Skip to main content

ದಿ ಅಟ್ಯಾಕ್ಸ್ ಆಫ್ ೨೬/೧೧ (ಹಿಂದಿ ಚಲನ ಚಿತ್ರ)

ಇಂದ venkatb83
ಬರೆದಿದ್ದುMarch 5, 2013
noಅನಿಸಿಕೆ

ಮೊನ್ನೆ ಮೊನ್ನೆಯಸ್ಟೇ ಆಪರೇಶನ್ ಜೀರೋ ಡಾರ್ಕ್ ಥರ್ಟಿ ಬಗ್ಗೆ ಬರೆಯುತ್ತ ನನಗಾದ ನಿರಾಶೆ(ಇನ್ನಿತರ ಪ್ರೇಕ್ಷಕರೂ ಸಹಾ)ಬಗ್ಗೆ ಹೇಳುತ್ತಾ ನಮ್ಮ ದೇಶದಲ್ಲಿ ೨೬/೧೧/೨೦೦೮ರಂದು ಮುಂಬೈನಲ್ಲಿ ಹಲವು ಕಡೆ ನಡೆದ ಉಗ್ರರ ಪೈಶಾಚಿಕ ಧಾಳಿ ಕುರಿತು ಅದಾಗಲೇ ಒಂದು ಚಿತ್ರ ಬಂದಿದೆ ಮತ್ತು ಇನ್ನೊಂದು ಚಿತ್ರ ಖ್ಯಾತ ನಿರ್ದೇಶಕ-ರಾಮ್ ಗೋಪಾಲ್ ವರ್ಮ (ಶಿವ-ರಂಗೀಲ-ಸತ್ಯ-ಕಂಪನಿ ಮುಂತಾದ ಹಿಂದಿ ಚಿತ್ರಗಳ ನಿರ್ದೇಶಕ)ಅವರ ನಿರ್ದೇಶನದಲ್ಲಿ ಬರುತ್ತಿದೆ ಅದು ಹೇಗಿರುವುದೋ? ನೋಡುವ ಎಂದು ಬರೆದಿದ್ದೆ..

ಈಗ ಆ ಸಿನೆಮ ರಿಲೀಜ್ ಆಗಿ ಅದನ್ನು ನೋಡಿಯೂ ಆಯ್ತು....

ಹೇಗಿದೆ ಸಿನೆಮ? ನಮ್ಮ ನಿರೀಕ್ಷೆ ಮಟ್ಟ ಮುಟ್ಟಿದೆಯಾ? ಮನ ತಟ್ಟುವುದ?

ಉತ್ತರ: ಹೌದು ಮತ್ತು ಇಲ್ಲ.

ಈ ಚಿತ್ರ ಅಂದು (೨೬-೧೧-೨೦೦೮ರಂದು )ಮುಂಬೈನಲ್ಲಿ ೧೨ ಜಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ( ತಾಜ್ ಹೋಟೆಲ್ -ಒಬೆರಾಯ್ ಟ್ರಿಡೆಂಟ್ ಹೋಟೆಲ್- ಲಿಯೋಫೋಲ್ದ್ ಕೆಫೆ- ರೈಲ್ವೆ ಸ್ಟೇಶನ್-ಮುಂಬೈ ಚಬದ್ ಜೇವಿಶ್ ಹೌಸ್ ಮತ್ತು ಕಾಮ ಹಾಸ್ಪಿಟಲ್) ಮೇಲೆ ನಡೆದ ಪಾಕಿ ಉಗ್ರರ ಪೈಶಾಚಿಕ ಅಮಾನುಷ ಧಾಳಿ ಕುರಿತದ್ದು. ಮತ್ತು ಅದರ ಬಗ್ಗೆ ಬಹುಪಾಲು ಮಂದಿಗೆ ಪೇಪರ್-ದೂರದರ್ಶನದಲ್ಲಿ ಅಂದು ಮತ್ತು ಪ್ರತಿ ವರ್ಷ ಆ ದಿನದಂದು (೨೬-ನವೆಂಬರ್ ) ಆ ಧಾಳಿಯಲ್ಲಿ ಮಡಿದವರ ಸ್ಮರಣಾರ್ಥ ಪ್ರಕಟಿಸುವ ತೋರಿಸುವ ದೃಶ್ಯಗಳ ಮೂಲಕ ಗೊತ್ತಿದೆ..

