Skip to main content

ನಿನ್ನಿಂದಲೇ-2014 . . . . ಕನ್ನಡ ಚಲನ ಚಿತ್ರ ಹೇ(ಹೀ)ಗಿದೆ ?

ಇಂದ venkatb83
ಬರೆದಿದ್ದುJanuary 20, 2014
noಅನಿಸಿಕೆ

ಈ ಚಿತ್ರ ಯಾರಿಗೆ ಇಸ್ಟ ಆಗೋಲ್ಲ ?


ಕಥೆ -ಚಿತ್ರ ಕಥೆಯಲ್ಲಿ ಏನೋ ಹೊಸತಿರಬೇಕು  ಎಂದು ಊಹಿಸಿ ನೋಡಲು ಹೋಗುವವರಿಗೆ ..!!
ತೆಲುಗಿನ ಯಶಸ್ವಿ ನಿರ್ದೇಶಕ ಕನ್ನಡಿಗ ಜಯಂತ್ ಸಿ ಪರಾಂಜಿ ಮತ್ತು ಕನ್ನಡದ ಯಶಸ್ವಿ ನಟ ಪುನೀತ್  ಮತ್ತು ಈ ಚಿತ್ರದ ಬಗೆಗಿನ ನಿರ್ಮಾಣ -ನಿರ್ವಹಣೆ ಜಾಹೀರಾತು ಇತ್ಯಾದಿ ನೋಡಿ ವಿಪರೀತ ನಿರೀಕ್ಷೆ ಇಟ್ಟುಕೊಂಡು ನೋಡಲು ಹೋದವರಿಗೆ ...

ಯಾರಿಗೆ ಇಸ್ಟ ಆಗಬಹುದು?


ಮನೆ ಮಂದಿ ಜೊತೆ ಒಂದು ಸುಂದರ ದಿನ ಅಥವಾ ಸಂಜೆ ಖುಷಿಯಾಗಿ ಕಳೆಯಲು ಇಸ್ಟ ಪಡುವ  ಕಥೆ ಚಿತ್ರ ಕಥೆ ಇತ್ಯಾದಿ ಏನೂ ನಿರೀಕ್ಷೆ ಇಟ್ಟುಕೊಳ್ಳದೇ ನೋಡ ಹೋಗುವವರಿಗೆ ..

ಹೈಲೈಟ್ಸ್ :


ಇಡೀ ಚಿತ್ರದ ಜೀವಾಳ -ನಟ  ಅಪ್ಪು ಮತ್ತು ನಟಿ ಎರಿಕಾ ಫರ್ನಾಂಡಿಸ್ 
ಹೊರ ದೇಶದ ಸುಂದರ ಪ್ರಾಕೃತಿಕ ತಾಣಗಳ ಅದ್ಭುತ ಛಾಯಾಗ್ರಹಣ 
ಚಿತ್ರದ ಮೇಕಿಂಗ್ -ಯಾವುದೇ ಹಿಂದಿ ಮತ್ತು ತೆಲುಗು ಶ್ರೀಮಂತ ಚಿತ್ರಗಳನ್ನು ಮೀರಿಸುವ ಹಾಗಿದೆ -ಮತ್ತು ನೋಡುಗರಿಗೆ ವಿಶೇಷ ಅನುಭವ ನೀಡೋದು ಖಾತ್ರಿ.


ಏನಿಲ್ಲ :
ಕಥೆ ಚಿತ್ರ ಕಥೆ ಪೇಲವವಾಗಿದೆ ,ತೆಲುಗು-ತಮಿಳು  ಮತ್ತು   ಹಿಂದಿಯ ಹಾಗೆ ಕೇವಲ ಖ್ಯಾತ ನಟ ನಟಿಯರ ನಾಮ ಬಲದಿಂದ ಒಂದು ಚಿತ್ರವನ್ನು ಕಥೆ ಇಲ್ಲದೆ ಎಲ್ಲ ಮಸಾಲೆ ಬೆರೆಸಿ ತೆಗೆದ ಹಾಗಿದೆ. 
ಕಥೆ ಏನು? :
ಶ್ರೀಮಂತ ತಂದೆಯ ಕೇರ್ ಫ್ರೀ ಸಾಹಸೀ ಮಗ ವಿದೇಶದಲ್ಲಿ ದೇಶೀ ಹುಡುಗಿಯ ನೋಡಿ ಪರವಶನಾಗುತ್ತಾನೆ ,ಮಾತು ಕಥೆ  ಸ್ನೇಹವಾಗಿ ಮಾಮೂಲಿನ ಹಾಗೆ ಪ್ರೀತಿಯೂ ಆಗುತ್ತದೆ ಆದರೆ ನಾಯಕ ಪ್ರೀತಿ(ಲವ್ ) ಬದಲಿಗೆ ಸ್ನೇಹವನ್ನು(ಫ್ರೆಂಡ್‌ಶಿಪ್) ಆಯ್ದುಕೊಳ್ಳುವನು -ನಾಯಕನಲ್ಲದೆ ಬೇರಾರನ್ನೂ ಮದ್ವೆ ಆಗಲೊಲ್ಲದ ಹುಡುಗಿ -ಅವಳಿಗಾಗಿ ಗಂಡು ಹುಡುಕುವ ನಾಯಕ ... ..

