ಬಸವಣ್ಣ ಮಾದಿಗನೇ!! ??
ಹೌದು ಅಚ್ಚರಿಯಾದರೂ ಇದು ಸತ್ಯ ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ
ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು.ಎಂಬ ಮಾತಿದೆ ಆದರೆ ನಾವು ಯೋಚಿಸ ಬೇಕಾದದ್ದು
ಅವರ ಮೂಲ ಜಾತಿಯ ಬಗ್ಗೆ , ಕೆಲವು ಮೂಲಗಳ ಪ್ರಕಾರ ಅವರದು ಮೂಲ ಬ್ರಾಹ್ಮಣ ಕುಟುಂಬ ಎಂಬ
ಮಾತಿದೆ ಆದರೆ ಅದಕ್ಕೆ ತಕ್ಕುದಾದ ಸಾಕ್ಷಿ ಪುರಾವೆಗಳಿಲ್ಲ, ಬಸವಣ್ಣನವರಿಗೆ
ಸಂಬಂದಿಸಿದಂತೆ ಎರಡು ಶಾಸನಗಳಲ್ಲಿ ಮಾತ್ರ ಉಲ್ಲೇಖವಿದೆ.
ಆ ಶಾಸನದಲ್ಲಿ ಉಕ್ತವಾಗಿರುವ
'ಮುನಿಪ' ಸಂಸ್ಕೃತಿಯ ಕುರುಹುಗಳನ್ನು ಹಿಂಬಾಲಿಸಿ, ಅವು ಬಸವಣ್ಣನ ಜಾತಿ ಮೂಲವನ್ನು ಮಾದಿಗ ಕುಲ ಪರಂಪರೆಯತ್ತ ಬೊಟ್ಟು ಮಾಡುತ್ತವೆ, ಕಾಲ
ಕ್ರಮೇಣ ರಾಜಕೀಯ ಪ್ರೇರಿತವಾಗಿ ಅಥವಾ ರಾಜಕಾರಣದ ಪ್ರಭಾವ ವಲಯಕ್ಕೆ ಸಿಕ್ಕಿಯೇ, ಮುಂದೆ
ರಚಿತಗೊಂಡ ಸಾಹಿತ್ಯದಲ್ಲಿ ಬಸವಣ್ಣ
ಬ್ರಾಹ್ಮಣನೆಂದು ನಿರೂಪಿತವಾಗಿರಬಹುದು, ಇದೆಲ್ಲವುಗಳ ಆಧಾರದ ಮೇಲೆ, ಬಸವಣ್ಣನ ಕಾಲದಲ್ಲಿ
ಕರ್ನಾಟಕದ ಆ ಪ್ರದೇಶದಲ್ಲ್ಲಿ
ಪ್ರಬಲವಾಗಿದ್ದ ಅವೈದಿಕ ಆಗಮ ಶಾಸ್ತ್ರಾಚಾರಗಳಿಗಿದ್ದ (ಕಾಪಾಲಿಕ, ಕಾಳಾಮುಖ ಇತ್ಯಾದಿ)
ಸಾಮಾಜಿಕ ಮಾನ್ಯತೆಯ ಹಿನ್ನೆಲೆಯಲ್ಲಿ, ಆತ ಮಾದಿರಾಜನ 'ಕರಸಂಜಾತ'ನಾದ
'ಸಿಸುಮಗ'ನಾಗಿದ್ದುದು ಹೆಚ್ಚು ನಂಬಲರ್ಹ ಸಂಗತಿಯಾಗಿದೆ,
ಬಂಜಗೆರೆ ಜಯಪ್ರಕಾಶರವರು ಬಸವಣ್ಣನವರು ಮಾದಿಗನೆಂಬುದಕ್ಕೆ ಹಲವು ನಿದರ್ಶನಗಳನ್ನು ನೀಡುತ್ತಾರೆ,
1. ಬಸವ ಎಂಬ ಹೆಸರು ಮತ್ತು ಅದರ ಏಕವಚನ ಸಂಬೋಧನೆ ಸಂಪೂರ್ಣ ಬ್ರಾಹ್ಮಣೇತರ ಮೂಲದ್ದಾಗಿದೆ
ಹಾಗೂ ಬಸವಣ್ಣ ಮಾದಾರ ಚೆನ್ನಯ್ಯನನ್ನು ತನ್ನ ಕುಲದ ಮೂಲಪುರುಷನೆಂದು ತನ್ನ ವಚನಗಳಲ್ಲಿ
ಪದೇ ಪದೇ ಮತ್ತು ವಿವಿಧ ರೀತಿ-ನೀತಿಗಳಲ್ಲಿ ನಿವೇದಿಸಿಕೊಂಡಿದ್ದಾನೆ.
