ಭೋಗದ ಹಾದಿಯಿಂದ ರೋಗವಿದೆಯೆ ಹೊರತು, ಯೋಗ್ಯವಾದದ್ದು ಯಾವುದು ಇಲ್ಲ
ಅವಳು ಮತ್ತು ಅವನು. ಇಬ್ಬರು ಪ್ರೇಮಿಗಳು. ನಮಗೆ ಯಾರು ಬೇಕಿಲ್ಲ ನಿನಗೆ ನಾನು ನನಗೆ ನೀನು ಇದ್ದರೆ ಸಾಕು ಎನ್ನುವ ನಂಬಿಕೆಯಲ್ಲಿ ಈ ಪ್ರೀತಿಯೆಂಬ ಮಾಯೆಯ ಕೈಯಲ್ಲಿ ತಮ್ಮ ಬದುಕನ್ನು ಕೊಟ್ಟರು. ಅವರ ನೋಟದಲ್ಲಿ ಬರಿ ಈಗ ಈ ಪ್ರೀತಿ ಪ್ರೇಮ ಬಿಟ್ಟರೆ ನಮಗೆ ಯಾರ ಆಸರೆಯೂ ಇಲ್ಲ ಎಂಬ ಕಟು ನಿರ್ಧಾರಕ್ಕೆ ಬಂದರು. ಅವರಿಬ್ಬರು ಯಾರ ಮಾತು ಪರಿಗಣಿಸದೆ ನಡೆದರು ಯಾರಿಗೂ ಯಾವ ವಿಷಯ ಕೇಳದೆ ಸಾಗಿದರು.
ಬದುಕಿನ ಅನೇಕ ಸಾಧನೆಗಳನ್ನು ಮರೆತು ಈ ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕಿ ಮೂಕರಾದರು. ಹೆತ್ತವರು ಹೊತ್ತವರು, ಸ್ನೇಹಿತರು ಯಾರೊಬ್ಬರ ಮಾತು ಕೇಳದೆ ಈ ಪ್ರೀತಿಯನ್ನು ಮುಂದುವರೆಸಿದರು. ಪ್ರೀತಿಯಲ್ಲಿ ಜೀವನ ಸಾಕು ಎನಿಸಿದಾಗ ಪ್ರೀತಿಯನ್ನು ಮದುವೆಯೆಂಬ ಬಂಧನಕ್ಕೆ ಬದಲಿಸಿಕೊಂಡರು. ಅವರ ಜೀವನ ಸುಗಮವೆಂದು ಭಾವಿಸಿದರು ಆದರೆ ವಿಧಿಗೆ ಇದು ಇಷ್ಟವಿರಲಿಲ್ಲ ಕಾರಣ ಅವರು ತಮ್ಮ ಬಂಧು ಬಾಂದವರನ್ನು , ಹೆತ್ತವರನ್ನು ತ್ಯೆಜಿಸಿ ನಡೆದ ರೀತಿಯೆ ಅವರಿಗೆ ಮಾರಕವಾಗಿ ಹೋಯಿತು ಅನಿಸುತ್ತದೆ.
