Skip to main content

ಇರುವರ್(ಇದ್ದರು- ತೆಲುಗು )-ಡ್ಯುಯೋ (ಇಂಗ್ಲಿಷ್)-1997 ಚಿತ್ರ-ಎಂ ಜಿ ಅರ್ -ಕರುಣಾನಿಧಿ ಕಥಾನಕ ???

ಇಂದ venkatb83
ಬರೆದಿದ್ದುJanuary 5, 2013
noಅನಿಸಿಕೆ

ಇರುವರ್(ಇದ್ದರು- ತೆಲುಗು )-ಡ್ಯುಯೋ (ಇಂಗ್ಲಿಷ್)-1997 ಚಿತ್ರ-ಎಂ ಜಿ ಅರ್ -ಕರುಣಾನಿಧಿ ಕಥಾನಕ  ???

ತಮಿಳುನಾಡು ಎಂದ ಕೂಡಲೇ  ಕಾವೇರಿ ಜಲ ವಿವಾದವೇ  ಮೊದಲು ನೆನಪಾಗುವದು. ನೀರಿನ ವಿಷಯವಾಗಿ ಆಗಾಗ ಕ್ಯಾತೆ ತೆಗೆಯುವ ಈ ರಾಜ್ಯದ  ಜನ-ಜನ ನಾಯಕರು ಹೇಗೆ? ಅಲ್ಲಿನ ಜನರ ಸಂಸ್ಕೃತಿ-ವೇಷ ಭೂಶಣ ,ಸಿನೆಮ ನಟರ ಆರಾಧನೆ -ಇತ್ಯಾದಿ ಸದಾ ನನ್ನ ಗಮನ  ಅಂಶಗಳು.. ಹಾಗೊಮ್ಮೆ ನೆಟ್ನಲ್ಲಿ  ಕಣ್ಣಾಡಿಸುವಾಗ  ಸಿಕ್ಕಿದ್ದೇ  ಈ ಚಿತ್ರದ ವಿವರ-ಆ ಚಿತ್ರದ ಬಗ್ಗೆ  ನನ್ನ ಕುತೂಹಲ ಹೆಚ್ಚಲು ಕಾರಣ 

ನಿರ್ದೇಶಕ  ಮಣಿ ರತ್ನಂ-ಮತ್ತು ಚಿತ್ರದ ಕಥೆ- ನಟ ವರ್ಗ...

ತಮಿಳರ ಆರಾಧ್ಯ ದೈವ  ಚಿತ್ರ ನಟ-ರಾಜಕಾರಣಿ  ಎಂ ಜೀ ಆರ್  ಮತ್ತು  ಸ್ನೇಹಿತ-ಚಿತ್ರ ಕಥೆ -ಹಾಡು ರಚನೆಕಾರ  ರಾಜಕಾರಣಿ  ಕರುಣಾನಿಧಿಯವರ  ಸ್ನೇಹ -ಏಳಿಗೆ -ಅಭಿವೃದ್ಧಿ ,ವಿರಸ-ತಂತ್ರ -ಕುತಂತ್ರ ,ಸಂಚು ವಯುಕ್ತಿಕ  ಬದುಕಿನ ಬಗೆಗಿನ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದಕ್ಕಿಂತ  ಸುದ್ಧಿ ಆದದ್ದೇ ಹೆಚ್ಚು..:((

ಕಥೆ:

ಚಿತ್ರ ನಟನಾಗಲು ಕಾತರಿಸುವ  - ಅದ್ಕೆ ತಕ್ಕಂತೆ ಪ್ರತಿಭೆ ಇರುವ ಆನಂದ್ -ಆನಂದಂ   (ಮೋಹನ್ ಲಾಲ್-ಎಂ ಜೀ ಆರ್ ಪಾತ್ರಧಾರಿ ) ಹಲವರ ಬಳಿ  ಅವಕಾಶಗಳಿಗಾಗಿ  ಕೈ ಮಡಚಿ -ಸೊಂಟ ಬಗ್ಗ್ಸಿ ಯಾಚಿಸಿ ಕೆಲವು ಸಣ್ಣ ಪುಟ್ಟ ಪಾತ್ರಗಳ ಮೂಲಕ  ಚಿತ್ರ ರಂಗ ಪ್ರವೇಶಿಸಿ  ತನ್ನ ಪ್ರತಿಭೆ ಮೂಲಕ ನಾಯಕನಟನಾಗಿ  ಆಯ್ಕೆಯಾಗಿ  ಆ ಮಧ್ಯೆ  ಆ ಚಿತ್ರ ಕೆಲವು ಕಾರಣಗಳಿಂದ ನಿಂತುಹೋಗಿ ಮತ್ತೆ  ಪ್ರಾಮುಖ್ಯ ಇಲ್ಲದ ಸಣ್ಣ ಪುಟ್ಟ  ಪಾತ್ರಗಳನ್ನೂ ಮಾಡಬೇಕಾಗಿ ಬರುವುದು..