2. ಬಸವಣ್ಣನಿಗೆ ಹುಟ್ಟಿನಲ್ಲೇ ಶಿವದೀಕ್ಷೆಯಾಗಿತ್ತು ಎಂಬ ನಂಬಿಕೆ ಹಾಗೂ ಉಲ್ಲೇಖಗಳು ಆತ
'ದೇವರ ಮಗ'ನೆಂದು ಸೂಚಿಸುತ್ತಿದ್ದು; ಅದು, ಆತ ಆಗಮಶಾಸ್ತ್ರದ ಪ್ರಕಾರ ದೀಕ್ಷೆ ಪಡೆದ
ನಂತರವಷ್ಟೇ ಆ ಕಾಲದ ಆಚಾರದಂತೆ 'ಬ್ರಾಹ್ಮಣ'ನಾಗಿ 'ಜಾತ್ಯಂತರ'ನಾದನೆಂಬುದನ್ನೂ
ಹೇಳುತ್ತದೆ.
3. 'ಸಿಸು ಮಗ'ನನ್ನು ಪಡೆಯುವ ಆಗಮ ಯೋಗಾಚಾರ, ಮಾತೃಪ್ರಧಾನವಾದ ಮಾದಿಗ ಪರಂಪರೆಗೆ
ಸೇರಿದ್ದೆಂಬುದನ್ನು ಸಾಂಸ್ಕೃತಿಕ ಅಧ್ಯಯನಗಳು ದೃಢಪಡಿಸುತ್ತವೆ. ಹಾಗೇ, ಮಾದಲಾಂಬಿಕೆಯ
ತಾಯಿಯ ಮನೆ ಇಂತಹ ಯೋಗಾಚಾರದ ಅನೇಕ ಸಿದ್ಧರ ನೆಲೆಯಾಗಿತ್ತು ಎಂಬುದೂ ಚರಿತ್ರೆಯಿಂದ
ತಿಳಿದು ಬರುತ್ತದೆ
ಇದಕ್ಕೆ ಪೂರಕವಾಗಿ
ವಾಯುವ್ಯ ಕರ್ನಾಟಕದಲ್ಲಿ ಆಗ ಆರ್ಥಿಕ ಉತ್ಕರ್ಷಕ್ಕೆ ಬಂದಿದ್ದುವೆಂದು ಹೇಳಲಾದ
ಕುಶಲಕರ್ಮಿ ಜಾತಿಗಳ ಎಡ ಹಾಗೂ ಬಲ ಪಣಕಟ್ಟುಗಳ ವಿಂಗಡಣೆ ಹಾಗೂ ಆ ವಿಂಗಡಣೆಯ
ಪರಿಣಾಮದಿಂದುಂಟಾದ ಜನಿವಾರ ಸಹಿತವಾದ ಹೊಸ ಅಸ್ಪೃಶ್ಯ ಜಾತಿಗಳ ನಿರ್ಮಾಣ; ಕಲ್ಯಾಣ
ಕ್ರಾಂತಿಯ ನಂತರ ನಡೆದ ಮಾದೇಶ್ವರ, ಗೋಣಿ ಬಸವೇಶ್ವರ, ಮಂಟೇಸ್ವಾಮಿ, ಮರುಳಸಿದ್ಧರ
ನೇತೃತ್ವದ ಕೆಳ ಜಾತಿಗಳ ಆಂದೋಲನದ ಕತೆಗಳು; ಈ ಬಗ್ಗೆ ದೇವ ಚಂದ್ರನ 'ರಾಜಾವಳಿ ಕಥೆ'
ನೀಡುವ ಸೂಚನೆಗಳು ಹಾಗೂ ಈಗಲೂ ಕಲ್ಯಾಣ ಕರ್ನಾಟಕದಲ್ಲಿ ಪ್ರಚಲಿತವಿರುವ 'ಬಾಲ ಬಸಪ್ಪ'
ಪರಂಪರೆಯ ಮಾದಿಗ ಕುಲತ್ವ ಇತ್ಯಾದಿಗಳ ಕಡೆ ನಾವು ಗಮನಹರಿಸಬೇಕು. ಹಾಗೇ ಮನೆಯಿಂದ
ಓಡಿಬಂದ ಬಸವಣ್ಣನಿಗೆ ಆಶ್ರಯ ನೀಡಿದನೆಂದು ಹೇಳಲಾದ ಜಾತವೇದಿ ಮುನಿಯ ಗುಡಿಗೆ
(ಸಮಾಜದ)ಆಚೆಯವರ ಗುಡಿ ಎಂಬರ್ಥದಲ್ಲಿ, 'ಆಚೇಶ್ವರ ಗುಡಿ'ಯೆಂಬ ಹೆಸರಿದೆ .
