Skip to main content

ಗೊಂದಲದ ಗೂಡು,ಸದ್ಯದ ನಮ್ಮ ರಾಜಕೀಯ

ಇಂದ K.M.Vishwanath
ಬರೆದಿದ್ದುMay 4, 2013
1ಅನಿಸಿಕೆ

ನಮ್ಮ ಸದ್ಯದ ರಾಜ್ಯ ರಾಜಕೀಯದಲ್ಲಿ ಅರಾಜಕತೆಯು ಅತ್ಯಂತ ಸುಂದರವಾಗಿ, ಮನಮಿಡಿಯುವಂತೆ ಎದ್ದು ಕಾಣುತ್ತಿದೆ. ಸದ್ಯ ಮತದಾರ ದೊಡ್ಡ ಗೊಂದಲದಲ್ಲಿದ್ದಾನೆ. ಯಾರು ಸರಿ ಮತ್ತು ಯಾರು ತಪ್ಪು ಯಾರಿಗೆ ಯಾವ ಪಕ್ಷ್ಯಕ್ಕೆ ನಮ್ಮ ಮತ ಹಾಕಲಿ ಎನ್ನುವ ಲೆಕ್ಕಚಾರದಲ್ಲಿ ಮುಳುಗಿದ್ದಾನೆ. ಮನೆಗೊಬ್ಬ ರಾಜಕಾರಣಿ ಎಂಬಂತೆ ಎಲ್ಲಿ ನೋಡಿದರುಅಲ್ಲಿ ನಾಯಿಕೊಡೆಯಂತೆ ಬೆಳಿಯುತ್ತಿದ್ದಾರೆ. ಅವರ ಈ ಬೆಳಿಯುವ ರೀತಿ ಎಷ್ಟು ಪೂರಕ ಮತ್ತು ಮಾರಕ ಎಂದು ವಿಚಾರಿಸುತ್ತಾ ಹೋದರೆ ವಿಚಿತ್ರ ಅನುಭವಗಳು ಎದ್ದುಕಾಣುತ್ತವೆ .
  
ಒಂದು ಕಡೆ ಅನುವಂಶೀಯ ರಾಜಕಾರಣ ಇದ್ದರೆ ಇನ್ನೊಂದಡೆ ಹೆಸರು ಹೇಳಿ ಹಣ್ಣು ಮಾರುವ ಕೆಲಸ ನಡೆದಿದೆ. ಹಿಂದಿನ ಕಾಲದಲ್ಲಿ ರಾಜ ತೀರಿ ಹೋದರೆ ಅವರ ಮಗ ಆ ರಾಜ್ಯದ ರಾಜನಾಗುವಂತೆ ಇಂದು ಅನೇಕ ರೀತಿಯ ತಂದೆಯಿಂದ ಮಗನಿಗೆ ರಾಜಕೀಯಕ್ಕೆ ಎಳೆಯುವ ಕೆಲಸ ಸರಾಗವಾಗಿ ನಡೆದಿದೆ. ಅಪ್ಪ ರಾಜಕೀಯದಲ್ಲಿ ಸ್ವಲ್ಪ ಹೆಸರು ಮಾಡಿದರೆ ಸಾಕು, ಅವರ ಮಕ್ಕಳು ಅವರ ಹೆಸರಲ್ಲೆ ತಾವು ಜನನಾಯಕರು ಎಂಬಂತೆ ಪ್ರತಿಬಿಂಬಿಸುತ್ತಾರೆ. ಅವರಲ್ಲಿ ರಾಜಕೀಯ ನಾಯಕನಾಗುವ ಗುಣವಿಲ್ಲದ್ದರೂ ತಾವು ಒಬ್ಬ ನಾಯಕ ಎಂದು ಅಪ್ಪನ ಹಾದಿ ಹಿಡಿದು ಹೋಗುತ್ತಿದ್ದಾರೆ. ಮತ ಹಾಕುವವರನ್ನು ಹುಚ್ಚರು ಎಂದು ಭಾವಿಸಿದ್ದಾರೆ. ಅವರ ಭಾವನೆಗಳಿಗೆ ಬಲಿಕೊಡುತ್ತಾ ಬೆಲೆ ಕೊಡದೆ ಸಾಗುತ್ತಿದ್ದಾರೆ.
 
