Skip to main content

ಸುಧಾ ವಾರಪತ್ರಿಕೆಯ 'ಯುಗಾದಿ ವಿಶೇಷಾಂಕ' -೨೦೧೨ ಓದಿದಿರಾ?............

ಇಂದ venkatb83
ಬರೆದಿದ್ದುMarch 18, 2012
4ಅನಿಸಿಕೆಗಳು

 ಪ್ರತಿ ತಿಂಗಳೂ  ತಪ್ಪದೆ ತುಷಾರ -ಕಸ್ತೂರಿ -ಮಯೂರ ಕೊಂಡು ಓದುವ ನಾ ಪ್ರತಿ ವರ್ಷದ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನ ಮರೆಯದೆ ಓದುವೆ.. ಈಗೀಗ ೨-೩ ವರ್ಷಗಳಿಂದ  ವಿಶೇಷಾಂಕದಲ್ಲಿ ಬರುವ ಯಾವೊಂದು ಕಥೆಗಳೂ- ಕವನಗಳೂ ಬರಹಗಳೂ   ವಿಶೇಷಾಂಕದ 'ವಿಶೇಷತೆಯನ್ನ'  ಉಂಟು ಮಾಡುತ್ತಿರಲಿಲ್ಲ...  ಈ ಸಾರಿಯೂ   ಸುಧಾ ಮಾಸಿಕದ  'ಯುಗಾದಿ ವಿಶೇಷಾಂಕ' ಕೊಂಡು ನಿನ್ನೆ- ಇವತ್ತು ಬಿಡುವು ಮಾಡಿಕೊಂಡು  ಓದಿದೆ... ಇದಪ್ಪ ವಿಶೇಷಾಂಕ ಅನ್ನಿಸಿತು  .... ಕಾರಣ?
ಕಥಾ ವಿಭಾಗದಲ್ಲಿ  ಇದ್ದ ೪ ಕಥೆಗಳು 
       ೧. ಹೋರಿ-        ನಾಗತಿಹಳ್ಳಿ ಚಂದ್ರ ಶೇಖರ್ 
      ೨.   ಅವಸಾನ-     ಪಕ್ರುದ್ದೀನ್ ಇರುವೈಲ
      ೩.    ತಗಣಿ  -         ವಸುಧೇಂದ್ರ 
      ೪.   ಆಶ್ರಿತರು -      ಬಿ .ಟಿ .ಜಾಹ್ನವಿ 
ನಾಲ್ಕೂ ಸಶಕ್ತ  ಸತ್ವಪೂರ್ಣ  -ನಮ್ ಸುತ್ತಮುತ್ತಲಿನ  ಬಹುಪಾಲು ಅಂಶಗಳನ್ನ ಕಥಾ ವಸ್ತುವಾಗಿ  ಉಳ್ಳವು...  ಆದರೆ ಕಥೆಯನ್ನ ಬರೆದ ರೀತಿ -ಅಂತ್ಯ ಮುಟ್ಟಿಸಿದ ರೀತಿ  ಬಹು ಮೆಚ್ಚುಗೆಯಾಯ್ತು..  ಮೊದಲಿನ  ಕಥೆಯಲ್ಲಿ  - ಇಬ್ಬರ ಹೆಂಡಿರ ಮುದ್ದಿನ  ಗಂಡನನ್ನ ಟಿ ವಿ ಸ್ಟುಡಿಯೋ  ಗೆ  ಪತ್ನಿ ಸಮೇತ ಕರೆಸಿ  -ಅವನ ಗತ ಜನ್ಮದ ಅನುಭವಗಳನ್ನ   ಒಬ್ಬ ಗುರುಗಳು  ಹೊರಗೆ ತರುವುದು -ಕೊನೆಯಲ್ಲಿ ಏನಾಗುತ್ತೆ? ಅನ್ನೋದೇ ಮಜಾ....

