Skip to main content

ಮೌನ ತಬ್ಬಿತು

ಬರೆದಿದ್ದುJanuary 27, 2014
2ಅನಿಸಿಕೆಗಳು

ಒಂದು ಬಗೆಯ ಖುಷಿ ಸಿಗುವುದು ಬೇಕು ಅನಿಸಿದಾಕ್ಷಣ ಬಂದಪ್ಪುವ ಭಾವ ಗಳಿಗೆ , ಆಲೋಚನೆಗಳಿಗೆ ಹ್ಯಾಟ್ಸ ಆಫ್,,,,,

ಯಾವುದೇ ವಿಷಯದ ಬಗ್ಗೆ ಮಾತನಾಡಬೇಕಾದರು ಪೀಠಿಕೆ  ಬೇಕಲ್ಲ ಅದಕ್ಕಾಗಿ ಹೇಳಿದೆ,

ವಾಸ್ತವದ ಬದುಕಿಗಿಂತ ಭಾವದಲ್ಲಿ ಬದುಕು ಸುಂದರ ಅನ್ನುತ್ತಾರೆ ತಿಳಿದವರು , ನಿಮಗೆ ಹಾಗನ್ನಿಸೊಲ್ಲವೆ ಅವಕ್ಕು ಒಮ್ಮೆಯಾದರು

ಹ್ಯಾಟ್ಸ್ ಆಫ್ ಅನ್ನಬೇಕೆಂದು, ಹಾಗನ್ನಿಸಿದ್ದೇ ಆದರೆ  ಬನ್ನಿ,,,   

ಆ ಬಗೆಯ ಒಂದು  ಸಣ್ಣ ಭಾವಯಾನ ನನ್ನೊಟ್ಟಿಗೆ, ತುಂಬಾ ಹೊತ್ತಾಗೊಲ್ಲ ಫ್ರಾಮಿಸ್, !!!!!!!

" ಅಷ್ಟೇನು ವಿಶೇಷಗಳಿಲ್ಲದೇ ಸಹಜವಾಗಿ ಸಿದ್ದ ವಾಗಿದ್ದೆ, ಆಡಂಬರ ನನಗೆ ಹಿತವಲ್ಲ ನನಗೆ ಸರಿ ಅನಿಸಿದ್ದರ ಮಟ್ಟಿಗಷ್ಟೆ ನನ್ನ ಅಲಂಕಾರ ಇರುತ್ತಿತ್ತು,ಸಹಜವಾಗಿ ಹೆಣ್ಣು ಇಂತಹ ಸಂರ್ದಭಗಳಲ್ಲಿ ಹೆಚ್ಚು ನಾಚಿಕೆ, ಭಯ, ಅಲಂಕಾರ ಹೀಗೆಲ್ಲ ಕೇಳಿದ್ದೆ ಆದರೆ ನನಗೇಕೋ ಅದರ ಬಗ್ಗೆ ಆಸಕ್ತಿ ಇರಲಿಲ್ಲ. ಒಂದು ಧೋರಣೆ ನನಗೆ, ಒಬ್ಬ ವ್ಯಕ್ತಿ , ವ್ಯಕ್ತಿಗತವಾಗಿ ಇಷ್ಟವಾಗ ಬೇಕೇ ಹೊರತು ಅಲಂಕಾರದಿಂದಲ್ಲ ಆದರೆ ಇದು ಅದೆಷ್ಟೋ ಮಂದಿಗೆ ಸರಿಬರಲ್ಲ, ಆದರೆ ಇದು ನನ್ನ ಪಾಲಿಸಿ ನಾ ಹೇಗಿದ್ದೇನೋ ಹಾಗೆ ನನ್ನ ಇಷ್ಟ ಪಡಬೇಕು ಅಂತ ಆದರೆ ನೆಡೆದಿದ್ದೇ ಬೇರೆ ತನ್ನ ತಂದೆ ತಾಯಿಯೊಂದಿಗೆ ಬಂದ ವ್ಯಕ್ತಿ ನನ್ನೊಟ್ಟಿಗೆ ಮಾತಿರಲಿ ಕಿರುಗಣ್ಣೆನ ನೋಟವರಿಸದೆ ಒಪ್ಪಿಕೊಂಡಿದ್ದ. ಅದರ ಜೊತೆಗೆ ತಲೆಗೆ ಒಂದು ಸಂಶಯದ ಹುಳುವನ್ನು ಬಿಟ್ಟು ಹೋಗಿದ್ದ. 