ಪ್ರಾಕೃತಿಕ ಲಕ್ಷಣಗಳಲ್ಲಿ ಅವರು ಯಾವುದಕ್ಕೆ ಹೋಲುತ್ತಾರೊ ಅದನ್ನು ಮಾಡದೆ ಯಾವುದೊ ಮಾಡಲು ಹೋಗಿ ಏನೊ ಮಾಡುವ ಲೆಕ್ಕಾಚಾರದಲ್ಲಿ ಇಂದಿನ ಯುವ ರಾಜಕಾರಣಿಗಳು ಮುಂದುವರೆಯುತ್ತಿದ್ದಾರೆ. ಈ ರಾಜಕೀಯ ಬರಿ ಈಗ ಹೋರಾಟ ಮತ್ತು ಚೀರಾಟದಿಂದ ಮಾತ್ರ ಸರಿ ಎನಿಸುತ್ತಿದೆ . ಆದರೆ ಬಡ ಜನರಿಗೆ ಮುಟ್ಟುವಲ್ಲಿ ಹಿಂದೇಟು ಹಾಕುತ್ತಿದೆ . ಚುನಾವಣೆಯ ಸಮಯದಲ್ಲಿ ಮಾತ್ರ ಸಾಮಾನ್ಯ ಜನರ ಪಾಲಿಗೆ ಮುಟ್ಟಿತ್ತಿದೆ. ಚುನಾವಣೆಯ ಮರುದಿನ ಈ ಸಾಮಾನ್ಯನ ಪಾಲಿಗೆ ಆ ಅಧಿಕಾರಿಗಳು ಎಲ್ಲರು ಇಲ್ಲವಾಗುತ್ತಾರೆ. ಅವರ ಪಾಡು ವಿಚಿತ್ರವಾಗುತ್ತದೆ . ಅಂದು ಮನೆಯ ಬಾಗಿಲಿಗೆ ಬಂದು ಓಟು ಕೇಳಿದವನು ಇಂದು ಅವನ ಮನೆಗೆ ಹೋಗಲು ಸಾಲಿನಲ್ಲಿ ದಿನಗಟ್ಟಲೇ ನಿಂತರು ಬೇಟಿಯಾಗುವದಿಲ್ಲಾ ಈ ಸ್ಥಿತಿ ಸಾಮಾನ್ಯ ಮನುಷ್ಯನದ್ದಾಗಿದೆ.

ಮೊದಲಿಗೆ ಅನೇಕ ರೀತಿಯ ಆಮಿಷ್ಯಗಳನ್ನು ಒಡ್ಡಿ ಜನರ ಜೀವನ ಮಟ್ಟ ಸುದಾರಿಸುವ ಭರವಸೆಯ ನೀಡಿ ಹಲವು ಆಸೆಗಳ ಗೋಪುರವನ್ನೆ ಕಟ್ಟಿ ಹೋಗುತ್ತಾರೆ . ಮುಂದೆ ಆ ಗೋಪುರ ಬಿದ್ದು ಸುಟ್ಟು ಬೂದಿಯಾಗುವಾಗ ದಿಲ್ಲಿಯಲ್ಲಿ ಕೂತು ದರರ್ಬಾರ ಮಾಡುತ್ತಾರೆ. ಅವಾಗ ಈ ಬಡಪಾಯಿಗಳ ಮಾತು ಯಾರು ಕೇಳುವುದಿಲ್ಲ ಎಲ್ಲವು ಮಾಯವಾಗಿ ಬರಿ ನೋಟಿನ ಸಂತೆ ನಡೆಯುತ್ತದೆ . ಆ ಸಂತೆಯಲ್ಲಿ ನಮ್ಮ ರಾಜಕಾರಣಿಗಳು ಚಿಂತೆ ಬಿಟ್ಟು ನಿದ್ದೆಯಲ್ಲಿ ಇರುತ್ತಾರೆ.