ಖ್ಯಾತ ನಿರ್ದೇಶಕರೊಬ್ಬರ  ಕೃಪಾಶೀರ್ವಾದ ದೊರಕಿ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯ ಚಿತ್ರಕ್ಕೆ ನಾಯಕನಾಗಿ  ಆ ಚಿತ್ರ ಅರ್ಧಕ್ಕೆ ನಿಂತಾಗ  ಮುಂದಿನ  ಭವಿಷ್ಯ  ಮಸುಕಾಗಿ -ಹಿತ ಶತ್ರುಗಳ  ಚೇಡಿಸುವಿಕೆ -ವ್ಯಂಗ್ಯ ಸಹಿಸಿಕೊಂಡು  ಕೆಲವು ಚಿತ್ರಗಳಲ್ಲಿ  ಸಹಾಯಕ -ಪೋಷಕ ಪಾತ್ರಧಾರಿ ಆಗುವನು..

ಅದೊಮ್ಮೆ  ಚಿತ್ರ ಕಥೆ -ಹಾಡು ಬರೆವ  ತಮಿಳ್ ಸೆಲ್ವಂ (ಪ್ರಕಾಶ್ ರೈ-ಕರುಣಾನಿಧಿ ಪಾತ್ರಧಾರಿ  )ಯ  ಭೇಟಿ ಆಗಿ  ಆನಂದಂನ ತಾದ್ಯಾತ್ಮ ನಟನೆ -ಬಗ್ಗೆ ತಮಿಳ್ ಸೆಲ್ವಂ ಮೆಚ್ಚುಗೆ -ಭರವಸೆಯ ನಟ ಎಂಬ  ಹೊಗಳಿಕೆ  ಹಾಗೆಯೇ  ತಮಿಳ್  ಸೆಲ್ವಂ ಒಬ್ಬ  ಕ್ರಾಂತಿಕಾರಿ ಹೋರಾಟಗಾರ -ಬರಹಗಾರ  ಎಂದು ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸುತ್ತಾ  ಸ್ನೇಹಿತರೂ ಆಗುವರು ..

ಆ ನಂತರ ಆನಂದಂ ಒಂದರ ನಂತರ ಒಂದು ಚಿತ್ರಗಳಿಗೆ  ನಾಯಕನಾಗುತ್ತ  ಆ ಸಿನೆಮಾಗಳಿಗೆ  ತಮಿಳ್ ಸೆಲ್ವಂ ಚಿತ್ರ ಕಥೆ-ಹಾಡು ಬರೆಯುತ್ತ  ಎಲವೂ ಹಿಟ್ ಆಗಿ ಆನಂದಂ ಒಬ್ ಜನಪ್ರಿಯ ಚಿತ್ರ ನಟನಾಗಿ ಹೊರಹೊಮ್ಮುವನು..

ಆ ಮಧ್ಯೆ  ಅದಕ್ಕೂ ಮೊದಲು ಆನಂದಂಗೂ ಮದುವೆಯಾಗಿ ಹೆಂಡತಿ ಅಕಾಲಿಕ ಮರಣಕ್ಕೆ ತುತ್ತಾಗಿರುವಳು,ಈ ಮಧ್ಯೆ ಸಹ ನಟಿ ಒಬ್ಬಳನ್ನು (ಗೌತಮಿ ) ಪ್ರೇಮಿಸಿ ಮದುವೆಯಾಗಿರುವ  ಎಂ ಜೀ ಆರ್ ಜೀವನದಲ್ಲಿ ಒಬ್ಬಳು ಸಹ  ನಟಿ (ಜಯ ಲಲಿತ.!-ಐಶ್ವರ್ಯ ರೈ )ಯ  ಪ್ರವೇಶ,  ಇತ್ತ ತಮಿಳ್ ಸೆಲ್ವಂ ಬದುಕಲಿ ಇವರ ಕ್ರಾಂತಿಕಾರಿ ಹೋರಾಟ -ಬರಹಗಳು -ಮೆಚ್ಚಿ ಜೊತೆಗೆ ಇರಬಯಸುವ ಒಬ್ಬ ಹುಡುಗಿ (ನಟಿ -ತಬು) ,ಅದಾಗಲೇ ತಮಿಳ್ ಸೇಲ್ವಮ್ಗೆ ಮದುವೆಯೂ ಆಗಿದೆ (ನಟಿ ರೇವತಿ )..!