ಹೀಗಾಗಿ ಆ ಚಿತ್ರದ ಕಥೆ ಬಗ್ಗೆ ವಿಸ್ತಾರವಾಗಿ ಹೇಳುವ ಅಗತ್ಯ ಇಲ್ಲ ಅನಿಸುತ್ತಿದೆ..ಆದರೂ

ಕಥೆ ಹೀಗಿದೆ:

ಕಥೆ:

ಭಾರತದ ಇತಿಹಾಸದಲ್ಲಿ ೨೬ ನವೆಂಬರ್ ೨೦೦೮ರ ಆ ದಿನ ಕರಾಳ ದಿನ-ಕೆಲವೇ ಸಂಖ್ಯಾಬಲದ ಆದರೆ ಧೃಢ ಮನಸ್ಸಿನ ಪೈಶಾಚಿಕ ಮನಸಿನ ತರುಣರು ಪಾಕಿಸ್ಥಾನದ ಕುಮಕ್ಕಿನಿಂದ ನಮ್ಮ ಸಮುದ್ರ ದಾಟಿ ನಮ್ಮ ಮೀನುಗಾರರನ್ನು ಬೆದರಿಸಿ ಮುಂಬೈ ಮುಟ್ಟುವ ಮೊದಲೇ ಬೇರೊಂದು ಸಣ್ಣ ಕೈನಿಂದ ಹುಟ್ಟು ಹಾಕಿ ನಡೆಸುವ ದೋಣಿ ಮೂಲಕ ಮುಂಬೈ ಪ್ರವೇಶಿಸಿ ಅದಕ್ಕೂ ಮೊದಲು ತಮಗೆ ಸಹಾಯ ಮಾಡಿದ ಮೀನುಗಾರರನ್ನು ಬರ್ಬರವಾಗಿ ಕಟ್ಟು ಕೊಯ್ದು ಕೊಂದವರು..

ಭಾರತೀಯರು ಸಮುದ್ರ ಮೂಲಕ ಪ್ರವೇಶಿಸುವ ತಮ್ಮಂತ ಆಗಂತುಕರ ಬಗ್ಗೆ ಸಂಶಯ ತಾಳಬಹ್ದು ಎಂದು ಮೊದಲೇ ನುಣ್ಣಗೆ ಗಡ್ಡ ಮೀಸೆ ತೆಗೆದು ಕೈಗೆ ಕುತ್ತಿಗೆಗೆ ಹಿಂದೂಗಳ ಹಾಗೆ ದಾರ ಕಟ್ಟಿ ತಿಲಕ ಇಟ್ಟುಕೊಂಡು ಬೆನ್ನ ಹಿಂದೆ ಬಾಂಬುಗಳು-ಗ್ರೆನೇಡುಗಳು-ಏಕೆ ೪೭ -ಹಲವು ಸುತ್ತು ಬಳಸಬಲ್ಲ ಕಾರ್ಟ್ ರಿಡ್ಜ್ ಮತ್ತು ಶುಷ್ಕ ಆಹಾರ(ಒಣ ದ್ರಾಕ್ಷಿ-ಇತ್ಯಾದಿ )ಹೀಗೆ ಎಲ್ಲ ಹೊಂದಿಸಿಕೊಂಡು ಸಕಲ ರೀತಿಯಲ್ಲಿ ತಯಾರಾಗಿ ಬಂದಿದ್ದ ತರುಣರು(ಒಟ್ಟು ೧೦ ಜನ-೯ ಜನ ಪ್ರತಿ ಧಾಳಿಯಲ್ಲಿ ಸತ್ತು-ಕಸಬ್ ಮಾತ್ರ ಬದುಕಿದ್ದು-ಕೊನೆಗೆ ನೇಣಿಗೆ ಏರಿಸಪಟ್ಟ)) ನಂತರ ೩-೪ ಸಂಖ್ಯೆಯಲ್ಲಿ ಬೇರೆ ಬೇರೆ ಕಡೆ ಚದುರಿ ಹೋಗಿ ಮುಂಬೈನ ೧೨ ಸ್ಥಳಗಳಲ್ಲಿ ಗುಂಡಿನ ಗ್ರೆನೆಡಿನ ಧಾಳಿ ನಡೆಸಿ ಆ ಧಾಳಿ ೨೬ರಿಂದ ೨೯ರ ವರೆಗೆ ನಡೆದು -ಇದೆ ಮೊದಲು ಈ ರೀತಿಯ ಪ್ಲಾನ್ಡ್ ಧಾಳಿ ನಡೆದದ್ದರಿಂದ ಬೇಗನೆ ಯಾವ ರೀತ್ಯ ಕಾರ್ಯಾಚರಣೆ ಹೇಗೆ? ನಡ್ಸಬೇಕು ಎಂದು -ಧಾಳಿ ನಡೆಸಿದವರು ಯಾರು ಅವರ ಬೇಡಿಕೆ ಏನು? ಇತ್ಯಾದಿಯಲ್ಲೇ ೩ ಇತ್ಯಾದಿಯಲ್ಲೇ ೩ ದಿನ ಕಳೆದು ಅಸ್ತ್ರಲ್ಲಿ ಹಲವು ಜನ ವಿದೇಶಿಯರು-ದೇಶಿಯರು ದಕ್ಷ ಪೊಲೀಸರು ಪ್ರತಿ ಧಾಳಿಯಲ್ಲಿ ಧಾಳಿಯಲ್ಲಿ ಮಡಿದರು ಗಾಯಗೊಂಡರು-ಅವರ ಸಂಖ್ಯೆ ೧೬೪ ಜನ ಮೃತ ,೩೦೮ ಜನರಿಗೆ ಗಂಭೀರ-ಸಣ್ಣ ಪುಟ್ಟ ಗಾಯ-ಮತ್ತು ಬದುಕುಳಿದವರಿಗೆ ಜೀವನ ಪೂರ್ತಿ ಕೆಟ್ಟ ಕನಸಾಗಿ ಕಾಡುವ ದುರ್ಘಟನೆ..

