Skip to main content

ನೆನಪುಗಳು ಬಲು ಭಾರ

ಬರೆದಿದ್ದುJuly 3, 2013
noಅನಿಸಿಕೆ

ಅಂದು ಅವನ ಹುಟ್ಟು ಹಬ್ಬ ಎಂದಿನಂತೆ ಆದರೆ ಈ ವರ್ಷ ತುಸು ಸ್ಪೆಷಲ್, ಮೊಬೈಲ್ ನಿಂದ ಒಂದು ಮೆಸೇಜ್ ಕಳುಹಿಸಿದಳು " ನಿನ್ನಮ್ಮನಿಗೆ ಥ್ಯಾಂಕ್ಸ್ ಹೇಳಬೇಕಿದೆ ನಿನ್ನಂತಹ ಒಳ್ಳೆ ಯವನನ್ನ ನನ್ನ ಗೆಳೆಯನಾಗಿ ನೀಡಿದಕ್ಕೆ, ಜನುಮದಿನದ ಶುಭಾಶಯಗಳು, ಬಹುಶ: ಇದೇ ಕಡೆಯ ಬಾರಿ ನಾ ನಿನಗೆ ಗೆಳತಿಯಾಗಿ ಶುಭ ಕೋರುವುದು , ಇನ್ನ ಕೆಲವೇ ದಿನಗಳಲ್ಲಿ ನಮ್ಮ ಸ್ನೇಹಬಂಧ ಪ್ರೇಮಬಂಧವಾಗಿ ಬದಲಾಗಿದೆ ಆಗ ನಾ ನಿನ್ನ ಏನೆಂದು ಕರೆಯಲಿ ? "


