Skip to main content

ಹೀಗೊಂದು ಸಂಜೆ

ಬರೆದಿದ್ದುMarch 6, 2013
noಅನಿಸಿಕೆ

ಇಂದೇಕೋ ರವಿತೇಜ ಮುನಿದಿದ್ದಾನೋ Frown ಅಥವಾ ಬೆಂಗಳೂರು ಜನರಿಗೂ ಆಗಾಗ ಇಂತ ಅವಕಾಶಗಳು ಸಿಗಲಿ ಅಂತ ಅವನ ಮನಸ್ಸು ಬೆಂಗಳೂರಿಗರ ಬಗ್ಗೆ ಕರಗಿರಬಹುದು.

ವಾತಾವರಣನೆ ಹಾಗಿದೆ ರೀ ,ಹಾಗೆ ಕಳೆದು ಹೋಗ ಬೇಕನ್ನಿಸುತ್ತದೆ, ಎನಾದರೂ ಬರಿಬೇಕು ಅನಿಸಿದರೆ ಅತಿಶಯೋಕ್ತಿ ಅಲ್ಲ ಬಿಡಿ, ತಂಪಾದ ಹವೆ, ತಿಳಿ ಗಾಳಿ , ಕಿವಿಯಲ್ಲಿ ನಮ್ಮ/ನಿಮ್ಮ ಮೆಚ್ಚಿನ ಭಾವಗೀತೆ/ಗೀತೆಗಳು ಅದರಲ್ಲೂ ಕೆ. ಎಸ್. ನರಸಿಂಹ ಸ್ವಾಮಿಯವರ ಗೀತೆಗಳು ಕೇಳುತ್ತಿದ್ದರೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಙ.

ಸೊಬಗನ್ನು ಆರಾದಿಸೋ ಮನಸ್ಸಿದ್ದರೆ, ಮನವೇ ಹಾಗೆ ರೀ ನಿಶ್ಯಬ್ದ , ಹಸಿರು, ತಿಳಿ ಹವೆಯ ವಾತಾರಣ ಕಂಡಾಗ ತನಗೆ ತಾನೆ ತೆರೆದು ಕೊಳ್ಳುತ್ತಾ ಹೋಗುತ್ತದೆ,ಹಕ್ಕಿ ಹಾಗೆ ಹಾರಬೇಕೆನಿಸುತ್ತದೆ. ಗಾಳಿನಾ ಹಿಂದಿಕ್ಕಿ ಓಡ ಬಯಸುತ್ತೆ ಈ ಮನ, ಮತ್ತೇನನ್ನೋ ಗುನುಗುತ್ತಾ ಸಾಗುತ್ತಾ ಒಂದೊಮ್ಮೆ ಹಾಗೆ ನಗು, ಒಂದೊಮ್ಮೆ ಇಳಿ ಮುಖ , ಮತ್ತೊಮ್ಮೆ ಕಣ್ಣು ತುಂಬಿ ಬರಲು ಬಹುದು, ನಾವು ಎಷ್ಟೇ ಆದರೂ ಮನುಷ್ಯರು ಭಾವುಕಜೀವಿಗಳಲ್ಲವಾ ಅದಕ್ಕೆ,

ಇಂತಹ ಸಮಯದಲ್ಲಿ ಸಹಜವಾಗಿ ಯಾರನ್ನಾದರೂ ಗಮನಿಸಿ ಅದರಲ್ಲೂ ಒಬ್ಬಂಟಿಯಾಗಿ ಹೋಗುತ್ತಿರುವವರನ್ನು , ಅವರು ಖಂಡಿತಾ ಈ ಲೋಕದ ಜೀವಿಗಳಾಗಿರಲಾರರು, ಅವರೆಲ್ಲಾ ಸ್ವಪ್ನ ನಗರಿಯ ಸಾಹುಕಾರರೇ ಸರಿ, ಅದೇನೋ ಕಲ್ಪನೆಯಲ್ಲಿ ಮುಳುಗಿರುತ್ತಾರೆ, ತುಟಿತುದಿಯ ನಗು ಎನನ್ನೋ ನೆನಸುತ್ತಾ , ಅಬ್ಬಾ , ಬಿಡಿ, ಆ ಸೊಬಗೆ ಅಂದ ಅನಿಸುತ್ತದೇ. ಅವು ನಿಷ್ಕಲ್ಮಶ ಮನಸ್ಸುಗಳು,