ಪ್ರಣಾಳಿಕೆಯ ಹೆಸರಿನಲ್ಲಿ ಒಂದು ಸುಳ್ಳು ಭರವಸೆಯ ಪುಸ್ತಕ ಬರೆದು ಈಡಿ ದೇಶವೆ ಉದ್ಧರಿಸುತ್ತೇವೆ ಎನ್ನುವ ಪೊಳ್ಳುಆಸ್ವಾಸನೆ ನೀಡಿ ಅದರ ಮೂಲಕ ಆರಿಸಿ ಬಂದು ಅವತಾರಿ ಪುರುಷರಾಗಿ ಮುಂದುವರೆಯುತ್ತಾರೆ .ಈ ರಾಜಕೀಯದಲ್ಲಿ ಅಪ್ಪ ಹಾಕಿದ ಆಲದ ಮರ ಹತ್ತಿರುವ ಯುವಕರು ತುಂಬಾ ಇದ್ದಾರೆ ಅನಿಸುತ್ತದೆ . ಅವರ ಜೀವನದ ಗುರಿಯೇನು ಜನರ ಉದ್ಧಾರ ಮಡುತ್ತಾರೊ ಅಥವಾ ತಾವೊಬ್ಬರು ಉದ್ಧಾರವಾಗುವ ಚಿಂತನೆ ಮಾಡುತ್ತಾರೊ ತಿಳಿಯದು , ಯಾವ ಕಾರಣಕ್ಕಾಗಿ ರಾಜಕೀಯಕ್ಕೆ ಬಂದಿರಿ ಎಂದು ಕೇಳುವ ಪ್ರಶ್ನೆಗೆ ಅವರ ಸ್ಪಷ್ಟ ಉತ್ತರ ಈ ಜನಸೇವೆ ಮಾಡುತ್ತೀವಿ ಎಂದು ತಾವು ಇರುವ ವಯಸ್ಸು ಇನ್ನು ತಮ್ಮ ಸೇವೆಗೆ ಜನ ಬೇಕಾದಂತಹ ಸಂದರ್ಭದಲ್ಲಿ ಅವರು ಜನಸೇವೆ ಮಾಡಿತ್ತೀನಿ ಅಂತಾ ಹೊರಟು ನಿಂತ ಯುವಕರಿಗೆ ಏನು ಹೇಳುವುದು ತಿಳಿಯದು ಈ ಸೇವೆ ಮಾಡುವ ಎನ್ನುವುದಕ್ಕೆ ಅನುಭವ ಬೇಕು ಆರಾಧಿಸುವ ಎದುರಿಸುವ ದೊಡ್ಡ ಧೈರ್ಯವಿರಬೇಕು ಅಂದಾಗ ಮಾತ್ರ ಈ ಸೇವೆ ಮಾಡುತ್ತೀವಿ ಎನ್ನುವ ವಿಚಾರಕ್ಕೆ ತಕ್ಕ ಒಪ್ಪುತ್ತಾರೆ .

ಇನ್ನು ಈ ರಾಜಕೀಯಲ್ಲಿದಿನ ಕಳಿದಂತೆ ಅವರು ವಯಸ್ಸು ಹೆಚ್ಚಾದಂತೆ ಗಳಿಕೆ ಉಳಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಬಾರಿ ಗೆದ್ದರೆ ಸಾಕು ಈಡಿ ಜೀವನ ಕೂತು ತಿನ್ನುವಷ್ಟು ಸಂಪಾದಿಸಿವ ಲೆಕ್ಕಚಾರ ನಮ್ಮ ರಾಜಕಾರಣಿಗಳದ್ದುಈ ವಿಚಾರದಲ್ಲಿ ನಾ ಮೇಲು ತಾ ಮೇಲು ಎನ್ನುವ ಲೆಕ್ಕಾಚಾರದಲ್ಲಿ ಹಾತುರಿಯುತ್ತಾರೆ.
 
