Skip to main content

ಶಾಲೆಯಲ್ಲಿ ಮಕ್ಕಳಿದ್ದಾರೆ ಹುಷಾರ್

ಇಂದ K.M.Vishwanath
ಬರೆದಿದ್ದುJune 1, 2013
noಅನಿಸಿಕೆ

ಮೇಲಿನ ಮಾತಿನಿಂದ ಯಾರಿಗೆ ಹೆದರಿಸುತ್ತಿದ್ದಾರೆ? ಅಂದುಕೊಂಡಿರಾ ಹೌದು ಇದು ಎಲ್ಲರಿಗೂ ಎಚ್ಚರಿಕೆ ಕೊಡುವ ಮಾತು ನಾವೆಲ್ಲಾ ತುಂಬಾ ತಿಳಿದು ಇಲ್ಲಿಯವರೆಗೂ ತುಂಬಾ ತಪ್ಪುಗಳನ್ನು ಮಾಡಿದ್ದೇವೆ. ಆದರೆ ಇನ್ನು ಮುಂದೆ ಹಾಗೆ ಆಗಲು ಬಿಡುವುದು ಅಪಾಯಕಾರಿ ಏಕೆಂದರೆ ನಾವೆಲ್ಲಾ ಈಗ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯ ಅಡಿಯಲ್ಲಿ ಇದ್ದೇವೆ.

ಮರೆಯದಿರಿ ನಮ್ಮ ಮಕ್ಕಳ ಮುಂದೆ ಮಾತಾಡುವ ಸಮಯದಲ್ಲಿ ಹುಷಾರಾಗಿರಿ ಈಗ ನಮ್ಮ ಮಕ್ಕಳಿಗೂ ಒಂದು ಕಾನೂನು ಇದ್ದು ಅದು ಎಲ್ಲರ ಗಮನ ಸೆಳೆದಿದೆ. ಅದರ ಹಿನ್ನಲೆಯಲ್ಲಿ ನಾವೆಲ್ಲ ವಿಚಾರಿಸಬೇಕಾದ ಅಗತ್ಯವಿದೆ. ಈ ಕಾನೂನಿನ ಪ್ರಕಾರ ಮಕ್ಕಳಿಗೆ ಶಿಕ್ಷಿಸುವಂತಿಲ್ಲಾ, ದಂಡಿಸುವಂತಿಲ್ಲಾ, ವ್ಯಾರೆ ಗಣ್ಣಿನಿಂದ ನೋಡುವಂತಿಲ್ಲಾ, ಯಾವುದೆ ಮಗುವಿಗೆ ಹೆದರಿಸಿ ಮಾತಾಡುವಂತಿಲ್ಲಾ,

ಅದರ ಪರಿಣಾಮವಾಗಿ ನಾವು ನಮ್ಮ ಭವಿಷ್ಯವನ್ನು ಉಳಿಸಿಕೊಳ್ಳುವ ಹಾದಿ ಈಗ ಸುಗಮವಾಗಿದೆ. ನಮ್ಮ ಮಕ್ಕಳಗೆ ನಾವೆಲ್ಲ ಬರಿ ಪ್ರೀತಿ ಕೊಟ್ಟರೆ ಸಾಲದು ಅವರ ಹಕ್ಕುಗಳು ಕೊಡುವುದು ಅಷ್ಟೆ ಅವಶ್ಯಕತೆಯ ಕೆಲಸವಾಗಿದೆ. ಅವರಿಗೆ ಅನುಕಂಪದ ಅವಶ್ಯಕತೆಯ ಜೊತೆಗೆ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಈ ಕಾನೂನು ಸಾಹಾಯ ಮಾಡುತ್ತದೆ. ಯಾರೆ ಇರಲಿ ಮಕ್ಕಳನ್ನು ಒಬ್ಬ ವ್ಯಕ್ತಿಯಾಗಿ ಮಾನವ ಕುಲದ ಶಕ್ತಿಯಾಗಿ ಇಂದು ಮಕ್ಕಳನ್ನು ನಾವು ನೋಡಬೇಕಿದೆ.

ಅದರ ಹಿನ್ನಲೆಯಲ್ಲಿ ನಾವೆಲ್ಲಾ ಈ ಕಾನೂನು ನಮ್ಮ ಮಕ್ಕಳನ್ನು ರಕ್ಷಿಸುವ ಒಂದು ಬಲವಾದ ಅಸ್ತ್ರವಾಗಿದೆ. ಆದರೆ ಅದನ್ನು ಕೆಲವು ಜನ ತಪ್ಪಾಗಿ ಅರ್ಥಮಾಡಿಕೊಂಡು ಮಕ್ಕಳಿಗೆ ಬುದ್ದಿವಾದ ವಿದ್ಯೆ ಕಲಿಸುವ ಪರಿಪಾಠವನ್ನು ಬಿಡುತ್ತಿದ್ದಾರೆ ಜೊತೆಗೆ ಕುಂಟು ನೆಪ ಹೇಳಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ.