ಇತ್ತ  ಚಿತ್ರ ಕಥೆ-ಹಾಡು ರಚನೆಯ ಜೊತೆ ಜೊತೆ  ತಮಿಳುನಾಡಲ್ಲಿ ಹೊಸ ರಾಜಕೀಯ ಕ್ರಾಂತಿ-ಜನ ಜಾಗೃತಿ ಮೂಡಿಸುವ -ನಿಟ್ಟಿನಲ್ಲಿ ಹೊಸ ಪಕ್ಷ ಹುಟ್ಟು ಹಾಕಿ ಅದಕ್ಕೆ ಜನರನ್ನು ಕರೆ ತರುವ -ಒಗ್ಗೂಡಿಸುವ  ಸಾರಥಿಗಳನ್ನು  ಹುಡುಕುತ್ತಿದ್ದ  ಅಣ್ಣಾದೊರೈ (ಆ ಪಾತ್ರಧಾರಿ- ನಾ(ಜ)ಸರ್) ಗೆ ತಮಿಳ್ ಸೆಲ್ವಂ  ಸಿಕ್ಕಿ ಆ ಪಕ್ಷದಲ್ಲಿ  ಸೇರಿ ಜೊತೆಗೆ  ಜನರನ್ನು ಸೆಳೆವ  ಚಿತ್ರ ನಟ  ಆನಂದಂ (ಎಂ ಜೀ ಆರ್ -ಮೋಹನ್ಲಾಲ್  )ನನ್ನು ಸೇರಿಸಿಕೊಂಡು  ಹಲವು ಸಭೆ ಸಮಾರಂಭ ನಡೆಸಿ  ಚುನಾವಣೆಯಲ್ಲಿ ಗೆದ್ದು  ಅಧಿಕಾರ ನಡೆಸುವ ಸಂದರ್ಭ ಬಂದಾಗ -ಯಾರು ಮುಖ್ಯಮಂತ್ರಿ ಆಗಬೇಕು ಎಂದು  ಅಣ್ಣಾದೊರೈ ಮತ್ತು ತಂಡ  ಮೊದಲೇ ನಿರ್ಧರಿಸಿ  ಆ ಬಗ್ಗೆ ಹೇಳಲು ಆನಂದಂ (ಎಂ ಜೀ ಆರ್-ಮೋಹನ್ಲಾಲ್) ನನ್ನು ಕರೆಸಿ -ಕರುಣಾನಿಧಿ (ತಮಿಳ್ ಸೆಲ್ವಂ-ಪ್ರಕಾಶ್ ರೈ )ಯನ್ನು ಹೊರಗೆ ಇರಲು ಹೇಳಿದಾಗ -ತನ್ನ ಬದಲಿಗೆ  ಆನಂದಂ ಈ ರಾಜ್ಯದ ಮುಖ್ಯಮಂತ್ರಿ ಆಗುವ- ಸಂಭವನೀಯತೆ  ಅರಿತು ಮನದಲ್ಲೇ ಕ್ರುದ್ಧನಾಗುವನು  ತಮಿಳ್ ಸೇಲ್ವಮ್..

ಆದರೆ  ಒಳಗೆ ರಹಸ್ಯ ಸಭೆ ನಡೆಸಿ -ಅಣ್ಣಾ ದೊರೈ ಮತ್ತು ತಂಡದ ಆಯ್ಕೆ ತಾನೇ ಆಗಿದ್ದರೂ  ರಾಜಕೀಯ ಸಧ್ಯಕೆ  ಬೇಡ ಎಂದು  ಸಾಮಾನ್ಯ ಕಾರ್ಯಕರ್ತ ಆಗಿರುವೆ -ನನ್ನ ಗೆಳೆಯ  ತಮಿಳ್ ಸೆಲ್ವಂನನ್ನು  ಆ ಪೀಠಕ್ಕೆ ಕೂರಿಸಿ ಎಂದು  ಹೇಳಿ ಹೊರ ಬಂದು  ಅದನೆ ಗೆಳೆಯನಿಗೆ  ಹೇಳಿ ಶಾಕ್ ಕೊಡುವನು...!! ತಮಿಳ್ ಸೆಲ್ವಂ (ಕರುಣಾ ನಿಧಿಯ ಪಾತ್ರಧಾರಿ -ಪ್ರಕಾಶ್ ರೈ  )ಮುಖ್ಯಮಂತ್ರಿಯಾಗಿ  ಅಧಿಕಾರ ನಡೆಸುತ್ತ  ಅಧಿಕಾರ ರುಚಿ ಹತ್ತಿ ,ಮೂಲ ತತ್ವಗಳು ಮರೆತು  ಸ್ನೇಹಿತನ ಚಿತ್ರರಂಗದ ಜನಪ್ರಿಯತೆ  ಸಹಿಸಲಾಗದೆ  ಆದಷ್ಟು  ದೂರ ಇರಿಸಲು ಪ್ರಯತ್ನಿಸಿ ವಿಫಲನಾಗಿ  ಪಕ್ಷದಿಂದ  ಹೊರ ದಬ್ಬುವನು..:(( ಈ ಆಘಾತವನ್ನು ಮರೆ ಮಾಚಿ  ಸಹಜವಾಗಿದ್ದು  ಜನರಿಗೆ  ತಿಳಿ ಹೇಳಿ-ತಾನೂ ರಾಜಕೀಯಕ್ಕೆ ಧುಮುಕುವ  ನಟ ಆನಂದಂ (ಎಂ ಜೀ ಆರ್) ಚುನಾವಣೆಯಲ್ಲಿ ಗೆದ್ದು  ತನ್ನ ಸ್ನೇಹಿತನ ಪಕ್ಷವನ್ನು  ಸೋಲಿಸಿ  ಮುಖ್ಯಮಂತ್ರಿಯಾಗುವನು ....!

