Skip to main content

ಹುಡುಗರು ಗುಂಪು ಸೇರಿ ಹರಟೆ ಹೊಡೆಯುವಾಗ ಒಂದು ಹುಡುಗಿ ಅವರ ಮುಂದೆ ಹಾದು ಹೋದರೆ
ಅದರಲ್ಲಿ ಒಬ್ಬ ಒಂದು ಕಮೆಂಟು ಹೇಳಿ ಆಗಿರುತ್ತದೆ. ಹುಡುಗಿ ಸೂಪರ್, ಅಥವಾ ಪರ್ವಾಗಿಲ್ಲ
ಅಥವಾ ನಮ್ಮ ಟೇಸ್ಟ್ ಗೆ ಸರಿ ಹೊಂದಲ್ಲ. ಎಲ್ಲಾ ಸಮಯದಲ್ಲಿ ಹೀಗೆ ಬಾಯಿ ಬಿಟ್ಟು
ಹೇಳದಿದ್ದರೂ ಮನಸ್ಸಿನಲ್ಲಿಯಾದರೂ ಯೋಚಿಸುತ್ತಾರೆ. ಗಂಡು ಒಂದು ಹೆಣ್ಣನ್ನು ಪ್ರಥಮ
ಬಾರಿಗೆ ನೋಡುವಾಗ ಈ ಕೆಳಗಿನ ಅಂಶಗಳನ್ನು ಗಮನಿಸುತ್ತಾನೆ.

1. ಮೈಮಾಟ: ಆಕರ್ಷಕವಾದ
ಮೈಮಾಟ ಹೊಂದಿದ್ದಾರೆಯೆ ಎಂದು ತಕ್ಷಣ ಗಮನಿಸುತ್ತಾನೆ. ನೋಡುವ ಹುಡುಗಿ ತುಂಬಾ
ದಪ್ಪವಿದ್ದರೆ ಮೊದಲ ನೋಟದಲ್ಲಿಯೆ ಅವಳೆಡೆಗೆ ಆಕರ್ಷಿತವಾಗುವ ಛಾನ್ಸ್ ಕಡಿಮೆ.

2. ಕೂದಲು: ಉದ್ದದ ಕೂದಲಿರುವ ಹೆಣ್ಣು ಗಂಡಿಗೆ ಬೇಗನೆ ಇಷ್ಟವಾಗುತ್ತಾಳೆ. ತುಂಬಾ ಗಿಡ್ಡ ಕೂದಲಿಗಿಂತ ಆಕರ್ಷಕವಾಗಿರುವ ಕೂದಲಿನ ಒಡತಿ ಇಷ್ಟವಾಗುತ್ತಾಳೆ.

3. ಕಣ್ಣು: ಆಕರ್ಷಕ ನಯನ ಪುರುಷರನ್ನು ಬೇಗನೆ ಆಕರ್ಷಿಸುತ್ತದೆ. ಎಷ್ಟೊ ಹುಡುಗರು ಹುಡುಗಿಯರ ಕಣ್ಣಿನ ಅಂದಕ್ಕೆ ಮರುಗಿ ಪ್ರೀತಿಯಲ್ಲಿ ಬೀಳುತ್ತಾರೆ.

4. ಸೆಂಟ್: ಹೆಣ್ಣು
ಪಕ್ಕದಲ್ಲಿ ನಿಂತು ಮಾತನಾಡುವಾಗ ಅವಳು ಹಾಕಿದ ಸೆಂಟ್ ಗಮನಿಸುತ್ತಾಳೆ. ಘಾಟು ವಾಸನೆ
ಸುಗಂಧ ದ್ರವ್ಯಕ್ಕಿಂತ ಮೃದು ವಾಸನೆಯ ಸುಗಂಧ ದ್ರವ್ಯ ಪುರುಷರಿಗೆ ಹೆಚ್ಚು
ಇಷ್ಟಾಗುತ್ತದೆ.

5. ಡ್ರೆಸ್ಸಿಂಗ್: ಡ್ರೆಸ್ಸಿಂಗ್ ಅವರ
ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ. ಹೆಚ್ಚಿನ ಹುಡುಗರಿಗೆ ಕಮೆಂಟ್ ಮಾಡುವಾಗ
ಅರ್ಧ ಬಟ್ಟೆ ಧರಿಸಿದ ನಾರಿ ಇಷ್ಟವಾದರೆ ನೀಟಾಗಿ ಡ್ರೆಸ್ ಮಾಡಿದ ಹುಡುಗಿ ಮನಸ್ಸಿಗೆ
ಇಷ್ಟವಾಗುತ್ತಾಳೆ.

6. ಹೀಲ್ಸ್: ಪುರುಷರು ಮಹಿಳೆಯರ
ಪಾದುಕೆಗಳನ್ನು ಬೇಗನೆ ಗಮನಿಸುತ್ತಾರೆ. ಎತ್ತರದ ಚಪ್ಪಲಿ ಧರಿಸಿದರೆ ಪುರುಷರಿಗೆ
ಇಷ್ಟವಾಗುತ್ತದೆ. ಆದರೆ ಮಹಿಳೆ ಹೀಲ್ಸ್ ಧರಿಸಿದಾಗ ಅವರಿಗಿಂತ ಎತ್ತರ ಕಂಡರೆ ಸ್ವಲ್ಪ
ಅಹಂ ಅಡ್ಡ ಬರುತ್ತದೆ.

ಪ್ರಿಯ ವಿಸ್ಮಯ ಗೆಳೆಯರೆ ನಿಮಗೆನಾದರು ಬೇರೆ ಗೊತ್ತಿದ್ದರೇ ದಯವಿಟ್ಟು ನನಗು ತಿಳಿಸಿ...

                                                                                       -ಸತೀಶ್ ಎಸ್ ಗೌಡ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 830 views