Skip to main content

ನೀ ಹೀಗೊಮ್ಮೆ ನೆನಪಾದೆ

ಬರೆದಿದ್ದುMarch 6, 2013
5ಅನಿಸಿಕೆಗಳು

ದನಿ ಇರದ ಬಾಳಿನಲ್ಲಿ

ಕೊಳಲಾದೆ ನೀನು

ನಿನ್ನೊಲುಮೆ ರಾಗವ ನುಡಿಸಿ

ಮರುಳಾದೆ ನಾನು

Smile ನೀ ಹೆಚ್ಚು ನೆನಪಾಗೋದೇ ಈ ಹಾಡಿಂದ ನಿನ್ನ ನೆಚ್ಚಿನ ಭಾವಗೀತೆಯಿಂದ

ತುಂಬಾ ದಿನಗಳೇ ಕಳೆದು ಹೋದವು, ನನ್ನೊಳಗಿನ ನಿನ್ನನ್ನು ನೆನೆದು,  

ಕನಸುಗಳ ಕನವರಿಕೆಯ ದಿನಗಳಲ್ಲಿದ್ದವಳು ನಾನು ನೆನಪುಗಳ ನೇವರಿಕೆಯಲ್ಲಿ ದಿನದೂಡುವಂತಾಯಿಲ್ಲೋ ಹುಡುಗ, ಮತ್ತೆ ಎಂದು ಸಿಗೋದು ತುಂಬಾ ಕಷ್ಟ ಅನ್ನಿಸೋದಿಲ್ಲವಾ ಈ ವಿರಹ. 

ತುಂಬಾ ನೆನಪಾಗುತ್ತಿಯೋ ನೀನು ನಿಂತಾಗ, ಕುಂತಾಗ ಇನ್ನೂ ಯಾವಾಗ್ಯಾವಾಗೋ ಅದಿರಲಿ ಬಿಡು ತಮಾಷೆ ಗೊತ್ತಾ ಮೊನ್ನೆ ಯಾರೋ ಗುಡಿ ಪೂಜಾರಿನ ನೋಡಿ ನೀನ್ಯಾಕೆ ಇಲ್ಲಿ ಬಂದೆ ಅನ್ಕೊಂಡಿದ್ದೆ ಡಬ್ಬಾ ಟೇಸ್ಟ್ ಅನ್ನಿಸುತ್ತಾ, Wink ನಾನ್ ಹಾಗೆ ಏನ್ ಇವಾಗ ಈ ರೀತಿನೇ ತಾನೇ ನಾನು ನಿನಗೆ ಇಷ್ಟವಾಗಿದ್ದು.

ನೀ ಯಾವಾಗ್ಲೂ ಹೇಳುತ್ತಿದ್ಯಲ್ಲ ನೀ ಎಲ್ಲಾ ಹುಡುಗಿಯರ ಹಾಗಲ್ಲ ಅಂತಾ ವಿರುದ್ದ ದಿಕ್ಕುಗಳು ಒಂದನ್ನೊಂದು ಆಕರ್ಷಿಸುತ್ತೆ ಅಂತಾರಲ್ಲ ಹಾಗೇ ಜಗಳ ಆಡುತ್ತಲೇ ಹತ್ತಿರ ಆದೋರಲ್ಲವಾ ನಾವು. 

ದಿನಾ ಮಾತಾಡುತ್ತಿಯಲ್ಲಾ ಮತ್ತೇ ಏನಿದು ಬರಿತಿರೋದು ಅಂತಾನ ಮಾತು ಮರೆತೋಗುತ್ತೆ ಕಣೋ ಪದಗಳು ಜೊತೆಗಿರುತ್ತೆ. ಮತ್ತೆ ಹತ್ತು ವರ್ಷಗಳು ಬಿಟ್ಟು ಓದುದ್ರು ಮುಖದಲ್ಲೊಂದು ಮಂದಹಾಸ ಮೂಡದಿದ್ದರೆ, ನನ್ನ ಹೆಸ್ರು ಬದಲಾಯಿಸಿಕೊತಿನಿ ನೋಡು ! ಸುಳ್ಳಲ್ಲಾ ಅಲ್ವಾ .....,

ನಿನ್ನೊಟ್ಟಿಗೆ ಮಾತಾಡುವಾಗ ಹೇಳ್ದೇ ಉಳಿಯೋ ಅದೆಷ್ಟೋ ಮಾತುಗಳನ್ನು ಪದವಾಗಿಸೋ ಒಂದು ಸಣ್ಣಾಸೆ, ನಿನ್ನ ಅದೆಷ್ಟೋ ಮಾತುಗಳಿಗೆ ನನ್ನ ಮೌನ ಉತ್ತರ, ಅದು ಸಮ್ಮತಿ ಅಂತಾನೇ ಅಲ್ಲ ಅಲ್ಲವಾ ? ಸ್ತ್ರೀ ಸಹಜ ಗುಣ ಹೇಳಬಾರದಂತಲ್ಲಾ , ನನ್ನಿಂದ ನಿನಗೆ ಬೇಜಾರಾಗಬಾರ್ದು ಅಂತ , ಬೇಜಾರಾಯ್ತಾ !

