Skip to main content

ಭಾನುವಾರ- ಪುಟ್ತಿಯ ಒಂದು ಪ್ರಶ್ನೆ-ನನ್ ಪಜೀತಿ :((

ಇಂದ venkatb83
ಬರೆದಿದ್ದುFebruary 5, 2012
2ಅನಿಸಿಕೆಗಳು

ಭಾನುವಾರವಾದ್ದರಿಂದ ಮಾಡಲು 'ಏನೂ' ಕೆಲ್ಸವಿಲ್ಲದೇ, ತಡವಾಗೇ ಎದ್ದು, ಬೆಳಗಿನ ನಿತ್ಯ ಕರ್ಮ!! ಮುಗ್ಸಿ,ಟೀ ಕುಡೀತ -ದಿನ ಪತ್ರಿಕೆ ಹಿಡಿದು ಓದುತ್ತಾ ಮನೆ ಮುಂದಿನ ಲಾನಿನಲ್ಲಿ ಆರಾಮಗೆ ಕುಳಿತಿದ್ದೆ, 
ಚಿದಂಬರಂ 'ಬೀಸೊ ದೊನ್ನೆಯಿಂದ ಪಾರು!!,
ಬರಿ ಗೈನಲ್ಲಿ ಬಂದ  ಎಡ್ಡೀ,
ನಾನೇ ಪೂರ್ಣ ಅವಧಿಗೆ ಮುಖ್ಯಮಂತ್ರಿ :ಸದಾನಂದ ಗೌಡ,
ಇತ್ಯಾದಿ ಸುದ್ಧಿಗಳ್....
ಇನ್ನೂ
ಈಗೀಗ 'ಮಾಮೂಲಾಗಿರೋ' ಸುದ್ಧಿಗಳು 
ಕೊಲೆ-ದರೋಡೆ-...ರ, ಸರಗಲ್ಳತನ, :))
ಪಪ್ಪ-ಪಪ್ಪ  ತಲೆ ಕೊಂಚ ತಿರುಗಿಸಿ ನೋಡಿದರೆ ಅಲ್ಲಿ ನಿಂತೀರ್ವಲ್, ವಿಜೇತ-ನಮ್ಮ ಮಗಳು...ಬ ಪುಟ್ಟಿ- ಹಲ್ಲುಜ್ಜಿ, ಟೀ ಕುಡಿದಾಯ್ತೋ? ಎನ್ನಲು, ಪಪ್ಪ ನಾ ಅಗಲೆ ಬೆಳಗ್ಗೆಯೇ ಎದ್ದು ಹಲ್ಲುಜಿ- ಸ್ನಾನ ಮಾಡಿ, ತಿಂಡಿ ತಿಂದು ಆಯ್ತು,ನೀವೇ ಲೇಟು ಅನ್ನಬೇಕೆ:)) ಹ್ಚಿ ಹ್ಚಿ ಅಂತ -ನಾಸ್ಸರಿ ಸ್ಸರಿ, ಬ್ಯಾ ಇಲ್ಲಿ ಕೂತ್ಕೋ,ನಿನ್ನ ಇವತ್ತಿನ ಹೋಮ್ ವರ್ಕ್ ಏನು?ಎಸ್ಟು 'ಕ್ವಿಂಟಾಲ್' ಹೋಮ್ ವರ್ಕ್ ಕೊಟ್ಟಿದ್ದಾರೆ ?ಅನ್ನಲು
ಜಾಸ್ತಿ ಇಲ್ಲ ಪಪ್ಪ,
ಒಂದೇ 'ವಿಷ್ಯದ' ಬಗ್ಗೆ ನನಗೆ ಬರೆಯ ಹೇಳಿದ್ದರೆ, ಅದು -'ಹೆಸರು' ಅಂತ
ಏನು?ಹೆಸರ?ಹೆಸರು ಬಗ್ಗೆ ಏನು ಬರೆಯೋದು? ಅನ್ನಲುಪಪ್ಪ ಈಗ ನೋಡು ನನ್ನ ಹೆಸ್ರು ವಿಜೇತ, ಅದ್ಕೆ ಅರ್ಥ ಏನು?ವಿಜೇತ ಅಂದ್ರೆ ವಿನ್ನರ್, ಗೆದ್ದವರು, ಅಂತ ಅರ್ಥ ಪುಟ್ಟಿ.. ಹಾಗೆ ಸೋತವರಿಗೆ 'ಲೂಸರ್' ಅಂತಾರಲ್ಲ, ಹ್ಹಾ!! ಹೌದು ಪುಟ್ಟಿಪಪ್ಪ ನಂಗೆ ವಿಜೇತ ಅಂತಾನೆ ಏಕೆ ಹೆಸ್ರು ಇಕ್ಕಿದ್ದು?ಬೇರೆ ಯಾವ ಹೆಸರನ್ನ ಯಾಕೆ ಇರಿಸಲಿಲ್ಲ ?ನಾ ಏನು ಹೇಳೋದು? ಅಂತ ಕೊಂಚ ಹೊತ್ತು ಚಿಂತಿಸುತ್ತಾ ಕುಳಿತೆ...ಯಾಕ್ ಪಪ್ಪ, ಮರ್‍ತು ಬಿಟ್ರಾ? ನಾ ಮಮ್ಮೀನೆ ಕೇಳ್ತೀನಿ, ಅಂದವಳೇ ಮನೆ ಹೊಳ ಹೋದಳು,ಸಧ್ಯ ನಾ ಬಚಾವ್, ಅಂತ ನಿಟ್ಟುಸಿರು ಬಿಟ್ಟು ಕೂತೆ ,ಮತ್ತೆ ಯಥಾ ಪ್ರಕಾರ ಪೇಪರ್‌ನಲ್ಲಿ ಕಣ್ಣು ನೆಟ್ಟು!!...
ಮಮ್ಮೀ-ಮಮ್ಮೀ ನಾ 'ಹೆಸ್ರು' ಬಗ್ಗೆ ಒಂದು ಹೋಮ್ ವರ್ಕ್ ಬರೀಬೇಕು

