Skip to main content

ಕವಿತೆ ಹುಟ್ಟುವುದೆಂತು?

ಇಂದ rashmi.n
ಬರೆದಿದ್ದುJune 15, 2012
noಅನಿಸಿಕೆ

   ಕವಿಯೆದೆಯ ಸಾಗರದಿ ಭಾವ ಉಕ್ಕೇರಿರಲು


   ಲೇಖನಿಯ ಮೊನೆಯಲ್ಲಿ ಮೂಡಿ ಬರುವುದು ಕವಿತೆ


  ಕಲ್ಪನೆಯ ಕುದುರೆಯದು ಜಿಗಿದು ಕೆನೆಯುತಲಿರಲು


  ಖುರಪುಟದ ದನಿಯಲ್ಲಿ ಕೇಳಿಬರುವುದು ಕವಿತೆ


  ಹೃದಯಗಳ ನಡುವಿನಲಿ ಪ್ರೇಮಸೇತುವೆಯಿರಲು


  ಕನಸುಗಳ ವಿನಿಮಯದ ಹೆಜ್ಜೆ ಗುರುತದು ಕವಿತೆ


  ವಿರಹಿಗಳ ನಿಟ್ಟುಸಿರು ಕವಿಯ ಹೃದಯವ ಸೋಕೆ


  ಲೇಖನಿಯ ಕಣ್ಣೀರ ಹನಿ ಹನಿಯೇ ಕವಿತೆ


  ತಾಯ್ತನದ ಸುಖದಲ್ಲಿ ಮಾತೃವಾತ್ಸಲ್ಯದೊಳು


  ಮಧುರ ಜೊಗುಳವಾಗಿ ಹೊರಹೊಮ್ಮುವುದು ಕವಿತೆ


  ಹಾಲುಂಡು ತೊಟ್ಟಿಲಲಿ ಸುಖನಿದ್ದೆಯಲ್ಲಿರಲು


  ಮಗುವಿನಲಿ ನಗುವಾಗಿ ಮಿಂಚುತಿರುವುದೇ ಕವಿತೆ

ಲೇಖಕರು

rashmi.n

ಸರಳ ಹಾಗೂ ನೆಮ್ಮದಿಯ ಬದುಕು ನನ್ನದು.
ಕವಿತೆಗಳನ್ನು ಗೀಚುವುದು, ಓದುವುದು ನನ್ನ ಹವ್ಯಾಸ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.