Skip to main content

ಬರಲಿದೆ ಆಪಲ್ ಐಓಎಸ್ ೭ ಹೊಸ ವಿನ್ಯಾಸ ಹಾಗೂ ಸೌಲಭ್ಯದೊಂದಿಗೆ

ಬರೆದಿದ್ದುJune 14, 2013
noಅನಿಸಿಕೆ

ಹಲವು ವರ್ಷಗಳಿಂದ ಐಓಎಸ್ ಬೋರಾಯ್ತು ಆಪಲ್ ಅವರ ಇನ್ನೋವೇಶನ್ ಮುಗಿಯಿತು ಅನ್ನೋ ಮಾತು ಕೇಳಿ ಬಂದಿತ್ತು. ಅತ್ತ ಅಂಡ್ರಾಯಿಡ್ ಕಡಿಮೆ ಗುಣಮಟ್ಟದ ಹಾಗೂ ಕಡಿಮೆ ಬೆಲೆಯ ಫೋನ್ ಸಾಲಿನೊಂದಿಗೆ ಮಾರುಕಟ್ಟೆ ವಿಸ್ತರಿಸುತ್ತಿದ್ದರೆ ಸ್ಯಾಮಸಂಗ್ ತನ್ನ ವ್ಯಾಪಾರಿ ತಂತ್ರ, ವಿನ್ಯಾಸ ಹಾಗೂ ಎಲ್ಲಾ ಬೆಲೆಗೆ ಸ್ಮಾರ್ಟ್ ಫೋನು ಬಿಟ್ಟು ಅಂಡ್ರಾಯಿಡ್ ಮಾರುಕಟ್ಟೆಯ ಲಾಭದ ಸಿಂಹ ಪಾಲು (೯೫%) ತನ್ನದಾಗಿಸಿ ಕೊಂಡಿದೆ. ಇನ್ನೊಂದು ಕಡೆ ನೋಕಿಯಾ ಮೈಕ್ರೋಸಾಫ್ಟ್ ಅವರ ವಿಂಡೋಸ್ ಫೋನು ಬಳಸಿದ ಲುಮಿಯಾ ಸ್ಮಾರ್ಟ್ ಫೋನುಗಳು ಜನಪ್ರಿಯತೆಯನ್ನು ಪಡೆಯ ತೊಡಗಿದೆ.


ಈ ವಿಂಡೋಸ್ ಫೋನ್ ೮ರ ವಿನ್ಯಾಸ ಅನೇಕ ವಿನ್ಯಾಸ ಕಾರರ ಬಳಕೆದಾರರ ಮೆಚ್ಚುಗಳಿಸಿದೆ. ಇದರಲ್ಲಿ ಮೈಕ್ರೋಸಾಫ್ಟ್ ಆಪಲ್ ಹಾಗೂ ಅದನ್ನು ಅನುಕರಿಸಿದ ಗೂಗಲ್ ನ ವಿನ್ಯಾಸಕ್ಕೆ ಬದಲಾಗಿ ತನ್ನದೇ ಆದ ಚಪ್ಪಟೆ ವಿನ್ಯಾಸ  ರಚಿಸಿತು. ಅದಕ್ಕೆ ಮಾಡರ್ನ್ ಅಥವಾ ಮೆಟ್ರೋ ವಿನ್ಯಾಸ ಅನ್ನುತ್ತಾರೆ. ಗೂಗಲ್ ಸಹ ಇತ್ತೀಚೆಗೆ ತನ್ನ ಅಂಡ್ರಾಯಿಡ್ ಅಲ್ಲಿ ಅದನ್ನೇ ಅನುಕರಿಸಿತು. ಈಗ ಆಪಲ್ ಐಓಎಸ್ ಕೂಡಾ ಚಪ್ಪಟೆ ವಿನ್ಯಾಸವನ್ನು ಬಳಸುವದರ ಮೂಲಕ ಇದೇ ಹೆಜ್ಜೆಯನ್ನು ಇಟ್ಟಿದೆ.


ಐಓಎಸ್ ೭ ಐಫೋನು ೪ ಅಥವಾ ನಂತರದ ಸಾಧನದಲ್ಲಿ ಮಾತ್ರ ಬರಲಿದೆ. ಐಓಎಸ್ ೭ ಅಲ್ಲಿ ಯಾವ ಹೊಸ ಸೌಲಭ್ಯಗಳಿವೆ?  ಏನೆನು ಬದಲಾವಣೆಗಳಿವೆ? ಇದನ್ನು ಸಂಕ್ಷಿಪ್ತವಾಗಿ ನೋಡೋಣ. • ಹೊಸ ವಿನ್ಯಾಸ ಚಪ್ಪಟೆ ಆದ ಐಕಾನುಗಳು, ಕಡಿಮೆ ಗ್ರೇಡಿಯಂಟ್ ಇರುವ ವಿನ್ಯಾಸ ಇರಲಿದೆ. ತೆಳುವಾದ ಹೊಸ ಹೆಲ್ವೆಟಿಕಾ ನ್ಯೂ ಅಲ್ಟ್ರಾ ಫಾಂಟು ಬಳಸಲಿದೆ.

 • ಹೊಸ ಕಂಟ್ರೋಲ್ ಸೆಂಟರ್ ಲಾಕ್ ಸ್ಕ್ರೀನ್ ಮೇಲೆ ಲಭ್ಯವಿರಲಿದೆ. ಇದರಲ್ಲಿ ಏರೋ ಪ್ಲೇನ್ ಮೋಡ್, ಬ್ಲ್ಯೂ ಟೂತ್, ವೈ ಫೈ, ಮ್ಯೂಸಿಕ್, ಕ್ಯಾಮರಾ, ಏರ್ ಡ್ರಾಪ್ ಶೇರಿಂಗ್, ಏರ್ ಪ್ಲೇ ಮೊದಲಾದ ಕಂಟ್ರೋಲ್ ಗಳು ಇರಲಿವೆ.