ಇನ್ನು ಪಕ್ಷ್ಯಗಳಂತು ಮನೆಗೊಂದು ಹುಟ್ಟಿಯಾರು ಯಾವ ಪಕ್ಷದಲ್ಲಿ ಇದ್ದಾರೆ ಎನ್ನುವ ಮಾತು ನಿಖರವಾಗಿ ಹೇಳಲು ಆಗುತ್ತಿಲ್ಲಾ, ಯಾರು ಪಕ್ಷ ನಿಷ್ಠೆ ತೋರುತ್ತಿಲ್ಲಾ ಎಲ್ಲಿ ತಮಗೆ ಅವಕಾಶವಿದೆಯೊ ಅಲ್ಲಿ ಆ ಪಕ್ಷಕ್ಕೆ ತಾವು ಹೋಗುವುದಾಗಿ ಹೇಳುತ್ತಿದ್ದಾರೆ . ದಿನಕ್ಕೊಂದು ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ . ಅವರ ಈ ಕಪ್ಪೆ ಜಿಗಿದಾಟದಿಂದ ಸಾನ್ಯ ಜನತೆ ರೋಸಿ ಹೋಗಿದ್ದಾರೆ . ನಮ್ಮ ಹಳ್ಳಿಯಲ್ಲಿ ನಮ್ಮ ಜನ ನಮ್ಮ ಪಕ್ಷ ಯಾವುದು ನಮ್ಮ ಮನುಷ್ಯ ಯಾವ ಪಕ್ಷದಲ್ಲಿದ್ದಾನೆ ಎಂದುಗುರುತಿಸಲು ಸಾದ್ಯವಾಗುತ್ತಿಲ್ಲ. ನಮ್ಮ ನಾಯಕ ಯಾರು ಎಂಬ ಗೊಂದಲದ ಗೂಡಿನಲ್ಲಿ ಮುಳಗಿದ್ದಾನೆ.

ಇನ್ನು ಗುರುತಿನ ಚಿಹ್ನೆಗಳಲ್ಲಿಯೂ ನಮ್ಮ ಸಾಮಾನ್ಯ ಜನ ಎಷ್ಟೆ ಮಾಧ್ಯಮಗಳಿದ್ದರು ಅದರ ಪ್ರಚಾರವಿದ್ದರು ಗೊಂದಲವಾಗುತ್ತಿದೆ. ಇನ್ನು ಯಾವ ರಾಜಕಾರಣಿ ಯಾವ ಚಿಹ್ನೆ ಹೊಂದಿದ್ದಾನೆ ಎಂಬ ಕಲ್ಪನೆಯಲ್ಲಿ ಗೊಂದಲವಿದೆ.