ಎರಡನೇ ಕಥೆಯಲ್ಲಿ  ಮುಸ್ಲಿಂ ಸಹೋದರರಿಬ್ಬರಲ್ಲಿ  -ಒಬ್ಬನ  ಮಕ್ಕಳ ಜನ್ಮಕ್ಕೆ  ಕಾರಣನಾಗಲಾಗದ  ಅಸಹಾಯಕತೆ ಇದ್ರೆ, ಹಿರಿ ಸಹೋದರ(ತನ್ನದೇ ಆದ  ಕೆಲ   ಕಾರಣಗಳಿಗಾಗಿ ಮದುವೆಯಾಗಿರದೆ ಇರ್ವವ)   ತಮ್ಮನ -ಪತ್ನಿ ಜೊತೆಗೆ  ಕೂಡಿ ಬಾಲಕನೊಬ್ಬನ ಜನ್ಮಕ್ಕೆ ಕಾರಣನಾಗಿ ಅದೇ ಮಗನಿಗೆ ದೊಡ್ದಪ್ಪನಾಗಬೇಕಾಗಿ ಬರುವುದು, ತಾ ಮಾಡಿದ ಪಾಪಕ್ಕೆ ಪ್ರಾಯಶಿತ್ತ ಅಂತಾ 'ಮೆಕ್ಕಾಗೆ'  ಹೋಗಿ ಬರುವ ಹಿರಿ ಸಹೋದರನಿಗೆ ಮರಳಿ ಬಂದಾಗ  ಕಿರಿ ಸಹೋದರನಿಂದ  ಮತ್ತೊಂದು ಶಾಕ್!!    
ಮೂರನೇ ಕಥೆ- ಹಳ್ಳಿಯ ಪಟೇಲನ  ಮಗನಲ್ಲಿ 'ಸುಪ್ತವಾಗಿದ್ದ' ಹೆಣ್ಣಿನ  ಭಾವನೆ ಹೊರಗೆ ಗೋಚರಿಸಿ  ತಾ ಅಂದುಕೊಂಡಂತೆ  ಬದುಕಲು ಆಗದೆ , ಮನೆಯವರಿಂದ  ಸಹಪಾಟಿಗಳಿಂದ ಮೂದಲಿಕೆ- ಅಪಹಾಸ್ಯಕ್ಕೆ ಈಡಾಗಿ  ಪಟ್ಟಣಕ್ಕೆ ಹೋಗಿ ಲಿಂಗ ಬದಲಿಸಿಕೊಂಡು ಬಂದು ಇಡೀ ಹಳ್ಳಿಗೆ   ಕಾ... ಕಿಚ್ಚು ಹಚ್ಚಿ  ಅಲ್ಲೋಲ ಕಲ್ಲೋಲ ಮಾಡಿ ಕೊನೆಗೆ ದುರಂತ ಅಂತ್ಯ ಕಾಣುವುದು..  ಈ ಕಥೆ ಓದಿ ಕಣ್ಣಲ್ಲಿ ನೀರು ಬರದಿದ್ದರೆ ನೋಡಿ,....  ಹಿಜ್ರಾ ಅಂತ ಹೆಸರಿಸಿದ ವ್ಯಕ್ತಿಗಳ ಬಗ್ಗೆ ನಾ ಓದಿದ  ಕಥೆಗಳಲ್ಲಿ ಇದು ಹೆಚ್ಚು ಹಿಡಿಸಿತು..  ಈ ನಾಲ್ಕನೆ ಕಥೆ  - ಈಗೀಗ ಮಾಮೂಲು ಆಗಿರುವ  ಮುಪ್ಪಿನಲ್ಲಿ  ತಮ್ಮಿಚೆಯನ್ತೆಯೇ  ಬಾಳ ಹೊರಟವರನ್ನ(ಹಿರಿಯರು)   ಏನೇನೋ ಆಶೆ ತೋರ್ಸಿ ಪುಸಲಾಯಿಸಿ ಆಸ್ತಿ ಕಸಿದುಕೊಂಡು -ಹೊಡೆದು ಅನಾಥಾಶ್ರಮಕ್ಕೆ ತಳ್ಳುವುದು,  ಗತ ಪ್ರಸ್ತುತ  ರೀತಿಯಲ್ಲಿ  ಸಾಗೋ ಕಥೆ ಓದಿ ಕಣ್ಣಲಿ ಹನಿ ಮೂಡುವುದು ಖಾತ್ರಿ..  ಕಥೆಯ ಅಂತ್ಯ     ವಿಶೇಷವಾಗಿದೆ...


