Skip to main content

ಗಾಂಧಿಯ ಒಳಗೊಬ್ಬ .......

ಇಂದ ontipremi
ಬರೆದಿದ್ದುJuly 18, 2013
1ಅನಿಸಿಕೆ

ಗಾಂಧಿಗೂ ಒಬ್ಬ ಪ್ರೇಯಸಿಯಿದ್ದಳು ಎಂಬ ಲೇಖನವನ್ನು ಇದೇ ಬ್ಲಾಗ್ ನಲ್ಲಿ ಓದಿಯೇ ಇರುತ್ತೀರಿ, ಈಗ ಮತ್ತೊಂದು ವಿಷಯ ಗಾಂಧೀಜಿಯ ಬಗ್ಗೆ ಬರೆಯಬೇಕಾಗಿದೆ. ದೇಶ/ನಾಡು/ಜನಗಳಿಗಾಗಿ ಎಲ್ಲಾ ತ್ಯಾಗಗಳಿಗೂ ಸಿದ್ದನಾದವವನನ್ನ ಮಹಾತ್ಮ ಎಂದು ಕರೆಯಲಾಗುತ್ತದೆ. ಆದರೆ ಮಹಾತ್ಮ ಎಂದೆನಿಸಿಕೊಳ್ಳುವ ಯೋಗ್ಯತೆ ಗಾಂಧಿಜಿಗೆ ಇದೆಯಾ? ಈ ಲೇಖನ ಓದಿದಮೇಲೆ ನೀವೇ ತೀರ್ಮಾನ ಮಾಡಿ,,,


ಇಳಿವಯಸ್ಸಿನ ಗಾಂಧೀಜಿಯನ್ನು ಕಂಡವರು ಅವರ ಊರುಗೋಲಾಗಿ ಸದಾಕಾಲವೂ ಇರುತ್ತಿದ್ದ ಮತ್ತೊಬ್ಬ ಮುಗ್ಧ ವ್ಯಕ್ತಿಯನ್ನು ಜಗತ್ತು ಮರೆತಿರಲು ಸಾಧ್ಯವೇ ಇಲ್ಲ. 1946ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ಗಾಂಧೀಜಿಯ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ವ್ಯಕ್ತಿ ಮನುಬೆನ್. ಗಾಂಧೀಜಿಯ ಬ್ರಹ್ಮಚರ್ಯದ ಪ್ರಯೋಗಕ್ಕೆ ಅವರ ಮರಿಮಗಳಾದ ಮನುಬೆನ್ ಊರ್ಫ್ ಮೃದುಲಾ ಗಾಂಧಿ ತಮ್ಮನ್ನೇ ಒಡ್ಡಿಕೊಂಡಿದ್ದರು.


ಆಕೆ ತೀರಿಹೋಗಿ ನಾಲ್ಕು ದಶಕಗಳೇ ಸಂದುಹೋಗಿವೆ. ಇಷ್ಟು ವರ್ಷಗಳ ಕಾಲ ಸುದ್ದಿಯಲ್ಲಿ ಇರದಿದ್ದ ಮನುಬೆನ್ ಅವರು ಇದ್ದಕ್ಕಿದ್ದಂತೆ ಸುದ್ದಿಗೆ ಗ್ರಾಸವಾಗಿದ್ದಾರೆ. 1943ರಿಂದ ಗಾಂಧೀಜಿ ಹತ್ಯೆಯಾಗಿ ಇಪ್ಪತ್ತು ದಿನಗಳವರೆಗೆ ಪ್ರತಿದಿನವೂ ಬರೆದ ಡೈರಿ ಅನೇಕ ವಿಸ್ಮಯಕಾರಿ ಮತ್ತು ತಿಳಿದಿರದ 'ನಗ್ನ' ಸತ್ಯ ಸಂಗತಿಗಳನ್ನು ಬಯಲು ಮಾಡಿದೆ. ಎರಡು ಸಾವಿರ ಪುಟಗಳಷ್ಟು ಇರುವ 10 ಡೈರಿಗಳ ಹೂರಣವನ್ನು ಇಂಡಿಯಾ ಟುಡೆ ಪತ್ರಿಕೆ ಪ್ರಕಟಿಸಿ ಸಂಚಲವನ್ನೆಬ್ಬಿಸಿದೆ.