ತಂದೆಗೆ ಮಾತಿಟ್ಟಿದ್ದಂತೆ ಯಾವುದೇ ಅಡ್ಡ ಮಾತಾಡದೇ ಒಪ್ಪಿಕೊಂಡಿದ್ದು ಆಯಿತು, ನಿಶ್ಚಿತಾರ್ಥ ಅವರ ಮನೆಯಲ್ಲೇ ಎಂದು ಗೊತ್ತಾಯಿತು, ೩ ದಿನದ ಮುಂಚೆಯೇ ಅಲ್ಲಿಗೆ ಹೋಗಬೇಕಾಯಿತು ದೊಡ್ಡ ಮನೆ ತುಂಬಾ ಜೋರಾಗಿಯೇ ಇದ್ದರೂ ಅವರ ಅಪ್ಪನ    ಆಸ್ತಿಗಿಂತ ಹುಡುಗ ಮಾಡಿರುವುದೇ ಹೆಚ್ಚೆಂದು, ಅಲ್ಲದೆ ಹುಡುಗನಿಗಿರುವುದು ಚಿಕ್ಕಮ್ಮ ಹೀಗೆಲ್ಲಾ ಒಂದೊಂದೇ ವಿಷಯಗಳು ಕಿವಿಮೇಲೆ ಬೀಳ ತೊಡಗಿದವು ನಮ್ಮದು ಎಷ್ಟೇ ಆದರೂ ಅರೇಂಜ್ ಮಾಡಿದ್ದಲ್ಲವಾ ಮೊದಲು ನೋಡುವುದು ಜಾತಕ, ಜನ ಯಾವಾಗ ಬದಲಾಗುತ್ತಾರೋ ಅನ್ನುತ್ತಾ ನಮಗೆ ನಿಗದಿ ಪಡಿಸಿದ ಕೋಣೆ ಸೇರಿದೆ, ಅವರ ನೆಂಟರಿಷ್ಟರನ್ನು ನಾವು ತೂಗಲಾಗೊಲ್ಲ ಆದರೆ ಹುಡುಗಿ ಇಷ್ಟ ಅಂತ ಈ ವ್ಯವಸ್ಥೆ ಮಾಡಲಾಗಿತ್ತು. 

 

ಮನೆ ನೋಡಿದರೆ ಹಳೆಯಕಾಲದ್ದು ಅನ್ನಿಸುತ್ತಿರಲಿಲ್ಲ ಕೇವಲ ೨-೩ ವರ್ಷಗಳಾಗಿರಬೇಕು ಅನ್ನಿಸುತ್ತೇ ಅಷ್ಟೇ ಆದರೆ ಸುತ್ತ ಹಸಿರು , ಉಯ್ಯಾಲೆ , ಇನ್ನೂ ಅನೇಕ ವಿಷಯಗಳು ಇಲ್ಲಿ ಮೊದಲಿಗೆ ಇಷ್ಟ ಆಯಿತು.ವಿಶೇಷ ಎನಪ್ಪಾ ಅಂದರೇ ಇಷ್ಟ ಆಗಬೇಕಿದ್ದೇ ಇಷ್ಟ ಆಗಲಿಲ್ಲ ಅದೊಂದು ಕೀಲುಕೊಟ್ಟ ಬೊಂಬೆ ಎಂದು ತಿಳಿಯಿತು ಇನ್ನು ನಿಶ್ಚಿತಾರ್ಥ ಕನಸಿನ ಮಾತೆಂದು ಅಂದಿನ ರಾತ್ರಿಯ ನಮ್ಮವರನ್ನೆಲ್ಲಾ ರೈಲು ಹತ್ತಿಸಿದೆ. 

