್ನು ಮರೆತು ಮೇರೆಯುವ ಮಾನವರಿಗೆ ಇದು ಪ್ರಕೃತಿಯೆ ಕೊಡುವ ಶಿಕ್ಷೆ..! ತನ್ನ ಸುಖ ಸವಲತ್ತಿಗೊಸ್ಕರ ಪ್ರಕೃತಿಯನ್ನು ನಾಶ ಮಾಡಿ ಸಾಮ್ರಾಜ್ಯ ಕಟ್ಟುವ ಮನುಷ್ಯರ ಮೇಲೆ ಪ್ರಕೃತಿ ಮುನಿಯುವುದು ಸಹಜ ನ್ಯಾಯ ತಾನೆ..? ಪ್ರಕೃತಿ ಮುನಿದರೆ ಎಂಥೆಲ್ಲಾ ಅನಾಹುತಗಳು ಆಗುತ್ತವೆ ಅನ್ನೊದಕ್ಕೆ ಮೊನ್ನೆ ತಾನೆ ನೇಪಾಳದಲ್ಲಿ ನಡೆದ ಭೀಕರ ಭೂಕಂಪವೇ ಸಾಕ್ಷಿ...! ಅದು ಮನ ಕರಗುವ ಮನ ಕಲುಕಿಸುವಂತಹ ದುರ್ಘಟನೆ..!
ಶನಿವಾರ ಬೆಳಿಗ್ಗೆ ೧೧-೪೫ ರ ಅಸುಪಾಸಿನಲ್ಲಿ ನೇಪಾಳದಲ್ಲಿ ಭೂಕಂಪನದ ರುದ್ರ ನರ್ತನ ಶುರುವಾಗಿತ್ತು... ನೇಪಾಳದ ಜನತೆಗೆ ಇನ್ನೂ ಆ ಭೂಕಂಪನದ ಅನಾಹುತದ ಬಗ್ಗೆ ಪೂರ್ತಿ ಮಾಹಿತಿ ಇರಲಿಲ್ಲ..! ನೇಪಾಳದ ಪ್ರಧಾನ ಮಂತ್ರಿಗಳಂತೂ ಎನು ಎತ್ತ ಅಂತ ತಿಳಿಯದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು..! ಆಗಿನ್ನೂ ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಕೊಡಲು ಶುರುಮಾಡಿದ್ದರು...! ಆಗಲೆ ಮಿಡಿಯಿತು ನೋಡಿ ಮನುಷ್ಯತ್ವ ಮಾನವೀಯತೆ ತುಂಬಿದ ಜೀವವೊಂದು... ಆ ಜೀವ ಮಧ್ಯಾನ್ಹ ಮೂರು ಘಂಟೆಗೆಲ್ಲಾ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಿ ಸರ್ಕಾರಿ ಯಂತ್ರವನ್ನು ಚುರುಕುಗೊಳಿಸಿ ಪರಿಹಾರ ಕಾರ್ಯಕ್ಕೆ ಆದೇಶ ಕೊಟ್ಟೆ ಬಿಟ್ಟಿತು..! ಮುಂದೆ ನಡೆದಿದ್ದು ಸಮರೋಪಾದಿಯ ರಕ್ಷಣಾ ಕಾರ್ಯ..! ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದರೆ ಆ ಜೀವ ಮಾತ್ರ ಆಗಲೇ ನೊಂದ ಜನರ ರಕ್ಷಣಾ ಕಾರ್ಯಕ್ಕೆ ಸಮರ ಸನ್ನದ್ದನ್ನಾಗಿ ಬಿಟ್ಟಿತ್ತು..! ನಾಲ್ಕು ಘಂಟೆಯ ಸುಮಾರಿಗೆ ನೇಪಾಳದ ಪ್ರಧಾನ ಮಂತ್ರಿಗಳಿಗೆ ಒಂದು ಫೋನ್ ಕಾಲ್ ಬಂತು... ಅತ್ತಲಿಂದ ಮಾತಾಡಿದ್ದು ಅದೇ ಜೀವ... ನಾವು ನಿಮ್ಮೊಂದಿಗಿದ್ದೇವೆ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ.. ನಿಮ್ಮ ಜೊತೆ ನಮ್ಮದು ಭಾವನಾತ್ಮಕವಾದ ನಂಟು..