ಆಮೇಲೆ ಏನಾಗುತ್ತೆ? ಇಬ್ಬರ ತಂತ್ರ-ಕುತಂತ್ರ -ದ್ವೇಷದ ಮಟ್ಟ  ಎಲ್ಲಿಗೆ  ತಲುಪಲಿದೆ??? ಚಿತ್ರ ನೋಡಿ 

ಕೆಲವು ಸನ್ನಿವೇಶಗಳು :

1.ಹಳ್ಳಿಯಲ್ಲಿ ರಂಗ ನಾಟಕಗಳಲಿ  ಅಭಿನಯಿಸುತ್ತಾ  ಚಿತ್ರ ರಂಗ ಸೇರಲು ಕಾತರಿಸುವ ಶ್ರಮಿಸುವ  ಆನಂದಂ -ಸಹಕಾರ ಕೊಡುವ ನವ ವಧು -ತಂದೆ ತಾಯಿ ಬಳಗ.

2.ಖ್ಯಾತ ಚಿತ್ರ ತಯಾರಿಕ ಸಂಸ್ಥೆಗೆ  ಮುಖ್ಯ ಪಾತ್ರಧಾರಿ -ನಾಯಕ ನಟ ಆಗಿ ಆಯ್ಕೆಯಾಗುವ ಸಂದರ್ಭ.ಭವಿಷ್ಯದ ನಟ ತಾ ಎಂಬ ಕನಸು ಕಾಣುವ ಸಂದರ್ಭ..

3.ಇದ್ದಕ್ಕಿದ್ದಂತೆ  ಚಿತ್ರ ನಿರ್ಮಾಣ ನಿಂತು ಮೊದಲ ಚಿತ್ರವೇ ಪೂರ್ಣವಾಗದೆ -ಇತರರ  ಚಿತ್ರಗಳಿಗೂ ಬೇಡವಾಗಿ  ಅವರ ಕುಹಕ - ನಿಂದನೆ -ಮೂದಲಿಕೆ ಆ ನಂತರ ಚಿತ್ರ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವಾಗ ತಪ್ಪು ಆಗಿ   ಪ್ರಾಮುಖ್ಯವಲ್ಲದ  ಪಾತ್ರದಲ್ಲಿ ನಟಿಸುವ ಹಗೆ ಆಗುವುದು.

4.ಆನಂದಂ -ತಮಿಳ್ ಸೆಲ್ವಂ ಮೊದಲ ಭೇಟಿ-ಮಾತು ಕಥೆ-

5.ಆನಂದಂ ಖ್ಯಾತ ನಟ ಆಗುವ ಸಂದರ್ಭಗಳು-ತಮಿಳ್ ಸೆಲ್ವಂ ರಾಜಕೀಯ ಪ್ರವೇಶ.ಇಬ್ಬರ ಜೀವನದಲ್ಲೂ ಮದುವೆಯ ಅನಂತರವೂ  ಅದು ಗೊತ್ತಿದ್ದೂ ಆಗಮಿಸುವ- ಜೊತೆ ಇರಬಯಸುವ  ಹೆಣ್ಣುಗಳ ಸನ್ನಿವೇಶಗಳು..

6.ಸ್ನೇಹಿತನ ಒತ್ತಾಯಕ್ಕೆ ಮಣಿದು  ತಾನೂ ರಾಜಕೀಯಕ್ಕೆ ಸೇರುವ -ಸಭೆ ಸಮಾರಂಭಗಳಲ್ಲಿ  ತಮಿಳ್ ಸೆಲ್ವಂ-ಅಣ್ಣಾದೊರೈ ಗಿಂತಲೂ  ಹೆಚ್ಚಿನ  ಪ್ರಾಮುಖ್ಯತೆ ಗಳಿಸುವ -ಚಪ್ಪಾಳೆ ಗಿಟ್ಟಿಸುವ -ಅದ ನೋಡಿ ಅಣ್ಣ ದೊರೈ ಅಚ್ಚರಿ ಪಡುವ-ಕರುಣಾ ನಿಧಿ ತನಗೊಬ್ಬ ಶತ್ರು -ಹಿತ ಶತ್ರು -ತನ್ ಸ್ನೇಹಿತನ ರೂಪದಲಿ ಇರುವನು ಎಂದು  ಯೋಚಿಸುವ  ದೃಶ್ಯಗಳು .!

7.ಚುನಾವಣೆಯಲ್ಲಿ ಗೆದ್ದು  ಮುಖ್ಯಮಂತ್ರಿಯಾಗಿ ತಾನೇ ಸರ್ವಸಮ್ಮತ  ಆಗಿದ್ದರೂ  ಅದನ್ನು ನಿರಾಕರಿಸಿ ಅದನ್ನು ಗೆಳೆಯ ತಮಿಳ್ ಸೆಲ್ವಮ್ಗೆ ಕೊಡಿಸುವ ದೃಶ್ಯ.

8.ಮುಖ್ಯಮಂತ್ರಿಯಾಗಿ  ಅಧಿಕಾರ ರುಚಿ ಹತ್ತಿ-ತನ್ ಪಕ್ಷದೊಳು ತನಗೊಬ್ಬ  ಶತ್ರು ಇರುವನು ಎಂದು  ಆನಂದಂನನ್ನು ಕೇರ್ ಮಾಡದ ತಮಿಳ್ ಸೆಲ್ವಂ-ಆ  ಮಧ್ಯೆ ಅಣ್ಣ ದೊರೈ ಹಠಾತ್ ಮರಣ.ತಾನೇ ಪಕ್ಷದ ಮುಖ್ಯಸ್ಥ-ನಿರ್ಣಾಯಕ   ಆಗಲು ಹವಣಿಸುವ  ತಮಿಳ್ ಸೆಲ್ವಂ..

