Skip to main content

ನನ್ನ ಕನಸುಗಳಿಗೂ ಕೊಡೆ ಹಿಡಿದವನವನು

ಬರೆದಿದ್ದುAugust 2, 2013
2ಅನಿಸಿಕೆಗಳು

ಮಳೆಯಲ್ಲಿ ನೆನಿಬೇಡ ಅಂತ ಎಷ್ಟು ಸಾರಿ ಹೇಳುವುದು, ಕೇಳೋದೆ ಇಲ್ಲ ನೀನು ಶೀತ ಆಗುತ್ತೆ, ಅಂತ ರೇಗುತ್ತಾ ಕೊಡೆ ಹಿಡಿದು ಸುರಿವ ಸೋನೆಯಲ್ಲಿ ಜೊತೆಯಾದವ , ಕಣ್ಣರಳಿಸಿ ನೋಡಿದ್ದಷ್ಟೆ ನನ್ನೊಳಗೆ ಇಳಿದು ಬಿಟ್ಟಿದ್ದವ ಅವ, ನನ್ನ ಅನೇಕ ಜನುಮಗಳ ಜೊತೆ ಎನಿಸಿಕೊಂಡವ. ಬದುಕಲ್ಲಿ ಅವನಿಲ್ಲದ ದಿನವಿಲ್ಲ, ಉಸಿರಿಗೆ ಉಸಿರಾಗಿ ನನ್ನೊಳಗೆ ಬೆರೆತವನವ ನನ್ನ ಅನೇಕ ಕನಸುಗಳಿಗೆ ಕಂಪ ಬೆರೆಸಿದವನವ.


ಬದುಕಿನ ಹೆಜ್ಜೆ ಹೆಜ್ಜೆಗೂ ಗುರುವಾದವನವ, ನನ್ನ ಸ್ಫೂರ್ತಿಯ ಸೆಲೆ ಅವ, ನನ್ನ ತುಟಿಯಂಚಿನ ನಗು ಅವ,  ತಂಗಾಳಿಯ ತಂಪಲ್ಲಿ ನಾ ಗುನುಗುವ ಹಾಡಿಗೆ ರಾಗವಾದವ ಅವ,  ನಾ ಸಾಗುವ ಹಾದಿಯಲಿ ನನ್ನ ಕಿರುಬೆರಳಿನ ಜೊತಗಾರ ಅವ, ಹುಣ್ಣೆಮೆಯ ತಂಪಲ್ಲಿ  ನನ್ನ ಮಾತುಗಳಿಗೆ ಜೊತೆಯಾದವ ಅವ, ನನ್ನ ನಗುವಿನ ಆರಾಧಕ, ನನ್ನ ಮುಂಗುರುಳಿನ ವಾರಸುದಾರ. 


ನನ್ನ ಕನಸುಗಳ ಕಾವಲುಗಾರನವ, ನನ್ನ ಭಾವಗಳ ಲಹರಿ ಅವ, ನನ್ನ ನೋವುಗಳಿಗೆ ಪರಿಹಾರದ ನಗು ಅವ,ಬದುಕನ್ನು ಹೇಗೆ ಎದುರಿಸ ಬೇಕೆಂಬುದನ್ನು ತಿಳಿಸಿದವ ಅವ ನನ್ನವ.  ನನ್ನ ಮೌನಕ್ಕೆ ಮಾತಾದವ ಅವ , ನನ್ನ ಲಲ್ಲೆಗರೆದವ, ಮುದ್ದು ಮಾಡಿದವ ,ನನ್ನೊಳಗಿನ ನನ್ನವನನ್ನ ಎಲ್ಲೆಲ್ಲಾ ಹುಡುಕಿದೆ ಕಣ್ಣುಚ್ಚಿದರೆ ಎದುರಿರುತ್ತಿದ್ದವ ಕಣ್ತೆರೆದೊಡನೆ ಮಾಯವಾಗುತ್ತಿದ್ದ !?! ಅದು ಪ್ರಶ್ನೆ ಅಷ್ಟೆ ಅದಕ್ಕೆ ಉತ್ತರ ನನ್ನಲ್ಲಿಲ್ಲ ಕಾರಣ ಅವನ ಇರುಹಲ್ಲಿ ನಾ ನನ್ನನ್ನೇ ಕಳೆದು ಕೊಂಡಿದ್ದೆ, ಅವ ನನ್ನೆದೆ ಗೂಡಿನಲ್ಲಿ ಬೆಚ್ಚಗಿದ್ದ.