ಅಲ್ಲದೇ "ಬಳ ಬಳಿಯಲು ಬಂದ ಮಾದಾರನ ಮಗ ನಾನಯ್ಯ.. ಕಳೆದ ಹೊಲೆಯನೆಮ್ಮಯ್ಯ.. ಜಾತಿ ಸೂತಕ ಮಾದಾರನ
ಮಗ ನಾನಯ್ಯ.. ಪನ್ನಗ ಭೂಷಣ ಕೂಡಲ ಸಂಗಯ್ಯಾ.. ಚನ್ನಯ್ಯನ ನೆನ್ನ ಮುತ್ತಯ್ಯ
ನಜ್ಜನಪ್ಪಯ್ಯಾ" ಎಂದು ಬಸವಣ್ಣನವರೇ ಹೇಳಿಕೊಂಡಿದ್ದಾರೆ.
ಅಲ್ಲದೇ ಬಸವಣ್ಣ ತನ್ನ ಜಾತಿಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಐವತ್ತು ವಚನಗಳಲ್ಲಿ
ಸೂಚಿಸಿದ್ದಾನೆ. ಈ ವಚನಗಳಲ್ಲಿ ಬಸವಣ್ಣ, ತಾನು ಮಾದಾರ ಚನ್ನಯ್ಯನ ವಂಶದವನು ಎಂದು
ಹೇಳಿಕೊಳ್ಳುತ್ತಾನೆ. ಬೇರೆ ವಚನಕಾರರಿಗಿಂತ ಹೆಚ್ಚಿನ ಸಲ ತನ್ನನ್ನು ತಾನು
ತೊತ್ತಿನ ಮಗ, ಡೋಹರ ಕಕ್ಕಯ್ಯನ ಮಗ ಅಂತ ಹೇಳಿಕೊಂಡಿದ್ದರಿಂದಲೇ ಬಸವಣ್ಣ ಮಾದಿಗನಿರಬಹುದು ಎನ್ನಬಹುದು
ನಾವು ಕೂಡ ಸಾಮಾನ್ಯರಂತೆ ಯೋಚಿಸೋಣ, ಯಾವುದೇ ಜಾತಿಯವರಿರಲಿ ತಾವು ಉನ್ನತ
ಸ್ಥಾನದಲ್ಲಿದ್ದಾಗ ತನ್ನ ಜಾತಿಯವರ ಏಳಿಗೆಗೆ ಸಹಾಯ ಮಾಡುತ್ತಾನೆ (ಈಗಿನ ರಾಜಕೀಯವನ್ನೇ
ಒಮ್ಮೆ ನೆನಪಿಸಿಕೊಳ್ಳಿ ) ಅದೇ ರೀತಿ ಬಸವನೂ ಕೂಡ ಮಂತ್ರಿಯಾದ ಕೂಡಲೇ ತನ್ನ ಜಾತಿಗೆ
ಸಹಾಯಮಾಡತೊಡಗಿದ, ಹಾಗೂ ಅವರಿಗೂ ಲಿಂಗಧಾರಣೆ ಮಾಡತೊಡಗಿದ ಇದರಿಂದ ಇತರ ಉನ್ನತ ಜಾತಿಯವರು
ರೊಚ್ಚಿಗೆದ್ದರು ಈ ವಿಷಯವನ್ನು ಬಿಜ್ಜಳನ ಗಮನಕ್ಕೂ ತಂದರು ಬಿಜ್ಜಳನು ಕೆಲವು ಬಾರಿ
ಸಹಿಸಿದನಾದರೂ** ನಂತರ ಅವನ ಸ್ಥಾನಕ್ಕೇ ಕುತ್ತು ಬಂದಾಗ ಜನರ ವಿರುದ್ದ ಮಾತಾಡದೇ
ಸುಮ್ಮನಿದ್ದ. ಮತ್ತು ಮಂತ್ರಿ ಸ್ಥಾನದಿಂದ ಬಸವಣ್ಣನನ್ನು ಕೆಳಗಿಳಿಸಿದ.