ಪೊಲೀಸರು-ರಾಜಕಾರಣಿಗಳ ನಡುವಿನ ಚರ್ಚೆ-ನಿರ್ಧಾರ ತೆಗೆದುಕೊಳ್ಳುವಲ್ಲಿನ ನಿಧಾನ ನಡೆಯಿಂದ ಜನ ಮತ್ತು ವಿದೇಶಗಳ ಸರ್ಕಾರಗಳ ಮುಖ್ಯಸ್ಥರ ಹೇಳಿಕೆಗಳು- ಒಟ್ಟಿನಲ್ಲಿ ಎಲ್ಲರೂ ಆಕ್ರೋಶಿತರಾಗಲು ಎಚ್ಚೆತ್ತ -ಬೆಚ್ಚಿ ಬಿದ್ದ ಸರ್ಕಾರ ಈ ಉಗ್ರಗಾಮಿಗಳನ್ನು ಸದೆ ಬಡಿಯಲು ಅವರ ಕೈನಲ್ಲಿ ಸಿಲುಕಿದವರು ಬದುಕುಳಿದವರ ರಕ್ಷಣೆಗೆ ಏನ್ ಎಸ್ ಜಿ ಕಮ್ಯಾನ್ಡೋ ಗಳನ್ನು ಕಳುಹಿಸಿತು-ಅದಕ್ಕೆ ಇಟ್ಟ ಹೆಸರು 'ಆಪರೇಶನ್ ಬ್ಲಾಕ್ ಟಾರ್ನೆಡೋ'..

