Skip to main content

ಸಿಕ್ ದರ್ ಶಿಖರ

ಇಂದ ontipremi
ಬರೆದಿದ್ದುJuly 18, 2013
1ಅನಿಸಿಕೆ

        ಈ ಇತಿಹಾಸದಲ್ಲಿ ಅದೆಷ್ಟು ಸತ್ಯಗಳು ಜೀವಂತ ಸಮಾಧಿಯಾಗಿರುತವೋ ಗೊತ್ತಿಲ್ಲ. ಆದರೆ ಒಂದಂತು ಸತ್ಯ. ಸತ್ಯಕ್ಕೆ ಸಾವಿಲ್ಲ.


1852ರ ಒಂದು ದಿನ ಭಾರತಿಯ ಹುಡುಗನೊಬ್ಬ ಡೆಹ್ರಡೂನ್ನಲ್ಲಿರುವ ತನ್ನ ಆಫಿಸಿಗೆ ಓಡಿಬಂದವನೆ ನೇರವಾಗಿ ಬಾಸ್ ಹತ್ತಿರ ಹೋಗಿ “ಸರ್ ಪ್ರಪಂಚದ ಅತೀ ಎತ್ತರದ ಪರ್ವತವನ್ನು ನಾನು ಕಂಡು ಹಿಡಿದಿದ್ದೇನೆ ಸರ್” ಎಂದ, ನಿಜಕ್ಕೂ ಅವನು ಮಾಡಿದ ಸಾಧನೆ Exellent. ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಗಣಿತದ ಅನೇಕ ಲೆಕ್ಕಾಚಾರಗಳೊಂದಿಗೆ ಗುದ್ದಾಡಿ, ಭೌಗೋಳಿಕ ನಕಾಶೆಗಳನ್ನೆಲ್ಲಾ ಜಾಲಾಡಿ ಹಿಮಾಲಯ ಪರ್ವತ ಶ್ರೇಣಿಯ ಇಪ್ಪತ್ತೈದನೇ ಶಿಖರದ (ಪೀಕ್ ಟ್ವೆಂಟಿಪೈವನ) ಎತ್ತರವನ್ನು ಕರಾರುವಕ್ಕಾಗಿ ಕಂಡು ಹಿಡಿದಿದ್ದ. ಆ ಶಿಖರ ಸರಿಯಾಗಿ ಇಪ್ಪತ್ತೋಂಬತ್ತು ಸಾವಿರದ ಎರಡು ಅಡಿ ಅಂತ ಅವನು ಹೇಳಿದ ಮೇಲೆ ಅನೇಕ ಗಣಿತಜ್ಞರು ಅದನ್ನು ಪರೀಕ್ಷಿಸಿ ನೋಡಿದರು: ಉಹುಂ ಅವನು ಹೇಳಿದ್ದ ಅಳತೆ ಒಂದಿಷ್ಷು ಆಚೀಚೆಯಾಗಿರಲ್ಲಿಲ್ಲ.


             ಆದರೆ ಆ ಹುಡುಗನ ದುರಾದೃಷ್ಷಕ್ಕೆ ಅವನು ಅದನ್ನು ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಕಂಡು ಹಿಡಿದ್ದಿದ್ದ ಹಾಗಾಗಿ ಆ ಪರ್ವತಕ್ಕೆ ಅವನ ಮೇಲಾಧಿಕಾರಿ ಸರ್ ಜಾರ್ಜ ಎವರೆಸ್ಷ ಹೆಸರು ಬಂತು, ಆ ಸಮಯದಲ್ಲಿ ಭಾರತದ ಸರ್ವೇಯರ್ ಜನರಲ್ ಆಗಿದ್ದು ರಾಧನಾಥ ಸಿಕ್ ದರ್. ಅವನ ಕೈಕೆಳಗೆ ದುಡಿಯತ್ತಿದ್ದ ಒಬ್ಬ ಸಾಮಾನ್ಯ ಗಣಿತಜ್ಞ ಅಷ್ಷೆ.


ಸಿಕ್ಧರನ ಈ ಸಾಧನೆ ಹೊರದೇಶದವರಿರಲಿ ನಮ್ಮ ಭಾರತೀಯ ಅನೇಕರಿಗೆ ಗೊತ್ತಿಲ್ಲ. ಬ್ರಿಟೀಷರಂತೂ ಅವನ ಹೆಸರಂತೂ ಎಲ್ಲಿಯೂ ಅಪ್ಪಿ- ತಪ್ಪಿ ಬಾಯಿ ಬಿಡಲಿಲ್ಲ. ಅದೇನಾಯಿತೋ ಅವರಿಗೆ ಮೊನ್ನೆ ನಾಲ್ಕೈದು ವರ್ಷಗಳ ಕೆಳಗೆ ತಮ್ಮ ಗ್ರೇಟ್ ಆರ್ಕ ಎಕ್ಸಿಭಿಶನ್ನಲ್ಲಿ ಸಿಕ್ ದರ್ ನ ಅಪೂರ್ವ ಕೆಲಸದ ಬಗ್ಗೆ ವಿವರವಾದ ಪ್ರಾತ್ಯಕ್ಷಿಕಗಳನ್ನಿಟ್ಟಿದ್ದರು.