ನಮಗೆ ಕಾನೂನು ಇರುವುದು ಇನ್ನೊಬ್ಬರ ಉದ್ಧಾರಕ್ಕಾಗಿಯೆ ಹೊರತು ಅವರ ಅವಹೇಳನ ಮಾಡಿ ಅವರ ಹಕ್ಕಿನ ಜೊತೆಗೆ ಅವರ ಬದುಕು ಕಸಿದುಕೊಳ್ಳಲು ಅಲ್ಲಾ ಎಂಬುದು ತಿಳಿದುಕೊಳ್ಳಬೇಕಿದೆ. ಈ ಕಾನೂನು ಎಲ್ಲರಿಗೂ ಅನ್ವಯಸುತ್ತದೆ. ಮಕ್ಕಳೊಂದಿಗೆ ಕೆಲಸ ಮಾಡುವ ಮಕ್ಕಳನ್ನು ಹೆರುವ ಪ್ರತಿಯೊಬ್ಬರಿಗೂ ಈ ಕಾನೂನು ಅನ್ವಯಸುತ್ತದೆ.

ಮೊನ್ನೆ ಶಾಲೆಯೊಂದರಲ್ಲಿ ಮನೆಗೆಲಸ ಮಾಡಿಲ್ಲ ಎಂದು ಮಗುವನ್ನು ಶಿಕ್ಷಕಿಸಿದ ಶಿಕ್ಷಕಿಗೆ ಆದ ಗತಿ ಎಲ್ಲರಿಗೂ ಗೊತ್ತೆ ಇದೆ. ಆದರೆ ಅದರ ತಾತ್ಪರ್ಯ ಇಷ್ಟೆ ನಮ್ಮ ಮಕ್ಕಳನ್ನು ಕಾಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದರ ಫಲ ನಾವೆಲ್ಲ ಪಡೆಯಬೇಕು ಎನ್ನುವುದು ಅದರ ಆಶೆಯವಾಗಿದೆ. ನಮ್ಮ ಮಕ್ಕಳಿಗಾಗಿ ನಾವು ಸಾವಿರಾರು ಎಕರೆ ಜಮೀನು ಮಾಡುವದು ಆಸ್ತಿ ಪಾಸ್ತಿ ಮಾಡುವುದು ಬೇಡಾ ನಾವು ನಮ್ಮ ಮಕ್ಕಳನ್ನು ಉತ್ತಮವಾಗಿ ಶಾಲೆಗೆ ಕಳುಹಿಸಿ ಕಳುಹಿಸಿದ ಮಕ್ಕಳನ್ನು ಸರಿಯಾಗಿ ಕಲಿಸಿ ಅವರನ್ನೆ ಆಸ್ತಿಯಾಗಿ ಮಾಡೋಣ.

ನಮ್ಮ ಪ್ರೀತಿಯ ಮಕ್ಕಳನ್ನು ನಾವೆಲ್ಲ ಪ್ರೀತಿಯಿಂದ ಗೆಲ್ಲೋಣಾ ಅವರ ಆಸೆ ಆಕಾಂಕ್ಷೆಯನ್ನು ಈಡೇರಿಸಲು ಪ್ರಯತ್ನಿಸೋಣಾ ಅವರತ್ತ ನಮ್ಮ ಚಿತ್ತ ಹರಿಸೋಣಾ ಅವರ ಬದುಕು ಹಸನಾಗಿಸಲು ನಾವೆಲ್ಲ ಶ್ರಮಿಸೋಣಾ ಏಕೆಂದರೆ ಅವರೆ ನಮ್ಮ ಮಕ್ಕಳು ಮುಂದಿನ ಭವಿಷ್ಯದ ಬದುಕಲ್ಲವೆ.

ಈ ಕಾನೂನು ನಮ್ಮ ದೇಶದ ಜಮ್ಮು ಕಾಶ್ಮೀರ ಹೊರತುಪಡೆಸಿ ಉಳಿದ ಎಲ್ಲಾ ರಾಜ್ಯಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಅನ್ವಯಿಸುತ್ತದೆ . ಈ ಕಾನೂನಿನಲ್ಲಿ ಪಾಲಕರ ಸ್ಪಷ್ಟ ಜವಾಬ್ದಾರಿಗಳನ್ನು ತಿಳಿಸಲಾಗಿದೆ . ಪ್ರತಿಯೊಬ್ಬರು ತಮ್ಮ ಕೆಲಸದ ಕರ್ತವ್ಯದ ಬಾಗವನ್ನು ಈ ಕನುನೂ ಒತ್ತಿ ಹೇಳುತ್ತದೆ.