ಇನ್ನು ಈ ವಿಶೇಷಾಂಕದಲ್ಲಿ  ಲಲಿತ ಪ್ರಬಂಧಗಳೂ  ಇವೆ-೧. ಹಳ್ಳಿ ಸ್ಕೂಲು  - ಉಷಾ ನರಸಿಂಹನ್ ೨. ಎಲ್ಲಿ ಹೋದರೋ - ಬಾಲ ಸುಬ್ರಹ್ಮಣ್ಯ . ಕೆ. ವಿ ೩. ಚತ್ರಿಯೇಮ್ಬೋ ಛತ್ರಿ - ಡಾ: ಕೆ.ಬಿ ರಂಗಸ್ವಾಮಿ ೪. ನೆನಪು ನೇರಳೆ ಹಣ್ಣು - ವಿಜಯ ಶ್ರೀಧರ್ 
ಮೊದಲ ಲಲಿತ ಪ್ರಬಂಧದಲ್ಲಿ    ಕಥಾ ನಾಯಕಿ  ಪದವೀದರೆಯಾಗಿ ಮದುವೆಯಾಗಿ  ಹಳ್ಳಿಗೆ ಹೋಗಿ ನೆಲಸಿ ಆ ಊರಿನ ಶಾಲೆಯಲ್ಲಿ ಅಕಾಸ್ಮಾತಾಗಿ ಪ್ರಭಾರಿ  ಶಿಕ್ಷಕಿ ಆಗಿ ಹಳ್ಳಿ ಮಕ್ಕಳಿಗೆ ಪಾಠ ಮಾಡಲು ಹೋದಾಗ ಆಗುವ  ಅನುಭವಗಳು  ನಗೆ ಉಕ್ಕಿಸುತ್ತವೆ ಮತ್ತು ಅದೆಲ್ಲ ಹಳ್ಳಿಲಿ ಮಾಮೂಲು ಸಹಾ. ತುಂಬಾ ಚೆನ್ನಾಗಿದೆ 

