ಕರುನಾಡ ಸೀ ಎಮ್ಮು-ಸೀ. ಸೀ .ಟೀ .ವಿ ವ್ಯವಸ್ಥೆ- ಅವ್ಯವಸ್ಥೆ..!! -ಅ ಪಾರದರ್ಶಕತೆ ..;((
ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಮುಖ್ಯಮಂತ್ರಿ ಆದ ಹೊಸದರಲ್ಲಿ ಜಾರಿಗೆ ಬಂದ ತಂದ 'ಪಾರದರ್ಶಕತೆ' ನೀತಿಯ ಫಲವಾದ ವಿಧಾನಸೌಧದ ಮುಖ್ಯಮಂತ್ರಿ ಕೊಠಡಿಯ ಮತ್ತು ಗೃಹ ಕಚೇರಿ 'ಕೃಷ್ಣದ'ಲ್ಲಿ ನಡೆವ ಆಯಾಯ ಕ್ಷಣದ ಸನ್ನಿವೇಶಗಳು-ಸಭೆ-ಭೇಟಿ-ಇತ್ಯಾದಿ ಬಗ್ಗೆ ಜನರಿಗೆ ನೇರವಾಗಿ ಲೈವ್ ಆಗಿ ತೋರಿಸುವ ಸೀ ಸೀ ಟಿ ವಿ ವ್ಯವಸ್ಥೆ ಕಾರಣವಾಗಿ ಅಂದು ಪತ್ರಿಕೆ ದೃಶ್ಯ ಮಾಧ್ಯಮ ಮತ್ತು ಜನ ಸಾಮಾನ್ಯರಿಂದ ಮೆಚ್ಚುಗೆ ಹೊಗಳಿಕೆ ಪ್ರಶಂಸೆ ಪಡೆದ ಆ ಯೋಜನೆ ಬಗ್ಗೆ ಅಂದು ಒಂದು ಬರಹ ಇಲ್ಲಿ ಬರೆದಿದ್ದೆ.. ನೀವೂ ಓದಿರಬಹುದು--
ಇಂದು ಆ ಯೋಜನೆ ಏನಾಗಿದೆ?
>>ಅದು ಕಾರ್ಯ ನಿರ್ವಹಿಸುತ್ತಿಲ್ಲ...ಎಂದು ಹೇಳಲು ವ್ಯಥೆ ಆಗುತ್ತೆ...;((
http://119.226.79.204/karnatakacm/index.html
ಕಾರಣ ಏನು?
ಯಾರಿಗೂ ಗೊತ್ತಿಲ್ಲ...!!
ಹೀಗೇ ನಾನು ಬರೆದ ಎಲ್ಲ ಬರಹಗಳತ್ತ ಕಣ್ಣು ಹಾಯಿಸುವಾಗ ಈ ಬರಹ ಕಣ್ಣಿಗೆ ಬಿದ್ದು ಅದು ಈಗಲೂ ಕಾರ್ಯ ನಿರ್ವಹಿಸುತ್ತಿದೆಯೇ ಎಂದು ಪರೀಕ್ಷಿಸಲು ಆ ಲಿಂಕ್ ಕ್ಲಿಕ್ ಮಾಡಿದೆ...
ಓಪನ್ ಆಯ್ತಾ?
ಜಗದೀಶ್ ಶೆಟ್ಟರ್ ಕಣ್ಣಿಗೆ ಬಿದ್ದಿರಬೇಕು ಎಂದು ನೀವು ಊಹಿಸಿದ್ದರೆ .......
ನಿರಾಶೆ ಖಂಡಿತ....!! ಖಾತ್ರಿ...!!
ಯಾವುದೇ ಯೋಜನೆ -ಅನುಷ್ಠಾನ ಸಂದರ್ಭದಲ್ಲಿ ಆರಂಭ ಶೂರತ್ವ ತೋರುವ ಇಲಾಖೆ-ಸಂಬಂಧಿಸಿದವರು ನಂತರ ಅದು ಮರೆತು ಅದು ಜನಸಾಮಾನ್ಯರ ನೆನಪಿಂದಲೂ ಮರೆಯಾಗಿ ಅದಕ್ಕೆ ಮಾಡಿದ ಖರ್ಚು ಮಣ್ಣು ಪಾಲಾಗಿ ಪೋಲಾಗಿ /////
ಹೀಗೇ ಆಗೋದು...;((((
ಆ ವ್ಯವಸ್ಥೆ ಯಾಕೆ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಯಲು ನಾನು ಬೆಂಗಳೂರು ಮಿರರ್ ಪತ್ರಿಕೆಗೆ ಒಂದು ಬರಹ ಕಳಿಸಿರುವೆ. ಬಹುಶ ಅವರು ಅಲ್ಲಿಗೆ ಹೋಗಿ ಅದಕ್ಕೆ ಸಂಬಂಧ ಪಟ್ಟವರನ್ನು ಕೇಳಿ ಅದ್ಕೆ ಉತ್ತರ ಪಡೆದು ಅದು ನಮಗೂ ತಿಳಿವದು ..
ನೋಡುವ ಏನಾಗುತ್ತೆ ಅಂತಾ....!!
ಶುಭವಾಗಲಿ.
\।/
================================================================================================
ಚಿತ್ರ ಮೂಲ :
ಲೇಖಕರದು (ಈ ಹಿಂದಿನ ಬರಹದ ಕಾಪಿ)
ಸಾಲುಗಳು
- 466 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