ಹಾದಿಯಲ್ಲಿ ಹೋಗುತ್ತಾ ಎದೆಗವಚಿಕೊಂಡ ಪುಸ್ತಕದ ಕೊನೆಯನ್ನು ಕಚ್ಚುತ್ತಾ ಕಣ್ಣಂಚಲ್ಲಿಯೇ ಎಲ್ಲಿಯಾದರು ಕಾಣುವನೇ ಎಂದು ಅರಸುತ್ತಾ ಮತ್ತೆ ನಸುನಗುತ್ತಾ ಅವನ ನೆನೆಪಲ್ಲೇ ಹಾಗೆ ನಡೆಯುತ್ತಿದ್ದೆ.


ಆದರೆ ಹೀಗೂ ಉಂಟೆ ಕನಸುಗಳು ನಿಜವಾಗುವುದುಂಟೆ ಹಾಗೆ ನಡೆಯುತ್ತಾ ಸಾಗುತ್ತಿದ್ದವಳಿಗೆ ಇಷ್ಟು ದಿನ ನನ್ನ ಕನಸುಗಳಿಗೆ ಕೊಡೆಯಾಗಿ ಜೊತೆಯಾಗಿದ್ದವ ಕಣ್ಣುಂದೆ ಕೊಡೆ ಹಿಡಿದು ಬಂದರೆ, ಒಂದು ಕ್ಷಣ ಉಸಿರು ನಿಂತಂತಾಯಿತು !!!!!!!!!!! 


ಮನಸ್ಸಂತು ಚೀರುತ್ತಿತ್ತು ಅವ ನನ್ನವ ನನ್ನ ಕನಸುಗಳಿಗೂ ಕೊಡೆಯಾದವ ಎಂದು,,,,,,,,,,,,


ಹೆಣ್ಣು ಮಾಯೆ ದೂರ ಇರು ಅಂತಾರೇ ದೊಡ್ಡವರು , ಏನ್ ಮಾಡಲಿ ನೀ ನನ್ನ ಉಸಿರು ಕಣೇ ಹುಡುಗಿ ಎಂದು ಕೆನ್ನೆ ಸವರಿದವ !!!!!!!!!!!


ಹಾಗಾದರೆ ಇದು ಕನಸಾ ನನಸಾ ??????????????

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಅನಿಸಿಕೆಗಳು

ರಾಜೇಶ ಹೆಗಡೆ ಮಂಗಳ, 08/13/2013 - 06:56

ನಮಸ್ಕಾರ ಪಾರ್ವತಿ ಅವರೇ,


ಸುಮಧುರ ಕನಸನ್ನು ಅಷ್ಟೇ ಮಧುರವಾಗಿ ಬರಹ ರೂಪದಲ್ಲಿ ವ್ಯಕ್ತಪಡಿಸಿದ್ದೀರಿ. ಚೆನ್ನಾಗಿದೆ :)

ಪಾರ್ವತಿ.ಜಿ.ಆರ್ ಶನಿ, 08/24/2013 - 17:17

ಧನ್ಯವಾದ ರಾಜೇಶ್ ರವರೆ , ಕಿಟಕಿಯ ಹೊರಗೆಕಂಡ ದೃಶ್ಯವನ್ನು ನನ್ನ ಕಲ್ಪನೆಯಲ್ಲಿ ಬರಹವಾಗಿಸಿದೆ,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.