ಎರಡನೇ ಲಲಿತ ಪ್ರಬಂಧ   ಮರಗಳ ಬಗ್ಗೆ - ಮರಗಳನ್ನ  ಮನುಷ್ಯರಿಗೆ ಹೋಲಿಸಿ  ಬರೆದದ್ದು  ತೆಂಗಿನ ಮರದ ಕುರಿತು ಹೇಳಿದ ಹಲ ವಾಕ್ಯಗಳು ಪದ ಪ್ರಯೋಗಗಳು  ಆ ಗಿಡದ ವಿಶೇಷತೆಯನ್ನ  ಉಪಯುಕ್ತತೆಯನ್ನ ತಿಳಿಸುತ್ತಲೇ  ತುಟಿ ಅರಳುವಂತೆ ಮಾಡುತ್ತೆ :(())
ಮೂರನೆಯ ಪ್ರಬಂಧ  ಛತ್ರಿ ಅಕಾ ಕೊಡೆ ಬಗ್ಗೆ - ಅಂದು-ಇಂದು-ಮುಂದು ಅದರ ಉಪಯುಕ್ತತೆ  ಅದರ 'ವಿವಿದೋದ್ದೇಶ'!! ಕುರಿತು  ಭಲೇ ಸೊಗಸಾಗಿದೆ.. 
ನಾಲ್ಕನೆಯದು   ಹಳೆಯ ಸುಮಧುರ ಸಿಹಿ ಕಹಿ ನೆನಪುಗಳನ್ನ ನೇರಳೆ ಹಣ್ಣಿಗೆ ಹೋಲಿಸಿ  ಬರೆದದ್ದು - ಚೆನ್ನಾಗಿದೆ..
ಇದಲ್ಲದೆ ಹಾಸ್ಯ ವಿಭಾಗದಲ್ಲಿ   ತುರುವೇಕೆರೆ ಪ್ರಸಾದ್ ಅವ್ರು ಬರೆದಿರೋ  'ಕೊಲವೇರಿ ಮಯ' ಎಂಬ ಪ್ರಸ್ತುತ ಹಿಟ್ ಆಗಿ ಎಲ್ಲೆಡೆ ತನ್ ಪ್ರಭಾವ ಬೀರಿದ ಕೊಲವೇರಿ ಸಾಂಗ್ ಬಗ್ಗೆ ಅದ್ನ ಉಪಯೋಗಿಸಿಕೊಂಡು ಲೇಖಕರು ಬರೆದ ಕೆಲ  ಕೊಲವೇರಿ  ಸಾಲುಗಳು :()) ಉಕ್ಕಿಸುತ್ತವೆ.. ಸೂರಿ ಹಾರ್ದಳ್ಳಿ - ಅವ್ರು ಬರೆದ 'ಅಧ್ವಾನಗಳು'  ಸಾರ-  ಮನೆಗೆ ಬಂದು ಕರೆ ಘಂಟೆ ಒತ್ತಿ , ಇದು ಕೊಳ್ಳಿ ಅದು ಕೊಳ್ಳಿ ಎಂಬ  ಮಾರಾಟಗಾರರ ಕುರಿತು, ಆ ಸಮಸ್ಯೆಯಿಂದ ಲೇಖಕರು ಪಾರಾದ ಬಗೆ ,ಓದಿ ನಗೆ ಉಕ್ಕುಕ್ಕಿ ಬರದಿದ್ದರೆ ಆಗ್ ಹೇಳಿ... :()))  ತುಂಬಾ ಚೆನ್ನಾಗಿದೆ...
ಪ್ರಭಾ -ಅವ್ರು   'ಡಿಯರ್ ಡಾಗ್ಸ್' ಎಂಬ ಶ್ವಾನಗಳ ಮತ್ತು ಅವುಗಳ ಮಾಲೀಕರ ಕುರಿತು  ಹಾಸ್ಯಾತ್ಮಕವಾಗಿ ಬರ್ದಿದ್ದಾರೆ. ಅಲ್ಲಿ ಇರವ ಕೆಲ ಸಂಗತಿಗಳು ದಿನ ನಿತ್ಯ ನಡೆವನ್ತವು -ನಾಯೀನ  ವಾಕಿಂಗ್  ಕರೆದುಕೊಂಡು ಹೋಗುವುದು- ಅದು ಅವರ ಮನೆ ಮುಂದೆ 'ಇಸ್ಶಿ' ಮಾಡೋಲ , ಬೇರೇವ್ರ ಮನೆ ಮುಂದೆ ಮಾಡೋದು!!  ಆ ಕುರಿತು ಆಗೋ ವಾಕ್ಸಮರ ಯುದ್ಧ!!  ಇನ್ನಿತರ  ಹಲ ಸಂಗತಿಗಳು :()) ಉಕ್ಕಿಸುತ್ತವೆ....
ಇದಲ್ಲದೆ ಸಾಹಸ ಕ್ರೀಡೆಗಳ ಬಗ್ಗೆ(ಬಂಗಿ ಜಂಪ್,  ಸ್ಕೈ ಡೈವಿಂಗ್ ಇತ್ಯಾದಿ) ಬಗ್ಗೆ ಚಿತ್ರ ಸಮೇತ ವಿವರಣೆ- ಸಲಹೆ - ತರಬೇತಿ ಕೊಡುವ ಸಂಸ್ತೆಗಳ ವಿಳಾಸ ಇತ್ಯಾದಿ -ಉಪಯುಕ್ತ ಬರಹ
ಹುಲಿ  ಬಗ್ಗೆ   ಅವುಗಳ  ಸಂತತಿ  ರಕ್ಷಿಸಲು  ಸರಕಾರಗಳು  ಕೈಗೊಂಡ  ಯೋಜನೆಗಳು    ಇತ್ಯಾದಿಯನ್ನ  'ರಣಥಮ್ಬೋರ್  ನ್ಯಾಷನಲ್   ಪಾರ್ಕ್' ಜೊತೆಗೆ ವಿವರಿಸಿ ' ಹುಲಿಗೆ' ಪತ್ರ ಬರೆದಂತೆ ಇರುವ    ಬರಹ . 
ತಮ್ಮ ಇಷ್ಟದ  ಕ್ಷೇತ್ರಗಳಲ್ಲಿ  ಪ್ರವೇಶಿಸಿ ಸಮಸ್ಯೆ ಎದುರಿಸಿ  ಯೆಶಸ್ಸು ಸಾಧಿಸಿದ  ಹಲ ಮಹಿಳೆಯರ( ಅವರ್ಯಾರನ್ನು ನಾವು ಇದುವರೆಗೂ ಪೇಪರ್ನಲ್ಲಿ ಓದಿಲ್ಲ -ಕೇಳಿಲ್ಲ -ನೋಡಿಲ್ಲ)...ಕುರಿತು ಬರಹ- ಯಶಸ್ಸಿನ ಕಥೆ'  
ಇದಲ್ಲದೆ  ಕನ್ನಡ  ಚಿತ್ರ ರಂಗದ ಬಗ್ಗೆ- ಕನ್ನಡದ ಮಣ್ಣಿನ ಸೊಗಡಿನ ಚಿತ್ರಗಳು -ಕಥೆ -ಹಾಡಿನ ಸಾಹಿತ್ಯ ಮರೆಯಾದದ್ದರ ಬಗ್ಗೆ -ಹಿಂದಿ ಚಿತ್ರ ರಂಗದ ಜನಪ್ರಿಯ ಜೋಡಿಗಳ ಬಗ್ಗೆ  ಬರಹಗಳು, ಹಲ ಕವನಗಳು -ಚುಟುಕಗಳು (ಸೀ ಪೀ ಕೆ , ಮತ್ತು ರಾಂನಾಥ್),  ಜೋಕುಗಳು - ವರ್ಷ ಭವಿಷ್ಯ!! ಸಹಾ  ಇವೆ....

