Skip to main content

ಅವಳ ಕನಸು

ಬರೆದಿದ್ದುApril 16, 2013
noಅನಿಸಿಕೆ

ಮುರುಟಿನಿಂತ
ಮರದ ಹಸಿರೆಲೆ ಅವಳ ಕನಸು,

ಆಕಾಶದ
ಕೋಟಿ ನಕ್ಷತ್ರ ಅವಳ ಕನಸು,

ನವಿಲು
ಗರಿಯ ಕಣ್ಣುಗಳ ಮಿಂಚು ಅವಳ ಕನಸು,

ಇಬ್ಬನಿಯ
ಹಾದು ಹೋದ ಸೂರ್ಯರಶ್ಮಿಯ ಮಿಂಚು ಅವಳ ಕನಸು

ಮುರಳಿ
ಮಾಧವನ ಮೋಹನ ಮುರಳಿಗಾನ ಅವಳ ಕನಸು

ನೀ
ನಿಲ್ಲದಾಗಿನ ನಿನ್ನ ನೆನಪುಗಳು ಅವಳ ಕನಸು

 

ಅರಳಿನಿಂತ
ಕಂಗಳಲ್ಲಿ ಅದೇನೋ ಹೊಸ ಬಗೆ ಅದೇನೋ ಹೊಸ ನಗು, ಅದೇನೋ ಹೊಸದನ್ನು ಸಾಧಿಸಿದ ಹುರುಪು , ಇದಲ್ಲವೇ ಹೊಸ
ಸಿಂಚನ ಹರಿವ ನೀರಿನಲ್ಲಿ ತನ್ನ ಬೆರಳುಗಳನ್ನಾಡಿಸುತ್ತಾ ಅದಾವುದೋ ಒಂದು ರಾಗ ಗುನುಗುತ್ತಾ ಆಗಾಗ ನಗುತ್ತಾ
ಹಗಲುಗನಸನ್ನು ಕಾಣುತ್ತಿರುವ ಗೆಳತಿ ಅದೇನೇ ನಿನ್ನ ಬಗೆ, ಹೊಸ ನಗೆ,

 

ಕನಸುಗಳ
ಮೂಲ ಯಾವುದೆಂದು ಯಾರನ್ನಾದರೂ ಕೇಳಿದರೆ ಅದು ಮನಸ್ಸೆಂಬುದು ಸಾರ್ವತ್ರಿಕ ಸತ್ಯ , ಅದು ಹೆಣ್ಣಿನ
ಮನಸ್ಸು ಎಂಬುದು ಆಕಾಶ ಭೂಮಿಯಷ್ಟೇ ಸತ್ಯ ಅಲ್ಲವಾ ಯಾಕೆಂದರೆ ಅದೊಂದು ನಿರಂತರ ಕಾಮಗಾರಿಯ
ಕ್ಷೇತ್ರ ಸದಾ ಕಾಲ ಇಲ್ಲಿ ನಿಮಗೆ ಬೇಕಾದಷ್ಟು ಕನಸುಗಳ ಮೂಟೆ ಸದಾ ಸಿದ್ದವಿರುತ್ತದೆ.

 

ಆಕೆಯ
ಕನಸು ಅಗಾಧ ಅದಕ್ಕೆ ಕೊನೆಯಂಬುದಿಲ್ಲ, ನಿತ್ಯ ನಿರಂತರ ಗುಪ್ತಗಾಮಿನಿಯಂತೆ, ಸದ್ದಿಲ್ಲದೆ
ಒಂದಿಲ್ಲೊಂದು ಕನಸುಗಳ ಹೂಟೆ ಕಟ್ಟುತ್ತಾ ಕಣ್ಣಲ್ಲೇ ನಗುತ್ತಾ ಅದರ ಬಗೆಗೆ ಆದರ
ಪ್ರೀತಿಯನ್ನಿರಿಸು ಕೊಂಡು ಸಾಕಾರಕ್ಕಾಗಿ ತನ್ನೆಲ್ಲಾ ಶ್ರಮವನ್ನು ಬಸಿಯುವ ಆ ಅವಳಿಗೆ ಅವಳೇ
ಸಾಟಿ,  ಅವಳ ಕಣ್ಣುಗಳು ಆ ಆಕಾಶವನ್ನೇ
ಪ್ರತಿಬಿಂಬಿಸುತ್ತವೆ.