ಗಾಂಧೀಜಿ ತನ್ನನ್ನು ತಾಯಿಯಂತೆ ಸಲಹುತ್ತಿದ್ದರು ಎಂದು ಹೇಳಿರುವ ಮನುಬೆನ್ ಯಾರಿಗೂ ತಿಳಿಯದ ಅನೇಕ ಸಂಗತಿಗಳನ್ನು ಬರೆದಿದ್ದಾರೆ. ಕಟು ಬ್ರಹ್ಮಚರ್ಯ ಪ್ರಯೋಗದ ಮುಖಾಂತರ ಮಾನವೀಯತೆಯ ಪಾಠಗಳನ್ನು ಕಲಿಸಿದ ಗಾಂಧೀಜಿಯವರ ಬಗ್ಗೆ ಯಾರಿಗೂ ಹಗುರವಾಗಿ ಮಾತನಾಡುವ ಹಕ್ಕಿಲ್ಲ, ಅದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಮನೆಯನ್ನು ಹತ್ತಿಕ್ಕಲು ಗಾಂಧೀಜಿ ಮಾಡುತ್ತಿದ್ದ ಬ್ರಹ್ಮಚರ್ಯದ ಪ್ರಯೋಗದಿಂದಾಗಿ ತಮ್ಮ ಮೇಲಾದ ಮಾನಸಿಕ ಪರಿಣಾಮಗಳ ಬಗ್ಗೆಯೂ ಅವರು ವಿಸ್ತೃತವಾಗಿ ಬರೆದಿದ್ದಾರೆ.


ಅವರ ಡೈರಿಯಲ್ಲಿನ ಒಂದು ಪ್ಯಾರಾ ಹೀಗಿದೆ : "ಇಂದು ರಾತ್ರಿ, ಸುಶೀಲಾಬೆನ್, ನಾನು ಮತ್ತು ಬಾಪು (ಗಾಂಧೀಜಿ) ಒಂದೇ ಮಂಚದ ಮೇಲೆ ಮಲಗಿದ್ದಾಗ ಬಾಪು ತಬ್ಬಿಕೊಂಡರು ಮತ್ತು ಬೆನ್ನಮೇಲೆ ಸವರಿದರು. ಪ್ರೀತಿಯನ್ನು ಧಾರೆಯೆರೆದು ನನ್ನನ್ನು ಮಲಗಿಸಿದರು. ಬಹುದಿನಗಳ ನಂತರ ಅವರು ನನ್ನನ್ನು ಆಲಂಗಿಸಿದರು. ಆಗ, ತಮ್ಮೊಂದಿಗೆ ಮಲಗಿದರೂ ಲೈಂಗಿಕ ತುಡಿತದಿಂದ ದೂರವುಳಿದು ಮುಗ್ಧತೆ ಉಳಿಸಿಕೊಂಡಿದ್ದಕ್ಕೆ ಪ್ರಶಂಸಿಸಿದರು. ಆದರೆ, ಇದು ಇತರ ಹುಡುಗಿಯರಿಗೆ ಸಾಧ್ಯವಾಗಿರಲಿಲ್ಲ. ವೀಣಾಸ ಕಂಚನ್ ಮತ್ತು ಲೀಲಾವತಿ (ಇತಹ ಸಹವರ್ತಿಗಳು) ತಾವಿನ್ನೆಂದೂ ಬಾಪೂಜಿಯೊಂದಿಗೆ ಮಲಗುವುದಿಲ್ಲ ಎಂದು ಹೇಳಿದ್ದರು."


ಭಾರತ ಬಿಟ್ಟು ಚಳವಳಿಯ ನಂತರ ಅಸ್ವಸ್ಥರಾಗಿದ್ದ ಕಸ್ತೂರಬಾ ಅವರ ಶುಶ್ರೂಷೆಗೆಂದು ಬಂದಿದ್ದವರು ಮನುಬೆನ್. ಕಸ್ತೂರಬಾ ಅವರ ಕೊನೆಯುಸಿರಿರುವವರೆಗೂ ಅವರ ಆರೈಕೆ ಮಾಡಿದರು. ನಂತರ ಬಾಪೂಜಿಯ ಸೇವೆಗೆ ನಿಂತರು. ಮನುಬೆನ್ ಅವರ ಸೇವೆಯನ್ನು ಅವರನ್ನು ಅಪಾರವಾಗಿ ಪ್ರೀತಿಸಿದ್ದ ಪ್ಯಾರೆಲಾಲ್ ಅವರು ಕೂಡ ಶ್ಲಾಘಿಸಿದ್ದಾರೆ. "ತಾಯಿ ಮಗಳನ್ನು ನೋಡಿಕೊಂಡಂತೆ ಬಾಪೂಜಿ ಮನುಬೆನ್ಳನ್ನು ನೋಡಿಕೊಂಡಿದ್ದರು. ಆಕೆಯ ವಿದ್ಯಾಭ್ಯಾಸ, ಆಹಾರ, ಬಟ್ಟೆ, ಮಲಗುವ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರು. ತನ್ನ ತಾಯಿಯೊಂದಿಗೆ ಮಲಗಲು ಮಗಳು ಮುಜುಗರಪಟ್ಟುಕೊಳ್ಳುವುದಿಲ್ಲ" ಎಂದು ಪ್ಯಾರೆಲಾಲ್ ಮನುಬೆನ್ ಮುಗ್ಧತೆಯನ್ನು ಕೊಂಡಾಡಿದ್ದರು.