ನಿನಗೆ ಗೊತ್ತಾ ಜೀವನದಲ್ಲಿ ಅದೆಷ್ಟೋ ಸಣ್ಣ ಸಂಗತಿಗಳು ನೆನಪಾದಾಗಲೆಲ್ಲಾ ದೊಡ್ಡ ಖುಷಿ ಕೊಡುತ್ತವೆ. ನಿನಗಿದು ಸಿಲ್ಲಿ ಅನಿಸಬಹುದು ಆದರೆ ನಗಬೇಡಾ ಪ್ಲೀಸ್ ,,,,

ನೆನಪಿದ್ಯಾ ನಿನ್ನೊಟ್ಟಿಗೆ ದೇವಸ್ಥಾನಕ್ಕೆ ಬಂದಾಗ ನೀ ನನ್ನ ಹಣೆಗೆ ಇಟ್ಟ ಕುಂಕುಮ , ನನ್ನ ಕೈ ಹಿಡಿದು ರೋಡ್ ಕ್ರಾಸ್ ಮಾಡಿಸೋದು , ಜನಸಂದಣೆಯಲ್ಲಿ ನನ್ನ ಪ್ರೊಟಕ್ಟ್ ಮಾಡೋದು, ನಿನ್ನ ಕೇರಿಂಗ್ ತುಂಬಾ ಇಷ್ಟ ಕಣೋ ,  ಈ ಸಣ್ಣ ಸಂಗತಿಗಳು ಜೀವನಾ ಪೂರ್ತಿ ನನ್ನ ಜೊತೆ ಹೀಗೆ ಇರುತ್ತಾ ಅದೆಷ್ಟೋ ಸಂದರ್ಭದಲ್ಲಿ ನನ್ನ ಕೇಳದೆ ನನ್ನ ಪರವಾಗಿ ನಿರ್ಧಾರ ತೆಗೆದು ಕೊಂಡವನು ನೀನು ಮರು ಮಾತಿಲ್ಲದೇ ಒಪ್ಪಿದೆ ನಾನು ಅದರರ್ಥ ಪ್ರತಿಭಟಿಸಲಾಗೊಲ್ಲಾ ಅಂತಲ್ಲಾ ಆ ಎಲ್ಲಾ ಸಂದರ್ಭದ ನಿರ್ಧಾರಗಳು ನಿನಗೆ ನನ್ನ ಮೇಲಿನ ಅಧಿಕಾರ ಅನ್ನಿಸಿತ್ತು ತಪ್ಪಲ್ಲಾ ನಿಜಾನು ಹೌದು. ನಿನಗಲ್ಲದೆ ಯಾರಿಗಿದೆ ಹೇಳು ಆ ಹಕ್ಕು ?

 

ಅದೆಷ್ಟೋ ವೇಳೆ ನಿನ್ನ ಮಾತುಗಳಿಗೆ ಕೆಂಡದಂತ ಕೋಪ ಬಂದು ನಿನ್ನ ಹಿಗ್ಗಾ ಮುಗ್ಗಾ ಬೈಯ್ಯಬೇಕನ್ನಿಸುತ್ತೆ ಹಾಗೆ ಮಾಡಲ್ಲಾ . ಆದು ನಿನ್ನ ಮೇಲೆ ನನಗಿರುವ ಗೌರವ, ಒಂದು ಮಾತು ನನ್ಗೆ ಇಲ್ಲಿವರೆಗೂ ಸ್ಪಷ್ಟವಾಗಿಲ್ಲಾ, ಆ ಗೌರವಾನೇ ನಾ ಪ್ರೀತಿ ಅಥವಾ ಪ್ರೀತಿ ಅಂದರೆ ಇನ್ನೂ ಇದೆಯಾ ? ಇದೂ ನಮ್ಮಿಂಬ್ಬರನ್ನೂ ಈಗಲೂ ಕಾಡುತ್ತಿದೆ ಅಲ್ಲವಾ ? ನೀ ಇಲ್ಲದೇ ನಾ ಇರೋಕಾಗಲ್ಲ, ನೀ ನಿಲ್ಲದೆ ಬಾಳಿಲ್ಲ ಆ ರೀತಿ ಡೈಲಾಗ್ ಹೊಡೆಯೋದು ಇಬ್ಬರಿಗೂ ಇಷ್ಟ ಇಲ್ಲಾ ನಿಜಾ !