ಆನಂತರ ಶರಣರಾದ
ಮಧುವರಸನ ಮಗಳು
ಲಾವಣ್ಯ ಮತ್ತು ಹರಳಯ್ಯನ ಮಗ ಶೀಲವಂತನ ಮದುವೆಯನ್ನು ವಿರೋಧಿಸಿದ ಬಿಜ್ಜಳನು, "
ಮಿತಾಕ್ಷರ" ವೆಂಬ ಪೊಳ್ಳು ಗ್ರಂಥದ ಆಧಾರದ ಮೇಲೆ, ವಿಲೋಮ ವಿವಾಹ ನೆಡೆದಿದೆಯಂದು
ನಿರ್ಣಯಿಸಿ, ಮಧುವರಸ, ಹರಳಯ್ಯ ದಂಪತಿಗಳನ್ನು ಮತ್ತು ನವ ವಧುವರಾರಾದ
ಶೀಲವಂತ-ಲಾವಣ್ಯರನ್ನು ಆನೆಯ ಕಾಲಿಗೆ ಕಟ್ಟಿಸಿ, ಊರ ತುಂಬಾ ನೆಲದ ಮೇಲೆ ಎಳೆಸಿ ಕೊಲ್ಲುವ
ಕ್ರೂರವಾದ ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿ, ಕೊಲ್ಲುತ್ತಾನೆ. ಬಿಜ್ಜಳನ ಸೇನೆ
ಶಿವಶರಣರನ್ನು ಕಂಡಲ್ಲಿ ಕೊಲ್ಲ ತೊಡಗಿ, ರಕ್ತದ ಹೊಳೆ ಹರಿಸುತ್ತದೆ. ಬಸವನನ್ನು
ಬೆನ್ನಟ್ಟಿಹೋದ ಸೇನೆ ಅವನನ್ನು ಕಲ್ಲಿನಿಂದ ಹೊಡೆದು ಕೊಲ್ಲುತ್ತದೆ,,
**ಹುಟ್ಟಿನಿಂದ ಕ್ಷೌರಿಕನಾದರೂ
ಕ್ಷತ್ರಿಯನಾಗಿ ಪಟ್ಟವೇರಿದ್ದ ಬಿಜ್ಜಳನಿಗೆ ಬಸವಣ್ಣನ ಸಹೋದರಿಯೊಂದಿಗೆ
ವಿವಾಹವಾಗಿರುತ್ತದೆ ಅದಕ್ಕಾಗಿ ಬಸವಣ್ಣನನ್ನು ಬಿಜ್ಜಳ ಸಹಿಸಿಕೊಂಡಿರಬಹುದು
ಸಾಲುಗಳು
- Add new comment
- 3075 views
ಅನಿಸಿಕೆಗಳು
ಈ ಲೇಖನ ಅಸ್ಟು ಪರಿಣಾಮಕಾರಿಯಾಗಿ
ಈ ಲೇಖನ ಅಸ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ್ಲ .ಈ ಹಿಂದೆ ಬಂಜಗೆರೆ ಶಿವಪ್ರಕಾಶ್
ಬರೆದ ಗ್ರಂಥದಲ್ಲಿ ಈ ವಿಷಯ ಪ್ರಸ್ತಾಪವಾಗಿದೆ .ಸತ್ತ ವಿಷಯಗಳ ಚರ್ಚೆ ಪುನಃ ಅಗತ್ಯವೇ .ಬಸವ
ಮತ ಹೇಗೆ ಪುನಃ ಜಾತಿಯತೆ ಮೇಲೈಸುತ್ತಿದೆ ಎಂದು ಚರ್ಚೆ ಮಾಡಿ ಸರಿದಾರಿಗೆ ತರಲು ಪ್ರಯತ್ನಿಸಿ
