ಕುಡಿಯುವ ನೀರಿನ ಖಾಸಗೀಕರಣ -ವಿಶ್ವ ಬ್ಯಾಂಕ್ ತಾಳಕ್ಕೆ ತಕ್ಕ ಹಾಗೆ ಕುಣಿತ .. ;((
ಬಹು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತಿತ್ತಾದ್ರೂ ವ್ಯಯಕ್ತಿಕವಾಗಿ ಗೊಣಗಿದವರನ್ನು ಬಿಟ್ಟರೆ ಸಾರ್ವತ್ರಿಕವಾಗಿ ಈ ಬಗ್ಗೆ ವ್ಯಾಪಕ ಚರ್ಚೆ ಆಗಲಿಲ್ಲ . ಈಗ್ಗೆ ಕೆಲ ದಿನಗಳ ಹಿಂದೆ ನೀರಿಗಾಗಿ ಹಾಹಾಕಾರ ಶುರು ಆಗಿ ಭವಿಷ್ಯದ ನೀರು ಬಳಕೆ ಬಗ್ಗೆ ಭಯವಾಗುವ ಹಾಗೆ ಆಗಿದ್ದು ಗೊತ್ತಲ್ಲ.. ವಿಶ್ವ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿ ಸರ್ವನಾಶಕ್ಕೆ ದಾರಿ ಮಾಡಿಕೊಟ್ಟ ನಮ್ಮನಾಳುವ ಸರಕಾರಗಳು ಈಗ ಈ ಜೀವ ಜಲವನ್ನು -ಜಲ ಜಾಲಗಳನ್ನು ಖಾಸಗೀಕರಣ ಮಾಡಿ ಸದ್ಭವಿಶ್ಯದಲ್ಲಿ ಸಾಮಾನ್ಯ ಜನತೆಯನ್ನು ಖಾಸಗಿಯವರು ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ..
ಮೊದಲ ಹಂತದಲ್ಲಿ ಹುಬ್ಬಳ್ಳಿ ಧಾರವಾಡ - ಗುಲ್ಬರ್ಗ -ಬೆಳಗಾವಿ ನಗರಪಾಲಿಕೆ ವ್ಯಾಪ್ತಿಯ ಪ್ರದೇಶಗಳು ಈ ಯೋಜನೆಗೆ ಒಳ ಪಟ್ಟಿವೆ . ಈಗ ೨ ನೆ ಹಂತದಲ್ಲಿ ಇನ್ನಷ್ಟು ನಗರ ಪಾಲಿಕೆಗಳು ಅವುಗಳಿಗೆ ಸೇರಿದ ನಗರ ಪಟ್ಟಣಗಳನ್ನು ಸೇರಿಸಿ ಯೋಜನೆ ಜಾರಿಗೊಳಿಸಲಾಗುತ್ತಿದೆ .. ಈ ಯೋಜನೆಯ ಬಗ್ಗೆ ಪತ್ರಿಕೆಗಳಲ್ಲಿ ಸರಕಾರ ಅಥವಾ ಪಾಲಿಕೆಯವರು ಜಾಹೀರಾತು -ಸೂಚನೆ ಕೊಟ್ಟ ಹಾಗೆ ಇಲ್ಲ . ಖಾಸಗೀಕರಣಕ್ಕೆ ಏಕ ಸ್ವಾಮ್ಯಕ್ಕೆ ಮೂಲ ಭೂತ ಅವಶ್ಯಕತೆಗಳಾದ ನೀರು- ವಸತಿ -ಉದ್ಯೋಗ -ಇತ್ಯಾದಿ ಒಳ ಪಟ್ಟರೆ ಭವಿಷ್ಯ ಹೇಗಿರುತ್ತೆ ಎಂದು ಬೇರೆ ಹೇಳಬೇಕಿಲ್ಲ ..!! ಈ ಬಗ್ಗೆ ಇಂದಿನ ( ೧೯- ೦೬- ೨೦೧೩ - ಬುಧವಾರ) ವಿಜಯವಾಣಿಯಲ್ಲಿ ಬಂದ ವರಧಿ ನೋಡಿ ..
http://epapervijayavani.in/Details.aspx?id=6590&boxid=164925984
ಚಿತ್ರ - ಮಾಹಿತಿ ಸೌಜನ್ಯ : ವಿಜಯವಾಣಿ
-------------------------------------------------------------------------------------------------------------
ಈ ಹಿಂದೆ ಪತ್ರಿಕೆಗಳಲ್ಲಿ ಬಂದ ವರದಿ ನೋಡಿ
ಸಾಲುಗಳು
- 782 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