ಕೆಲವೊಮ್ಮೆ ನಮ್ಮ ಬದುಕಿನ ಹೆಜ್ಜೆ ನಾವು ವಿಚಾರಿಸಿ ಇಡದಿದ್ದರೆ ನಮ್ಮ ಬದುಕಿನ ಎಷ್ಟೊ ಕಷ್ಟಗಳು ನಮ್ಮನ್ನು ನಮ್ಮ ಬದುಕನ್ನು ತಿಂದು ಹಾಕುತ್ತವೆ. ಅದರಂತೆ ಈ ಮೇಲಿನ ಅವನು ಅವಳ ಬದುಕಿನ ಮೇಲೆ ಘೋರ ಪರಿಣಾಮ ಬೀರಿದ್ದು. ಅಂದು ಅವರಿಬ್ಬರು ಮನೆಯನ್ನು ತಮ್ಮ ಬಂಧುಬಳಗವನ್ನು ತ್ಯೆಜಿಸಿ ಹೊರಬಂದಾಗ ಅವರ ಕೈಯಲ್ಲಿ ಇದ್ದ ಬಿಡಿಗಾಸು ನಿರಂತರ ಸಹಾಯಕ್ಕೆ ಬರುತ್ತದೆ. ಎಂಬ ಅಹಂನಲ್ಲಿ ಮನೆಯ ಪಾಲಕರ ಹಂಗು ತೊರೆಯುವ ನಿರ್ಧಾರಕ್ಕೆ ಬಂದರು. ಅದು ಎಲ್ಲಿಯವರೆಗೂ ನಮ್ಮ ಕೈ ಹಿಡಿಯುತ್ತದೆ. ಎನ್ನುವ ವಿಚಾರ ಅವನು ಮಾಡಲಿಲ್ಲ, ಅವಳು ಮಾಡಲಿಲ್ಲ. ಅವರಿಬ್ಬರಿಗೆ ಜೀವನ ಅಂದರೆ ಏನು ಅಂತಾ ಅರ್ಥವಾಗಲಿಲ್ಲ. ಅದಕ್ಕಿಂತ ಮೊದಲೇ ಈ ಪ್ರೀತಿ ಹೇಗೆ ತನ್ನ ಅಸ್ತತ್ವ ಉಳಿಸಿಕೊಳ್ಳಲು ಸಾಧ್ಯವೆ ? ಎಂಬ ಕಲ್ಪನೆ ಮೂಡಲಿಲ್ಲ.
ಅವನು ಅವಳು ಈಗ ದೂರದ ಊರಿನಲ್ಲಿ ಯಾರ ಸಹಾಯವು ಯಾಚಿಸಿದೆ ಬದುಕು ನಡೆಸೋಣ ಎಂಬ ಜಂಬದ ಪ್ರೀತಿಯಲ್ಲಿ ಮನೆಯಿಂದ ಒಂದಿಷ್ಟು ಹಣದೊಂದಿಗೆ ಹೊರಬಂದಿದ್ದಾರೆ. ಅವರು ನಮಗೆ ಯಾರು ಕೈ ಹಿಡಿವ ಅವಶ್ಯಕತೆಯಿಲ್ಲ ನಾವು ಅಮರ ಪ್ರೇಮಿಗಳು ಎಂಬ ಗೊಡ್ಡುನಂಬಿಕೆಯಲ್ಲಿ ಹೊರಬಂದಿದ್ದಾರೆ.
ಅವನು ಮತ್ತು ಅವಳು ಮದುವೆಯಾದರು ಅಂದು ಮೊದಲನೆ ರಾತ್ರಿ ಬಾಡಿಗೆ ಮನೆಯಲ್ಲಿ ಇಬ್ಬರುಸಂತೋಷ ಮತ್ತು ನೆಮ್ಮದಿಯ ಬದುಕಿನಲ್ಲಿಹತ್ತಾರು ಮಕ್ಕಳು ಹಡೆದು ಜೀವನ ಸುಗಮವಾಗಸೋಣ ಎನ್ನುವ ಸುಂದರ ಕನಸು ಕಂಡರು ಕಂಡ ಕನಸಿನ ನೆನಸು ಮಾಡುವ ರೀತಿ ಮಾತ್ರ ಯೋಚಿಸಲಿಲ್ಲ .
ಕೆಲವು ದಿನಗಳು ಅವನ ಮತ್ತು ಅವಳ ಬದುಕು ಅತ್ಯಂತ ಸುಂದರವಾಗಿ ಯಾವ ಯೋಚನೆಯಿಲ್ಲದೆ ಯಾರ ಹಂಗಿಲ್ಲದೆ ಕಳೆದರು. ಈ ಪ್ರೀತಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದ ಅವನು ಮತ್ತು ಅವಳಿಗೆ, ಈ ಬದುಕು ಸುಗಮ ನಮ್ಮಲ್ಲಿ ಹಣವಿರುವತನಕ, ಹಣ ಮುಗಿದರೆ ಸಾಕು ಬದುಕೊಂದು ಬೀದಿ ಹೆಣಕ್ಕೆ ಸಮವಾಗುತ್ತೆ ಎಂಬ ಕಟು ಸತ್ಯ ಮರೆತು, ಹಾಗೆ ಹೀಗೆ ಜೀವನ ಆರಾಮವಾಗಿ ಕಳಿಯತೊಡಗಿದರು.