ಅದ್ಕೆ?


ಮತ್ತೆ ಅದ್ಕೆ ನಾ 'ನನ್' ಬಗ್ಗೆನೆ ಬರೆಯೋಣ ಅಂತ , ನಂಗೆ ನೀವು ವಿಜೇತ ಅಂತಾನೆ ಹೆಸ್ರು ಯಾಕೆ ಇಟ್ರೀ? ನೋಡು ಸಧ್ಯ ನಾ ಫುಲ್ಲ್ ಬಿಜಿ ,ಆಮೇಲೆ ನಿಂಗೆ ಹೇಲ್ವೆ ಸ್ಸರೀನ?ಇಲ್ಲ ಮಮ್ಮೀ ನಂಗೆ ಈಗ್ಲೆ ಹೇಳ್‌ಬೇಕು, ನಾ ಪಕ್ಕದ್ ಮನೆ 'ಶಾರಿ', ಆ ಕುರಿತು ಬರೆಯೋದ್ರೋಲಗ್ದೇ  ನಾನೇ ಮೊದ್ಲು  ಬರೀಬೇಕು ಅದ್ಕೆ... ಒಹೋ!ಹಾಗೋ?...
ಅಲ್ಲಿ ಹೊರಗಡೆ ಹೋಗು ಅಲ್ಲಿ ನಿಮ್ಮ್ ಪಪ್ಪ, 'ಏನೂ' ಕೆಲ್ಸಾ ಇಲ್ದೇ ಕೂತವ್ರೇ ,
ಅವರ್ನೆ ಕೇಳು,