ಹಿಮಾಲಯದ ಅತೀ ಎತ್ತರದ ಶಿಖರವನ್ನು ಅಳೆಯುವ ಬೃಹತ್ ಯೋಜನೆಯನ್ನು ಮೊದಲು ಶುರು ಮಾಡಿದ್ದು 1802 ರಲ್ಲಿ ಮದ್ರಾಸಿನಲ್ಲಿದ್ದ ಬ್ರಿಟೀಷ್ ಸೇನಾಧಿಕಾರಿ ವಿಲಿಯಂ ಲ್ಯಾಮ್ ಟನ್ ಈ ಸರ್ವೆಯಲ್ಲಿ ಭಾಗಿಯಾಗಿದ್ದ. ಈ ಪ್ರಾಜೆಕ್ಟನ ಹೆಸರು. ದಿಗ್ರೇಟ್ ಬ್ರಿಗೋನೋ ವೆಟ್ನಕಲ್ ಸರ್ವೆ. ಒಟ್ಟು 1000 ಮೈಲಿ ವಿಸ್ತಿರ್ಣದ ಈ ದುರ್ಗಮ ಸರ್ವೆಯಲ್ಲಿ ಲೆಕ್ಕವಿಲ್ಲದಷ್ಷು ಜನ ಹುಲಿಗಳಿಗೂ, ಮಲೇರಿಯಾಗೂ, ದುಸ್ತರ ಹವಾಮಾನಕ್ಕೂ ಬಲಿಯಾದರೂ, ಕೊನೆಗೂ ಹಿಮಾಲಯದ ಈ ಮಹಾನ್ ಸಾಹಸಕ್ಕೊಂದು ಯಶಸ್ವಿ ಅಂತ್ಯ ಕಾಣಿಸಿದ್ದು ರಾಧನಾಥ ಸಿಕಧರ್. ಆಗ ಅವನ ವಯಸ್ಸು 39. ಕೋಲ್ಕತ್ತದ ಈ ಮನುಷ್ಯನಿಗಿದ್ದ ಇನ್ನೊಂದು ಹೆಸರು ‘ಕಂಪ್ಯೂಟರ್’. ಕಂಪ್ಯೂಟರನ ಪರಿಕಲ್ಪನೆಯೇ ಬಂದಿದ್ದ ಕಾಲವದು. ಆದರು ಎಲ್ಲರೂ ಅವನನ್ನು computer ಎಂದು ಏಕೆ ಕರೆಯುತ್ತಿದ್ದಾರೆಂದರೆ ಅವನ ಕೆಲಸವೇ ಎಲ್ಲಾ ಟೀಮುಗಳು ಕಳುಹಿಸಿದ ಮಾಹಿತಿಯನ್ನು compute ಮಾಡುವುದಾಗಿತ್ತು. ಬಹುಷ್ಯ ಅವನದನ್ನು computer ವೇಗದಲ್ಲಿ ಮಾಡುತ್ತಿರಬಹುದು. ಎವರೆಸ್ಟ್ ಶಿಖರದ ಎತ್ತರವನ್ನು ಕಂಡುಹಿಡಿದ ಮೇಲೆ ಅವನಿಗೆ ಬಡ್ತಿ ನೀಡಿ ಅವನನ್ನು ಛೀಫ್ ಕಂಪ್ಯೂಟರ್ ಮಾಡಲಾಯಿತದರು ಅವನ ಹೆಸರು ಇತಿಹಾಸದಲ್ಲಿ ದಾಖಲಾಗಲೇ ಇಲ್ಲ.