ನಿಮ್ಮ ನೋವು ನಮ್ಮದು.. ನಿಮಗೇನು ಸಹಾಯ ಬೇಕೊ ಅದನ್ನೆಲ್ಲಾ ಕೊಡಲು ನಾವು ಸಿದ್ದ.. ಈಗಾಗಲೇ ನಮ್ಮ ರಕ್ಷಣಾ ಪಡೆಗಳು...ಸ್ವಯಂ ಸೇವಕರು...ವೈದ್ಯರು ನಿಮ್ಮ ಬಳಿ ಧಾವಿಸುತ್ತಿದ್ದಾರೆ.. ಔಷಧಿ,ನೀರು,ಆಹಾರ,ಬಟ್ಟೆ, ಟೆಂಟುಗಳು ಇನ್ನೂ ಎನೇನು ಅವಶ್ಯಕತೆ ಇದೇಯೋ ಅದನ್ನೆಲ್ಲವನ್ನು ನಾವು ನಿಮಗೆ ಕಳಿಸಿಕೊಡುತ್ತಿದ್ದೇವೆ. ಪ್ರತಿಯೋಬ್ಬ ನೇಪಾಳಿಗೂ ನಾವು ಆಸರೆಯಾಗುತ್ತೇವೆ. ಎದೆಗುಂದದಿರಿ..!
ತಕ್ಷಣ ನೇಪಾಳ ಪ್ರಧಾನ ಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ...ಅವರು ಆ ಜೀವಕ್ಕೆ.... ನಿಮಗೆ ಎಷ್ಟು ಧನ್ಯವಾದಗಳು ಹೇಳಿದರೂ ಸಾಲದು.. ನಿಮ್ಮ ಭರವಸೆಯಿಂದ ನಮಗೆ ಹೋದ ಜೀವ ಬಂದಂತಾಗಿದೆ. ನಾವು ನಿಮಗೆ ಸದಾ ಚಿರಋಣಿಗಳು..! ನೇಪಾಳ ಪ್ರಧಾನ ಮಂತ್ರಿಯಿಂದ ಹೀಗೆ ಪ್ರತಿಕ್ರಿಯೆ ಪಡೆದ ಆ ಜೀವ... ಮತ್ಯಾರೂ ಅಲ್ಲ ಅದು ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು...!
ರಕ್ಷಣಾ ದೃಷ್ಟಿಯಿಂದಾಗಲಿ...ಭಾವನಾತ್ಮಕ ದೃಷ್ಟಿಯಿಂದಾಗಲಿ ನೇಪಾಳ ನಮಗೆ ಅತಿ ಮುಖ್ಯ ನೆರೆ ರಾಷ್ಟ್ರ..! ಅದರ ಏಳು ಬೀಳುಗಳು ನಮ್ಮ ದೇಶಕ್ಕೂ ಪರಿಣಾಮ ಉಂಟು ಮಾಡುತ್ತದೆ.ಹಾಗಾಗಿ ನೇಪಾಳದ ಜೊತೆ ನಮ್ಮದು ಸಹೋದರ ಬಾಂದವ್ಯ ಇದ್ದಂತೆ..! ಕುಟುಂಬದ ಕಿರಿಯ ಸಹೋದರನಿಗೆ ಎನಾದ್ರೂ ತೊಂದ್ರೆಯಾದರೆ ಹೇಗೆ ಹಿರಿಯಣ್ಣ ಸಹಾಯಕ್ಕೆ ಧಾವಿಸುತ್ತಾನೊ ಹಾಗೆಯೆ ನೇಪಾಳದ ಸಹಾಯಕ್ಕೆ ಭಾರತ ಧಾವಿಸಿದೆ..! ನಿಜಕ್ಕೂ ಮೋದಿ ಸಾರಥ್ಯದಲ್ಲಿ ಭಾರತ ಇಡಿ ವಿಶ್ವದಲ್ಲಿ ತನ್ನದೇ ಆದ ವರ್ಚಸ್ಸು ವೃದ್ದಿಸಿಕೊಳ್ಳುತ್ತಿದೆ..! ಈಗ ವಿಶ್ವ ಭೂಪಟದಲ್ಲಿ ಭಾರತೀಯರು ತಮ್ಮದೆ ಆದ ನಿಯಂತ್ರಣ ಸಾಧಿಸಲಿದ್ದಾರೆ..! ಎಲ್ಲಾ ಮೋದಿ ಮಹಿಮೆ ಅಷ್ಟೆ..!