ಒಂದು ದಿನ ಅವನು ಹೊರಗಡೆಯಿಂದ ಬಂದ ರಾತ್ರಿ ಹತ್ತರ ಸಮಯ ಅವಳು ಹಾಸಿಗೆಯ ಮೇಲೆ ಮಲಗಿದ್ದಳು. ಅವಳಿಗೆ ಆಯಾಸವಾಗಿ ಮಲಗಿರಬಹುದು ಎಂಬ ಕಲ್ಪನೆಯಲ್ಲಿದ್ದ ಅವನು ಹಾಗೆ ಹಣೆಯ ಮೇಲೆ ಕೈಯಿರಿಸಿ ನೋಡಿದ ಆಗಲೇ ಜ್ವರದಿಂದ ಬಳಲುತ್ತಿದ್ದಳು. ಈ ವಿಷಯ ಅರಿತ ಅವನು ಕೂಡಲೇ ವೈದ್ಯರ ಬಳಿಗೆ ಬಂದು ಅವಳ ಪರೀಕ್ಷೆ ಮಾಡಿಸಿದ ಆಸ್ಪತ್ರಯಲ್ಲಿ ಚಿಕಿಸ್ತೆಗೆ ಒಳಪಡೆಸಿದ ಮರುದಿನ ಅವನು ಮತ್ತು ಅವಳಿಗೆ ವೈದ್ಯರು ಹೇಳಿದರುಅವರಿಬ್ಬರು ಈಗ ಮೂರನೆ ವ್ಯಕ್ತಿತ್ವಕ್ಕೆ ತಂದೆ ತಾಯಿ ಆಗಲಿದ್ದಾರೆ ಅಂತಾ.
ಅತ್ಯಂತ ಸಂತೋಷಭರಿತರಾದ ಇಬ್ಬರು ಅವರ ಆ ಸಂತೋಷಕ್ಕೆ ಪಾರವೆ ಇರಲಿಲ್ಲ ಆದರೆ ಇದು ಕ್ಷಣಿಕ ಎನ್ನುವುದು ಮಾತ್ರ ಅವರಿಬ್ಬರಿಗೆ ಅರ್ಥವಾಗಲಿಲ್ಲ. ನಮ್ಮ ಜೀವನದಲ್ಲಿ ಕೆಲವು ನಾವುಂದುಕೊಂಡಂತೆ ಆದರೆ ಮತ್ತೆ ಕೆಲವು ನಾವು ಅಂದುಕೊಳ್ಳದ ಹಾಗೆ ಆಗುತ್ತವೆ. ಅದಕ್ಕೆ ತಕ್ಕ ಸಾಕ್ಷಿ ಅವರಿಬ್ಬರ ಜೀವನದ ಈ ಘಟನೆ .
ಈಗ ಅವಳು ಗರ್ಬಿಣಿ ಹತ್ತಾರು ಬಯಕೆಗಳು, ಅವನು ಈಗ ಚಿಂತೆಯಲ್ಲಿ ಮುಳಗಿದ ಇಲ್ಲಿಯವರೆಗೂ ಇದ್ದ ಹಣ ಖರ್ಚಾಗಿ ಹೋಯಿತು ಕೆಲಸವಿಲ್ಲದೆ ದಿನವಿಡಿ ಅಲೆದಾಟ ಶುರುವಾಯಿತು. ಮನೆ ಬಾಡಿಗೆಯವರು ದುಡ್ಡು ಕೇಳತೊಡಗಿದರು ಹಲವು ಖರ್ಚುಗಳು ನಿಂತು ಹೋದವು ದಿನ ಕಳಿದಂತೆ ಚಿಂತೆಗಳು ಹೆಚ್ಚಾದವು ಇತ್ತ ಗರ್ಬಿಣಿ ದಿನಕಳಿದಂತೆ ಕಷ್ಟದ ಹೊನಲು ಹೆಚ್ಚಾಯಿತು.