ಆ ಹುಡುಗಿಗೆ ಹುಡುಗ ಸಿಕ್ತಾನ?

ಮದ್ವೆ ಆಗುತ್ತಾ?

ಸ್ನೇಹಾನಾ ?

ಪ್ರೀತೀನಾ?

ಅಥವಾ 

ಎರಡಾ? ......
ಕಥೆಯನ್ನ ಕೇವಲ ನಾಯಕ ನಟರ ಹೆಸರಿಗಿರುವ ಖ್ಯಾತಿಯಿಂದ ಎಳೆದೆಳೆದು  ಎರಡೂವರೆ ಘಂಟೆಯ ಸಿನೆಮಾ ತೆಗೆದು ಹಿಟ್ ಮಾಡುವುದರಲಿ ತೆಲುಗು ತಮಿಳು ನಿರ್ದೇಶಕರು ನಿಸ್ಸೀಮರು -ಈ ಜಯಂತ್ ಅವರೂ ಸಹಾ ಆ ಕಲೆಯನ್ನು ಅರೆದು ಕುಡಿದಿರುವರು . . ಅದ್ಕೆ ಸಾಕ್ಷಿಯಾಗಿ  ಅವರ ನಿರ್ದೇಶನದ ತೆಲುಗು ಚಿತ್ರಗಳನ್ನು ನೋಡಬಹ್ದು ..!

ಪೇಲವ ಕಥೆಯ ಈ ಚಿತ್ರ ನೋಡುವಂತೆ ಮಾಡೋದು ಅದರ ನಿರ್ಮಾಣಕ್ಕೆ ವ್ಯಯಿಸಿದ ಹಣ ಮತ್ತು  ಅದನ್ನು  ಮೇಕಿಂಗ್ನಲ್ಲಿ ಪರಿಣಾಮಕಾರಿಯಾಗಿ ವ್ಯಯ್ಸಿದ ರೀತಿ .

ಈ ದೋಷವನ್ನು ಚಿತ್ರದ ಕೆಲವು ಹಾಡುಗಳು ಅವುಗಳ ಸಾಹಿತ್ಯ ಛಾಯಾಗ್ರಹಣ ಮತ್ತು ನಟ ನಟಿಯರ  ನಟನೆ ಮರೆಸಿಬಿಡುತ್ತದೆ.. 

ಪುನೀತ್ ನಟನಾ ಕೌಶಲ್ಯಕ್ಕೆ -ವಂಶಿ ,ಹುಡುಗರು , ಪೃಥ್ವಿ , ಪರಮಾತ್ಮ ಅವುಗಳ ವಿಭಿನ್ನ ಕಥೆ  ನಿರೂಪಣೆ ಆ ಪಾತ್ರಗಳ  ನಟನೆ ಸಾಕ್ಷಿ .
ಅವುಗಳಲ್ಲಿ  ಪರಮಾತ್ಮ ,ಛಾಯಾಗ್ರಹಣ  -ನಟನೆ -ಸಂಗೀತ ಸಾಹಿತ್ಯ ಮತ್ತು ಮೇಕಿಂಗ್ನಲ್ಲಿ ರಿಚ್ ಆಗಿತ್ತು ,ಈ ನಿನ್ನಿಂದಲೇ ಚಿತ್ರ ಅವಕ್ಕಿಂತ ರಿಚ್ ಆಗಿದೆ ..
ನಾಯಕ ನಟಿಯ ಮೊದಲ ಚಿತ್ರದ ನಟನೆ -ಆ ಚೆಲುವು ಮಂತ್ರ ಮುಗ್ಧಗೊಳಿಸುವುದು .ನಟಿ -ನಟನೆಯಲ್ಲಿ ಫುಲ್ ಮಾರ್ಕ್ಸ್ ಗಿಟ್ಟಿಸುವಳು .

ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಮಣಿ ಶರ್ಮ -ತೆಲುಗು ಧಾಟಿಯ ಸಂಗೀತ ನೀಡಿದ್ದು ಅವುಗಳಲ್ಲಿ  ತೆಲುಗು ಮಾಧುರ್ಯ-ಸವಿ ರುಚಿ ಇದೆ 
ಅವುಗಳಲ್ಲಿ ಮುಖ್ಯವಾಗಿ  ನೀನು ಇರುವಾಗ  ಹಾಡು ಕೇಳುವಾಗ -ಅದರ ಛಾಯಾಗ್ರಹಣ ನೋಡುವಾಗ ಮನಸಿಗೆ ಹಿತ -ಕಣ್ಣಿಗೆ ಹಬ್ಬ ...!
ನಿಂತೆ -ನಿಂತೆ  -ಓಕೇ 
ಇನ್ನುಳಿದ ಹಾಡುಗಳು -ಚಿತ್ರದಲ್ಲಿ ಖಡ್ಡಾಯವಾಗಿ 5 -6 ಹಾಡು ಇರಬೇಕು ಎಂದು  ಅಲಿಖಿತ ನಿಯಮ ಪಾಲಿಸಲು ಸೇರಿಸಿದ ಹಾಡುಗಳು -ಬೊರೋ - ಬೋರೋ- ಆದರೆ ಅವುಗಳ ಛಾಯಾಗ್ರಹಣ -ಮತ್ತು ಹಾಡುಗಳಿಗೆ ನಟ ನಟಿಯರಿಗೆ ಹಾಕಿದ ವಸ್ತ್ರ  ವೈವಿಧ್ಯತೆ-ಅವುಗಳಿಗೆ ಹಾಕಿಸಿದ ಸೆಟ್ಟುಗಳು ಸೂಪರ್ ...

ತೆಲುಗಿನ ಖ್ಯಾತ ಹಾಸ್ಯ ನಟ 'ಬ್ರಹ್ಮಾನಂದಂ' ಒಂದು ಪುಟ್ಟ ಪಾತ್ರದಲ್ಲಿ ಕೆಲವೇ ಕ್ಷಣಗಳು  ಕಾಣಿಸಿ ನಗೆ ಉಕ್ಕ್ಸಿ ಹೋಗುವರು ,ಅವರಿಗಿಂತ  ಸಾಧು ಕೋಕಿಲಾಗೆ  ಹೆಚ್ಚಿನ ಸಮಯದ ಪಾತ್ರ ಇದೆ  ಆದರೆ  ಅವರ ಆ ನಟನೆ  ನಗೆ ಉಕ್ಕಿಸದೆ ಬೆಪ್ಪು ನಗೆ ಉಕ್ಕೊ ಹಾಗೆ ಮಾಡುವುದು ..!!

ಚಿತ್ರದ  ನಿರೂಪಣೆ ತಂತ್ರ  ಅದೇ ಹಳೆಯ ಲವ್ ಫ್ರೆಂಡ್‌ಶಿಪ್ -ಧ್ವಂದ್ವ=ಬಬಲ್ ಗಂ ...!!
ಜಯಂತ್ -ಅಪ್ಪು ಜೋಡಿಯಿಂದ ನಿರೀಕ್ಷೆ ಹುಸಿ ಆದ ಹಾಗಿದೆ -ಆದರೆ
ಅದೆಲ್ಲವನ್ನೂ ಮೀರಿ -ಈ ಚಿತ್ರವನ್ನು ನೋಡಿ -ಕಾರಣ ಇದರ ಮೇಕಿಂಗ್ :
ಸಾರಥಿ -ಪರಮಾತ್ಮ ನಂತರ  ತೆಲುಗು -ಹಿಂದಿ ಸಿನೆಮಾಗಳ  ಲೆವೆಲ್‌ಗೆ ಫಿಲ್ಮ್   ಮೇಕಿಂಗ್ ಮಾಡಿದ ಚಿತ್ರ ಇದು . 
ಇದು ಕನ್ನಡ ಚಿತ್ರವೇ ಎನ್ನುವ  ಮಟ್ಟಿಗೆ  ಅಚ್ಚರಿ ಆಗದೆ ಇರದು ..