 ಅವಳಿಗೆ ಗೊತ್ತು ಅವನು ತನ್ನ ಸಂದೇಶವನ್ನು ನೋಡಿದ ತಷ್ಷಣ ಕರೆ ಮಾಡುತ್ತಾನೆ ಎಂದು ಅಂತೆಯೇ ಮೊಬೈಲ್ ರಿಂಗಣೆಸಿತು ಆದರೆ ಅವಳಿಗೆ ಅವನೊಂದಿಗೆ ಮಾತನಾಡುವ ಧೈರ್ಯ ಅವಳಿಗಿರಲಿಲ್ಲ ಕಾರಣ ಅವನು ಭಾವುಕ, ಇಂತಹ ಸಂದರ್ಭದಲ್ಲಿ ಅವನ ಮಾತುಗಳು ತೀರ ಭಾವುಕವಾಗಿರುತ್ತವೆ ಮನಸ್ಸಿನಲ್ಲಿರೋದೆಲ್ಲ ನಾಲಿಗೆಯಲ್ಲಿ ಸುಲಲಿತವಾಗಿ ಬರುತ್ತದೆ. ಅಂತಹ ಸಂದರ್ಭದಲ್ಲಿ ಅವಳ ಪರಿಸ್ಥಿತಿಯಂತು ನಿಂತಲ್ಲೇ ನೀರಾಗಿ ಬಿಡ ಬೇಕೆನಿಸುತ್ತದೆ. ಅವನ ತೋಳಲ್ಲಿ ಸೇರಿಹೋಗ ಬೇಕೆನಿಸುತ್ತದೆ.
ಸಹಜವಾಗಿ ಆ ಒಂದು ಕ್ಷಣದ ನಂತರ ಕರೆ ಮಾಡಿದರೆ ಅವನು ಅವನಾಗಿರುತ್ತಾನೆ, ಪೊರೆ ಕಳಚಿದ ಹಾವಿನಂತೆ ಅವನು ಹಾಗೆ ತುಂಬಾ ಭಾವುಕ ಜೀವಿ ನೀನಿಲ್ಲದೆ ನಾನಿಲ್ಲ, ನೀ ನಿಲ್ಲದೇ ಈ ಬದುಕೇ ಶೂನ್ಯ ಎನ್ನುವಂತವ ಆದರೆ ಏನು ಮಾಡುವುದು ಅಷ್ಟೇ ಕೋಪಿಷ್ಟ , ಅಷ್ಟೇ ಹಟ , ಅಷ್ಟೇ ಪ್ರಾಟಿಕಲ್ ಕೂಡ ಈ ವಿಷಯಗಳೇ ನನ್ನನ್ನು ಅವನ ಬಗ್ಗೆ ಭಯ ಹುಟ್ಟಿಸುವುದು, ಯಾವಾಗ ಹೇಗೆ ವತರ್ಿಸುತ್ತಾನೆ ಅದೇ ತಿಳಿಯೋಲ್ಲ ?
ಅಷ್ಟರಲ್ಲಿ ಮತ್ತೊಮ್ಮೆ ಕರೆ ಬರಲಾರಂಭಿಸಿತು , ಕರೆ ಸ್ವೀಕರಿಸಿದಳು ಮೆಲ್ಲನಂದ ಇನಿಯ ಎಂದರೆ ತುಂಬಾ ಹಿತವಾಗಿರುತ್ತದೆ ಅಲ್ಲವಾ,
ಆಹಾ ಎಂತಹ ಮಾತುಗಳು, ಇಂತಹ ಮಾತುಗಳೇ ಅಲ್ಲವೇ ನನ್ನನ್ನು ಅವನಿಗೆ ಮನ ಸೋಲುವಂತೆ ಮಾಡಿದ್ದು.
ನೂರು ತಪಗಳ ನಂತರದ ಸಿಗಬಹುದಾದಂತಹ ಅಮೂಲ್ಯ ವರನೀನು ನಿನ್ನ ಕಾಳಜಿ, ನಿನಗೆ ನೀನೆ ಸಾಟಿ ಕಣೋ...
ಕನಸುಗಳಿಗಷ್ಟೇ ಅಲ್ಲ ಕಣ್ಣುಗಳಿಗೂ ಕನವರಿಕೆ ಕೊಟ್ಟವನು ನೀನು ,
ನನ್ನ ನೆನಪುಗಳ ಅರಸ ನೀನು , ನನ್ನುಸಿರಿನ ದಣೆ ನೀನು
ಎನ್ನ ಭಾಳ ಸೋನೆಯ ಸಂಗಾತಿ ನೀನು, ಇನಿಯನಲ್ಲದೇ ಮತ್ತೇನನ್ನಲಿ.
ಮುಗುಳ್ನಕ್ಕಳು
ಅಂದೇಕೋ ಅಪ್ಪ ಬಂದವರೇ ನನ್ನ ಮುಂದೆ ಆಯ್ಕೆ ಪ್ರಶ್ನೆಯನ್ನಿಟ್ಟಾಗ ಮುಂದೆ ಎಂಬ ಪ್ರಶ್ನೆ ನನ್ನಲ್ಲೇ ಉಳಿಯಿತು,
ಕನಸು ನನಸಾಗುವಷ್ಟರಲ್ಲೇ ಅಪ್ಪ ನನ್ನೇಲ್ಲಾ ಕನಸುಗಳಿಗೆ ತಣ್ಣೇರೆರಚಿದ್ದರು , ಎಷ್ಟೇ ಆದರೂ ಹೆಣ್ಣೂ ಅಮ್ಮನ ಕಣ್ಣೇರೂ , ಅಪ್ಪನ ಹಠಕ್ಕೆ ಸೋಲಲೇ ಬೇಕಾಗಿತ್ತು, ಕಾರಣ ಕೇಳುವ ಅಧಿಕಾರ ನನಗಿರಲಿಲ್ಲ, ನಿನ್ನನ್ನೂ ಸಂಪರ್ಕಿಸಲು ನೀ ನಾಟ್ ರೀಚೆಬಲ್ ಆಗಿದ್ದೆ ,,,,,,,,,,,,,,,,,,
ನೆನಪುಗಳು ಬಲು ಭಾರ ಗೆಳೆಯ ಮಾತಿನಲ್ಲಿ ಕಾಡಿದಕ್ಕಿಂತ ಮೌನದಲ್ಲಿ ಕೊಂದಿದ್ದೆ ಹೆಚ್ಚು ಒಂದೇ ಬಾರಿಗೆ ಕೊಂದಿದ್ದರೂ ನನಗೆ ಇಷ್ಟು ನೋವಾಗುತ್ತಿರಲಿಲ್ಲ. ಆಣುವಾಗಿ ಮೌನದಲ್ಲೇ ಏಕೆ ಹೀಗೆ ? ನಾನೀಗ ನಿನ್ನ ಬಿಟ್ಟಿಲಾಗಿದ್ದೇನೆ ಏನು ಮಾಡಲಿ ಹೇಳು ? ನನ್ನ ಜೀವನದಲ್ಲಿ ಓದದೆ ಮಡಿಚಿಟ್ಟ ಪುಟ ನೀನು ಮತ್ತೊಮ್ಮೆ ಪುಟವನ್ನು ತೆರೆದು ನೋಡುವ ಮನಸ್ಸಿಲ್ಲ ಓದಿ ಕಾಡಿದ್ದಕ್ಕಿಂತ ಓದದೆ ಮಡಿಚಿಟ್ಟಿದ್ದೆ ಮನಸ್ಸಿಗೆ ಹೆಚ್ಚು ಮುದ ನೀಡಿದೆ. ಮಳೆಯಿಂದ ದೂರವಿದ್ದರೂ ನೆನದಂತೆ ಮೈ ಮನ ನಿನ್ನಿಂದ ದೂರಾದರೂ ಮನವು ನಿನ್ನನ್ನೇ ನೆನದಿದೆ ಹಗಲಿರುಳೂ .
ಕಾದು ಕೂತಾಗ ಬಾರದ ಮಳೆ ನೀನು, ಮಳೆ ನಿಂತ ಮೇಲೆ ಬೀಳುವ ಮರದ ಹನಿ ನೀನು,
ಕದಡದಿರು ಮನದ ಕೊಳವ ಎಬ್ಬಿಸಿ ನಿನ್ನ ಪ್ರೀತಿಯ ತರಂಗಗಳ
ಈ ಬದುಕಲ್ಲಿ ನೀನೆ ನನ್ನ ಮೊದಲ ಮತ್ತು ಕೊನೆಯ ಆಯ್ಕೆ ,
ನಿನ್ನ ಬದುಕಲ್ಲಿ ಬೇರೆ ಯಾರೇ ಬಂದರು, ನೀ ನನ್ನನ್ನು ನೆನೆದಷ್ಟು ನಾ ಉಸಿರಾಡಿರಲಾರೆ,
ಯಾಕೆಂದರೆ ನೀ ಭಾವುಕ , ಆದರೆ ಅಷ್ಟೇ ಪ್ರಾಟಿಕಲ್ ಕೂಡ.
ಮಿಸ್ ಯು ಫಾರ್ ಎವರ್,

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.