ಹೀಗೆ ನಮ್ಮ ಈ ಚುನಾವಣೆ ಸದ್ಯಕ್ಕೆ ತುಂಬಾ ಗೊಂದಲಗಳನ್ನು ಸೃಷ್ಠಿ ಮಾಡುತ್ತಿರುವ ಹಬ್ಬವಾಗಿದೆ . ಈ ಹಬ್ಬದಲ್ಲಿ ಜಾಣನಾಗಿ ಮೊದಲು ಊಟವಮಾಡಿ ಕೈತೊಳಿದುಕೊಳ್ಳವನೆ ಜಾಣ ಎನಿಸುತ್ತದೆ . ಜೊತೆಗೆ ಆತನ ಲಕ್ ಕೂಡಾ ಸಾತ ಕೊಡಬೇಕು . ಯಾರು ಹೇಗೆ ಕೈಹಿಡಿವರೊ ಹೇಗೆ ಕೈಕೊಡುವರೊ ನಾವೆಲ್ಲ ಈ ಚುನಾವಣೆಯನ್ನು ಮುಗಿದು ಹೋದಮೇಲೆ ನೋಡಬೇಕು . ನಮ್ಮ ಮತದಾರ ಎಚ್ಚೆತ್ತುಕೊಳ್ಳಬೇಕು ಯಾರಿಗೆ ಆರಿಸಿದರೆ ಸರಿ ತಪ್ಪು ಎನ್ನುವ ಲೆಕ್ಕಚಾರ ಹಾಕಬೇಕು ಅಂದಾಗ ಮಾತ್ರ ಪರಿಪೂರ್ಣವಾದ ಸರಕಾರ ನಿರ್ಮಾಣವಾಗಿ ಸಾಮಾನ್ಯ ಜನರ ಕನಸು ನೆನಸಾಗುತ್ತವೆ . ಬನ್ನಿ ಸ್ನೇಹಿತರೆ ಹಾಗಾದರೆ ಒಮ್ಮೆ ಸರಿಯಾಗಿ ಯೋಚಿಸೋಣ ಹಾಗೂ ತಪ್ಪದೆ ಮತ ಹಾಕೋಣಾ

ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.

ಲೇಖಕರು.
 
" ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಪುರಸ್ಕೃತರು.”
 
9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಅನಿಸಿಕೆಗಳು

Nanjunda Raju Raju ಶನಿ, 05/04/2013 - 20:19

ಮಾನ್ಯರೇ, ನಿಮ್ಮ ಲೇಖನ ಚೆನ್ನಾಗಿದೆ. ರಾಜಕಾರಣಿಗಳ ಒಳ ಹೊರಗನ್ನು ಚಾಚುತಪ್ಪದೆ ವಿಶ್ಲೇಷಿಸಿದ್ದೀರಿ. ಆದರೆ, ನಮ್ಮ ರಾಜಕಾರಣಿಗಳು ಚುನಾವಣೆಗೆ ನಿಲ್ಲುವ ಮೊದಲು ಸಂಭಾವಿತರು. ಸಜ್ಜನರು, ಸತ್ಯವಂತರೂ ಆಗಿರುತ್ತಾರೆ. ಚುನಾವಣೆಗೆ ನಿಂತು ಗೆದ್ದ ನಂತರ ಅವರ ಇನ್ನೊಂದು ಮುಖ ತೆರೆದುಕೊೞುತ್ತದೆ. ಅವರು ಮಾಡುವ ಭ್ರಷ್ಠಾಚಾರ, ಅಕ್ರಮ ಸಂಪಾದನೆ. ಮಿತಿ ಮೀರುತ್ತದೆ. ಅವರಿಗೆ ಶಿಕ್ಷೆಯಾಗಲೆಂದು  ನಮ್ಮ ಭಾರತದಲ್ಲಿರುವ ಎಲ್ಲಾ ಕಾಯಿದೆಗಳನ್ನು ಉಪಯೋಗಿಸಿದರು ತಪ್ಪಿಸಿಕೊಂಡು ಹೊರಬರುತ್ತಾರೆ. ಇದಕ್ಕೆ ಏನು ಪರಿಹಾರ ಎಂಬುದೇ ಇನ್ನೂ ನಮ್ಮ ಜನತೆಗೆ ಹೊಳೆದಿಲ್ಲ. ಇದರಿಂದಲೇ ನಮಗೆ ಕೊಟ್ಯಾಂತರ ಖರ್ಚು ಮಾಡಿ ಚುನಾವಣೆ ನಡೆಸಬೇಕಾ? ಇದರಿಂದ ಯಾರಿಗೆ ಲಾಭ? ಓಟು ಮಾಡುವವರೆಗೆ ಇರುವ ಅಧಿಕಾರ ನಮದು. ನಂತರ ನಾವು ಹಾರಿಸಿದವರ ಕೈಗೊಂಬೆಗಳು ನಾವು? ಅಲ್ಲವೆ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.