ಕೇಳ್ದೆ ಮಮ್ಮೀ, ಆವ್ರು -ಮಮ್ಮೀನೆ ಕೇಳು ಅಂತ ಕಲ್ಸಿದ್ರು:))
ಒಹೋ -ಹಾಗೋ?
 ನೋಡು ನಾ ನಿಮ್ಮ ಪಪ್ಪಾಂಗೆ  ಆಗಲೇ ಅವತ್ತೇ ಹೇಳಿದ್ದೆ ಗೀತಾಸೀತಸಾವಿತ್ರಿಶರ್ಮಿಳಾಪರಿಮಳನೀಳವೇಣಿರಮ್ಯಭವ್ಯರಾಗಸುಧಾಶಾಂತಿಸ್ವರಮಧುರನೂತನದಿವ್ಯಸೌಮ್ಯ ಶಾರಧಸುನೀತಜಯಲಕ್ಷ್ಮಿಶ್ರೀದೇವಿ ವಾಣಿ................................  ಆದರೆ ನಿಮ್ಮ ಪಪ್ಪ ನಾ ಹೇಳಿದ್ದಕ್ಕೆಲ್ಲಾ 'ಕೊಂಕು' ತೆಗೆದು  ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲಅಂತ ಹೇಳಿ ನಿಂಗೆ 'ವಿಜೇತ' ಅಂತ ಹೆಸ್ರು ಇಕ್ಕಿದ್ರೂ ಅದ್ಕೆ...ಮಮ್ಮೀ -ಅದ್ಕೆ ಏನು?ಅವ್ರೆ ಅಲ್ವಾ ಆ ಹೆಸ್ರು ಆಯ್ಕೆ ಮಾಡಿದ್ದು, ಅದ್ಕೆ ಅವರ್ನೆ ಹೋಗಿ ಕೇಳು, ಅದ್ರ ಅರ್ಥ ಏನು? ಯಾಕೆ ಅದೇ ಹೆಸ್ರೂ ಅಂತ!!


ಅಯ್ಯೋ!!ಪಪ್ಪನೂ- ಹೇಳೋಲ್ಲ- ಮಮ್ಮೀನೋ ಹೇಳೋಲ್ಲ,ನಾ ಎನ್ ಬರೆಯೋದು?ಮತ್ತೆ ಮರಳಿ ನನ್ ಹತ್ತಿರ ಬಂದು
ಪಪ್ಪ-ಪಪ್ಪಏನಮ್ಮಾ?ಮಮ್ಮೀನು ಹೇಳ್ತಾ ಇಲ್ಲ,ಅವ್ರಿಗಾ ಫುಲ್ಲ್ ಬಿಜಿ ಅಂತೆ, ಅದ್ಕೆ ನೀವೇ ಹೇಳ್ಬೇಕಂತೆ!!ಮನದಲ್ಲೇ ನನ್ ಬೇಟರ್ ಹಾಫ್ ಗೆ  ಶಪಿಸುತ್ತಾ:)) ಕೊನೆಗೂ ನನ್ನ ತಲೆಗೆ ಪುಟ್ಟಿ ಯ ಪ್ರಶ್ನೆ ಹುಳು ಬಿಟ್ಟೆಯ?
ಆರಾಮಾಗಿ ಭಾನುವಾರವನ್ಣ ಎಂಜಾಯ್ ಮಾಡಿದ್ರೆ ಇವ್ಲೂ........
ಛೇ- ಛೇ!!
ಪುಟ್ಟಿ ಅದ್ಕೆ ಯಾಕೆ ಚಿಂತೆ?
ಕಂಪ್ಯೂಟರ್ ಓಪನ್ ಮಾಡು, ಅಲ್ಲಿ 'ಗೂಗಲ್' ಅಂತ ಇದೆಯಲ್ಲಾ, ಅಲ್ಲಿ ವಿಜೇತ ಅಂತ ಟೈಪ್ ಮಾಡು ವಿಜೇತ ಮೀನಿಂಗ್ ಅಂತ ಹಾಕು, ಸಿಕ್ತ?
 ಓಕೇ, ಇಲ್ವಾ?
ವಿನ್ನರ್ ಅಂತ ಮೀನಿಂಗ್ ಹುಡುಕು  
ಆಗ ಸಿಕ್ಕಿದ್ರಲ್ಲಿ ಹೆಚ್ಚು ಸೂಟ್ ಆಗೋದ್ನಾ ಬರಿ ಅಸ್ಟೆ, -ಪ್ರಾಬ್ಲಮ್ ಸಾಲ್ವ್!!