ಅವರಿಬ್ಬರ ಬದುಕಿನ ಕನಸಿನ ಕಿಂಡಿಗಳು ಮುಚ್ಚತೊಡಗಿದವು. ಈ ಬಾರಿ ಅವರ ಬಡತನಕ್ಕೆ ಸಹಾಯ ಮಾಡಿದ್ದು ಅವಳಲ್ಲಿ ಇರುವ ವಡವೆಗಳು ನಮ್ಮ ಬದುಕಿಗಿಂತ ಈ ಬಂಗಾರ ಏನು ಕೆಲಸವಿಲ್ಲ ಎಂದು ಭಾವಿಸಿ ಅವುಗಳನ್ನು ಮಾರಿ ತಮ್ಮ ಜೀವನ ಮುನ್ನೆಡಿಸಿದರು.
ಅವನಿಗೆ ಕೊನೆಗೂ ಕೆಲಸ ಸಿಗಲೇಯಿಲ್ಲ ಕಾರಣ ಶಿಕ್ಷಣ ಸಂಪೂರ್ಣವಾಗಿ ಮುಗಿಸದ ಅವನು ಯಾವ ದೊಡ್ಡ ಕೆಲಸಕ್ಕು ಅರ್ಹನಾಗಿರಲಿಲ್ಲ ಚಿಕ್ಕ ಕೆಲಸ ಮಾಡಿದರೆ ಮರಿರ್ಯಾದೆಯ ಪ್ರಶ್ನೆ ಹೀಗೆ ಹತ್ತಾರು ಚಿಂತನೆಗಳನ್ನು ಮಾಡುತ್ತ ನಡೆದ ಅವರಿಬ್ಬರ ಜೀವನ ಈಗ ಬೀದಿಗೆ ಬಂದು ನಿಂತಿದ್ದು ದುಡ್ಡಿಗಾಗಿ ಕೊನೆಗೆ ಈಗ ಹೆರಿಗೆ ಸಮಯ ಹತ್ತಿರವಾಯಿತು. ಅವಳು ಮಗು ಹೆರುವ ಸಮಯದಲ್ಲಿ ಇವರ ವಾಸ ಒಂದು ಗುಡಿಸಲಿಗೆ ಬಂದು ನಿಂತಿತ್ತು. ಆಗ ಅವನು ಹೋಟೆಲ್ ಒಂದರಲ್ಲಿ ವೇಟರ್ ಆಗಿದ್ದ ಬರುವ ಚಿಕ್ಕ ಸಂಬಳದಲ್ಲಿ ಮೂರು ಜೀವಗಳು ಒಬ್ಬರಿಗೊಬ್ಬರು ಆಧಾರ ಎಂಬಂತೆ ಜೀವನ ನಡೆಸಿದರು.
ಕಷ್ಟಗಳು ಇದ್ದರು ಅವುಗಳನ್ನು ಸಹಿಸುತ್ತ ನಡೆದರು. ಬದುಕಿನ ಕ್ಷಣಗಳನ್ನು ಹೀಗೆ ಕಳಿಯುವರೆ ಅಥವಾ ಇದು ವಿಧಿ ಆಡಿದ ವಿಚಿತ್ರ ಆಟವೆ ತಿಳಿಯದೆ ಮುನ್ನಡೆದರು ಅವರಿಬ್ಬರೂ ಹೀಗೆ ಒಂದು ರಾತ್ರಿ ಮಾತನ್ನು ಆಡುತ್ತ ಇಲ್ಲಿಯವರೆಗೂ ನೆನಸದೆ ಇದ್ದ ತಂದೆ ತಾಯಿಯ ನೆನಪು ಮಾಡಿದರು. ತಂದೆ ತಾಯಿಯಮಾತು ಕೇಳಲಾರದ್ದಕ್ಕೆ ಪಶ್ಚಾತಾಪ ಪಟ್ಟರು ನಾವೇಕೆ? ತಂದೆ ತಾಯಿಯನ್ನು ಕಂಡು ನಮ್ಮ ಕಷ್ಟ ಹೇಳಿಕೊಳ್ಳಬಾರದು ಎಂದು ಯೋಚಿಸಿದರು . ಅವನ ಅವಳ ಮನಸ್ಸು ಒಪ್ಪದಿದ್ದರು ಅವರಿಬ್ಬರ ಸ್ಥಿತಿಗತಿ ತಂದೆ ತಾಯಿಯನ್ನು ಕಾಣಲೇಬೇಕಿತ್ತು . ಇಬ್ಬರು ಕೊನೆಗೆ ತಂದೆ ತಾಯಿಯನ್ನು ಕಾಣಲು ಹಲವು ದಿನಗಳ ನಂತರ ತಾವು ಹುಟ್ಟಿ ಬೆಳಿದ ಊರಿನ ಕಡೆಗೆ ಪಯಣ ಬೆಳಿಸಿದರು.
