Skip to main content

ಬರೆಯದಿರು ಈ ಕಥೆಯ

ಇಂದ rashmi.n
ಬರೆದಿದ್ದುJuly 10, 2012
noಅನಿಸಿಕೆ

          ಹೇಗೆ ಬರೆಯಲಿ ನಾನು ಈ ಕಥೆಗೆ ಮುನ್ನುಡಿಯ


          ಬರೆಯದಿರು ಈ ಕಥೆಯ ಬಾಳ ಕಥೆಗಾರಾ


          ಆದಿಯಲಿ ನೀನಿರುವೆ ತಂಗಾಳಿ ಮೈಸವರಿ


          ಮೊದಲ ಮಳೆ ಸ್ಪರ್ಶಕ್ಕೆ ಬೆರಗಾದ ಇಳೆಯಂತೆ


          ಮೇಘರಾಜನ ಇರುವು , ನವಿಲ ಹಿಂಡಿನ ನೃತ್ಯ


          ನಿನ್ನ ಕಲ್ಪನೆಯಲ್ಲಿ ಚಿರ ಹಸಿರು ಭೂಮಿ


          ನನ್ನ ಕಣ್ಮುಂದಿಹುದು ಕಥೆಯ ಅಂತ್ಯದ ಗ್ರೀಷ್ಮ


          ಹೊತ್ತಿ ಹೋಗಿಹ ಮನಸು, ಬತ್ತಿ ಹೋಗಿಹ ಕನಸು


          ಕಣ್ಣೀರಿನಲಿ ಬರಹ ಅಳಿಸಿ ಹೋಗುವ ಮುನ್ನ


          ನಿಟ್ಟುಸಿರಿನಲಿ ಸಿಲುಕಿ ಉರಿದು ಹೋಗುವ ಮುನ್ನ


          ಬರೆಯದಿರು ಹರಿದುಬಿಡು ಪ್ರೇಮ ಕಥೆಗಾರಾ

ಲೇಖಕರು

rashmi.n

ಸರಳ ಹಾಗೂ ನೆಮ್ಮದಿಯ ಬದುಕು ನನ್ನದು.
ಕವಿತೆಗಳನ್ನು ಗೀಚುವುದು, ಓದುವುದು ನನ್ನ ಹವ್ಯಾಸ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.