9.ಆನಂದಂ ನನ್ನು ದೂರ ದೂರ ಮಾಡುತ್ತಾ ಆದಸ್ಟು  ತುಳಿಯುತ್ತ  ಕೊನೆಗೆ ಪಕ್ಷದಿಂದಲೇ ಉಚ್ಚಾಟಿಸುವ -ಅದಕ್ಕೆ ಕೂಲ್ ಆಗಿ ಪ್ರತಿಕ್ರಿಯಿಸುತ್ತ ಆನಂದಂ   ತನ್ನ ರಾಜಕೀಯ ಪ್ರವೇಶ  ಶುರು ಮಾಡುವ  ದೃಶ್ಯಗಳು..

10.ಇಬ್ಬರೂ ತಂತಮ್ಮ ಮೂಲ ಉದ್ಧೇಶಗಳು -ತತ್ವಗಳು-ಆದರ್ಶಗಳು ಬಿಟ್ಟು ಆಧಿಕಾರಕಾಗಿ-ತಂತಮ್ಮ ಸ್ಥಾನ ಭಧ್ರ  ಪಡಿಸಿಕೊಳ್ಳಲು  ಒಬ್ಬರನ್ನೊಬ್ಬರು ಹಣಿಯಲು  ಬಳಸುವ  ತಂತ್ರಗಳು -ಮಾಡುವ ಕುತಂತ್ರ- ಮೋಸ...!ಸನ್ನಿವೇಶಗಳು..

11.ಆನಂದಂ ಚುನಾವಣೆಯಲ್ಲಿ ಜಯಭೇರಿ ಬಾರಿಸಿ -ತಮಿಳ್ ಸೆಲ್ವಂ ಪಕ್ಷ   ಸೋತು ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ  ತನ್ನ  ಮನೆಯಲ್ಲಿ ಕೂಲಾಗಿ ಮೊಮ್ಮಗನೊಡನೆ  ಆಟ ಆಡುವ -ಆ ಸಮಯದಲ್ಲಿ ಪಕ್ಷದವರೊಡನೆ  ಆಡುವ  ಮಾತುಗಳು..ನೀಡುವ ಪ್ರತಿಕ್ರಿಯೆಗಳು..

12. ಇಬ್ಬರೂ  ವಿಧಾನ ಸಭೆಯಲ್ಲಿ  ವಾಗ್ಯುದ್ಧ -ವಾಕ್ಸಮರ ನಡೆಸುವಾಗ  ಬರುವ ಕೆಟ್ಟ ಸುದ್ಧಿ ..

13.ಸತ್ತ ತನ್ನ ಹೆಂಡತಿ  ಈಗ ಮತ್ತೆ ಯುವ  ಚಿತ್ರ ನಟಿಯ(ಐಶ್ವರ್ಯ ರೈ ) ಅದೂ ಥೇಟ್ ಅದೇ ರೂಪದಲಿ  ತನ್ನೊಡನೆ ನಟಿಸುವಾಗ- ಆನಂದಂಗೆ ಆಗುವ ಅನುಭೂತಿ..!!

14.ಅಣ್ಣಾದೊರೈ ಅಕಾಲಿಕ ಹಠಾತ್  ಮರಣ-ಪಕ್ಷದ ಸೂತ್ರಧಾರ  ಯಾರು ಆಗಬೇಕು ಎಂದು  ಪಕ್ಷದಲ್ಲೇ ಒಡಕು ಆಗುವ ಸಂದರ್ಭ-

15.ಅಣ್ಣಾದೊರೈ  ತಿಥಿ ಸಂದರ್ಭದಲ್ಲಿ  ಬಹಿರಂಗವಾಗಿ  ಪಕ್ಷ-ಕೆಲ ವ್ಯಕ್ತಿಗಳು ಮೂಲ ಉದ್ಧೇಶ -ತತ್ವ ಮರೆತು ಅಧಿಕಾರ ವ್ಯಾಮೊಹದಲ್ಲಿರುವರು ಎಂದು ಆನಂದಂ ಹೇಳುವ -ತಮಿಳ್ ಸೆಲ್ವಂ ಗರಂ ಆಗುವ ದೃಶ್ಯಗಳು.

16.ಆನಂದಂ ಹಠಾತ್ ಉಚ್ಚಾಟನೆ -ಆಗ ಆನಂದಂಗೆ ಆಗುವ ಆಘಾತ-ತನ್ನ ನಂಬಿಕೆಗೆ ಆದ ದ್ರೋಹ -ಆ ಮಧ್ಯೆ ಈ ಬಗ್ಗೆ ಅಭಿಪ್ರಾಯ ಕೇಳಿ ಸಂದರ್ಶನ ಮಾಡಲು ಬಂದ ಮಾಧ್ಯಮ ಪ್ರತಿನಿಧಿಗಳಿಗೆ  ನಗುನಗುತ್ತ  ಸಂದರ್ಶನ ನೀಡಿ ಮನದಲ್ಲಿ  ಆಂದೋಲನವೆದ್ದರೂ ನಗುತ  ನಗೆ ಚಟಾಕಿ  ಹಾರಿಸುತ್ತ  ಪಾಯಸ ನೀಡಿ ಸತ್ಕರಿಸುವ  ಮಾಧ್ಯಮದವರನ್ನು  ಮಿತ್ರರನ್ನಾಗಿ ಮಾಡಿಕೊಳ್ಳುವ  ಸನ್ನಿವೇಶ.!!

