Skip to main content

"ಕರ್ವಾಲೋ" ಕೃತಿಯಿಂದ ಕನ್ನಡಿಗರ ಮನಸೆಳೆದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಇಂದ K.M.Vishwanath
ಬರೆದಿದ್ದುApril 23, 2013
2ಅನಿಸಿಕೆಗಳು

ಅಂದು ನನ್ನ ಪ್ರಾರ್ಥಮಿಕ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆಯಿತ್ತು ವಿಷಯ ಪರಿಸರ ಅದನ್ನು ವಿಶ್ವ ಬ್ಯಾಂಕ್ ನೆರವಿನಿಂದ ಒಂದು ಸಂಸ್ಥೆ ನಮ್ಮ ಊರಿನ ಶಾಲೆಯಲ್ಲಿ ಹಮ್ಮಿಕೊಂಡಿತ್ತು. ನಾನು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದೆ. ಅದರ ಫಲವಾಗಿ ನನಗೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರು ಬರೆದ ಪರಿಸರದ ಕತೆ ಪುಸ್ತಕ ಬಹುಮಾನವಾಗಿ ನೀಡಿದ್ದರು. ಮನೆಗೆ ಹೋಗಿ ಅದನ್ನು ಓದಲು ಕುಳಿತರೆ ಅರ್ಥವೆ ಆಗಲಿಲ್ಲಾ ಈ ವಿಷಯವನ್ನು ನನ್ನ ಗುರುಗಳ ಹತ್ತಿರ ಕೇಳಿದೆ.

ಅವರು ಹೇಳಿದ್ದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರು ಒಬ್ಬ ಮಹಾನ್ ಕತೆಗಾರರು ಅವರ ಪದ ಸಂಪತ್ತು ಚಿಕ್ಕವನಾದ ನಿನಗೆ ಅರ್ಥವಾಗುವುದಿಲ್ಲಾ ಚಿಂತೆ ಬೇಡಾ ದಿನಾಲು ನಾನು ನಿಮಗೆ ಆ ಕತೆಗಳನ್ನು ಹೇಳುತ್ತೇನೆ. ಎಂದರು. ಅಂದು ಅವರ ವಿಚಾರಗಳನ್ನು ಓದುತ್ತಾ ಬಂದೆ ಅವರ ನೆನಪು ಯಾವಾಗಲು ಹಸಿರಾಗಿಯೆ ಉಳಿದಿದೆ ಏಕೆಂದರೆ ನಾನು ನನ್ನ ಜೀವನದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಅಂತಹ ದೊಡ್ಡವರ ಪುಸ್ತಕ ಬಹುಮಾನವಾಗಿ ಸಿಕ್ಕದ್ದು ನನ್ನ ಪುಣ್ಯ ಈಗಲು ಆ ಪುಸ್ತಕ ತುಂಬಾ ಜೋಪಾನವಾಗಿ ಇಟ್ಟಿದ್ದೇನೆ ಆಗಾಗ ಅದನ್ನು ಒಮ್ಮೆ ತಿರುವಿಹಾಕುವ ಕೆಲಸ ಮಾಡುತ್ತೇನೆ. ಅವರಂತಹ ಪದಸಂಪತ್ತು ಕಲಿಯಲು ಇಷ್ಟ ಪಡುತ್ತೇನೆ. ಅವರ ಅಭಿಮಾನದಿಂದ ಅವರ ಬಗ್ಗೆ ಹೀಗೆ ಬರೆದೇನು.

ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವ್ಯ ಸಾಹಿತ್ಯದ ಕಾಲಘಟ್ಟದಲ್ಲಿ ಪ್ರಮುಖವಾಗಿ ಕೇಳಿ ಬಂದ ಹೆಸರುಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರು, ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿದರು. ತೇಜಸ್ವಿ ಆರಂಭದಲ್ಲಿ ಬೇರೊಂದು ಹೆಸರಲ್ಲಿ ಕಾವ್ಯ ರಚನೆ ಮಾಡಿದ್ದರೂ, ನಂತರ ಕಥಾ ಸಾಹಿತ್ಯ,, ಕಾದಂಬರಿ, ಲೇಖನಗಳ ಕಡೆ ಹೆಚ್ಚಿನ ಗಮನ ಹರಿಸಿದರು.

ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಅವರ ಪುತ್ರ ಹಾಗೂ ಕನ್ನಡ ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗು ಸ್ವತಂತ್ರ ಪ್ರವೃತ್ತಿಯ ಬರಹಗಾರರು. ಇವರು 1938 ಸೆಪ್ಟೆಂಬರ್ 8 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಧವಿ ಪಡೆದ ನಂತರ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಎಂ.ಎ. ಪದವಿಯನ್ನು ಪಡೆದರು. ಇವರ ಮೊದಲ ಕೃತಿ ಲಿಂಗ ಬಂದ. ಈ ಕೃತಿಗಾಗಿ ಅವರು ರಾಜೋತ್ಸವ ಪ್ರಶಸ್ತಿ ಪಡೆದರು. ಸ್ನಾತಕೊತ್ತರ ಪದವಿಯ ನಂತರ ಇತರೆ ಬರಹಗಾರರಂತೆ ಅದ್ಯಾಪಕ ವೃತ್ತಿಯನ್ನು ಬಯಸದೆ ಮಲೆನಾಡಿನ ಮೂಡಿಗೆರೆಯಲ್ಲಿ ಕೃಷಿಯನ್ನು ಮಾಡುವ ಮಹತ್ವದ ನಿರ್ದಾರವನ್ನು ಮಾಡಿದರು.

ಕೃಷಿಯ ಜತೆಜತೆಗೆ ಅಗಾದವಾದ ಸಾಹಿತ್ಯದ ಕೃಷಿ ಮಾಡಿದರು. ಸಾಹಿತ್ಯದ ಜೊತೆಗೆ ಇವರಿಗೆ ವ್ಯವಸಾಯ, ಛಾಯಾಚಿತ್ರಗ್ರಹಣ  ಹಾಗೂ ಬೇಟೆಯಲ್ಲಿ ಆಸಕ್ತಿಯಿತ್ತು. ಇವರು ರೈತ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರ ಪತ್ನಿ ರಾಜೇಶ್ವರಿ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಸುಸ್ಮಿತ ಹಾಗು ಈಶಾನ್ಯೇ. ಇವರಿಬ್ಬರೂ ಸಾಫ್ಟ್ ವೇರ್ ಪರಿಣಿತರು. 


ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ಲೇಖನಿ ಓಡಿಸಿದ್ದಾರೆ. "ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು" ಇವರ ಕವನ ಸಂಕಲನ. "ಅಬಚೂರಿನ ಪೋಸ್ಟಾಫೀಸು", "ಹುಲಿಯೂರಿನ ಸರಹದ್ದು","ಕಿರಗೂರಿನ ಗಯ್ಯಾಳಿಗಳು" ಇವರ ಕಥಾ ಸಂಗ್ರಹಗಳು. "ಚಿದಂಬರ ರಹಸ್ಯ", "ಕರ್ವಾಲೋ", "ಜುಗಾರಿ ಕ್ರಾಸ್", "ಮಾಯಾಲೋಕ-೧" ಇವರ ಕಾದಂಬರಿಗಳು. "ವ್ಯಕ್ತಿ ವಿಶಿಷ್ಟ ಸಿದ್ಧಾಂತ", ತೇಜಸ್ವಿ ಅವರ ಒಂದು ಚಿಂತನ ಮಂಥನ ವೈಚಾರಿಕ ಕೃತಿ. ಇವರು ತಮ್ಮ ಮಲೆನಾಡು ಜೀವನದ ಅನುಭವದಿಂದ ಬರೆದ ಕೃತಿಗಳು 'ಪರಿಸರದ ಕಥೆ' ಮತ್ತು 'ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು'.

ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಹಲವಾರು ಕೃತಿಗಳನ್ನು ನೀಡಿದ್ದಾರೆ. ಇವರ "ಕರ್ವಾಲೋ" ಕೃತಿಯಲ್ಲಿ, ಜೀವವಿಕಾಸ ಪಥದಲ್ಲಿ ಎಲ್ಲವೂ ಬದಲಾಗುತ್ತ ರೂಪಾಂತರ ಹೊಂದುತ್ತಾ ಬಂದಿರುವಾಗ ಹಾರುವ ಓತಿಯ ಕುರಿತು ಕುತೂಹಲ ಹುಟ್ಟಿಸುವ ಸನ್ನಿವೇಶಗಳು ಮೂಡಿ ಬಂದಿವೆ.