ಪೊಲೀಸರ ವಿಫಲ ಪ್ರಯತ್ನ-ಪ್ರತಿ ಧಾಳಿಗೆ ಸಜ್ಜಾಗುವಲ್ಲಿನ ಲೋಪ ದೋಷ-ಇತ್ಯಾದಿ ಬಗ್ಗೆ ಮತ್ತು ಧಾಳಿಯಲ್ಲಿ ಬದುಕುಳಿದು ಹೊರ ಬಂದಿದ್ದ ಕೆಲ ಜನರ ಸಹಾಯದಿಂದ ಒಳಗೆ ಇರಬಹುದಾದ ಉಗ್ರರ ನಿಖರ ಸಂಖ್ಯೆ ಅಂದಾಜಿಸಿ -ಅವರಲ್ಲಿ ಇರಬಹುದಾದ ಆಯುಧಗಳ ಬಗ್ಗೆ ಯೋಚಿಸಿ ಸಕಲ ರೀತಿಯಲಿ ಸಜ್ಜಾಗಿದ್ದ ಯೋಧರು ಹಲವು ಸುತ್ತಿನ ಧಾಳಿ ನಡೆಸಿ ಹಲವು ಘಂಟೆಗಳ ಕಾರ್ಯಾಚರಣೆ ಬಳಿಕ ಒಬ್ಬ ಯೋಧನ(ಹುತಾತ್ಮ-ಸಂದೀಪ್ ಉನ್ನಿ ಕೃಷ್ಣನ್ )ತ್ಯಾಗ ಬಲಿದಾನ ಮೂಲಕ ಕಾರ್ಯಾಚರಣೆ ಅಂತ್ಯವಾಗಿ ಎಲ್ಲ ಸ್ಥಳಗಳು ಸುರಕ್ಷಿತ ಎಂದು ಘೋಷಿಸಲ್ಪಟ್ಟವು..ಅಲ್ಲಿದ್ದ ಆಯುಧಗಳು -ಬಾಂಬು ಗ್ರೆನೆಡುಗಳನ್ನೂ ಡಿಫ್ಯೂಜ್ ಮಾಡಲಾಯ್ತು..

ಸಿಕ್ಕಿ ಬಿದ್ದ ಗಾಯಗೊಂಡ ಉಗ್ರ ಕಸಬ್ನನ್ನು ತಮ್ಮ ಸಹೋದ್ಯೋಗಿಗಳನ್ನು ಒಂದ ಉಗ್ರ ಎಂದು ಪೊಲೀಸರು -ಜನರು ಸಾಯಿಸದೇ ಬಿಟ್ಟದ್ದೇ ಹೆಚ್ಚು -ಅವನಿಗೆ ಹಲವು ಕೋಟಿಗಳನ್ನು ಖರ್ಚು ಮಾಡಿ ಅತ್ಯುತ್ತಮ ಅತಿ ಭದ್ರತಾ ಜೇಲು-ಕೋಣೆ -ಅವನನ್ನು ಸಾಗಿಸುವ ವಾಹನ-ಅವನ ಕಾಯುವಿಕೆಗೆ ಗಾರ್ಡುಗಳನ್ನು ನೇಮಿಸಿ ವಿಚಾರಣೆ ೪ವರೆ ವರ್ಷಗಳವರೆಗೆ ನಡೆದು(ವಿಚಾರಣೆ ಮಧ್ಯದಲಿ ಅವ್ನ ಪರವಾಗಿ ಯಾರೂ ವಾಧಿಸಲು ತಯಾರಿಲ್ಲದೆ -ತಯಾರದವರೂ ಜನರ ಆಕ್ರೋಶಕ್ಕೆ ಬೆದರಿ ಹೆದರಿ ಹಿಂದೆ ಸರಿದದ್ದು-ಸತ್ತ ಉಗ್ರರ ದೇಹಗಳನ್ನು ಪಾಕಿಸ್ತಾನ ಒಯ್ಯಲು ಹೂಳಲು ನಿರಾಕರಿಸಿ ಅವರ ಸಮಾಧಿಯನ್ನು ಇಲ್ಲೇ ಮಾಡಬೇಕಾಯ್ತು. ಕೊನೆಗೆ ಅತಿ ಅಚ್ಚರಿಯ ವಿಧ್ಯಮಾನದಲ್ಲಿ ತರಾತುರಿಯಲ್ಲಿ ನೇಣಿಗೆ ಏರಿಸಿದ್ದು ಆಯ್ತು...

