Skip to main content

ಚುಟುಕುಗಳು

ಇಂದ K.M.Vishwanath
ಬರೆದಿದ್ದುMay 6, 2013
noಅನಿಸಿಕೆ

1.!! ಪ್ರೇಮ ಇನ್ನೆನೂ !!
 
ರೈಲುಗಾಡಿಯಲ್ಲಿ ಸಿನಿಮಾ ರೀಲು ನೋಡುತ್ತಿದ್ದೆ ನಾನು !
 
ಅಲ್ಲೆ ಕೂತಾ ಇಬ್ಬರೂ ಪ್ರೇಮಿಗಳು ತೋರಿದರು ಸಿನಿಮಾ ರಿಯಲೂ!


ನಾನು ಕೇಳಿದೆ ಇದೇನು !
 
ಅವರು ಹೇಳಿದರು ಇದೂ ಈ ಶತಮಾನದ ಪ್ರೇಮ ಇನ್ನೆನೂ !
 
 


2. !! ಮದುಮಗಳೆ ಇಲ್ಲಾ ಮನೆಯಲ್ಲಿ !!
 
ಅಂದು ನಾವೆಲ್ಲ ಮದುವೆಯ ಮನೆಯಲ್ಲಿ !
 
ಎಲ್ಲಾ ತಯಾರಿ ನಡೆದಿತ್ತು ಸಂಭ್ರಮದಲ್ಲಿ !
 
ಸ್ವಲ್ಪ ಹೊತ್ತಾದ ಮೇಲೆ ತಿಳಿತು !
 
ಮದುಮಗಳೆ ಇಲ್ಲಾ ಮನೆಯಲ್ಲಿ !
 
 
 
3. !!ಚಿಂತಿ !!
 
ಪ್ರೀಯೆ ನೀ ಹೊರಗ ಬರಬ್ಯಾಡ !
 
ಫಿಗರ ಹಾಳಾಗುತ್ತೆ !
 
ಬಿಸಿಲು ಬಹಳೈತಿ ನಿನ್ನ ತುಟಿಗೆ ಹಚ್ಚಿದ ಬಣ್ಣ ಕರಗತೈತಿ !
 
ಮತ್ತೆಲ್ಲಿ ತರಲಿ ಪದೆ ಪದೆ ಎನ್ನುವುದೆ ಚಿಂತಿ !
 
 
 
4. !! ಇರಬೇಕು ನೀಟು !!
 
ಮನೆಯ ರೇಟು ಏರುತ್ತಿದೆ ಭರದಿಂದ !
 
ಬರುಬರುತ್ತಾ ಏರುತ್ತಿದೆ ಕರೆಂಟ್ ರೇಟು !
 
ನಮ್ಮ ಹಣಕಾಸು ಮಂತ್ರಿ ಹೇಳತ್ತಾರೆ. !
 
ಇದೆ ನಮ್ಮ ಭಾರತಕ್ಕೆ ಸರಿಯಾದ ರೇಟು !
 
ಜನರೇ ಈಗಲಾದರು ಇರಬೇಕು ನೀಟು !
 
 
 
5. !! ಸಾಗುತ್ತಿದೆ ರೇಟು !!
 
ಬೆಲೆ ಏರಿಸಿದರು ತಲೆ ತಗ್ಗಿಸದು ಸಿಗರೇಟು !
 
ಅದರ ವರ್ಚಸ್ಸೇ ಅಂತಹ ಗ್ರೇಟು !
 
ಯಾರ ಮಾತು ಕೇಳದೆ ಸಾಗುತ್ತಿದೆ ರೇಟು ! ಸಿಗರೇಟು !


 
 
6. !! ಹಳೆಯ ಗಾದಿ !!
 
ರಾಹುಲ್ ಗಾಂದಿ ! ನರೇಂದ್ರ ಮೋದಿ ! ಯಾರು ಹಿಡಿದರೇನು ಮಂತ್ರಿ ಗಾದಿ !
 
ಬರಿ ಅವರ ಮನೆಯಲ್ಲಿ ನಡೆಯುವುದು ಯುಗಾದಿ !
 
ಓಟ ಹಾಕಿದವರಿಗೆಲ್ಲಾ ಸಿಗುವುದು ಹರಿದ ಹಳೆಯ ಗಾದಿ !
  
 
 
 
7. !! ಇದನ್ನು ನೋಡಿ !!
 
ಅತ್ಯಾಚಾರವಾಗುತ್ತಿದೆ ಎನ್ನುವುದನ್ನು ತೋರಿಸಿ !
 
ಕಲಿಸುತ್ತಿವೆ ಮಾಧ್ಯಮಗಳು!


ಹೇಗ ಅತ್ಯಾಚಾರ ಮಾಡಬೇಕು ಎನ್ನುವುದು !
 
ಶಿಷ್ಠಾಚಾರ ಕಲಿಸುವ ಗುರುಗಳೆಲ್ಲಾ !
 
ವ್ಯಭಿಚಾರಕ್ಕೆ ಇಳಿಯುತ್ತಿರುವರು ಇದನ್ನು ನೋಡಿ !
 
 
 
8. !! ವರ್ತಮಾನದ ಪುರುಷರು !!
 
ಇತಿಹಾಸ ನೋಡಿ ಕಲಿಯೆಂದರು ಹಿರಿಯರು !
 
ಮಿಂಚಿಹೋದ ಮಾತಿಗೆ ಚಿಂತಿಸಬೇಡಾ ! ಎಂದರು ಶರಣರು !
 
ಆದರೆ ಈ ಮಾಧ್ಯಮದಿಂದ ಕಲಿಯುವುದು ಬಹಳವಿದೆ !
 
ಎಂದರೆ ವರ್ತಮಾನದ ಪುರುಷರು !
 
 
 
9. !! ಬದಲಾಗಿದೆ ನಮ್ಮ ಜನ !!
 
ಹಂಚಿ ತಿನ್ನುವ ಬುದ್ದಿ ಹೊಯಿತು !
 
ಹೊಂಚುಹಾಕಿ ಹೊಡೆಯುವ ಬುದ್ದಿ ಬಂತು !
 
ಇದಕ್ಕೆಲ್ಲಾ ಬದಲಾವಣೆ ಎಂಬ ಹೆಸರು ಬಂತು !
 
ನೋಡಿ ಹೇಗೆ ಬದಲಾಗಿದೆ ನಮ್ಮ ಜನ !
 
 
 
10. !! ಮಂದಿಗೆ ಭಾರವಾಗುತ್ತಾ!!
 
ನೋಡಿ ಕಳಿದೆ ದಿನಗಳನ್ನು !
 
ಮಾಡಿ ಕಳಿಯಲಿಲ್ಲಾ ಕೆಲಸವನ್ನು !
 
ಮಂದಿಗೆ ನಿಂದೆ ಆಡುತ್ತಾ ಕೂತಿರುವೆ ನಾನು ಈಗ ಮಂದಿಗೆ ಭಾರವಾಗುತ್ತಾ!
 
 


ಕೆ.ಎಂ.ವಿಶ್ವನಾಥ

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.