Skip to main content

ನಾವುಗಳು ಏಕೆ ಹೀಗೆ ?

ಬರೆದಿದ್ದುApril 2, 2013
3ಅನಿಸಿಕೆಗಳು

 

ನಾವುಗಳು
ಏಕೆ ಹೀಗೆ ?

 ಆಳುವ
ಅರಸ ಸರಿಯಾಗಿದ್ದರಷ್ಟೇ ರಾಜ್ಯದಲ್ಲಿ ಶಾಂತಿ,ನೆಮ್ಮದಿ, ಇಲ್ಲವಾದರೇ ಮುಂದೊಂದು ದಿನ ನಮ್ಮ
ತಪ್ಪಿಗೆ ನಾವೇ ಕಂಬನಿ ಮಿಡಿಯ ಬೇಕಾದೀತು, ನಾವುಗಳೇಕೆ ನಮ್ಮ ಸಾಮಾಜಿಕ ಜವಾಬ್ದಾರಿಗಳಿಂದ
ತಪ್ಪಿಸಿಕೊಳ್ಳುತ್ತೇವೆ
.

ಗೆಳೆಯರೆ
ನಮ್ಮ ಮುಂದೆ ಚುನಾವಣೆ ಇದೆ, ನಾವು ನಮ್ಮ ನಾಯಕನನ್ನು ಆರಿಸಲು ಉತ್ಸುಕರಾಗಿದ್ದೇವೆಯೇ ? ಇಲ್ಲ
ಖಂಡಿತ ಇಲ್ಲ.

 

ಅದಕ್ಕೆ
ಮೊದಲ ಕಾರಣ ನಮಗೆ ಸಮಯವಿಲ್ಲ ಯಾರು ಉತ್ತಮ ನಾಯಕರಾಗಬಲ್ಲರು ಎಂಬ ಬಗ್ಗೆ ವಿಮರ್ಶೆ ನಮಗೆ ಅಗತ್ಯ
ಎನಿಸುವುದಿಲ್ಲ. ಕಾರಣ ಯಾರೇ ಬಂದರು ನಮ್ಮಗಳ ಪರಿಸ್ಥಿತಿ ಬದಲಾಗದು ಎಂಬ ಒಂದು ಧೋರಣೆ ನಮ್ಮನ್ನ
ಆವರಿಸಿಕೊಂಡಿದೆ.

 

ನಮ್ಮಲ್ಲಿ
ಅದೆಷ್ಟು ಜನರಿಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳು ನೆನಪಿದೆ ಹೇಳಿ ? ಬೇಡಬಿಡಿ,ಅದು
ಇತಿಹಾಸ ಅನ್ನಿಸುತ್ತೆ,  ಅವರು ಹೋಗಲಿ
ಇತ್ತೀಚೆಗಷ್ಟೇ ಗಡಿರಕ್ಷಣೆಗೆ  ಪ್ರಾಣತೆತ್ತ
ಒಂದಿಬ್ಬರು ಸೈನಿಕರ ಹೆಸರನ್ನು ಹೇಳಿ ನೋಡೋಣ ? ಅದು ಬೇಡ ಹೋಗಲಿ ಇತ್ತೀಚೆಗಷ್ಟೆ ರಿಲೀಸ್ ಆದ ಹೊಸ
ಚಲನಚಿತ್ರಗಳ ಹೆಸರು ಹೇಳೀ , ಈಗ ನೋಡಿ ಸಾಲು ಸಾಲು ಉತ್ತರ ಬರಬಹುದು, ಇದು ನಾವು ಗೆಳೆಯರೇ, ನಮ್ಮ
ಜವಾಬ್ದಾರಿ ಯಾವುದೆಂದು ಅರಿತು ಕೊಳ್ಳಬೇಕಾದವರು ನಾವೇ.