 

ಒಂದು
ಪ್ರಶ್ನೆ ?  ಕನಸುಗಳು ಹುಟ್ಟಿದ ಮೇಲೆ ಹೆಣ್ಣು
ಹುಟ್ಟಿದಳೋ ಅಥವಾ ಹೆಣ್ಣು ಹುಟ್ಟಿದ ಮೇಲೆ ಕನಸುಗಳು ಹುಟ್ಟಿದವೋ ಅರಿವಿಲ್ಲ ಆದರೆ ಒಂದು ಕಡೆ
ಅವಳು ಸಹ ಯಾರೋ ಒಬ್ಬರ ಕನಸಾಗಿರ ಬೇಕಲ್ಲವೇ ? ಯಾಕೆಂದರೆ ಕನಸುಗಳು ಯಾವಾಗಲೂ ಚೆಂದ ಅಲ್ಲವಾ  !?!

 

ಇನ್ನೂ
ಅವಳ ಮನದ ಖಾಸಗಿ ಕೋಣೆಯಲ್ಲಿ ಯಾರಿಗೂ ಪ್ರವೇಶವಿಲ್ಲ ಕಾರಣ ಅಲ್ಲಿ ಅದೆಷ್ಟು ಕನಸುಗಳು ದಿನಾ
ತಯಾರಾಗುತ್ತಿದೆಯೋ ಯಾರಿಗೆ ಗೊತ್ತು? ಅವಳು ಒಂದೊಮ್ಮೆ  ಕನಸುಗಳನ್ನು ಕಾಣೋದು ಬಿಟ್ಟಿದ್ದರೆ ನಮ್ಮಲ್ಲಿ
ಅದೆಷ್ಟೋ ಸಾಧನೆಗಳೂ ಮೂಲೆ ಸೇರಿರುತ್ತಿತ್ತೋ ಇಂತಹ ಅದ್ಭುತ ಕನಸುಗಳಿಗೆ ಉದಾರಣೆಯೆಂದರೆ ನಮ್ಮ
ಕ್ರೀಡೆ, ಸಿನಿಮಾ, ರಾಜಕೀಯ , ಸಾಹಿತ್ಯ, ಸಾಮಾಜಿಕ ಬದುಕು  
ಹೀಗೆ ಅನೇಕ ಅದ್ಭುತ ಕನಸುಗಳು ಮೂಡಿ ಬಂದಿದ್ದು , ಇವಳ ಕನಸುಗಳ ಕಾರ್ಖಾನೆಯಿಂದಲೇ
ಅಲ್ಲವೇ,

 

ನಿಮಗೆ
ಒಂದು ವಿಷಯ ಗೊತ್ತಾ ! ನಿಮಗೆ ಗೊತ್ತಾ ಗೆಳೆಯರೆ,  ಇವಳ ಯಾವುದೇ ಕನಸಾಗಲಿ ಅಲ್ಲಿ ಯಾವಾಗಲೂ ಹ್ಯಾಪಿ ಎಂಡಿಗ್ ಅಲ್ಲಿ ನೋವು
ಗಳಿಗೆ ಅವಕಾಶವಿಲ್ಲ ಒಂದು ವೇಳೆ ಹಾಗೆನಾದರೂ ಅಂತಹ ನೋವು ಕಂಡು ಬಂದರೆ ತಕ್ಷಣ ಮಗ್ಗಲು ಬದಲಿಸಿ
ಮತ್ತೊಂದು ಹೊಸ ಕನಸಿಗೆ ಶುರು ಹಚ್ಚಿಕೊಳ್ಳುವುದೇ , ಅದು ಸರಿ ಅಲ್ಲವೇ ವಾಸ್ತವದಲ್ಲಿ ಅದು
ಹಾಗಲ್ಲ ಅಂತ ಮೂಗು ಮುರಿಯುವ ಮುನ್ನ ಒಂದು ನಿಮಿಷ ಅದು ಅವಳ ಖಾಸಗಿ ಕನಸಿಕೋಣೆ ಅಲ್ಲಿ ಅವಳ ಆಸೆ
ಗಳಷ್ಟೇ ಅಲ್ಲವೇ ಪರಿಗಣನೇ ಆಗೋದು , ಅದು ಅಲ್ಲವೇ ದಿನಾ ನೂರು ವಾಸ್ತವಕ್ಕಿಂತ ಒಂದು ಸುಮಧುರ
ಕನಸು ನೆಮ್ಮದಿಯನ್ನು ಕೊಡಬಹುದಾದರೆ ಯಾಕಾಗ ಬಾರದು ?