ಮನುಬೆನ್ ಅವರಿಗೆ ಪ್ಯಾರೆಲಾಲ್ ಅವರಿಂದ ಮದುವೆಯ ಪ್ರಸ್ತಾಪವೂ ಬಂದಿತ್ತು. ಅದನ್ನು ತಳ್ಳಿಹಾಕಿದ್ದ ಅವರು ಹೀಗೆ ಬರೆದಿದ್ದರು : "ತನ್ನ ಸೋದರನ್ನು ಮದುವೆಯಾಗೆಂದು ಸುಶೀಲಾಬೆನ್ ದುಂಬಾಲುಬಿದ್ದಿದ್ದರು. ಸಹೋದರನನ್ನು ಮದುವೆಯಾದರೆ ನರ್ಸ್ ಮಾಡುವುದಾಗಿ ಪುಸಲಾಯಿಸಿದ್ದರು. ಅದನ್ನು ತಳ್ಳಿಹಾಕಿ, ಇದರ ಬಗ್ಗೆ ಗಾಂಧೀಜಿ ಜೊತೆ ಪ್ರಸ್ತಾಪಿಸಿದ್ದೆ. ಅದಕ್ಕೆ ಅವರು, ಸುಶೀಲಾಬೆನ್ ತನ್ನ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇತ್ತೀಚಿನವರೆಗೆ ಆಕೆ ತನ್ನ ಮುಂದೆ ಬೆತ್ತಲಾಗಿ ಸ್ನಾನ ಮಾಡುತ್ತಿದ್ದಳು ಮತ್ತು ಮಲಗುತ್ತಿದ್ದಳು ಎಂದಿದ್ದರು. ನಾನು ಅತ್ಯಂತ ಶುದ್ಧವಾಗಿರಬೇಕು ಮತ್ತು ಬ್ರಹ್ಮಚರ್ಯ ಆಚರಿಸಲು ಸಹನಶೀಲೆಯಾಗಿರಬೇಕು ಎಂದಿದ್ದರು."


ಹೀಗೆ, ತಮ್ಮ ಮತ್ತು ಗಾಂಧೀಜಿ ನಡುವಿನ ಹಲವಾರು ವಿಷಯಗಳ ಬಗ್ಗೆ ಮನುಬೆನ್ ಸವಿಸ್ತಾರವಾಗಿ ತಮ್ಮ ಡೈರಿಗಳಲ್ಲಿ ಪ್ರಸ್ತಾಪಿಸಿದ್ದಾರೆ. ಗಾಂಧೀಜಿ ಸಾವಿನ ನಂತರವೂ ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಆಚರಿಸಿದ ಅವರು ಸುಮಾರು 21 ವರ್ಷಗಳ ಕಾಲ ಗುಜರಾತ್ ದಲ್ಲಿ ನೆಲೆಸಿದರು. ಅಲ್ಲಿ ಮಕ್ಕಳಿಗಾಗಿ ಶಾಲೆ, ಮಹಿಳೆಯರಿಗಾಗಿ ಭಗಿನಿ ಸಮಾಜ ಮುಂತಾದದವುಗಳನ್ನು ನಡೆಸಿದರು. ನಂತರ 1969ರಲ್ಲಿ ಏಕಾಂಗಿಯಾಗಿ ಜೀವಿಸಿ ದೆಹಲಿಯಲ್ಲಿ ಮರಣಹೊಂದಿದರು.


ಮುಂದುವರೆಯುವುದು…..


 

ಲೇಖಕರು

ontipremi

ದಾವಣಗೆರೆ ಸಮೀಪದ ಒಂದು ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆನೆ. ಬಿಡುವಿನ ವೇಳೆಯಲ್ಲಿ ಕಥೆ, ಕವನ, ಬರೆಯುವ, ಕಂಪ್ಯೂಟರ್ ಗೆ ಸಂಬಂದಿಸಿದ ವಿಷಯಗಳಲ್ಲಿ ತುಂಬಾ ಆಸಕ್ತಿ "ಆಪರೇಷನ್ ಕಂಪ್ಯೂಟರ್" ಎಂಬ ಕನ್ನಡದ ಮೊದಲ ಕಂಪ್ಯೂಟರ್ ರಿಪೇರಿ ಕೈಪಿಡಿ ಬರೆದಿರುವ ಹೆಮ್ಮೆ ನನ್ನದು.....

ಅನಿಸಿಕೆಗಳು

jeeva mulluru ಭಾನು, 07/28/2013 - 00:50

ಪೂವ್ರ ಪೀಡಿತರಾಗಿ ನಾವು ಗಾಂಧಿಯನ್ನು ಮಹಾತ್ಮ ಅಂತ ಒಪ್ಪಿಕೊಂಡಿದ್ದೇವೆ.


ಗಾಂಧಿಗಿಂತಲು ದೇಶ ಭಕ್ತರು ನಮ್ಮಲ್ಲಿದ್ದರು. ತಾನು ಭಾರತದ ಮಹಾತ್ಮ ಅನ್ನಿಸಿಕೊಳ್ಲುವ ಉಮ್ಮೇದಿ ಗಾಂಧಿಯಲ್ಲಿತ್ತು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.