17.ಒಬ್ಬರನ್ನೊಬ್ಬರು ಹಣಿಯಲು -ಅಧಿಕಾರಕೆ ಬರಲು-ಅಧಿಕಾರ ತಪ್ಪಿಸಲು ಪಡುವ  ಶ್ರಮ-ಪ್ರಯತ್ನಗಳು -ಇಬ್ಬರ ಹೆಂಡತಿಯರು -ಪ್ರೇಯಸಿ  ತಮ್ಮವರ ಬದಲಾದ ಮನೋಸ್ಥಿತಿ -ಅಧಿಕಾರ ಮೋಹ -ಅಸಹನೆ ಬಗ್ಗೆ  ಪ್ರಶ್ನಿಸುವಾಗ  ಆನಂದಂ -ತಮಿಳ್ ಸೆಲ್ವಂ ನೆಡುವ ಸಮಜಾಯಿಷಿ -ಸೃಷ್ಟೀಕರಣಗಳು..!

18.ವಿಧಾನ ಸಭೆಯಲ್ಲಿ  ಆನಂದಂ-ತಮಿಳ್ ಸೆಲ್ವಂ ಎದುರು ಬದುರಾಗಿ ಕುಳಿತು -ಎದ್ದು ನಿಂತು ವಾಗ್ಯುದ್ಧ ನಡೆಸುವ -ದೃಶ್ಯಗಳು ಆ ಕಣ್ಣೋಟ.....!

19.ನೈಸರ್ಗಿಕ ಅವಘಡದಲಿ ಮೃತರಾದವರ -ಮನೆ ಮಠ ಕಳೆದುಕೊಂಡವರ  ಬಗ್ಗೆ ಪ್ರತ್ಯಕ್ಷ ನೋಡಲು ಬಂದು  ಆ ಸಮಯದಲ್ಲೇ  ಅದೊಮ್ಮೆ  ತನ್ ಧಿಕಾರ ದಾಹ-ವ್ಯಾಮೋಹದಿಂದ ದೂರಾಗಿದ್ದ  ಯುವ ನಟಿ (ಐಶ್ವರ್ಯ ರೈ -ಜಯಲಲಿತಾ )ಯನ್ನ ಕಾಣುವದು -ಅವಳು ಮತ್ತೊಮ್ಮೆ ಜೀವನದಲ್ಲಿ ಪ್ರವೇಶಿಸುವ-ದೃಶ್ಯಗಳು.

20.ಚಿತ್ರೀಕರಣದಲ್ಲಿ ಗುಂಡು ತಗುಲಿ ಜೀವನ್ಮರಣದ ಮಧ್ಯೆ ಹೋರಾಡಿ ಗೆದ್ದು ಬಂದರೂ  ಏನೋ ಕಳೆದುಕೊಂಡ  ಭಾವದ  ಆನಂದಂ ..!

21. ಕೊನೆಯ ಬಾರಿಗೆ ಆನಂದಂ ಮತ್ತು ತಮಿಳ್ ಸೆಲ್ವಂ  ಮದುವೆ  ಒಂದರಲ್ಲಿ ಭಾಗಿಯಾಗಿ  ಪರಸ್ಪರ  ಮಾತಾಡುತ್ತ  ಆಗಲೂ ಇಬ್ಬರೂ ಇಗೋ ವ್ಯಕ್ತಪಡಿಸುವ -ಇವರ ಮರು  ಸೇರುವಿಕೆ ಕಂಡು ಕಣ್ಣುದುಂಬಿ ಬರುವ ಜನ-ಆ ಸನ್ನಿವೇಶವನ್ನು ಸೆರೆ ಹಿಡಿಯಲು ಮುಗಿ ಬೀಳುವ  ಮಾಧ್ಯಮದವರು .ಒಂಥರಾ ಆಘಾತದಿಂದ  ಹೃದಯಾಘಾತಕ್ಕೆ ಈಡಾಗಿ ಆಸ್ಪತ್ರೆ ಸೇರಿ ಮರಣಿಸುವ  ಆನಂದಂ.

22.ಗೆಳೆಯನನ್ನು ನೋಡಬೇಕು ಎಂದು ಬಂದು  ನೋಡಲು ಆಗದೆ  ಚಡಪಡಿಸುವ  ತಮಿಳ್ ಸೆಲ್ವಂ.ಅದೊಮ್ಮೆ ತಾವಿಬ್ಬರೂ ಸೇರಿದ್ದ -ಮಾತಾಡಿದ ಓಡಾಡಿದ್ದ ಜಾಗದಲ್ಲಿ ಒಬ್ಬನೇ ಕುಳಿತು ಹಾಡು ಹಾಡುವ ಗೆಳೆಯನಿಗೆ ಸಂತಾಪ ವ್ಯಕ್ತಪಡಿಸುವ  ತಮಿಳ್ ಸೆಲ್ವಂ,

23.ಆನಂದಂ ಅಂತಿಮ ಯಾತ್ರೆಯಲ್ಲಿ ಇಕ್ಕೆಗಳಲ್ಲಿ ಸೇರಿರುವ -ಹೂ ಎರಚುವ -ತಮ್ಮ ಅಭಿಮಾನದ ನಟ-ರಾಜಕರಣಿಯ  ನಿಧನ ಸಹಿಸಲು ಆಗದೆ ರೋಧಿಸುತ್ತಿರುವ ಜನಸ್ತೋಮ..- ಇದು  ನಮಗೆ ಡಾ:ರಾಜಕುಮಾರ  ಅವರ ಅಂತಿಮ ಯಾತ್ರೆಯನ್ನು ನೆನಪಿಸದೆ ಇರದು...

