Skip to main content

ಸತ್ಯ

ಇಂದ ಚಂದ್ರ
ಬರೆದಿದ್ದುFebruary 5, 2013
noಅನಿಸಿಕೆ

ಕೋರ್ಟಿಗೆ ಹಾಜರಾಗಿದ್ದ ರಂಗನ ವಿರುದ್ದ ಸಾಕ್ಷಿ ಹೇಳಲು ನಮ್ಮ ದಡ್ಡ ತಿಮ್ಮಬಂದ

ವಕೀಲ: ನಿನ್ನ ಹೆಸರೇನು
ತಿಮ್ಮ
ಸರಿ ಈ ಭಗವದ್ಗೀತೆ ಮೇಲೆ ಪ್ರಮಾಣ ಮಾಡು "ಸತ್ಯ" ವನ್ನ ಬಿಟ್ಟು ಬೇರೇನೂ ಹೇಳುವುದಿಲ್ಲ ಎಂದು

ತಿಮ್ಮ : ಖಂಡಿತ ಸ್ವಾಮಿ "ಸತ್ಯ" ವನ್ನುಬಿಟ್ಟು ಬೇರೇನೂ ಹೇಳುವುದಿಲ್ಲ
ವಕೀಲ: ಗುಡ್ ನಿನ್ನ ಎದುರಿಗೆ ನಿಂತಿರುವವನು ಯಾರೆಂದು ಹೇಳು.

ತಿಮ್ಮ : ಸತ್ಯ
ವಕೀಲ: ಸತ್ಯ! ಅವನು ನಿನಗೆ ಹೇಗೆ ಗೊತ್ತು
ತಿಮ್ಮ : ಸತ್ಯ
ವಕೀಲ: ಅವನು ನಿನ್ನೆ ಕೊಲೆ ಮಾಡಿದ್ದನ್ನು ನೀನು ನೋಡಿದೆಯಾ
ತಿಮ್ಮ : ಸತ್ಯ
ವಕೀಲ: ಸತ್ಯ ಸತ್ಯ ಸತ್ಯ! ಏನಯ್ಯ ಸತ್ಯ,ಬೇರೆ ಏನಾದ್ರೂ ಹೇಳಯ್ಯ
ತಿಮ್ಮ: ಹೇ ಹೋಗಿ ಸ್ವಾಮಿ ಭಗವದ್ಗೀತೆ ಮೇಲೆ ಪ್ರಮಾಣ ಮಾಡಿದೀನಿ ಸತ್ಯ ವನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ ಅಂತ..
ನೀವು ಏನೇನೋ ಕೇಳಬೇಡಿ ಸತ್ಯವನ್ನೇ ಕೇಳಿ.! ನಾನು ಸತ್ಯವನ್ನೇ ಹೇಳುತ್ತೇನೆ -- :) :) :)

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.