Skip to main content

ನಿನ್ನ ಒಲವೇ ಸ್ವರ್ಗ

ಇಂದ rashmi.n
ಬರೆದಿದ್ದುJune 29, 2012
noಅನಿಸಿಕೆ

   ಬಿಕ್ಕಳಿಸೆ ಸಾಂತ್ವನಕೆ ನಲ್ಲ ನಿನ್ನಯ ಎದೆಯು


   ಮುಗ್ಗರಿಸೆ ಆಸರೆಗೆ ಬೇಕು  ನಿನ್ನದೆ ಹೆಗಲು


  ಮುನಿಸು ಕರಗಲು ಸಾಕು ನಿನ್ನೊಂದು ನಗೆ ಮುಗುಳು


  ಕನಸು ನಿನ್ನದೇ ತಾನೇ ನನಗೆ ಹಗಲೂ ಇರುಳು


  ನಿನ್ನ ಅಂಗೈ ಬಿಸುಪು ನನ್ನ ಹಣೆಮೇಲಿರಲು


  ಯಾವ ನೋವನೂ ಜಯಿಸಿ ಎದ್ದು ಬರುವೆನು ಮೆಲ್ಲ


 ನಮ್ಮ ಹುಸಿಮುನಿಸುಗಳ  ನಡುವೆ ತುಸು ತುಂಟತನ


  ಕೊರತೆಗಳ ಒಪ್ಪುತಲೇ ಬಾಳುವುದೇ ಜಾಣತನ


  ದೊಡ್ದ ಆಸೆಗಳಿಲ್ಲ  ಪುಟ್ಟ ಕನಸುಗಳಷ್ಟೇ


  ನೀನು ಎಂದಿಗೂ ಕೂಡಾ ಜೊತೆಯಲಿರಬೇಕಷ್ಟೇ


  ನಾನೂ ಜೊತೆಯಲಿ ದುಡಿವೆ ಸಂಸಾರ ನೊಗವೆಳೆಯೆ


  ನಿನ್ನ ಕೈಯಲಿ ಕೈಯನಿತ್ತು  ನಡೆವೆನು ಜೊತೆಗೆ


 

ಲೇಖಕರು

rashmi.n

ಸರಳ ಹಾಗೂ ನೆಮ್ಮದಿಯ ಬದುಕು ನನ್ನದು.
ಕವಿತೆಗಳನ್ನು ಗೀಚುವುದು, ಓದುವುದು ನನ್ನ ಹವ್ಯಾಸ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.