 ಅಂಶ 1: ಈ ಚಿತ್ರದಲ್ಲಿ  ಆರಂಭದಲಿ ಅತಿ ಎತ್ತರದ ಕ್ರೇನ್ಗೆ ಸೇರಿಸಿ ಕಟ್ಟಿದ ಕಾರಿನ ಮೇಲೆ ನಿಂತಿರುವ ಅಪ್ಪು  ಕೆಳಗಿಳಿದು ಕಾರೊಳು ಇಳಿದು ಅಲ್ಲಿನ ಒಂದು ಬಟ್ಟೆ ತೆಗೆದುಕೊಂಡು ಮೇಲೆ ಬರಬೇಕು 

http://www.youtube.com/watch?v=yb9QGCiy-Z8

>>>ಪುನೀತ್ ಅವರಿಗೆ ಹೈಟ್ ಫಿಯರ್ ಇರೋ ಅಂಶ ಮೊನ್ನೆ  ಗೊತ್ತಾಯ್ತು ..

ಸ್ಕೈ ಡೈವಿಂಗ್ -

http://www.youtube.com/watch?v=sL9XnFcDDSk

ಈ ದೃಶ್ಯಗಳ ತೆಗೆದ ರೀತಿ ಯಾವ್ದೋ ಹಾಲಿವುಡ್ ಬಾಲಿವುಡ್ ಚಿತ್ರಗಳನ್ನು ತೆಗೆದ ಹಾಗಿದೆ ..

ಇದು ಕನ್ನಡ ಮತ್ತು ತೆಲುಗು ತಮಿಳಿಗೆ ಹೊಸತು (ಹಿಂದಿಯಲ್ಲಿ ಅದಾಗಲೇ ಬಂದಿದ್ದು -ಹೃತಿಕ್ ರೋಶನ್ -ಫರನ್ ಅಖ್ತರ್ ಅವರ  ಜಿಂದಗಿ ನಾ ಮಿಲೇಗಿ ದುಬಾರಾದಲ್ಲಿದೆ).

http://www.youtube.com/watch?v=NXdMxT6vifg


ಅಂಶ 2: ರಾಕ್ ಕ್ಲೈಂಬಿಂಗ್ ಸನ್ನಿವೇಶದ ಚಿತ್ರೀಕರಣ ಸಹ ಸೂಪರ್ -

 ಇದನ್ನು


 ಮಿಷನ್ ಇಂಪಾಸಿಬಲ್ ಚಿತ್ರದ ಟಾಮ್ ಕ್ರೂಸ್ ಸನ್ನಿವೇಶಕ್ಕೆ ಹೋಲಿಸದಿದ್ದರೆ-

http://www.youtube.com/watch?v=58JbY73_fOA

ಇದೂ ಕನ್ನಡದ ಮಟ್ಟಿಗೆ ಹೊಸತು ಮತ್ತು ಬೆಸ್ಟು...

ಚಿತ್ರ ಹಣ ಮಾಡೋದು ಖಾತ್ರಿ -ಆದರೆ ಖ್ಯಾತ ನಟ ನಿರ್ದೇಶ್‌ಕರಿಬ್ಬರ ಈ ಸಂಗಮ ಅಮೋಘ -ಅಪೂರ್ವ ಸಂಗಮ ಆಗದಿದ್ದುದು ಬೇಜಾರಿನ ಸಂಗತಿ ..

 

ಏನೋ ನಿರೀಕ್ಷೆ ಇಟ್ಟುಕೊಳ್ಳದೇ ಹೋಗಿ ನೋಡಿ -ಎಂಜಾಯ್ ಮಾಡಿ ..


<<<ನಾವ್ ನೋಡಿದ್ದು  ಒರಿಯಾನ್ ಮಾಲ್  ಪೀ ವೀ ಆರ್ ನಲ್ಲಿ -ಭಾನುವಾರ -ಎಲ್ಲಾ ಸೀಟು ಭರ್ತಿ -ಅತಿ ಮುಂದಿನ ಸಾಲಿನಲ್ಲಿ ಕೂತು  ಕತ್ತು ಎತ್ತಿ ನೋಡೋ ಸೌಭಾಗ್ಯ ...!!>>>
ಮಾಮೂಲಿ ಸಿನೆಮಾ ಮಂದಿರದಲ್ಲಿ ನೋಡಿದರೆ ಈ ಚಿತ್ರ ಹಾಗೇ ಕಾಣಬಹುದಾ? ಎನ್ನುವ ಕುತೂಹಲ ..!!
ನೋಡಿದವರು ಪ್ರತಿಕ್ರಿಯಿಸುವರೆ?

 

.......................................................................................................................................................................................................................
 
ಈ ಚಿತ್ರದ 'ನೀನು ಇರುವಾಗ ' ಹಾಡಿನ  ವೀಡಿಯೋ  :

http://bit.ly/1ifm3xM

ಚಿತ್ರಗಳ ಮೂಲ  : 

http://bit.ly/1dIU6MH

http://bit.ly/Kx8lHB

http://bit.ly/1ifjpbh

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.