ಇದರಿಂದ ನಿಮ್ಮಂತಹ ಯುವಕರ ಬಗ್ಗೆ ಉತ್ಸಾಹ ಮೂಡುತ್ತದೆ .-ಶ್ರೀಧರ್ .ಜಿ
ಶ್ರೀಧರ್ ರವರೆ ಇತಿಹಾಸ
ಶ್ರೀಧರ್ ರವರೆ ಇತಿಹಾಸ ಸತ್ತವಿಷಯವಲ್ಲ. ಯಾರು ಯಾವ ಮತದಲ್ಲಿ ಹುಟ್ಟಿದರೆ ನಮಗೇನು? ಎನ್ನುವುದು ನಿಮ್ಮ ಪ್ರಕಾರ ಸರಿ ಇರಬಹುದು ಆದರೆ ಇತಿಹಾಸ ಯಾವೊಂದು ಜಾತಿಯ ಸೊತ್ತಲ್ಲ. ಇತಿಹಾಸ ಸತ್ತ ಕಥೆಯಲ್ಲ ಸತ್ಯ ಕಥೆ. ನಿಜವಾದ ವಿಷಯವನ್ನು ಜನರ ಮುಂದಿಡುವುದು ಇತಿಹಾಸಕಾರನ ಕರ್ತವ್ಯ ನಾನೂ ಕೂಡ ಅದನ್ನೇ ಮಾಡಿದ್ದೆನೆ.....ಇದರ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದೆನೆ ಶಿಘ್ರದಲ್ಲೇ ನನ್ನ ಬ್ಲಾಗ್(www.ontipremi.blogspot.in) ನಲ್ಲಿ ಪ್ರಕಟಿಸುವೆ. ಧನ್ಯವಾದಗಳು
ಜಾತೀಯತೆಯಲ್ಲೇ ಮುಳುಗಿಹೋಗಿರುವ
ಜಾತೀಯತೆಯಲ್ಲೇ ಮುಳುಗಿಹೋಗಿರುವ ನಮ್ಮ ಹಿಂದಿನ ಪೀಳಿಗೆಯ ಜನರಿಗೆ ಬಸವ, ಬಸವಣ್ಣ, ಬಸವೇಶ್ವರ ಎಂದೆಲ್ಲ ಕರೆಸಿಕೊಳ್ಳುವ 'ಬಸವ' ಒಬ್ಬ ಹೀನ ಕುಲದಲ್ಲಿ ಹುಟ್ಟಿದ್ದ ಎಂಬುದನ್ನು ಎಂದಿಗೂ ಅರಗಿಸಿಕೊಳ್ಳಲು ಸಾಧ್ಯವಿಲ್ಲ(ಒಂದು ವೇಳೆ ಅದು ಸತ್ಯವೇ ಆಗಿದ್ದರೂ...)! ಬಹುಶಹ ಆ ಕಾರಣಕ್ಕಾಗಿಯೋ ಏನೋ, ಅಂಬೇಡ್ಕರ್ 'ಸಂವಿಧಾನ ಶಿಲ್ಪಿ' ಎಂದು ಒಪ್ಪಿಕೊಳ್ಳಲು ಇಂದಿಗೂ 'ಮೇಲುಜಾತಿ' ಎಂದು ಕರೆದುಕೊಳ್ಳುವ ಜನರಿಗೆ ಸಾಧ್ಯವಾಗುತ್ತಿಲ್ಲ. ಆದರೆ, ಸತ್ಯವೇನೆಂದರೆ, ಕಳೆದ 200 ವರ್ಶಗಳಲ್ಲಿ(ಇಂಗ್ಲಿಶ್ ಶಿಕ್ಶಣ ಶುರುವಾದಾಗಿನಿಂದ) ಯಾವ ಜಾತಿಯವರೂ ಅಂಬೇಡ್ಕರ್ ರಶ್ಟು ಓದಲು ಸಾಧ್ಯವಾಗಿಲ್ಲ! ಬಸವನ ಕುಲದ ಕತೆ ಹೀಗೆಯೇ ಮುಂದುವರಿಯುತ್ತದೆ...