 • ಮಲ್ಟಿ ಟಾಸ್ಕಿಂಗ್ ಅಂದರೆ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್ ಗಳನ್ನು ಒಟ್ಟಿಗೆ ರನ್ ಮಾಡುವ ಅವುಗಳ ನಡುವೆ ಸ್ವಿಚ್ ಮಾಡುವ ಸೌಲಭ್ಯ ಸಹ ಇರಲಿದೆ.

 • ಸಫಾರಿ ಬ್ರೌಸರ ಅಲ್ಲಿ ಸುಧಾರಿತ ಟ್ಯಾಬ್, ಪೆರೆಂಟಲ್ ಕಂಟ್ರೋಲ್ ಸೌಲಭ್ಯ ಸಹ ಇರಲಿದೆ.

 • ಕ್ಯಾಮರಾ ಹಾಗೂ ಫೋಟೋ ಅಪ್ಲಿಕೇಶನ್ ಸಹ ಹೊಸ ಸೌಲಭ್ಯ ಹೊಂದಲಿದೆ.

 • ಸಿರಿ ಎಂಬ ದ್ವನಿ ಆಧಾರಿತ ಅಸಿಸ್ಟಂಟ್ ಗಂಡು ಹಾಗೂ ಹೆಣ್ಣಿನ ದ್ವನಿಯಲ್ಲಿ ಮಾತಾಡಲಿದೆ. ಅಷ್ಟೇ ಅಲ್ಲ ಫ್ರೆಂಚ್ ಹಾಗೂ ಜರ್ಮನಿ ಭಾಷೆಯಲ್ಲಿ ಮಾತನಾಡಲಿದೆ. (ಕನ್ನಡ ಅದಕ್ಕೆ ಗೊತ್ತಿಲ್ಲ ಮಾರಾಯ್ರೆ)

 • ಐಓಎಸ್ ಕಾರಲ್ಲಿ ಸಹ ಸಿರಿ ಬಳಸಬಹುದು.

 • ಆಪ್ ಸ್ಟೋರಲ್ಲಿ ಜಾಗದ ಆಧಾರದ ಮೇಲೆ ಅಪ್ಲಿಕೇಶನ್ ಹುಡುಕಬಹುದು ಹಾಗೂ ಅಪ್ಲಿಕೇಶನ್ ಗಳು ಬ್ಯಾಕ್ ಗ್ರೌಂಡ್ ಅಲ್ಲೇ ಅಪಡೇಟ್ ಆಗುತ್ತವೆ.

 • ಐಟ್ಯೂನ್ಸ್ ರೇಡಿಯೋ ಸೌಲಭ್ಯ ಸಿಗಲಿದೆ.

 • ಯಾರಾದರೂ ನಿಮ್ಮ ಐಫೋನನ್ನು ಕದ್ದು ಅದರಲ್ಲಿ ಫೈಂಡ್ ಮೈ ಐಫೋನನ್ನು ಆಫ್ ಮಾಡಿದರೆ ಐಕ್ಲೌಡ್  ಪಾಸ್ ವರ್ಡ್ ಇಲ್ಲದೇ ಆನ್ ಮಾಡುವದು ಸಾಧ್ಯವಿಲ್ಲ.

 • ಬೇರೆಯವರ ಮೆಸೆಜ್ ಹಾಗೂ ಕಾಲ್ ಬ್ಲಾಕ್ ಮಾಡಬಹುದು.

 ಇಂದು ಜಗತ್ತಿನ ಅತ್ಯುತ್ತಮ ಫೋನುಗಳಲ್ಲಿ ಐಫೋನು ಒಂದಾಗಿದೆ. ಸ್ಮಾರ್ಟ್ ಫೋನು ಕ್ರಾಂತಿಯಲ್ಲಿ ಹೊಸ ಸಾಲು ಬರೆದ ವೈರಸ್ ಇರದ ಹಣ ಇರುವವರ ಅಚ್ಚುಮೆಚ್ಚಿನ ಫೋನ್ ಗಳಲ್ಲಿ ಐಫೋನು ಒಂದು.


ಕನ್ನಡದಲ್ಲಿ ಸಹ ಇದು ಬಂದಿದ್ದರೆ ಎಷ್ಟು ಚೆನ್ನ ಎಂದು ನನಗೆ ಅನ್ನಿಸುತ್ತದೆ. ಆದರೆ ಕನ್ನಡ ಫೋನಿಗೆ ಮಾರುಕಟ್ಟೆ ಇಲ್ಲ ಬೆಲೆ ಕಡಿಮೆ ಇದ್ದು ಇಂಗ್ಲೀಷ್ ಅಲ್ಲಿದ್ದರೂ ಸಾಕು ಮಾರಾಟವಾಗುತ್ತದೆ ಎಂಬುದು ಹಲವು ಬಾರಿ ಪ್ರೂವ್ ಆಗಿಬಿಟ್ಟಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಪಲ್ ಕನ್ನಡದಲ್ಲಿ ಐಫೋನನ್ನು ತರಲು ಬಂಡವಾಳ ಹೂಡುವದೇ? ಇದು ನೂರಾರು ಮಿಲಿಯನ್ ಡಾಲರ್ ಪ್ರಶ್ನೆ. ಏನೆ ಇರಲಿ ಕನ್ನಡದಲ್ಲಿ ಬಂದರೆ ಅದನ್ನು ಖರೀದಿಸಲು ಕ್ಯೂ ಅಲ್ಲಿ ನಾನು ಮೊದಲು ನಿಂತಿರುತ್ತೇನೆ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.