Skip to main content

ಅಮೂರ್ತ ಸ್ಪೂರ್ತಿ ಪುಸ್ತಕ ಎಲ್ಲರು ಓದಲೇಬೇಕಾದ ಪುಸ್ತಕ

ಇಂದ K.M.Vishwanath
ಬರೆದಿದ್ದುApril 25, 2013
3ಅನಿಸಿಕೆಗಳು

ಅಮೂರ್ತ ಸ್ಪೂರ್ತಿ ಪುಸ್ತಕ ಎಲ್ಲರು ಓದಲೇಬೇಕು. ಈ ಜಗತ್ತು ಹಲವು ಪುಸ್ತಕಗಳು ಮತ್ತು ಅವುಗಳು ಹೇಳಿಕೊಡುವ ನೀತಿಯಿಂದ ನಡೆದಿದೆ. ನಾವು ಯಾರನ್ನು ರೊಲ್ ಮಾಡೆಲ್ ಎಂದು ಆರಿಸುವುದು ಎನ್ನುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ಅದನ್ನು ಹುಡುಕುತ್ತ ಹೋದಾಗ ನನಗೆ ದೊರೆತ ಪುಸ್ತಕ ಅಮೂರ್ತ ಸ್ಪೂರ್ತಿ ಎಸ್.ಉಮೇಶ ಬರೆದ ಈ ಪುಸ್ತಕ ನಮ್ಮ ಜೀವನದಲ್ಲಿ ಯಾರನ್ನು ರೊಲ್ ಮಾಡೆಲ್ ಆಗಿ ನೋಡಬೇಕು ನಮ್ಮ ಸಾಧನೆಯ ಹಾದಿಯಲ್ಲಿ ಯಾರ ದಾರಿ ಯಾವ ದಾರಿ ಅನುಸರಿಸಬೇಕು ಎನ್ನುವ ಹಲವು ಪ್ರಶ್ನೆಗಳಿಗೆ ಉತ್ತರ ಕೊಡುವತ್ತ ಈ ಪುಸ್ತಕ ದಾರಿದೀಪವಾಗುತ್ತದೆ.

ಹದಿನಾರು ಅಧ್ಯಾಯಗಳು ನಮ್ಮನ್ನು ಓದಿಸಿಕೊಂಡು ಮನಮಿಡಿಯುವಂತೆ ಓದಿಸುತ್ತವೆ. ಪ್ರತಿಯೊಂದು ಅಧ್ಯಾಯ ಒಂದೊಂದು ಕ್ಷೇತ್ರ ಹಾಗೂ ವ್ಯಕ್ತಿಯ ಸಾಧನೆಯನ್ನು ಬಿಚ್ಚಿಟ್ಟು ಬದುಕುವ ಭರವಸೆಯನ್ನು ನೀಡುವಲ್ಲಿ ಯಶಸ್ಸು ಸಾಧಿಸುತ್ತವೆ. ನಮಗೆ ಇಷ್ಠವಾದ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ಸಾಧನೆ ಮಾಡಬೇಕಾದ ಅಗತ್ಯ ಅನಿವಾರ್ಯವನ್ನು ಮನಮುಟ್ಟುವಂತೆ ಹೇಳುತ್ತವೆ.

ಓದುತ್ತ ಹೋದ ಹಾಗೆ ನಮ್ಮೊಳಗಿನ ವ್ಯಕ್ತಿಯೊಬ್ಬ ಎಂದು ನಿಂತು ಪ್ರಶ್ನಿಸುತ್ತಾನೆ. ನಿನ್ನ ಸಾಧನೆಯ ಹಾದಿ ಯವುದು ಗುರುತಿಸು ಅದರಿಂದ ನಿನ್ನ ಜೀವನ ಮುನ್ನಡೆಸು ಎಂಬ ಕಲ್ಪನೆ ಕೊಡುತ್ತಾನೆ. ಸಾಧಿಸುವ ಆಸೆ ಹುಟ್ಟಿಸುತ್ತಾನೆ.

ಜಗತ್ತಿನ ಅತ್ಯಂತ ದೊಡ್ಡ ದೊಡ್ಡ ಸಾಧನೆಗಳ ಸಾಧಕರ ಯಶೋಗಾತೆ ಈ ಪುಸ್ತಕದ ಮೂಲವಸ್ತು ಅವರ ಜೀವನದ ಏಳುಬೀಳು ಅವರ ಆಸೆ ಆಕಾಂಕ್ಷೆ ಅವರು ಸಾಧಿಸಿದ ರೀತಿ ಅವರ ಜೀವನದಲ್ಲಿ ಅಂದುಕೊಂಡು ಅನುಸರಿಸಿಕೊಂಡು ಬಂದ ನೀತಿ ಎಲ್ಲವನ್ನು ಬಿಡಿಬಿಡಿಯಾಗಿ ಹೇಳುವತ್ತ ಈ ಪುಸ್ತಕ ಚಲಿಸುತ್ತದೆ.

ವಿಶ್ವೇಶ್ವರ ಭಟ್ ರ ಮುನ್ನುಡಿ ಪ್ರಚೋದನೆ ನೀಡುತ್ತದೆ. ಈ ಕಥೆಗಳ ಪದಗಳು ಯುವಶಕ್ತಿಗೆ ಆಶಾಭಾವನೆ ತರೆಸಿ ಸಾಧಿಸುವ ಹಾದಿಯ ಕಡೆಗೆ ಮನಸ್ಸು ಮಾಡುವಂತೆ ಪ್ರೇರೆಪಿಸುತ್ತದೆ.

