Skip to main content

ಇದಪ್ಪಾ ನೋಡಿ ವ್ಯಾಪಾರ ಎಂದರೆ!!

ಬರೆದಿದ್ದುAugust 23, 2014
noಅನಿಸಿಕೆ

ಇಂದು ಬೆಳಿಗ್ಗೆ ವಿಜಯ ಕರ್ನಾಟಕ ಓದುತ್ತಿದ್ದೆ. ಮುಖಪುಟ ಕಪ್ಪು ಬಣ್ಣದ ಜೊತೆಗೆ ಹೊಸ ಮುಂಜಾವು ಬ್ಲಾಕ್ ನೊಂದಿಗೆ ಎಂಬ ತಲೆಬರಹ ಬೇರೆ. ಏನಪ್ಪಾ ಇದು ತಲೆಕೆರೆದುಕೊಂಡು ಒಳಪುಟ ನೋಡಿದರೆ ಕೋಲ್ಗೇಟ್ ನ ಚಾರ್ಕೋಲ್ (ಇದ್ದಿಲು) ಆಧಾರಿತ ಬ್ರಶ್!

ನಂಬಿದರೆ ನಂಬಿ ಬಿಟ್ಟರೆ ಬಿಡಿ ಹಿಂದೆ ಹೆಚ್ಚಿನ ಭಾರತೀಯರು ಬೇವಿನ ಕಡ್ಡಿ, ಇದ್ದಿಲು (ಮಸಿ ಕೆಂಡ), ಉಪ್ಪು ಹಾಗೂ ಆಯುರ್ವೇದಿಕ ಆಧಾರಿತ ಲವಂಗ,ಉಪ್ಪು ಇತ್ಯಾದಿ ಒಳಗೊಂಡ ದಂತ ಮಂಜನ ಬಳಸಿ ಹಲ್ಲುಜ್ಜುತ್ತಿದ್ದಾಗ ರಾಸಾಯನಿಕ ಪೇಸ್ಟ್ ನೀಡಿ ನಿಮ್ಮ ಹಲ್ಲು ಇದನ್ನು ಬಳಸದಿದ್ದರೆ ಹುಳ ಹಿಡಿಯುತ್ತದೆ ಎಂದು ಪ್ರಚಾರ ಮಾಡಿ ಮಾರುಕಟ್ಟೆ ಗಳಿಸಿದರು.

ನಂತರ ನಿಧಾನವಾಗಿ ಲವಂಗ ಆಧಾರಿತ ಟೂತ್ ಪೇಸ್ಟ್ ಬಂತು. ನೀಮ್ ಟೂತ್ ಪೇಸ್ಟ್ ಸಹ ಬಂತು.ನಿಮ್ಮ ಟೂತ್ ಪೇಸ್ಟ್ ಅಲ್ಲಿ ಉಪ್ಪು ಇದೆಯೇ ಎಂದು ಕೇಳಲಾರಂಭಿಸಿದರು. ಈಗ ಮಸಿ ಕೆಂಡದ ಆಧಾರಿತ ಬ್ರಶ್ ಬಂದಿದೆ.

ನಾನು ಚಿಕ್ಕವನಿದ್ದಾಗ ಅನೇಕ ಜನರು ಇದ್ದಿಲು, ಬೇವಿನ ಕಡ್ಡಿ ಬಳಸಿ ಹಲ್ಲುಜ್ಜಿತ್ತಿರುವದನ್ನು ನೋಡಿದ್ದೆ. ಕಂಪನಿಗಳು ತಮ್ಮ ಲಾಭಕ್ಕಾಗಿ ಜನ ಸಾಮಾನ್ಯರಿಗೆ ಸುಲಭವಾಗಿ ಲಭ್ಯವಿರುವದು ಸರಿ ಇಲ್ಲ ಎಂದು ಪ್ರಚಾರ ಮಾಡಿ ಮಾರುಕಟ್ಟೆಯಲ್ಲಿ ಏಕ ಸ್ವಾಮ್ಯಗಳಿಸಿ ಕೊನೆಗೆ ಒಂದೊಂದಾಗಿ ಹಿಂದೆ ಜನ ಬಳಸುತ್ತಿದ್ದ ವಸ್ತುಗಳನ್ನೇ ಬೇರೆ ರೂಪದಲ್ಲಿ ನೀಡುವ ತಂತ್ರಕ್ಕೆ ಏನು ಹೇಳೋಣ?

ಜನ ಮರುಳೋ ಜಾತ್ರೆ ಮರುಳೋ ಏನಂತೀರಾ?

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.