ಆದರೆ ಒಬ್ಬರನ್ನ ಒಬ್ಬರೂ ಬಿಟ್ಟಿರೋದು ತುಂಬಾ ಕಷ್ಟ ಅಂತಾ ಮಾತ್ರ ಗೊತ್ತು. ಆದ್ರೇ ಹೇಳುತ್ತೇನೆ / ಕೇಳುತ್ತೇನೆ,? ನೀ ನಿಲ್ಲದೆ ನಾ ಇರುತ್ತಿನಾ ? ಬೇಡ ಬಿಡು ನೀನೇನು ಉತ್ತರ ಕೊಡಬೇಕಿಲ್ಲ ಅದು ನನಗೆ ಗೊತ್ತು. ಬಹುಶ: ನಾನು ಅಷ್ಟು ಸೆಂಟಿಮೆಂಟಲ್ ಅಲ್ಲ ಅಲ್ಲವಾ ಆದ್ರೂ ಕಣ್ಣಂಚು ತೇವ ಆಗುತ್ತೆ ಕಣೋ. 

 

ಕೇಳಿದಾಗಲೆಲ್ಲಾ ನೀ ಹೇಳುತ್ತಿದ್ದದ್ದು ಒಂದೇ ಮಾತು ನೀ ಇನ್ನೂ ಚಿಕ್ಕವಳು ಈ ಜಗತ್ತಿನ ತಿಳುವಳಿಕೆ ಕಮ್ಮಿ ಅದಕ್ಕೆ ನಾ ಹೇಳಿದಾ ಹಾಗೆ ಇರು ಅಂತಾ. 

 

ಏ ಹುಡುಗ ಜೀವನ ಪೂರ್ತಿ ನೀ ಹೇಳಿದಾ ಹಾಗೆ ಇರುತ್ತೀನಿ ಈ ಚಿಕ್ಕವಳನ್ನಾ ಇದೇ ಅಕ್ಕರೇಲಿ ನೋಡುಕೋತಿಯಾ ? ಹೇಗೆ ? 

 

ಹೀಗೊಮ್ಮೆ ನನ್ನವನೂ ನನ್ನೊಳಗೆ ನೆನಪಾದಾಗ 

ನೆನಪಾಗುವೆ ಆಗೊಮ್ಮೆ ಹೀಗೊಮ್ಮೆ 

ನನ್ನುಸಿರಿಯ ಏರಿಳಿತದಾ ಹಾಗೆ

ತಿಳಿ ತಂಪುಗಾಳಿಯದು ಮೆಲ್ಲನುಸಿರುತಿದೆ

ನೀ ಬಂದೆ ನೀ ಬಂದೆ ,,,,,,,,

 

 

 

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಅನಿಸಿಕೆಗಳು

swarup ಗುರು, 03/07/2013 - 14:25

hooo super ...@p..

K.M.Vishwanath ಶುಕ್ರ, 03/08/2013 - 20:10

ಹೀಗೆ ಆಗಾಗ ನೆನಪಾಗುತ್ತಾಯಿರಿ 

veeresh.a ಶನಿ, 03/09/2013 - 04:30

ಪಾರ್ವತಿ.ಜಿ.ಆರ್ ಅವರೆ............ ಏನ್ರಿ ಎಲ್ಲಿ ಕಳೆದು ಹೋಗಿದ್ರಿ ಇಸ್ಟುದಿನ.  ಇವತ್ತು ವಿಸ್ಮಯನಗರಿಯ "ಪಿಸುಮಾತಿಗೆ " 


ಮೆರುಗು ಬ೦ತು, ಅದು ನಿಮ್ಮಿ೦ದ. ನೀ ತುಂಬಾ ನೆನಪಾದೆ ಹೀಗೊಮ್ಮೆ.      all   the best       supper...................................Smile


 

ಪಾರ್ವತಿ.ಜಿ.ಆರ್ ಸೋಮ, 03/18/2013 - 10:51

ಎಲ್ಲರಿಗೂ ಧನ್ಯವಾದಗಳು , ವಿರೇಶ್ ರವರೇ ವಿಸ್ಮಯನಗರಿ ಇನ್ನೂ ನನ್ನ ಮರೆತಿಲ್ಲ ಎಂದೂ ನೆನಪಿಸಿದ್ದಕ್ಕೆ ತುಂಬು ಹೃದಯದ ವಂದನೆಗಳು.

Allawuddin MM ಮಂಗಳ, 07/30/2013 - 20:07

ಸುಪ್ಪರಾಗಿದೆ

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.