ಶುಧ್ಧ ಸಾಹಿತ್ಯಿಕ ಮೌಲ್ಯ ಉಳ್ಳ ಕಥೆ ಕಾದಂಬರಿಗಳ ಸಂಗಡ ತೇಜಸ್ವಿಯವರು ಹಲವಾರು ವೈಜ್ಞಾನಿಕ ಹಾಗು ಐತಿಹಾಸಿಕ ಲೇಖನ ಸಂಕಲನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಮಹಾಯುಧ್ಧ, ಹಾರುವ ತಟ್ಟೆಗಳು, ಮಹಾನದಿ ನೈಲ್ ಇತ್ಯಾದಿ. ಅಲೆಮಾರಿಯ ಅಂಡಮಾನ್ ತೇಜಸ್ವಿಯವರ ಅಂಡಮಾನ್ ಪ್ರವಾಸ ಕಥನ. ಈ ಕೃತಿಯು ಕನ್ನಡ ಪ್ರವಾಸ ಕಥನಗಳಲ್ಲೇ ವಿಶಿಷ್ಠ ಸ್ಥಾನವನ್ನು ಪಡೆದುಕೊಂಡಿದೆ.

ಪ್ರಶಸ್ತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ  1987 ರಲ್ಲಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 1987 ರಲ್ಲಿ, ಪಂಪ ಪ್ರಶಸ್ತಿ 2001 ರಲ್ಲಿ, ರಾಜ್ಯೋತ್ಸವ ಪ್ರಶಸ್ತಿ

ಇತರೆ ಗೌರವಗಳು ಪೂರ್ಣಚಂದ್ರ ತೇಜಸ್ವಿ ಅವರು ಬರೆದಿರುವ "ಅಬಚೂರಿನ ಪೋಸ್ಟಾಫೀಸು", "ತಬರನ ಕಥೆ" ಕೃತಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಗಳಿಸಿವೆ. "ಕುಬಿ ಮತ್ತು ಇಯಾಲ" ಚಿತ್ರವು ರಾಷ್ಟ್ರ ಪ್ರಶಸ್ತಿ ಗಳಿಸಿತು. "ಚಿದಂಬರ ರಹಸ್ಯ" ಪತ್ತೇದಾರಿ ವಿಧಾನದ ವಸ್ತು ಹೊಂದಿದ್ದು ಈ ಕಾದಂಬರಿಗೆ ವರ್ಷದ ಉತ್ತಮ ಕೃತಿ ಬಹುಮಾನ ದೊರೆತುದಲ್ಲದೆ, ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯೂ ಸಹ ಅದೇ ವರ್ಷ ತೇಜಸ್ವಿ ಅವರಿಗೆ ಗೌರವ ಪ್ರಶಸ್ತಿ ನೀಡಿದೆ.

ನಾಲ್ಕು ದಶಕಗಳ ಕಾಲ ಕಥೆ, ಕಾದಂಬರಿಗಳ ಮೂಲಕ, ವಿಜ್ಞಾನದ ವಿಸ್ಮಯಗಳ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯಕ್ಕೆ ಆನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದ್ದಾರೆ. ಕಾದಂಬರಿಗಳು ಮಾಯಾಲೋಕ,ಚಿದಂಬರ ರಹಸ್ಯ, ಕರ್ವಾಲೋ, ಜುಗಾರಿ ಕ್ರಾಸ್