ಅಂದು ಸಂಜೆಯ ಸಮಯ ತಮ್ಮ ಊರಿಗೆ ಬಂದು ಇಳಿದರು. ಯಾವುದೊ ಲೋಕಕ್ಕೆ ಬಂದು ಇಳಿದಂತೆ ಭಾಸವಾಯಿತು. ಅಂದು ಇಲ್ಲಿಂದ ಹೋದ ಇಬ್ಬರು ಯುವಕರು ಇವರೆ? ಎಂಬ ಕಲ್ಪನೆ ನೋಡುಗರಿಗೆ ಗುರುತು ಸಿಗಲಿಲ್ಲ ಹಾಗೆ ಮನೆಯತ್ತ ಧಾವಿಸಿದರು. ಮನೆಯ ಮುಂದೆ ನಿಂತು ಕೂಗುವ ಪರಿ ಬರಬಹುದೆ? ಕೂಗಿದರು ಯಾರು ಕೇಳದ ಹಾಗೆ ಇರುವರೆ? ನೋಡಿದಮೇಲೆ ನಮ್ಮ ತಪ್ಪು ಮನ್ನಿಸದೆ ನಮಗೆ ಹೊರಹಾಕುವರೆ? ಎಂಬ ಇತ್ಯಾದಿ ವಿಷಯಗಳನ್ನು ವಿಚಾರಿಸುತ್ತ ಅವರ ಮನೆಯ ದೊಡ್ಡ ಬಾಗಿಲ ಹತ್ತಿರ ಬಂದರು, ಆದರೆ ಅಲ್ಲಿ ನಡೆದಿದ್ದೆ ಬೇರೆ ಆ ಮನೆಯು ಬೀಗ ಹಾಕಿತ್ತು ಎಲ್ಲಿ ಹೋದರು ಎಂಬ ಕಲ್ಪನೆ ಮೂಡಲಿಲ್ಲ ಹಾಗೆ ನೋಡುತ್ತ ಯೋಚಿಸುತ್ತ ನಿಂತಾಗ ಆ ಕಡೆಯಿಂದ ಒಬ್ಬ ಮುದುಕಿಯೊಬ್ಬಳು ಬಂದಳು ತಾವು ಯಾರು ಎಂದು ವಿವರಿಸಿದಾಗ ಗೋಗರಿದು ಅತ್ತಳು ಆ ಅಜ್ಜಿ ಯಾಕೆಂದರೆ ಅವಳು ಇವರಿಬ್ಬರ ಅಜ್ಜಿಯಾಗಿದ್ದಳು.