 

ಇಲ್ಲಿ
ವಯಸ್ಸಿನ ಇತಿಮಿತಿ ಇಲ್ಲ,  ಕನಸುಗಳು ಆಯಾ
ವಯೋಮಿತಿಗೆ ತಕ್ಕಂತೆ ಅಷ್ಟೇ, ಇಲ್ಲಿ ಹುಟ್ಟಿ ಬೆಳೆದು ಹೆಮ್ಮರವಾದ ಕನಸುಗಳೆಷ್ಟೋ , ಮುದುಡಿ
ಮೂಲೆ ಸೇರಿದವೆಷ್ಟೋ , ಮೂಡುವ ಮುನ್ನ ಮುರುಟಿ ಹೋದವೆಷ್ಟೋ, 
ಮೂಡಿ ಮುದನೀಡಿದವೆಷ್ಟೋ ಆದರೂ ಇದು  ನಿಲ್ಲದ ಸಾಗರದ ಅಲೆಗಳಂತೆ ನಿತ್ಯ ನಿರಂತರ.

 

ಒಂದಂತು
ನಿಜ ಅವಳ ಕನಸುಗಳಿಗೆ ಯಾರು ನೀರೆರೆದು ಪೋಷಿಸದಿದ್ದರು, ಸೇತುವೆ ಕಟ್ಟಿ ಕೊಡದಿದ್ದರು,  ಅದು ಅವಳ ಕನಸು ಕೇವಲ ಅವಳದ್ದು ಅದನ್ನು ಎಲ್ಲರಿಗೂ
ಬಿತ್ತರಿಸುವ ಅವಶ್ಯಕತೆ ಅವಳಿಗಿಲ್ಲ, ಎಕೆಂದರೆ ಇದು ಅವಳ ಕನಸುಗಳ ಲೋಕ. ನನಸಾದವುಗಳಷ್ಟೇ
ಇತರರಿಗೆ ಕಾಣುವುದು.

 

ಯಾವುದೇ
ಹೆಣ್ಣು ಸದಾ ಚೇತೋ ಹಾರಿಯಾಗಿರುತ್ತಾಳೆ ಎನ್ನುವುದಾದರೆ ಅವಳಿಗೆ ಆ ಮನೋ ಬಲವನ್ನು ನೀಡುವುದು ಅವಳ
ಕನಸುಗಳೇ , ಅವಕ್ಕೆ ಆ ಮಟ್ಟಿನ ಶಕ್ತಿ ಇದೆ.

ಕನಸು
ಕಾಣದ ಹೆಣ್ಣೆಲ್ಲಾ ಕನವರಿಸದ ಗಂಡಿಲ್ಲ ಎಂಬ ಮಾತಿನಂತೆ ಹೆಣ್ಣು ಕನಸುಗಾತಿಯೇ ಸರಿ, ಇಲ್ಲದೇ
ಹೋಗಿದ್ದರೆ ವಾಸ್ತವದ ಈ ಸಮಾಜದಲ್ಲಿ ಇನ್ನೂ ನಗುತ್ತಾ ಎಲ್ಲವನ್ನೂ ಸಹಿಸುತ್ತಾ ಬದುಕಲು
ಪ್ರೇರಣೆಗಳು ಅವಳ ಕನಸುಗಳು ಅಲ್ಲವೇ . ಅವಳ ಕನಸೇ ಅವಳ ಬದುಕಿನ ಚೈತನ್ಯ.

 ಅದೆಲ್ಲಾ
ಹಾಗಿರಲಿ ಇವತ್ತು ಯಾಕಪ್ಪ ಇದ್ದಕ್ಕಿದ್ದಂತೆ ಈ ವಿಷಯ ಅಂತನಾ - ಹಾಗೇ ಸುಮ್ಮನೆ 

 

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.