 

ನಮ್ಮ
ಸುತ್ತಮುತ್ತಲಿನ ಸಮಾಜದ ಕೊಳೆಯನ್ನು ನಾವೇ ತೆಗೆಯ ಬೇಕಿದೆ, ಮಾಲ್ ಗಳಲ್ಲಿ ಓಡಾಡುತ್ತಾ,ಹರಟೆ
ಹೊಡೆದರೇ ನಮ್ಮ ಸಮಾಜ ಸರಿಹೋಗಲ್ಲ ಅದೇ ಮಾಲ್ಗಳಲ್ಲಿ ಆಡಿಯೋ ರಿಲೀಸ್ , ಸ್ಟೇಜ್ ಷೋ ಗಳ ಬದಲು ,
ವಿಚಾರ ವಂತಿಕೆಯ , ಜಾಗೃತಿ ಮೂಡಿಸುವ ಕಾರ್ಯಕ್ರಮಗಳೇಕೆ ನಡೆಸುವುದಿಲ್ಲ, ಫ಼ೇಸ್ ಬುಕ್ ನಲ್ಲಿ
ಮಡಿದ ಯೋಧನಿಗೆ ಒಂದು ಲೈಕ್ ಮಾಡಿವುದರಿಂದ ಋಣ ತೀರುವುದಿಲ್ಲ ಅಸಲಿಗೆ ಅವನೇಕೆ ಮಡಿದ ಎಂಬುದರ
ಅರಿವೆ ನಮಗಿರುವುದಿಲ್ಲ, ನಾವ್ಯಾರು ಏಕೆ ಅವನ ಕುಟುಂಬಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ
ಯೋಚಿಸುವುದಿಲ್ಲ, ಯಾವುದೋ ಮ್ಯಾಚ್ ನಲ್ಲಿ ಗೆದ್ದರೆ ಲಕ್ಷ/ಕೋಟಿಗಟ್ಟಲೆ ಬಹುಮಾನ ಘೋಷಿಸುವ ನಮ್ಮ
ನಾಯಕರು ಮಡಿದ ಸೈನಿಕನ ಪ್ರಾಣಕ್ಕೆ ಬೆಲೆ ಕಟ್ಟುವುದು ಕೇವಲ ಒಂದೊ/ಎರಡೋ ಲಕ್ಷ ಯಾಕೆ ಹೀಗೆ
ನಾವುಗಳೇಕೆ ಇದನ್ನು ಖಂಡಿಸುವುದಿಲ್ಲ ಇದು ಕೇವಲ ಸ್ಯಾಂಪಲ್ ಅಷ್ಟೇ ಅಸಲಿಗೂ ಇಂತಹ ನೂರು ಉದಾಹರಣೆ
ಕೊಡಬಹುದು

 

ಇದಕ್ಕೆಲ್ಲಾ
ಹೊಣೆಯಾರು ನಮ್ಮ ಕೈ ಬೆರಳು ನಮ್ಮನ್ನು ಆಳುವ ನಾಯಕರತ್ತ ತೋರುತ್ತವೆ, ಸತ್ಯಕ್ಕೆ ಹೇಳಬೇಕಾದರೆ
ಇದಕ್ಕೆ ಕಾರಣ ನಾವೇ ಅಲ್ಲವೇ ಹೇಳಿ ಅವರನ್ನು ಆರಿಸಿ ಕಳಿಸಿದವರು ನಾವೇ ಅಲ್ಲವೇ

 

ನಮ್ಮ
ನಾಯಕರೋ ಅಧಿಕಾರಶಾಹಿ ಧೋರಣೆಯವರು ನನಗೆಷ್ಟು ಸಿಗಬಹುದು, ನನ್ನ ಮಗನಿಗೆ, ಸೊಸೆಗೆ ಅಯ್ಯೋ
ಮೆಮ್ಮಕ್ಕಳಿಗೆ ಹೀಗೆ ಪಟ್ಟಿ ಬೆಳೆಯುತ್ತದೆ.