ಮಿಲೇನಿಯಮ್ ಕೃತಿಗಳು ಹೊಸ ಮಿಲೇನಿಯಮ್ ನ ಆರಂಭದಲ್ಲಿ ತೇಜಸ್ವಿಯವರು 20ನೇ ಶತಮಾನದಲ್ಲ್ಲಿ ಜಗತ್ತಿನಲ್ಲಿ ಮೂಡಿಬಂದ ಅತ್ಯುತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಬೃಹತ್ ಯೋಜನೆಯನ್ನು ಹಮ್ಮಿ ಕೊಂಡರು. ಇದರ ಫಲವೇ ಮಿಲೇನಿಯಮ್ ಕೃತಿ ಶ್ರೇಣಿ. ಈ ಕೃತಿಶ್ರೇಣಿಯಲ್ಲಿ ಒಟ್ಟು 16 ಪುಸ್ತಕಗಳಿವೆ. ಪರಿಸರದ ಕತೆ ರುದ್ರಪ್ರಯಾಗದ ಭಯಾನಕ ನರಭಕ್ಷಕ - ಜಿಮ್ ಕಾರ್ಬೆಟ್‍ರವರ 'ಮ್ಯಾನ್ ಈಟಿಂಗ್ ಲೆಪಡ್೯ ಆಫ್ ರುದ್ರಪ್ರಯಾಗ್' ಕೃತಿಯ ಅನುವಾದ. ಅಬಚೂರಿನ ಪೋಸ್ಟಾಫೀಸು,ತಬರನ ಕಥೆ,ಚಿದಂಬರ ರಹಸ್ಯ,ಕರ್ವಾಲೋ ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಮನೆ ನಿರುತ್ತರ ದಲ್ಲಿ ಏಪ್ರಿಲ್ 5 ರ ಮಧ್ಯಾಹ್ನ 2 ಘಂಟೆಗೆ, ಹೃದಯಾಘಾತದಿಂದ ನಿಧನ ಹೊಂದಿದರು. ಆಗ ಇವರ ವಯಸ್ಸು 69 ವರ್ಷ. ಸಾಹಿತ್ಯ ಲೋಕದ ದೃವತಾರೆಯೊಂದು ನಮ್ಮನ್ನು ಅಗಲಿದ್ದು ತುಂಬಾ ವೇಸರದ ಸಂಗತಿ.


ಇಂದಿನ ಯುವ ಸಾಹಿತಿಗಳು ಅವರ ಹಾದಿಯಲ್ಲಿ ನಡೆದು ಅವರ ಲೇಖನಗಳನ್ನು ಓದಿ ಅವರ ಸಾಹಿತ್ಯದ ಹಾದಿ ಹಿಡಿಯಬೇಕಾಗಿದೆ. ಅವರ ವಿಚಾರಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಅಗತ್ಯವಿದೆ. ನಾವು ನಮ್ಮ ಪೀಳಿಗೆಗಾಗಿ ಏನಾದರು ಉಳಿಸಬೇಕು ಎಂದರೆ ಅದೂ ಸಾಹಿತ್ಯ ಮತ್ತು ಸಂಸ್ಕೃತಿ. ಏಕೆಂದರೆ ನಮಗೆ ನಮ್ಮ ಹಿರಿಯರು ನೀಡಿದ್ದು ಅದೆ ಅಲ್ಲವೆ? ಅದಕ್ಕಾಗಿ ಇತಿಹಾಸ ಮಹಾನ್ ನಾಯಕ ಹೇಳಿದ್ದಾನೆ. " ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು"


 


ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ.


B.Sc.B.Ed.


ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕೃತರು. 9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಅನಿಸಿಕೆಗಳು

K.M.Vishwanath ಸೋಮ, 04/29/2013 - 12:36

ಮಾನ್ಯರೆ ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು

ಆದರೆ ನೀವು ಯಾವ ವಿಷಯದ ಉಲ್ಲೇಖ ಮಾಡಿದ್ದೀರಿ ಎನ್ನುವುದು ತಿಳಿಯಲಿಲ್ಲ ದಯವಿಟ್ಟು ಕನ್ನಡದಲ್ಲಿ ಬರೆಯಿರಿ

Jagannatha R N ಶನಿ, 05/11/2013 - 10:40

  ತೇಜಸ್ವಿಯವರು ನಾಡು ಕಂಡ ಉತ್ತಮ ಬರಹಗಾರರು..ಅವರು ಕಟ್ಟಿಕೊಂಡ ಮೂಡುಗೆರೆ ಬದುಕು ನಮ್ಮೆಲ್ಲರಿಗು ಮಾದರಿ..ಉತ್ತಮ ಬರಹ ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.