ನೂರಾ ಇಪ್ಪತೈದು ರೂಪಾಯಿಯಲ್ಲಿ ಸಾಧಿಸುವ ಸಾವಿರ ದಾರಿಗಳನ್ನು ಹೇಳುವ ಈ ಪುಸ್ತಕ ನಿಜಕ್ಕೂ ಮೆಚ್ಚುವಂತದ್ದು ಬರಿ ತಳುಕು ಬಳುಕು ತೋರಿಸಿ ಮಾರಾಟದ ದಿಕ್ಕಿನಲ್ಲಿ ಹೊರಬರುತ್ತಿರುವ ಅನೇಕ ಪುಸ್ತಕಗಳಿಗೆ ಇದು ಮಾದರಿ ಪುಸ್ತಕ ಎಂದರೆ ತಪ್ಪಾಗದು. ದಾತ್ರಿ ಪ್ರಕಾಶನದಲ್ಲಿ ಮೂಡಿಬಂದ ಮೂರನೆ ಮುತ್ತು ಈ ಪುಸ್ತಕ ಸಾಗರದ ಸಾವಿರಾರು ಮುತ್ತಿನ ಚಿಪ್ಪುಗಳಲ್ಲಿ ಅತ್ಯಂತ ಸುಂದರ ಚಿಪ್ಪು ಇದು ಎನ್ನುವುದು ನನ್ನ ಭಾವನೆ......

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಅನಿಸಿಕೆಗಳು

Ganapati J Jadhav ಭಾನು, 05/05/2013 - 19:32

ನೀವು ಇನ್ನು ದೋಡ್ಡ ವ್ಯಕ್ತಿ ಆಗೋದ್ರಲ್ಲಿ ಸಂಶಯವಿಲ್ಲ ಬಿಡಿ.

K.M.Vishwanath ಸೋಮ, 05/06/2013 - 09:23

ಧನ್ಯವಾದ ಗೆಳೆಯ

ನೀವು ಕೂಡಾ ಆಗಬೇಕು ಈ ಪುಸ್ತಕ ತರೆಸಿ ಓದಿ ಬಹಳ ಸೊಗಸಾಗಿದೆ ಜೀವನ ಅಂದರೆ ಏನು ಎನ್ನುವುದು ಸಾಧನೆಯೆಂದರೆ ಏನು ಅನ್ನೊದು ಕಲಿಸಿಕೊಡುತ್ತದೆ

K.M.Vishwanath ಸೋಮ, 05/06/2013 - 09:56

ಹೇಳಿದ್ದು ನೋಡಿ ತುಂಬಾ ಹಿಡಿಸಿತು . ನಾನು ಕೂಡಾ ಅತಿ ಕಡುಬಡತನದಲ್ಲಿ ಬಂದವನು ಬರಿ ಡಿ.ಈಡಿ. ಮುಗಿಸಿ ೨೦೦೦ ಸಾವಿರಕ್ಕೆ ದುಡಿದು ಈಗ ಕನಿಷ್ಟ 20 ಸಾವಿರ ಯಾದಗಿರಿ ನಗರದಲ್ಲಿ ತರುತ್ತಿದ್ದೇನೆ ಕಾರಣ ಇಷ್ಟೆ ಮಾಡಬೇಕು ಪಡಿಬೇಕು ಎನ್ನುವ ಛಲ ಜೊತೆಗೆ ಈ ಬರವಣಿಗೆ ನನಗೆ ಅತಿಚಿಕ್ಕ ವಯಸ್ಸಿನಲ್ಲಿ ದೊರೆತ ವರ ಅದರಿಂದಲೂ ಕೂಡಾ ಗಳಿಸುತ್ತಿದ್ದೇನೆ.
ನಿಮಗೆ ನನ್ನ ಚಿಕ್ಕ ಸಲಹೆ ನಿಮ್ಮ ಬಡತನವನ್ನೆ ಬಂಡವಾಳ ಆಗಿಸಿಕೊಂಡು ಬರೆಯುತ್ತಾ ಹೋಗಿ ಉತ್ತಮವಾದ ವಿಚಾರಗಳನ್ನು ಬರೆಯುತ್ತಾ ಈ ಜಗದ ಅನೇಕ ಚಿಂತನೆಗಳನ್ನು ಬರೆಯುತ್ತಾ ಹೋಗಿ ನೀವು ದೊಡ್ಡ ವ್ಯಕ್ತಿ ಉಆಗುವುದರಲ್ಲಿ ಯಾವ ಸಂಶಯವು ಇಲ್ಲ ನಿಮಗೆ ನಿಮ್ಮ ಜೀವನಕ್ಕೆ ಶುಭವಾಗಲಿ
ಓದಿರಿ ....ಓದಿರಿ.....ಬರೆಯಿರಿ ಬರೆಯಿರಿ ..........ಬೆಳಿಯಿರಿ ಒಳ್ಳೆಯ ವಿಚಾರಗಳಲ್ಲಿ ದೊಡ್ಡ ಸಾಧನೆ ಮಾಡಿರಿ

ಕೆ.ಎಂ.ವಿಶ್ವನಾಥ
www.mankavi.weebly.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.