ಒಟ್ಟಿನಲ್ಲಿ ೫೦ ರೂಪಾಯಿಯಲ್ಲಿ ಸಂಗ್ರಹ ಯೋಗ್ಯ ಸಂಚಿಕೆ...
 ಜೊತೆಗೆ  

'ಮನೆಯಲ್ಲೇ ಸೌಂದರ್ಯ ಚಿಕಿತ್ಸೆ' ಎಂಬ ಪುಟ್ಟ ಅರೋಗ್ಯ ಸಂಬಂಧಿ ಪುಸ್ತಕ  ಉಚಿತ....
ಈ ಯುಗಾದಿಯ 'ಸುಧಾ ಯುಗಾದಿ ವಿಶೇಷಾಂಕ'ವನ್ನ  ಕೊಂಡುಕೊಂಡು ಓದಿ....    
*****ಸಮಸ್ತ ವಿಸ್ಮಯ ನಗರಿಗರಿಗೆ  ಯುಗಾದಿಯ  'ಮುಂಗಡ' ಶುಭಾಶಯಗಳು ****
                                      ಶುಭವಾಗಲಿ.........
 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ಪ್ರದೀಪ ಜಿ ಅರ್ ಸೋಮ, 03/26/2012 - 12:41

ಯುಗಾದಿ ಹಬ್ಬದ ಶುಬಾಶಯಗಳು

Mahadevaswamy t ಶನಿ, 03/23/2013 - 15:18

same to you

venkatb83 ಸೋಮ, 04/23/2012 - 18:08

ಪ್ರದೀಪ್ ಅವ್ರೆ- ನಿಮ್ಮ ಶುಭಾಶಯಗಳನ್ನ ಈಗ ನೋಡಿದೆ!!ನನ್ನ ತಡ ಮಾರುತ್ತರಕ್ಕೆ  ಕ್ಷಮೆ ಇರಲಿ....

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,,,,

ಶುಭವಾಗಲಿ....

Mahadevaswamy t ಶನಿ, 03/23/2013 - 15:23

wish you happy  ಯುಗಾದಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.