ನೆಡೆದಿದ್ದು ಇಷ್ಟೇ ಮನೆಯನ್ನೆಲ್ಲಾ ಒಂದು ಸುತ್ತು ಹಾಕಿ ಬರುತ್ತಿದ್ದವಳಿಗೆ ಎದುರಾಗಿ ಬಂದ ಭಾವಿ ಪತಿರಾಯ ಯಾವುದೋ ಫೈಲಿನಲ್ಲಿ ಮುಖ ಮುಚ್ಚಿಕೊಂಡಿದ್ದ ಅದರಿಂದ ಬಿದ್ದ ಒಂದು ಹಾಳೆ ನನ್ನ ಕಾಲಿನ ಬಳಿ ಬಂತು ಅವನೇ ಮಾತನಾಡಿಸಲಿ ಎಂದು ನೋಡದೆ ಮುಂದುವರಿದವಳನ್ನು ಏ ಹುಡುಗಿ ಕಣ್ಣು ಕಾಣೊಲ್ಲವಾ ಬಿದ್ದಿರುವ ಪೇಪರ್ ಎತ್ತಿಕೊಡೊಕ್ಕಾಗಲ್ಲವಾ ಎಂದ, ಈಗ ಆಶ್ಚರ್ಯ ಪಡೋ ಸರದಿ ನಂದು, ನಿಮಗೆ ನಾನು ಯಾರು ಅಂತ ಗೊತ್ತಿಲ್ಲವಾ ನನ್ನ ಹೆಸರು ? ಎಂದವಳನ್ನು , ನೀ ಯಾರಾದರೆ ನನಗೇನು ಎಂದು ತನ್ನ ಪೇಪರ್ ತಾನೇ ಎತ್ತಿಕೊಂಡು ಹೋದ. ನಾ ಬಡ ಪೆಟ್ಟಿಗೆ ಬಿಡಬೇಕಲ್ಲ ಹಿಂಬಾಲಿಸಿ ಹೋದೆ ನಿಜವಾಗಲೂ ನಾ ಯಾರು ಅಂತ ಗೊತ್ತಿಲ್ಲವಾ ಅಂದೇ ? ಯಾರು ಎಂದು ತಲೆ ಎತ್ತದೇ ಮರು ಪ್ರಶ್ನೆ ಬಂತು. ನಾಡಿದ್ದು ನಡೆಯ ಬೇಕಾಗಿರೋದು ನನ್ನ ನಿಮ್ಮ ನಿಶ್ಚಿತಾರ್ಥ ತಾನೇ ಎಂದಾಗ!!  ಓ ನೀನಾ ಎಂದಾ !!ಮುಂದೇ ಮಾತೇ ಇಲ್ಲ ಹಾಗಾದರೆ ನಾ ಯಾರು ಎನು ಎಂದು ಗೊತ್ತಿಲ್ಲದೇ ಒಪ್ಪಿಕೊಂಡಿರಾ ಎಂದಿದ್ದಕ್ಕೆ ? ಲುಕ್ ನೀ ಇಷ್ಟಾ ಆಗ ಬೇಕಿರುವುದು ನನ್ನ ಚಿಕ್ಕಮ್ಮ ಮತ್ತು ಅವರ ಕಡೆಯವರಿಗೆ ಅದು ಆಗಿದೆಯಲ್ಲಾ ಇನ್ನೇನು ಎಂದ ? ಇನ್ನೂ ಮಾತು ಸರಿಯಲ್ಲ ಎಂದು ಅಲ್ಲಿಂದ ಹೊರಟು ವಿಷಯ ನಮ್ಮವರಿಗೆ ತಿಳಿಸಿ ಅವರನ್ನೆಲ್ಲಾ ಒಪ್ಪಿಸಿ ಹೊರಡಿಸಿದ್ದೇ, ಹಿಂದೆಯೇ ಅವನ ಕಡೆಯವರಿಂದ ಮಾತುಗಳು ಕೇಳಿಬರುತ್ತಿತ್ತು. ಮೆತ್ತಗಿದ್ದಾಳೆಂದು ಮೋಸ ಹೋಗುತ್ತಿದ್ದೆವು ಒಳ್ಳೆಯದಾಯಿತು ಬಿಡು ಎಂದು, ಹೋಗುವ ಮುನ್ನ ಒಮ್ಮೆ ತಿರುಗಿನೋಡಲು ಮನಸ್ಸಾಗಿ ನೋಡಿದೆ ಮೇಲ್ಭಾಗದಲ್ಲಿ ನಿಂತಿದ್ದ ಅವನು ಮುಗುಳು ನಕ್ಕ ಎಂತಹ ಮನೋಹಕ ನಗೆ ಎಂಬುದನ್ನು ಗುರುತಿಸದಿರಲಾಗಲಿಲ್ಲ ಅದು ಇಂತಹ ಸಮಯದಲ್ಲಿ ಅದು ಕುಹಕವೋ, ಖುಷಿಯೋ ಬಲ್ಲವರಾರು ? ಯಕ್ಷ ಪ್ರಶ್ನೆ !!!!!!!!!