ಹಲವು ವರ್ಷಗಳು ತಯಾರಿ ನಡೆಸಿ -ವಿದೇಶಿಯರು ದೇಶಿಯರು ಹೆಚ್ಚಿಗೆ ಸೇರುವ ಮೋಜು ಮಸ್ತಿ ತಾಣಗಳನ್ನು ಹುಡುಕಿ-ನಮ್ ಕರಾವಳಿ ಮತ್ತು ಅಂತರ್ ದೇಶೀಯ ಭದ್ರಾ ವೈಫಲ್ಯ ಮನಗಂಡಿದ್ದ-ಹಾಗೂ ಹಾಟು ಹಲವು ಅತ್ಯಾಧುನಿಕ ತಂತ್ರಾಜ್ಞಾನ(ಜಿ ಪಿ ಎಎಸ್ ಮ್ಯಾಪ್-ಗೂಗಲ್ ಅರ್ಥ್ -ಸ್ಯಾಟಲೈಟ್ ಫೋನ್ ,ಆಯುಧಗಳು-ಇತ್ಯಾದಿ)ಸಮೇತ ಸಕಲ ರೀತಿಯಲಿ ಒಟ್ಟಿನಲ್ಲಿ ಸಾಧ್ಯವದಷ್ಟು ಕಡೆ ಧಾಳಿ ನಡೆಸಿ ಮಕ್ಕಳು ಮರಿ ದೊಡ್ಡವರು ಎನ್ನದೆ ಹೆಚ್ಚು ಹಣರನ್ನು ಸಾಯಿಸಿ ಭಾರತ ಸುರಕ್ಷಿತ ದೇಶವಲ್ಲ ಎಂಬ ಭಾವ ವಿದೇಶಿಯರಲ್ಲಿ ಮೂಡಿಸುವ ಇರಾದೆ ಹೊಂದಿದ್ದ ಪಾಕಿ ಉಗ್ರರು ಮಾತು ಅವರನ್ನು ಸ್ವರ್ಗ ಸಿಗುವುದು -ಅಲ್ಲಾ ನಿಮ್ಮನ್ನು ಮೆಚ್ಚುವನು ಎಂದೆಲ್ಲಾ ಹೇಳಿ ಕಳುಹಿಸಿದ್ದವರ ಆಶೆ ಈಡೇರಿತು.

ನಮ್ ದೇಶದ ಭದ್ರತಾ-ಗೂಢಚಾರ -ಬೇಹುಗಾರಿಕಾ ವಿಭಾಗಗಳ ವೈಫಲ್ಯ -ನಮ್ಮ ಸಿದ್ಧತೆ ಬದ್ಧತೆ ಎಲ್ಲವೂ ಅಂದು ಪರೀಕ್ಷೆಗೆ ಒಳಪಟ್ಟಿತ್ತು..ದೇಶದ ಜನರ ನಿರೀಕ್ಷೆ -ಪ್ರಾರ್ಥನೆ ಫಲ ಕೊಟ್ಟು ನಮ್ ಭದ್ರತಾ ಪಡೆಗಳು ಯೋಧರು ಉಗ್ರರನು ಕೊಂದು ಬದುಕುಳಿದವರನ್ನು ಹೊರ ಕರೆ ತಂದರು..ಆ ದೃಶ್ಯ ಕಣ್ಣ ಮುಂದೆ ಈಗಲೂ ಸುಳಿಯುತ್ತಿದೆ.ಅದು ನೆನೆದು ಮನ ಕೊರಗುತ್ತಿದೆ-ಮರುಗುತ್ತಿದೆ -ಸಹೋದರ ಸಹೋದರಿಯರಿಗೆ ಆದ ಹಾನಿ ನೆನೆದು ಮನ ಆಕ್ರೋಶಗೊಳುತ್ತದೆ ..

ಅಂದು ನಡೆದ ಆ ಧಾಳಿ ನಂತರ ಪಾಕಿಸ್ತಾನ ಮತ್ತು ಭಾರತದ ಮಧ್ಯೆ ಅಣು ಯುದ್ಧ ನಡೆವ ಭಯ ಎಲ್ಲೆಡೆ ಮನೆ ಮಾಡಿತ್ತು..ಆದರೆ ಹಾಗೇನೂ ಆಗಲಿಲ್ಲ..ಈ ಘಟನೆ ನಂತರಧಾಳಿಗಳು ನಿಲ್ಲಲಿಲ್ಲ-ಆಗಲೂ ಈಗಲೂ ಪಾಕಿ ಪ್ರೇರಿತ ಉಗ್ರ ಧಾಳಿಗಳು ನಡೆಯುತ್ತಿವೆ -ಮುಂದೆಯೂ ನಡೆಯಲಿವೆ. ಮತ್ತು ನಮ್ಮದು ಎಂದಿನಂತೆ ಅದೇ ಧಿವ್ಯ ಮೌನ -ಶಾಂತಿ ಮಂತ್ರ ಪಠಣ .