 

ನಮ್ಮ
ರಾಜಕೀಯದಲ್ಲಿ ನಾಯಕರಿಗಿಂತ ,ಗಿಡುಗ, ರಣಹದ್ದು, ಗೂಬೆಯಂತಹ ಇನ್ನೂ ಅನೇಕ ನಿಶಾಚರ ಪ್ರಾಣೆಗಳೇ ಹೆಚ್ಚು
ಅವರ ಕೆಲಸಗಳೇನಿದ್ದರೂ ಕತ್ತಲಲ್ಲಿ ಹಗಲಲ್ಲಿ ವಿಧಾನಸೌಧದಲ್ಲಿ ನಿದ್ದೆಮಾಡಬೇಕಲ್ಲ. ಇನ್ನೂ
ಇಲ್ಲಿನ ಕಪ್ಪೆಜಿಗಿತ ಹೇಳತೀರದು ಯಾವ ಪಕ್ಷಕ್ಕೆ ಬೇಕಾದರೂ ಸರಿ ಜೈ ,

 

ಇವರುಗಳಿಗೇ
ನೈತಿಕತೆಯೇ ಇಲ್ಲವೇ, ಬಹುಶ: ಇಂತಹವರುಗಳಿಗೆ ಮಾನ ಮರ್ಯಾದೆಯ ಅರ್ಥ ತಿಳಿಸಿಕೊಡುವ ಸಮಯ ಈ
ಚುನಾವಣೆ ಇಲ್ಲಿ ನಾವು ಉತ್ತಮ ನಾಯಕನನ್ನು ಆರಿಸುತ್ತೇವೆ ಅನ್ನುವ ಬದಲು ಭ್ರಷ್ಟರಲ್ಲಿ ಕಡಿಮೆ
ಭ್ರಷ್ಟನನ್ನು ಆರಿಸ ಬೇಕಾಗಿದೆ, ಇದರಿಂದ ರಾತ್ರಿಗಳಲ್ಲಿ ನೆಮ್ಮದಿಯ ನಿದ್ದೆ ಬರದಿದ್ದರು, ಒಂದು
ನಿಟ್ಟುಸಿರನ್ನಂತು ಬಿಡಬಹುದು ಅಲ್ಲವೇ.

 

 

ಉತ್ತರ
ಪ್ರದೇಶದಲ್ಲಿ ನಡೆದಂತಾ ಯುವ ಕ್ರಾಂತಿ ನಮ್ಮಲ್ಲೇಕೆ ನಡೆಯುವುದಿಲ್ಲ ಕಾರಣ ನಮ್ಮಲ್ಲಿ ಸಾಕಷ್ಟು
ಯವ ಜನಾಂಗ ತಮ್ಮ ಹಕ್ಕನ್ನೇ ಚಲಾಯಿಸುವುದಿಲ್ಲ, ಇಂತಹುದರಲ್ಲಿ ಯುವ ಕ್ರಾಂತಿ ಇರಲಿ ಹೊಸ ಭರವಸೆಯ
ಚಿಗುರು ಸಹ ಮೂಡುವುದಿಲ್ಲ. ಇನ್ನೂ ರಾಜಕೀಯ ರಂಗದಲ್ಲಿ ಹೇಳಿ ಕೊಳ್ಳುವಂತಹ ಯವ ನಾಯಕರೇನು ಇಲ್ಲ, ಅದರ ಅರ್ಥ ರಾಜಕೀಯ ಯುವಕರನ್ನು ತನ್ನತ್ತ ಸೆಳೆಯುವುದರಲ್ಲಿ ಸೋತಿದೆ ಎಂದಾಯಿತಲ್ಲವೇ, ಇನ್ನೂ ರಾಜಕೀಯದಲ್ಲಿ ಬಳಕೆಯಾಗುವ ಯುವಜನತೆಯಲ್ಲಿ ಶೇಕಡ ೭೫% ಜನ ಚಿಲ್ಲರೆ ಕಾಸಿನ ಆಮಿಷಕ್ಕೆ ಇರುವವರೇ ವಿನಃ ಯಾವುದೇ ಸೇವಾ ಉದ್ದೇಶದವರಲ್ಲ ಹಾಗಿದ್ದಿದ್ದರೆ ಅವರುಗಳಾಗಲೇ ರಾಜಕೀಯದಲ್ಲಿ ಬೇರೂರಬೇಕಿತ್ತಲ್ಲವೆ, ಅಥವಾ ನಮ್ಮ ರಾಜಕೀಯ ಹಿರಿಯರು ಕಿರಿಯರಿಗೆ ಅವಕಾಶಗಳನ್ನೇ ನೀಡುತ್ತಿಲ್ಲವೆ ? ಉತ್ತರಾ ಹುಡುಕಬೇಕಷ್ಟೆ !!!!!!!!!