ಕೊನೆಗೆ ಆ ಮನೆಯ ಬಾಗಿಲನ್ನು ತೆಗೆದು ಆ ಅಜ್ಜಿ ಹೇಳಿದ್ದು ಇಷ್ಟು ನೋಡಿರಿ ನೀವು ನಿಮ್ಮ ಪ್ರೀತಿಗಾಗಿ ಈಡಿ ಕುಟುಂಬವನ್ನೆ ಧಿಕ್ಕರಿಸಿ ಹೋದರಿ ಆದರೆ ನಿಮ್ಮ ಹಡೆದ ಜೀವಗಳು ಮಾತ್ರ ಯಾವಾಗಲು ನಿಮ್ಮ ಹಿತವನ್ನೆ ಬಯಸಿದರು. ಅದಕ್ಕಾಗಿ ಅವರು ಸಾಯುವುದಕ್ಕಿಂತ ಮುಂಚೆ ಅವರ ಎಲ್ಲ ಆಸ್ತಿಯನ್ನು ನಿಮ್ಮ ಹೆಸರಿಗೆ ಬರೆದು ಆ ಸ್ವರ್ಗದಿಂದಲೇ ನಿಮ್ಮನ್ನು ಆರ್ಶಿವದಿಸುತ್ತಿದ್ದಾರೆ . ಎಂದಾಗ ಈ ಇಬ್ಬರು ಪ್ರೇಮಿಗಳ ಕಣ್ಣಲ್ಲಿ ಪಶ್ಚಾತಾಪದ ಕಣ್ಣೀರು ಹರಿಯಿತು ತಮ್ಮ ತಪ್ಪು ಮನ್ನಿಸಲು ಆಗದ ತಪ್ಪು ಎಂಬ ಅರಿವಾಯಿತು.
ಪ್ರೀಯ ಓದುಗರೆ ನಾವು ಜೀವನದಲ್ಲಿ ಪ್ರೀತಿಸಬೇಕು ಆದರೆ ಜೀವನವೆ ಪ್ರೀತಿಯಾಗಬಾರದು. ಅದರ ಅರ್ಥ ನೈಜತೆ ತಿಳಿಯಬೇಕು ಇಲ್ಲವಾದಲ್ಲಿ ನಮ್ಮ ಬದುಕಿನ ಮೇಲೆ ನಾವೆ ಕಲ್ಲು ಹಾಕಿಕೊಂಡಂತೆ ಆಗುತ್ತದೆ. ಅದಕ್ಕಾಗಿ ಜೀವನ ಮೊದಲೊ? ಪ್ರೀತಿ ಮೊದಲೊ? ಎಂಬ ಸತ್ಯ ಅರಿತು ಇಂದಿನ ಯುವ ಜನತೆ ಹೆಜ್ಜೆಹಾಕಬೇಕು ಇಲ್ಲವಾದಲ್ಲಿ ಸಾಧನೆಯ ಹಾದಿಗಳೆಲ್ಲ ಮುಚ್ಚಿ ಬರಿ ವ್ಯಾಮೋಹದ ಹಾದಿ ಸಿಗುತ್ತದೆ. ಭೋಗದ ಹಾದಿಯಿಂದ ರೋಗವಿದೆಯೆ ಹೊರತು ಯೋಗ್ಯವಾದದ್ದು ಯಾವುದು ಇಲ್ಲ ನೆನಪಿಡಿ.....
ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ
B.Sc.B.Ed.
" ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ" ಪ್ರಶಸ್ತಿ ವಿಜೇತರು.9620633104
ಸಾಲುಗಳು
- Add new comment
- 1760 views
ಅನಿಸಿಕೆಗಳು
ನೀವು ಹೇಳಿದ ಮಾತು ಅಕ್ಷರ ಸಹ ಸತ್ಯ
ನೀವು ಹೇಳಿದ ಮಾತು ಅಕ್ಷರ ಸಹ ಸತ್ಯ, ಇದು ಕೇವಲ ಪ್ರೀತಿ ಪ್ರೆಮ ಅಂತ ಅದರ ಇಂದೆ ಬೀಳೊರಿಗೆ ಮಾತ್ರ ಅಲ್ಲ ಇರೋ ಕರ್ತವ್ಯ ಬಿಟ್ಟು ಭೊಗದ
ಜೀವನ ನದೆಸೊ ಸೊಮಾರಿಗೂ ಒಳೆ, ಪಾಠನೆ,
ನಿಮ್ಮ ಪ್ರತಿಕ್ರಿಯೆ ಅನಂತ
ನಿಮ್ಮ ಪ್ರತಿಕ್ರಿಯೆ ಅನಂತ ಧನ್ಯವಾದಗಳು