" ಮೌನ ತಬ್ಬಿತು ನೆಲವ ಜುಮ್ಮೆನೆ ಪುಳಕ ಗೊಂಡಿತು ಧಾರಿಣೆ

ನೋಡಿ ನಾಚಿತು ಬಾನು ಸೇರಿತು ಕೆಂಪು ಸಂಜೆಯ ಕಪದಲಿ "

 

ಬದುಕಲ್ಲಿ ಇದೆಲ್ಲಾ ಸಹಜ ನಮ್ಮ ಜೀವನ ನಮಗೆ ಮುಖ್ಯ ಎಂದು ಮೊದಲಿನಂತೆ ಇರಲು ಪ್ರಯತ್ನಿಸುತ್ತಿದ್ದೆ, ಅದೇಕೋ ಅವನ ನಗು ತುಂಬಾ ಕಾಡುತ್ತಿತ್ತು. ಸಮಾಜಕ್ಕೆ ಜೈ ಎನ್ನದ್ದಿದ್ದರೂ ನನ್ನ ಮನಸ್ಸಿಗೆ ಸೈ ಎನಿಸಿಕೊಳ್ಳಲಾದರೂ ಆ ನಗುವಿನ ಅರ್ಥ ನನಗೇ ಬೇಕಿತ್ತು. ಆದರೆ ಹೇಗೆ ? ಆ ನಗು ನನ್ನ ಅಷ್ಟು ಕಾಡಲು ಕಾರಣವೇನೂ ಆ ನಗುವಿನಲ್ಲಿ ಕುಹಕವಿಲ್ಲ ಎಂದು ಸ್ಪಷ್ಟವಾಗಿತ್ತು ಆದರೂ ಬುದ್ದಿ ಕೇಳೋಲ್ಲ ಬಿಡಿ, ಅದಕ್ಕೆ ಇರಬೇಕು ದೊಡ್ಡವರು ಹೇಳೋದು ಬದುಕಲಿ ಪರ್ಯಾಯತೆ ಅಗತ್ಯ. ಆದರೂ ಆ ನಗುವಿನಲ್ಲಿ ಎನೋ ಗೂಢತೆ ಇತ್ತು !!!!!!!!! 