ಮೊನ್ನೆ ಮೊನ್ನೆ ತಾನೆ ನಮ್ಮ ಕಾಶ್ಮಿರದಲ್ಲಿ ಪ್ರವಾಹ ಪರಿಸ್ಥಿತಿ ತಲೆದೊರಿದ್ದಾಗ ಮೋದಿಯ ಸಾಮಾರ್ಥ್ಯ ಎನು ಅನ್ನೊದು ಇಡಿ ವಿಶ್ವಕ್ಕೆ ಗೊತ್ತಾಗಿತ್ತು ( ಕಾಂಗ್ರೆಸ್ ಒಂದನ್ನು ಬಿಟ್ಟು )..! ಇರಾಕ್ ನಲ್ಲಿದ್ದ ನಮ್ಮ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾಗ..ಅವರನ್ನೆಲ್ಲಾ ಸುರಕ್ಷಿತವಾಗಿ ಮರಳಿ ನಮ್ಮ ದೇಶಕ್ಕೆ ಕರೆ ತಂದಿದ್ದು..! ಯೆಮನ್ ನಲ್ಲಿನ ಅಂತರಿಕ ಯುದ್ದ ಪರಿಸ್ಥಿತಿಯಲ್ಲಿ ಅಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನಷ್ಟೆ ಅಲ್ಲ 48 ವಿವಿಧ ದೇಶಗಳ ಪ್ರಜೆಗಳನ್ನು ಸಂರಕ್ಷಣೆ ಮಾಡಿ ಸುರಕ್ಷಿತವಾಗಿ ತಾಯ್ನೆಲಕ್ಕೆ ಕರೆತಂದು ಇಡಿ ವಿಶ್ವಕ್ಕೆ ವಿಶ್ವವೇ ಬೆಕ್ಕಸ ಬೆರಗಾಗಿ ಭಾರತದತ್ತ ನೋಡುವಂತೆ ಮಾಡಿದ್ದು ನಮ್ಮ ಪ್ರಧಾನಿಗಳಾದ ಮೋದಿಯವರು..! ಮೋದಿಯವರ ಬಗ್ಗೆ ಎಷ್ಟು ಹೇಳಿದರೂ ಸಾಲದು... ಎಲ್ಲದಕ್ಕಿಂತ ಹೆಚ್ಚಿನದಾಗಿ ಮೋದಿಯವರಲ್ಲಿರುವ ಮಾನವೀಯತೆ ಗುಣಗಳು ಅವರನ್ನು ವಿಶ್ವದ ಅತ್ಯಂತ ಶ್ರೇಷ್ಟ ನಾಯಕನ ಸಾಲಿನಲ್ಲಿ ನಿಲ್ಲಿಸಿವೆ. ಇಂತ ಸರ್ವ ಶ್ರೇಷ್ಟ ನಾಯಕನ ಸಾರಥ್ಯದಲ್ಲಿ ನಾವೆಲ್ಲಾ ಭಾರತೀಯರು ನಮ್ಮ ದೇಶದ ಕೀರ್ತಿ ಪತಾಕೆಯನ್ನು ಇನ್ನಷ್ಟು ಹಾರಿಸೋಣ..! ಅಂದ ಹಾಗೆ ಭೂಕಂಪನದಿಂದ ಸರ್ವನಾಶಕ್ಕಿಡಾದ ನೇಪಾಳ ಮತ್ತೆ ಚೇತರಿಸಿಕೊಂಡು ಮೊದಲಿನ ವೈಭವಕ್ಕೆ ಮರುಕಳಿಸಲಿ ಎಂದು ಹಾರೈಸೋಣ..!
ಸಾಲುಗಳು
- Add new comment
- 645 views
ಅನಿಸಿಕೆಗಳು
ಸ್ವಾಮೀ ಓಟು ಕೊಟ್ಟರೂ ಓಟು ಬೀ
ಸ್ವಾಮೀ ಓಟು ಕೊಟ್ಟರೂ ಓಟು ಬೀ ಳ್ತಾ ಇಲ್ಲ, ಪ್ಲಿಸ್ ಓಟು ಬೀಳೋ ಹಾಗೆ ಮಾಡಿ 5/5