>>>>ಚಿತ್ರ ನೋಡಿ ಮುಗಿಸಿದ ಮೇಲೆ  ನನಗೆ  ಅನ್ನಿಸಿದ್ದು:

ಈ ಚಿತ್ರದಲ್ಲಿ ಎಂ ಜೀ ಆರ್ ಅವರನ್ನು  ಸಾಫ್ಟ್ ಆಗಿ ತೋರಿಸಿ  ಕರುಣಾನಿಧಿ ಅವರನ್ನು  ಒಂಥರಾ ವಿಲನ್  ತರಹಾ ತೋರಿಸಿರುವರು ಅಂತಾ...!

>>>>>> ಮಲಯಾಳಿ ಬಾಬು -ಎಂ ಜೀ ಆರ್  ತಮಿಳುನಾಡಲ್ಲಿ  ಜನಪ್ರಿಯ ನಟ ಆಗಿ-ರಾಜಕಾರಣಿಯಾಗಿ  ಯಶಸ್ವಿಯಾದದ್ದು.ಜನರ ಅಭಿಮಾನ  ಗಳಿಸಿ ಇಂದಿ

ಗೂ ತಮ್ಮ ಜನಪ್ರಿಯತೆ ಉಳಿಸಿಕೊಂಡಿರುವುದು..

>>>>>ಮಲಯಾಳಿ ನಟ ರಾಜಕಾರಣಿ -ಪಾತ್ರಕ್ಕೆ ಮಲಯಾಳಿ ಪ್ರತಿಭಾವಂತ ನಟ  ಮೋಹನ ಲಾಲ್ ಅವರನ್ನೇ ಆಯ್ಕೆ ಮಾಡಿದ ನಿರ್ದೇಶಕರ ಜಾಣತನ.

>>>>>>>>> ಕರುಣಾ ನಿಧಿ ಪಾತ್ರದಲ್ಲಿ ಕನ್ನಡಿಗ  ಪ್ರಕಾಶ್ ರೈ  ನಟನೆ ಸೂಪರ್ -ಇದೇ  ಮಾತು ಮೋಹನ್ ಲಾಲ್ ಅವರಿಗೂ ಅನ್ವಯ...

>>>ಕಾಲಾಪಾನಿ  ಚಿತ್ರದ ನಂತರ  ಮೋಹನ್ ಲಾಲ್ ಅವ್ರಿಗೆ ದೊರೆತ  ಅತ್ಯುತ್ತಮ ಪಾತ್ರ-ಅವರಿಂದ ಅತ್ಯುತ್ತಮ ನಟನೆ..

>>>>>  ಚಿತ್ರದ ಪಾತ್ರವರ್ಗದಲ್ಲಿ ಅದಕ್ಕೆ ತಕ್ಕುದಾದವರನ್ನ  ಆಯ್ಕೆ ಮಾಡಿರುವ ನಿರ್ದೇಶಕರ  ಜಾಣತನ-ನಟರ ನಟನೆ ಸೂಪರ್..

>>>>>> ಈ ಚಿತ್ರ ಆದಸ್ಟು  ಎಂ ಜೀ ಆರ್  ಮತ್ತು ಕರುಣಾನಿಧಿ ಅವರ ಗೆಳೆತನ -ಬೆಳವಣಿಗೆ- ಮತ್ಸರ-ಗಳ ಬಗ್ಗೆ  ತೋರಿಸಲು ಸಾಧ್ಯವಾಗಿಸಲು  ಪ್ರಯತ್ನಿಸಿದ  ನಿರ್ದೇಶಕರ ಪ್ರಯತ್ನ  ತಕ್ಕ ಮಟ್ಟಿಗೆ ಯಶಸ್ವಿಯಾಗಿದೆ..

>>>>> ಚಿತ್ರ ತೆಗೆವಾಗ-ತೆಗೆದ ನಂತರ ಅಂದಿನ ರಾಜಕಾರಣಿಗಳು-ಅಭಿಮಾನಿಗಳು  ಹಲವು ಹೋರಾಟ ಮಾಡಿ -ಕಥೆಯಲಿ-ಬದಲಾವಣೆಗೆ -ಕೆಲವು ಕಟ್ ಸನ್ನಿವೇಶಗಳಿಗೆ  ಆಗ್ರಹಿಸಿ  ನಿರ್ದೇಶಕರಿಗೆ  ತೊಂದರೆ ಕೊಟ್ಟದ್ದು ಉಂಟು..! ಅದರ ಪರಿಣಾಮ ಚಿತ್ರ ನೋಡುವಾಗ  ಕೆಲವೊಮ್ಮೆ ಏನೂ ಕೇಳಿಸದು-ಇನ್ನು ಕೆಲವು ಕಡೆ   2ನೆ ಮೆಟ್ಟಿಲಿನಿಂದ ನೇರ 3-4-5ಕೆ  ಜಿಗಿವ ಅನುಭವ..:ಸೆನ್ಸಾರ್ ಕಟ್..!!