 

ಮೌನವೆಂದರೇನೆಂಬುದೇ ಅರಿಯದ ಅದೆಷ್ಟೋ ಮಾನವ ಜೀವಿಗಳಿಗೆ ಸದ್ದಿಲ್ಲದೆ ಬಂದು ಸದ್ದಡಗಿಸುವಂತೆ  ಒಂದು ಗುದ್ದು ಕೊಡುವ  ಶಕ್ತಿ ಇರೋದು ಆ ಪ್ರೀತಿಗೆ ಮಾತ್ರ ಅಲ್ವಾ,  ಯಾವುದಕ್ಕೂ ಮಣೆಯದವರನ್ನೆಲ್ಲಾ ಅದೇಕೆ ಆ ಎರಡಕ್ಷರ ಹಾಗೆ ಆಡಿಸುತ್ತದ್ದೆ , ಪ್ರಪಂಚದಲ್ಲಿ ಇದರಿಂದ ಏನೆಲ್ಲಾ ಆಗಿಹೋದರೂ ಕಡೆಗೆ ಉಳಿಯುವುದು ಒಂದೇ ಪ್ರಶ್ನೆ ? " ಅಸಲಿಗೆ ಪ್ರೀತಿ ಎಂದರೇನು ?" ಇಂತ ಒಂದು ಗುದ್ದು ಬಿದ್ದದ್ದು ಮಾತ್ರ ಯಾರು ಮರೆಯೊಲ್ಲ ಬಿಡಿ. ಹೌದು ನಾ ಮೌನಿಯಾಗಿದ್ದೇ !!!!!!!!

 

ಸರಿ ಸುಮಾರು ೪೦ ದಿನಗಳ ನಂತರ ನನಗೇನೂ ಆಗದ ನನಗೆ ಪ್ರಶ್ನೆಯಾಗಿರುವ ಹುಡುಗ ಕಣ್ಣೆಗೆ ಬಿದ್ದ ಅದೂ ನಮ್ಮ ಮನೆಯಲ್ಲಿ ಎದುರಾದವನ್ನನ್ನ ನಾ ಕೇಳಿದ ಮೊದಲ ಪ್ರಶ್ನೆ ನೀವು ಅವತ್ತು ಯಾಕೆ ನಕ್ಕಿದ್ದು ಎಂದು ?ಆದರೆ ಪ್ರಶ್ನೆ ಕೇಳಬೇಕೆಂದಿದ್ದು ನೀ ಇಲ್ಲಿಗೇಕೆ ಬಂದೆ ಎಂದು ? ಕೆಲವೊಮ್ಮೆ ನಾಲಿಗೆ ಮತ್ತು ಮನಸ್ಸು ನಮ್ಮ ಬುದ್ದಿ ಮೀರಿ ವರ್ತಿಸುತ್ತದೆ, ಅನ್ನೊದಕ್ಕೆ ಇದಕ್ಕಿಂತ ಉದಾಹರಣೆ ನನಗೆ ಬೇಕಿರಲಿಲ್ಲ, ಆದರೆ ದಕ್ಕಿದ ಉತ್ತರ ಮಾತ್ರ ಮತ್ತದೇ ನಗು.

 

ಯೌವನದಲ್ಲಿ ನೆಲಕಾಣೊಲ್ಲ , ಪ್ರೀತಿನಲ್ಲಿ ಜಗಕಾಣೊಲ್ಲ ಅನ್ನೊ ಹಾಗೆ , ಆದರೆ ನನ್ನಲ್ಲಿ ಅವನ ಬಗ್ಗೆ ಈ ಪ್ರೀತಿ ಅನ್ನೊ ಒಂದು ಭಾವ ಹುಟ್ಟದೇ ಹೋಗಿದ್ದರೆ ನನ್ನ ವರ್ತನೆ ಹೀಗಿರುತ್ತಿರಲಿಲ್ಲ ಎಂದು ನನ್ನ ನಾನೇ ಪ್ರಶ್ನಿಸುವಂತಾಗಿತ್ತು. 