 ರಾಜಕೀಯ ಒಂದು ಆಡಳಿತಾತ್ಮಕ ವಿಷಯವಾಗಿರದೆ,ಒಂದು ಉದ್ದಿಮೆಯಾಗಿದೆ ಎಂದರೆ ತಪ್ಪಾಗಲಾರದು, ಮಾನವ
ಸಂಪನ್ಮೂಲ (
Human Resourses) ದಲ್ಲಿ ತಿಳಿಸಿರುವಂತೆ ನಮ್ಮನ್ನು ಆಳುವವರ ಆಧಾರದ ಮೇಲಷ್ಟೇ ನಮ್ಮ ಉನ್ನತಿ ಮತ್ತು ಅವನತಿ ಇದು
ನಮ್ಮೆಲ್ಲರಿಗೂ ನೆನಪಿರ ಬೇಕು, ಮುಂದಿನ ೫ ವರುಷಗಳು ಒಂದು ಸಣ್ಣ ನಿಟ್ಟುಸಿರು ಬಿಡಬೇಕಾದರೆ ನಾವು
ನಮ್ಮ ಇಂದಿನ ಕೆಲಸವನ್ನು ನಿಷ್ಟೆಯಿಂದ ಮಾಡಬೇಕಾಗಿದೆ ಗೆಳೆಯರೇ ,

 

ಬನ್ನಿ
ಮತಚಲಾಯಿಸೋಣ ,,,,,,,,,,,,,,,,,,,,,,

 

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಅನಿಸಿಕೆಗಳು

K.M.Vishwanath ಶುಕ್ರ, 04/05/2013 - 09:56

ನಾವೆಲ್ಲರು ಹೀಗೆ ವಿಚಾರವಿದ್ದು ವಿಚಾರಿಸದವರು 

ಆಚಾರವಿದ್ದು ಆಚರಿಸದಿರುವರು 

ಎಲ್ಲವು ಗೊತ್ತಿದ್ದು ತಪ್ಪು ಮಾಡುವವರು 

venkatb83 ಸೋಮ, 04/15/2013 - 17:33

 

ಸಕಾಲಿಕ ಸರ್ವತಾ  ಸಲ್ಲುವ ಬರಹ .. 
ನಿಮ್ಮ ಹಾಗೆ ಬಹುಶ ಎಲ್ಲರೂ ಯೋಚಿಸುವರು ಆದರೆ ಯಾರೊಬ್ಬರೂ ಆ ವಿಷಯದಲ್ಲಿ ನಾಯಕತ್ವ ವಹಿಸ್ಕೊಳ್ಳಲು ಸಿದ್ಧರಿಲ್ಲ ಅನ್ಸುತ್ತೆ...  
ಆಗಾಗ  ಗೊಣಗುವ ಬದಲಿಗೆ ಯಿಗ್ಯರನ್ನು ನಿಲ್ಲಿಸಿ ಮತ ಚಲಾಯಿಸಿ ಚುನಾಯಿಸುವ ... 
         ಶುಭಗಲಿ.. \\।//

 

ಪಾರ್ವತಿ.ಜಿ.ಆರ್ ಮಂಗಳ, 04/16/2013 - 11:51

ಹೌದು ವಿಶ್ವನಾಥರವರೇ ನಾವು ಹೀಗೆ ಬದಲಾಗಬೇಕಿದೆ,
ಇನ್ನೂ venkat ರವರೂ ಹೇಳಿರುವಂತೆ ಮುಂದಿನ ಗೊಣಗಾಟ ನಿಲ್ಲಿಸಲು ಸದ್ಯಕ್ಕಂತು ಮತ ಚಲಾಯಿಸಿ ಅನ್ನುವುದೇ ನಮ್ಮ ವಿನಂತಿ,
ಯಾರೇ ಯೋಗ್ಯರಾಗಿರಲಿ ರಾಜಕೀಯ ಪ್ರವೇಶಿಸಿದ ಕೂಡಲೇ ಅವರು ಅಯೋಗ್ಯರಾಗಿ ಬಿಡುತ್ತಾರೆ ಇನ್ನೂ ಯೋಗ್ಯರನ್ನೆಲ್ಲಿ ಹುಡುಕುವುದು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.