ನನ್ನ ಪ್ರಕಾರ ಬಸವಣ್ಣನವರು ಯಾವ
ನನ್ನ ಪ್ರಕಾರ ಬಸವಣ್ಣನವರು ಯಾವ ಜಾತಿಯಲ್ಲೇ ಹುಟ್ಟಿದ್ದರೂ ಅದನ್ನು ಈಗ ಚರ್ಚಿಸುವುದು ಅನಗತ್ಯ. ಬಸವಣ್ಣ, ಸರ್ವಜ್ಞ, ಕನಕದಾಸ, ಪುರಂದರ, ಕುವೆಂಪು, ಸಂತ ಶಿಶುನಾಳ ಇವರೆಲ್ಲಾ ಜಾತಿಯನ್ನು ಸ್ವತಃ ತಾವೇ ಕಿತ್ತೊಗೆದ ಮೇರು ಪುರುಷರು. ಇಂತವರನ್ನು ಪುನಃ ನಾವು ಇವರು ಇಂತಹ ಜಾತಿಗೆ ಸೇರಿದವರು ಎಂದು ಹೆಮ್ಮೆ ಪಡಲಿಕ್ಕೋ, ಮೂದಲಿಸಲಿಕ್ಕೋ ಬಳಸಿಕೊಳ್ಳುವುದು ಅವರಿಗೆ ನಾವು ಮಾಡುವ ಅಪಚಾರ. ಈ ವಿಷಯದಲ್ಲಿ ಬಸವಣ್ಣನನ್ನು ಬಳಸಿಕೊಳ್ಳುತ್ತಿರುವ ಲಿಂಗಾಯಿತರು ತಪ್ಪು ಮಾಡುತ್ತಿದ್ದಾರೆ. ಅಂತಹ ಮೇರು ಪುರುಷನನ್ನು ತಮ್ಮ ಜಾತಿಗೆ ಸೀಮಿತಗೊಳಿಸಿ ಸಂಕುಚಿತ ಭಾವನೆ ಹಬ್ಬಿಸಿದ್ದಾರೆ. (ಲಿಂಗಾಯಿತರೊಂದೇ ಅಲ್ಲದೇ ಹಲವಾರು ಜಾತಿಗಳವರು ತಮ್ಮ ಜಾತಿಯಲ್ಲಿ ಹುಟ್ಟಿದವರು ಎಂಬ ಒಂದೇ ಕಾರಣಕ್ಕೆ ಜಾತಿಯನ್ನು ಮೆಟ್ಟಿ ನಿಂತ ಮಹನೀಯರನ್ನೂ ಮತ್ತೆ ಜಾತಿಯ ಕೊಳಚೆಗೆ ತಂದಿದ್ದಾರೆ )
ಮಹಾನ್ ವ್ಯಕ್ತಿಗಳು "ನಮ್ಮ ಜಾತಿಯವರು" ಎಂದು ಹೇಳಿಕೊಂಡು ಬೀಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಅವರು ಭೋಧಿಸಿದ ತತ್ವಗಳನ್ನು ಎಷ್ಟರ ಮಟ್ಟಿಗೆ ನಾವು ಪಾಲಿಸುತ್ತೇವೆ ಎಂದು ಒಮ್ಮೆ ಯೋಚಿಸಬೇಕು.
ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ
ಬಸವಣ್ಣ ಬಿಜ್ಜಳನ ಆಸ್ಥಾನದಲ್ಲಿ ಮಂತ್ಫ್ರಿಯಾಗಿ ಇದ್ಫುದು ದಿಟವಾಗಿದ್ದರೆ, ಆತ ಹೇಗೆ ಮಾದಿಗನಾಗಿರಲು ಸಾಧ್ಯ?
ಇನ್ನೂ ಅವೈದಿಕರಿಗೆ ವೇದ ಕಲಿಸದ ಕಾಲದಲ್ಲಿ ವೇದಾಗಮಗಳ ಬಗ್ಗೆ ಬಸವ ಇಲ್ಲವೇ ಅಲ್ಲಮ ಹೇಗೆ ಹೇಳಬಲ್ಲರು?