ಇನ್ನೂ ಹಾಗೆ ಸ್ವಲ್ಪ ಮುಂದುವರೆದರೆ, ಈ ಸಂಜೆಯ ಸೊಬಗಲ್ಲಿ ಕೇಳುತ್ತಿರುವ ಗಾನಕ್ಕೆ ತಕ್ಕನಾಗಿ ಸಿಕ್ಕ ಸಿಗ್ನಲ್ ನಾ ೬೦ ಸೆಕೆಂಡ್ನಲ್ಲಿ ತಾಳ ಹಾಕುತ್ತಾ ಸಾಗುವಾ ದ್ವಿಚಕ್ರ ಸವಾರರು, ನೆಮ್ಮದಿಯ ನಿಟ್ಟುಸಿರು ಬಿಟ್ಟು ಹಿಂದಿನ ಸೀಟಿಗೆ ಒರಗಿ ಕುಳಿತು ಮದುರ ಆಲಾಪನೆ ಮಾಡುತ್ತಾ ಸಾಗುವ ಕಾರಿನ ಸವಾರರು, ಹೀಗೆ ಒಬ್ಬಬ್ಬರದೂ ಒಂದೊಂದು ಪರಿ, ಈ ಸೊಬಗೇ ಹಾಗೆ ಎಲ್ಲರ ಮನಸ್ಸಿಗೂ ಒಂದು ಬಗೆಯ ರಿಲಾಕ್ಸ್ ಮಾಡುವ ಮೋಡಿ ಈ ವಾತಾವರಣಕ್ಕೆ ಇದೆ,

ಹೊಸ ಹುಮ್ಮಸ್ಸು ನೆಮ್ಮದಿ ನೀಡೋ ಪರಿ , ನಿಸರ್ಗಕ್ಕೆ ಎಂತ ಶಕ್ತಿ ಇದೆಯಲ್ಲವಾ ಅನಿಸುತ್ತದೆ.

ಥ್ಯಾಂಕ್ಸ್ ಸೂರ್ಯ(ರವಿತೇಜ) , ನಮಗೆಲ್ಲ ಇಂತ ಒಂದು ಸುಂದರ ಸಂಜೆ ವಾತಾವರಣನಾ ಎಂಜಾಯ್ ಮಾಡೋ ಅವಕಾಶ ಕೊಟ್ಟಿದ್ದಕ್ಕೆ. ಮತ್ತೆ ನಾಳೆ ಎಂದಿನಂತೆ ದಿನದ ಜಂಜಾಟದಲ್ಲಿ ನಮ್ಮನಾ ನಾವೇ ಕಳೆದು ಕೊಂಡಿರುತ್ತೇವೆ.

ಇನ್ನೇನು ಮುಗಿಸಿ ಬಿಡುವ ಅನ್ನೋ ವೇಳೆಗೆ ಐ ಪಾಡ್ ನಲ್ಲಿ ಹೊರಹೊಮ್ಮುತ್ತಿರುವ ಸುಂದರ ಗೀತೆ ಇದು.

" ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ

ಬಂಗಾರವಿಲ್ಲದ ಬೆರಳು

ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೇ

ಸಿಂಗಾರ ಕಾಣದಾ ಹೆರಳು, ಬಂಗಾರವಿಲ್ಲದಾ ಬೆರಳು |"

ಸ್ನೇಹಿತರೆ ಶುಭ ಸಂಜೆ.....

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.