ಖುದ್ದು ಜಾರ್ಜ ಎವರೆಷ್ಷು ಸಿಕ್ ದರ್ ನನ್ನು “ಒಬ್ಬ ಅಪರೂಪದ ಮ್ಯಾಥಮ್ಯಾಟಿಕಲ್ ಜೀನಿಯಸ್ ಅಂತ ಕರೆದಾಗ ಬ್ರಿಟೀಷರು ಸಿಕ್ ದರ್ ಹೆಸರನ್ನು ಇತಿಹಾಸ ಪುಟಗಳೊಂದಿಗೆ ಸೇರಿಸಲಿಲ್ಲ.ಬಂಗಾಳಿ ಬ್ರಾಹ್ಮಣನ ಮಗನಾಗಿ 1813 ರಲ್ಲಿ ಕೊಲ್ಕತ್ತಾದಲ್ಲಿ ಹುಟ್ಟಿದ ಸಿಕ್ ದರ್ ಅದೇ ಊರಿನ ಹಿಂದೂ ಕಾಲೇಜಿನಲ್ಲಿ ಗಣಿತದಲ್ಲಿ ಪ್ರಾವಿಣ್ಯತೆ ಪಡೆದ, ಅಲ್ಪ-ಸ್ವಲ್ಪ ಇಂಗ್ಲಿಷನ್ನು ಕಲಿತ, ಅವನಿಗೆ ಗಣಿತದ ಬಗ್ಗೆ ಆಸಕ್ತಿ ಎಷ್ಟಿತ್ತೆಂದರೆ ಸದಾ ಒಂದಲ್ಲಾ ಒಂದು ಲೆಕ್ಕಾಚಾರದಲ್ಲೇ ಮುಳುಗಿರುತ್ತಿದ್ದ, ‘ತಾನು ಮದುವೆಯಾದರೆ ಈ ಚಟಕ್ಕೆ ಎಲ್ಲಿ ಅಡ್ಡಿಯಾಗುತ್ತದೋ ಎನ್ನುವ ಹೆದರಿಕೆಯಿಂದ ಅವಿವಾಹಿತನಾಗಿಯೇ ಉಳಿದುಬಿಟ್ಟ’. ಜಾರ್ಜ ಎವರೆಷ್ಟನ ಮಾತಿನಲ್ಲೇ ಹೇಳುವುದಾದರೆ “ಕೆಲಸದ ಸಮಯದಲ್ಲಿ ಅವನು ಎಂದೂ ಒಂದಿಷ್ಟೂ ಸುಸ್ತು ತೋರಿಸಿದವನೇ ಅಲ್ಲ: He was a bundle of energy ಮತ್ತು ಸಂಕೀರ್ಣ ಗಣಿತ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಮಹಾನ್ ನಿಸ್ಸೀಮ.


ತಮಾಷೆಯೆಂದರೆ, ಜಾರ್ಜ ಎವರೆಷ್ಟ  ಆಗಲಿ ಸಿಕ್ ದರ್ ಆಗಲಿ ಎಂದೂ ಪ್ರತ್ಯಕ್ಷವಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ನೋಡಲೇ ಇಲ್ಲ. ಅವರಿಬ್ಬರದೂ ಸರ್ವೆ ಮಾಹಿತಿಗೂ ಹಾಗೂ ಸೈಂಟಿಫಿಕ್ ಲೆಕ್ಕಾಚಾರಗಳನ್ನು ಧರಿಸಿ ನಕಾಷೆ ತಯಾರಿಸುವ ಕೆಲಸ. ಮೌಂಟ್ ಎವರೆಸ್ಟ್ ಜಗತ್ತಿನ ಅತೀ ಎತ್ತರದ ಶಿಖರ ಅಂತ ಸಿಕಧರ್ ಕಂಡು ಹಿಡಿದಾದ ಮೇಲೆ ಆ ಪರ್ವತ ಇರುವರೆಗೆ ಸುಮಾರು ಮುವತ್ತೆಂಟು ಅಡಿ ಹೆಚ್ಚು ಎತ್ತರಕ್ಕೆ ಬೆಳೆದಿದೆ. ಈಗ ಅದರ ಎತ್ತರ 2940 ಅಡಿ.


 


                                                                                                  

ಲೇಖಕರು

ontipremi

ದಾವಣಗೆರೆ ಸಮೀಪದ ಒಂದು ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಬಿಡುವಿನ ವೇಳೆಯಲ್ಲಿ ಕಥೆ, ಕವನ, ಬರೆಯುವ, ಕಂಪ್ಯೂಟರ್ ಗೆ ಸಂಬಂದಿಸಿದ ವಿಷಯಗಳಲ್ಲಿ ತುಂಬಾ ಆಸಕ್ತಿ "ಆಪರೇಷನ್ ಕಂಪ್ಯೂಟರ್" ಎಂಬ ಕನ್ನಡದ ಮೊದಲ ಕಂಪ್ಯೂಟರ್ ರಿಪೇರಿ ಕೈಪಿಡಿ ಬರೆದಿರುವ ಹೆಮ್ಮೆ ನನ್ನದು.....

ಅನಿಸಿಕೆಗಳು

Mayappa ಶನಿ, 07/27/2013 - 18:14

thanks sir

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.