ಅಂದು ಧಾಳಿ ನಡೆದು-ಕಾರ್ಯಾಚರಣೆ ಬಳಿಕ ಆ ಪ್ರದೇಶಗಳಿಗೆ ಅಂದಿನ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ಮುಖ್ ಅವರ ಜೊತೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರೂ ಹೋಗಿದ್ದು ಜನತೆಗೆ ಆಕ್ರೋಶ ಉಕ್ಕುವ ಹಾಗೆ ಮಾಡಿತ್ತು-ಮಾಧ್ಯಮಗಳೂ ತೆಗಳಿ ಬರೆದಿದ್ದವು-ಬೆಂಕಿ ಹೊತ್ತಿದ ಮನೆಯಲ್ಲಿ ಬೀಡಿ ಹತ್ತಿಸ್ಕೊಳುವ ಮನೋಸ್ಥಿತಿ ಅಂತ..

ಆ ಬಗ್ಗೆ ಅವರು ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಬಹುದು ಎಂದು ಎಲ್ಲರ ಎಣಿಕೆ ಆಗಿತ್ತು.ಆ ಬಗ್ಗೆ ಅವರಂತೂ ಏನೂ ಹೇಳಿರಲಿಲ್ಲ-ಈಗ ೪ ವರ್ಷಗಳ ರೀಸರ್ಚ್ ಮಾಡಿ- ಹಲವು ಸಾವಿರ ಜನರ ಅಡಿಶನ್ ಮಾಡಿ (ಮುಖ್ಯವಾಗಿ ಬದುಕುಳಿದ ಮೊನ್ ಮೊನ್ನೆ ಸತ್ತ ಕಸಬ್ ಪಾತ್ರಕ್ಕೆ ಆದ್ಯತೆ)ಕೊನೆಗೆ ಹೆಚ್ಚುಕಡಿಮೆ ಸ್ಯೂಟ್ ಆಗುವ 'ಸಂಜೀವ್ ಜೈಸ್ವಾಲ್'ನ ಆಯ್ಕೆ ಮಾಡಿ -ತನಿಖಾಧಿಕಾರಿ-ಪೋಲೀಸ್ ಮುಖ್ಯಸ್ಥನ ಪಾತ್ರಕ್ಕೆ ಖ್ಯಾತ ನಟ ನಾನಾ ಪಾಟೇಕರ್ ಅವರನ್ನು ಆರಿಸಿ ಚಿತ್ರವನ್ನು ತೆಗೆಯುವ ಮುಂಚೆಯೇ ೭ ನಿಮಿಷಗಳ ಟ್ರೇಲರ್ ಬಿಡುಗಡೆ ಮಾಡಿ ದೇಶದ ಗಮನ ಸೆಳೆದು-ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಲು ಕಾರಣರಾಗಿದ್ದರು...

ಹತ್ತು ಹಲವು ವಿವಿಧಾ ವಿಷಯಗಳ ಯಶಸ್ವಿ ಸಿನೆಮ ತೆಗೆದ ಖ್ಯಾತ ನಿರ್ದೇಶಕ ಮತ್ತು ನಟವರ್ಗ-ಹಾಗೂ ದೇಶವನ್ನು ಬೆಚ್ಚಿ ಬೀಳಿಸಿದ ಘಟನೆ ಹಾಗೂ ಮೊನ್ನೆ ಮೊನ್ನೆ ನೇಣಿಗೆ ಏರಿದ ಕಸಬ್ ಕಾರಣವಾಗಿ ಈ ಚಿತ್ರದ ಬಗ್ಗೆ ನಮಗೆ (ನನಗಂತೂ) ಬಿನ್ ಲಾಡೆನ್ ಕೊಂದ ಕಾರ್ಯಾಚರಣೆ-ಇಸ್ರೇಲ್ ಕಾರ್ಯಾಚರಣೆ ಬಗ್ಗೆ ಬಂದ ಸಿನೆಮಾಗಳ ಮಟ್ಟದಲ್ಲಿ-ಅದಕಿಂತ ಹೆಚ್ಚಿಗೆ ನಿರೀಕ್ಷೆ ಇತ್ತು..ಇದ್ದವು..