ಇಡೀ ಚಿತ್ರದ   ಪಾತ್ರವರ್ಗ -ತಂತ್ರಜ್ಞರು -ತಂಡ  ಪಟ್ಟಿರಬಹುದಾದ ಶ್ರಮ ಚಿತ್ರದಲ್ಲಿ ಗೋಚರವಾಗುವುದು.

ಒಬ್ಬ ಮೃತ  ನಟ-ರಾಜಕಾರಣಿ-ಬದುಕಿರುವ  ಅವನ ಪ್ರೇಯಸಿ -ಕಂ-ರಾಜಕಾರಣಿ-ಮತ್ತೊಬ್ಬ ಸಹವರ್ತಿಯ ಬಗ್ಗೆ ಚಿತ್ರ ತೆಗೆವದು -ಅದೂ ಯಾರೊಬ್ಬರ  ಭಾವನೆಗಳಿಗೂ ಧಕ್ಕೆ ಬಾರದಂತೆ-ಮತ್ತು ಕಮರ್ಷಿಯಲ್ ಆಗಿ ಸಕ್ಸಸ್ ಆಗುವಂತೆ  ಮಾಡುವದು ಸುಲಭದ ಮಾತಲ್ಲ.ಮಣಿ ರತ್ನಂ ಈ ಚಿತ್ರಕ್ಕಾಗಿ ಪಟ್ಟ ಶ್ರಮ ತೆರೆ ಮೇಲೆ ಕಾಣಿಸದೆ ಇರದು...

ಆದರೆ  ಚಿತ್ರ ಬಿಡುಗಡೆ-ಮೊದಲು ನಂತರ ಈ ಚಿತ್ರವನ್ನು ಆದಸ್ಟು  ಹತ್ತಿಕ್ಕುವ ಜನರಿಗೆ ನೋಡಲು ದೊರಕದ  ಹಾಗೆ ಮಾಡಲು  ಹಲವರು ಪ್ರಯತ್ನಿಸಿ ಸಫಲರೂ ಆದರು..! 

ಚಿತ್ರ ಸುದ್ಧಿ ಮಾಡಿದಸ್ಟು  ಸದ್ಧು ಮಾಡದೆ ಇರಲು ಬಹುಶ  ಅದೇ ಕಾರಣ ಅನ್ಸುತ್ತೆ...!

ಆದರೂ ತಮಿಳುನಾಡಿನ  ರೋಚಕ ಘಟನಾವಳಿಗಳ  ಅದಕ್ಕೆ ಸಂಬಂಧಿಸಿದವರ  ಬಗ್ಗೆ ಈ ತರಹದ ಚಿತ್ರ ತಯಾರಿಸಿದ ಮಣಿ ರತ್ನಂ  ಅವರ ಧೈರ್ಯ -ಸಾಹಸ -ಪ್ರಯತ್ನ ಮೆಚ್ಚತಕ್ಕದ್ದೇ..

ಈ ಚಿತ್ರ ತಮಿಳಲ್ಲಿ  ಇರುವರ್ ಎಂದು ತೆಲುಗಲ್ಲಿ  ಇದ್ದರು (ಇಬ್ಬರು) ಎಂದು ಆಂಗ್ಲ ಭಾಷೆಯಲ್ಲಿ  ಡ್ಯೂಯೋ ಎಂದು  ಬಿಡುಗಡೆ ಆಗಿದೆ..

ಯೂಟೂಬ್ನಲ್ಲಿ  ತೆಲುಗು ತಮಿಳಲ್ಲಿ ನೋಡಲು ಸಿಗುತ್ತೆ..

 

>>>>>ಚಿತ್ರದಲ್ಲಿ  ಯಾವುದೇ ಮುಜುಗರದ ಸನ್ನಿವೇಶಗಳು ಇಲ್ಲ..!!

ಆದರೆ ಈ  ಚಿತ್ರವನ್ನು ಮಾಮೂಲಿ ಚಿತ್ರಗಳ ರೀತಿ ನೋಡಲು ಆಗುವುದಿಲ್ಲ..!

ಅದಕ್ಕೆ ಕಾರಣ ಇದರ ಕಥಾ ವಸ್ತು ಮತ್ತು ನಿರ್ದೇಶಕರು  ತೆಗೆದ ರೀತಿ..!!

ಹೀಗಾಗಿ ಅಪಾರ ತಾಳ್ಮೆ  ಶ್ರದ್ಧೆ-ಆಸಕ್ತಿಯಿಂದ  ನೋಡಿದರೆ ಇಷ್ಟ ಆಗದೆ ಇರದು...

ಯೂಟೂಬ್ ಲಿಂಕ್:

 

 

 

 

 

 

 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.