ಈ ಕಾನೂನಿನ ಅನ್ವಯ ಖಾಸಗಿ ಶಾಲೆಗಳು ದುರ್ಬಲ ವರ್ಗದ ಮಕ್ಕಳಿಗೆ ವಿಶೇಷ ಮೀಸಲಾತಿಯನ್ನು ನೀಡಬೇಕು ಅವರಿಗಾಗಿಯೆ ಶೇಕಡಾ 25 ರಷ್ಟು ಸ್ಥಾನಗಳನ್ನು ಕೊಡಬೇಕು ಎಂದು ಸ್ಪಷ್ಟವಾದ ಉಲ್ಲೇಖ ನೀಡುತ್ತದೆ . ಈ ಉಲ್ಲೇಖದಿಂದ ಶಿಕ್ಷಣ ಶ್ರೀಮಂತರ ಸ್ವತ್ತು ಅಲ್ಲಾ ಇದು ಸಮಾನತೆಯನ್ನು ಎತ್ತಿ ತೋರಿಸುತ್ತದೆ . ಸಾರ್ವಜನಿಕ ವಲಯದಲ್ಲಿ ಈ ಕಾನೂನು ಈಗ ತುಂಬಾ ಚರ್ಚೆಗೆ ಈಡಾಗುತ್ತಿದ್ದೆ.


ಮಗು ತನಗೆ ಬೇಕಾದಾಗ ಶಾಲೆಗೆ ಸೇರಿಸಿಕೊಳ್ಳುವ ಹಾಗೂ ಬೇರೆ ಶಾಲೆಗೆ ವರ್ಗಾವಣೆ ಹೊಂದುವ ಹಕ್ಕು ಈ ಕಾನೂನು ಎತ್ತಿ ಹಿಡಿದಿದೆ ಈ ಕಾನೂನಿನ ಅನ್ವಯ ಮಕ್ಕಳಿಗೆ ಎಲೆಮೆಂಟರಿ ಶಿಕ್ಷಣ ಮುಗಿಯುವತನಕ ನಪಾಸು ಮಾಡುವಂತಿಲ್ಲ ಅವನ ಸಾಮರ್ಥ್ಯಕ್ಕೆ ತಕ್ಕಂತೆ ಬೋಧನೆಯನ್ನು ಒತ್ತಿ ಹೇಳುತ್ತದೆ . ಆಟದ ಮೂಲಕ ಚಟುವಟಿಕೆಯ ಮೂಲಕ ಕಲಿಕೆಯನ್ನು ಶುದ್ಧಗೊಳಿಸಿ ಅವನ ಬದುಕಿನ ಶಿಕ್ಷಣ ನೀಡಬೇಕು ಎಂದು ಈ ಕಾನೂನು ತಿಳಿಸುತ್ತದೆ.

ಈ ಕಾನೂನಿನ ನಿಯಮದ ಪ್ರಕಾರ ಶಾಲೆಗಳ ಶಿಕ್ಷಕರ ಮತ್ತು ಮಕ್ಕಳ ಅನುಪಾತ 25 ಮಕ್ಕಳಿಗೆ ಒಬ್ಬ ಶಿಕ್ಷಕ ಬೋದಿಸಬೇಕು , ತರಗತಿವಾರು , ವಿಷಯವಾರು ಶಿಕ್ಷಕರು , ಸೂಕ್ತ ತರಗತಿ ಕೋಣೆ ಇರಬೇಕು ಎಂದು ಹೇಳುತ್ತದೆ. ಆದರೆ ವಿಪರ್ಯಾಸವೆಂದರೆ ಸರ್ಕಾರವೆ ಇದಕ್ಕೆ ತಕ್ಕುದಾಗಿ ನಡೆಯುತ್ತಿಲ್ಲ ಅದಕ್ಕಾಗಿಯೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬದುಕು ಸರ್ಕಾರವೆ ಕೊಲ್ಲುತ್ತಿದೆ ಎಂದು ಕೆಲವೊಮ್ಮೆ ಅನಿಸುತ್ತದೆ.

ಬುದ್ಧಿವಂತರಾದ ಶಿಕ್ಷಕರು , ಪಾಲಕರು, ಸಮುದಾಯ, ಶಾಲಾ ಅಭೀವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಈ ಕನೂನುನನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮಕ್ಕಳ ಭವಿಷ್ಯ ದೃಷ್ಠಿಯಿಂದ ಅವರನ್ನು ಉತ್ತಮ ನಾಗರಿಕರನ್ನಾಗಿ ಬೆಳಿಸುವ ದೃಷ್ಠಿಯಿಂದ ಅವರ ಉತ್ತಮ ಬದುಕಿಗೆ ನಾವೆಲ್ಲ ಸಾಕ್ಷಿಯಾಗಲು ಉತ್ತಮ ಮತ್ತು ಗುಣಾತ್ಮಕ ಶಿಕ್ಷಣ ನೀಬೇಕಾಗಿದೆ ಈ ಕಾನೂನು ಸರಿಯಾಗಿ ಅನುಷ್ಠಾನಗೊಳಿಸಬೇಕಿದೆ.

ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ.


ಲೇಖಕರು, ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕೃತರು. 9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.