ಹಾಗಾದ್ರೆ ನಮ್ ನಿರೀಕ್ಷೆ ಮಟ್ಟ ಈ ಸಿನೆಮ ಮುಟ್ಟಿದೆಯ? ಇಲ್ಲ ಎಂದು ಹೇಳಲು ಬೇಜಾರಾಗುತ್ತಿದೆ.

ಈ ಸಿನೆಮ ನೋಡಿಯಾದ ಮೇಲೆ ನನಗೆ ಆಪರೇಶನ್ ಜೀರೋ ಡಾರ್ಕ್ ಥರ್ಟಿ ಬಗ್ಗೆ ಬಂದ ಭಾವನೆಗಳೇ ಬರುತ್ತಿವೆ...

ಪ್ರಪಂಚವನ್ನು ಬೆಚ್ಚಿ ಬೀಳಿಸಿದ ಆ ತರಹದ ಘಟನೆಗಳ ಕುರಿತು ತೆಗೆದ ಚಿತ್ರಗಳಲ್ಲಿ ಕೆಲವೇ ಕೆಲವು ಮಾತ್ರ ನಿರೀಕ್ಷೆ ಮಟ್ಟ ಮುಟ್ಟಿವೆ-ಜನರ ಮನ ತಟ್ಟಿವೆ..

ಅಂತವುಗಳಲ್ಲಿ

೧.ಕಾಲಾಪಾನಿ (ಸಜಾ ಎ ಕಾಲಪಾನಿ ) ಮೊದಲ ಸ್ಥಾನದಲಿ ನಿಲ್ಲುತ್ತದೆ.., ೨.ವಾಲ್ಕಿರಿ ,೩.ಗ್ಲಾಡಿಯೇಟರ್, ೪.ಟೈಟಾನಿಕ್

೫.ಹರ್ಟ್ ಲಾಕರ್ ,೬.ಗಾಂಧೀ, ೭.ಸರ್ಧಾರ್,೮.ಬೋಸ್ ದಿ ಫಾರ್ಗಟ್ ನ್ ಹೀರೋ,೯.ಗದಾರ್ ಏಕ ಪ್ರೇಂ ಕಥಾ

೧೦. ವೀರ್ ಜಾರ, ೧೧.ಬಾರ್ಡರ್, ೧೨.ಜಮೀನ್ (ಕಂದಹಾರ್ ಅಪಹರಣದ ಕುರಿತ ಚಿತ್ರ ಅಜಯ್ ದೇವಗನ್ ಅಭಿಷೇಕ್ ಬಚನ್ ನಟನೆ- ರೋಹಿತ್ ಶೆಟ್ಟಿ ನಿರ್ದೇಶನ ), ೧೩.ನಮ್ಮ ಕನ್ನಡದ ನಿಷ್ಕರ್ಷ ಚಿತ್ರ (ಚಿತ್ರದಲ್ಲಿನ ಕಾರ್ಯಾಚರಣೆ ನೈಜತೆಗೆ ಹತ್ತಿರವಾಗಿದೆ -ವಿಷ್ಣುವರ್ಧನ್ ಅವರ ಸೂಪರ್ ನಟನೆ ) ಇತ್ಯಾದಿ ಹೆಸರಿಸಬಹುದು...

ಹಾಗಾದ್ರೆ ಮುಂಬೈ ಧಾಳಿ ಕುರಿತ ಈ ಸಿನೆಮ-

ಅಟ್ಯಾಕ್ಸ್ ಆಫ್ ೨೬/೧೧ ಚಿತ್ರ ಹೇಗಿದೆ? ಆ ಕುರಿತ ಬರಹ ಮುಂದಿನ ಭಾಗದಲ್ಲಿ..

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.