 

ಮತ್ತೆ ಹಿರಿಯರ ನಡುವೆ ಸಂಧಾನ ಏರ್ಪಟ್ಟು ಸಂಬಂಧ ಬೆಳೆಸುವಂತಾಯಿತು. ಅದಕ್ಕೂ ಕಾರಣ ಅವನಿಗೂ ನನ್ನಂತೆ ಒಂದು ಮೌನ ಸದ್ದಿಲ್ಲದೆ ದಾಳಿ ಇಟ್ಟಿತ್ತಂತೆ ಅದರಿಂದ ಹೊರಬರಲಾರದೆ ಈ ನಿರ್ಧಾರಕ್ಕೆ ಬಂದೆ ಎಂದಿದ್ದ ನಿನ್ನೊಟ್ಟಿಗೆ ಮಾತಾಡಿ ಮುಂದುವರಿಯುವ ಮನಸ್ಸಿತ್ತಾದರೂ ನಿನ್ನ ನೋಡಿದ ಮೇಲೆ ನಿನ್ನ ಪರಿಸ್ಥಿತಿ ನನಗಿಂತ ಭಿನ್ನವಲ್ಲ ಎಂದು ತಿಳಿದು ನಾನು ಈ ಕಾರ್ಯಕ್ಕೆ ಮುಂದಾದೆ ಎಂದ. 

ನಿನ್ನ ಪ್ರೀತಿಯ ಸಾಗರದಲ್ಲಿ ನೆನಪಿಟ್ಟು ನೆನೆದೆ ಗೆಳೆಯ ಎಣೆಕೆ ತಪ್ಪಿದರು ಉಳಿದಿದ್ದು  ನಿನ್ನ ಪ್ರೀತಿ ಮಾತ್ರ, ಕತ್ತಲೆ ಮುಗಿಯುತ್ತಿದೆ ಗೆಳೆಯ ಮಾತಿನ್ನು ಮುಗಿದಿಲ್ಲ, ಮೌನಿ ಇನ್ನೂ ನಾನನಲ್ಲ ನೀ ಸಿಕ್ಕ ಮೇಲೆ , ಕನವರಿಕೆಗಳ ತೊರೆದು ವಾಸ್ಥವದಲ್ಲಿ ನಿನ್ನ ಕೈ ಹಿಡಿದಿದ್ದೇನೆ, ನಿನ್ನ ಪ್ರೀತಿಯಲಿ ಮುಳುಗುವೇನೋ ತೇಲುವೆನೋ ಅರಿವಿಲ್ಲ ಇನಿಯ. 

" ಮೌನ ಉರುಳಿತು ಹೊರಳಿತೆದ್ದಿತು ಗಾಳಿ ಭೋರನೆ ಬೀಸಿತು

    ಭಾವದೊಲುಮೆ ಚಾಮರಕೆ ಮೌನ ಮಲಗಿತು ಮೆಲ್ಲನೆ "


 

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಅನಿಸಿಕೆಗಳು

JanooLikhi ಶುಕ್ರ, 01/31/2014 - 13:19

ಈ ಲೇಖನ್ ತುಂಬಾ ಚೆನ್ನಾಗಿದೆ. ಪಾರ್ವತಿ.ಜಿ.ಆರ್ ಅವರ ಇನ್ನು ಹೆಚ್ಚಿನ ಲೇಖನಗಳು ಬರಲಿ..

ಪಾರ್ವತಿ.ಜಿ.ಆರ್ ಸೋಮ, 03/17/2014 - 11:53

ಧನ್ಯವಾದಗಳು JanooLikhiರವರೆ, ಸಮಯಾವಕಾಶವಾದಾಗಲೆಲ್ಲಾ ಖಂಡಿತ ಬರೆಯುತ್ತೇನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.