ಪಪ್ಪ ಶೇಂ ಶೇಂ !ಯಾಕೆ ಪುಟ್ಟಿ? ಹಾಗೆಲ್ಲಾ ಅನ್ನಬಾರದು 
ಅದ್ರಲ್ ಶೇಂ ಶೇಂ ಅನ್ನೋಕೆ ಏನಿದೆ?
ನೀವು ಹೇಳಿ ಅಂದ್ರೆ ನಂಗೆ 'ಗೂಗಲ್' ನಲ್ಲಿ ಹುಡುಕು ಅಂತೀರಲ್ಲ,ನಿಮಗಿಂತ ಆ 'ಗಣೇಶ್ ಮತ್ತು ಶ್ರೀಕರ್' ಅಂಕಲ್ಲೇ  ಬೆಟ್ರ,ಎಸ್ಟೋ ವಿಚಾರದ್ ಬಗ್ಗೆ ಬರೀತಾರೆ  ಲಿಂಕೂ ಕೊಡ್ತಾರೆ!!
ನಾ ನನಗೆ ತೋಚಿದ್ದೆ ಬರೀತೀನಿ.. ..  ಬೈ ಅಂತ ಮನೆ  ಹೊಳ  ಹೋದಳು... ನಾ ಪೇಚ್ ಆದೇ:(( ಅದೊಮ್ಮೆ ಪ್ರತಿಯೊಂದನ್ನು 'ನಾವೇ' ಯೋಚಿಸಿ ನಮಗೆ 'ಸ್ಸರಿ' ಅನ್ನಿಸಿದ್ದು,ಬರೀಬೇಕು,ಹೇಳಬೇಕು,ಹಾಗೆ ಹೀಗೆ ಅಂತೆಲ್ಲಾ 'ಸ್ವಂತಿಕೆ' ಬಗ್ಗೆ ಪುಟ್ಟಿ ಗೆ  'ಹೀತೋಪದೇಶ' ಮಾಡಿದ್ದೇನಲ್ -ನಾ,ಅದ್ಕೆ ಅವಳು ನಾ 'ಗೂಗಲ್ 'ನಲ್ಲಿ ಹುಡುಕಿ ಬರಿ ಅಂದಾಗ,ನಾ  ಬೇರೆವ್ರು  ಹೇಳಿದ್ದನ್ನ-ಬರೆದದ್ದನ್ನ ಕಾಪಿ ಮಾಡ್‌ಬೇಕಾ?ಅಂತ  'ಶೇಂ -ಶೇಂ' ಅಂತ ಹೋಗಿದ್ದು!!
--------------------------------------------------------
 ವಿಜೇತ ಅಂತಾನೆ ಏಕೆ ಹೆಸ್ರು ಇಕ್ಕಿದ್ದು?---------------------------------------------------------
ನನ್ನ ನೆನಪು ಹತ್ತು ವರ್ಷ ಹಿಂದಕ್ಕೆ ಸಾಗಿತು....
 
ನಾ ಕಾಲೇಜಲ್ಲಿ ಓದುವಾಗ ಒಂದು ಹುಡುಗಿಯನ್ನ ಪ್ರೀತಿಸಿದ್ದು, ಹೆಚ್ಚಿನ ವಿಧ್ಯಾಭ್ಯಾಸಕ್ಕೆ ಅಂತ ಅವಳು ನಾ ಬೇರೆ ಬೇರೆ ಊರುಗಳಿಗೆ ಹೋಗಿದ್ದು,
ಆಮೇಲೆ ಮನೆವ್ರ ಒತ್ತಾಯಕ್ಕೆ ಕಟ್ಟು ಬಿದ್ದು ಅವಳು ಬೇರೆ ಯಾರ್‍ನೋ ಮದುವೆಯಾಗಿದ್ದೂ,
ಆಮೇಲೆ ನಾ ಮನೆವ್ರು ನೋಡಿದ ನಾನೂ ಮೆಚ್ಚಿದ 'ನನ್ನವಳನ್ನ' ಮದುವೆ  ಆಗಿದ್ದು,
ಆ ಕಾಲೇಜು ಹುಡುಗಿ ನೆಂಪಲ್ಳಿ ಹುಟ್ಟಿದ ಮಗಳಿಗೆ ವಿಜೇತ ಅಂತ ಹೆಸ್ರು ಇಟ್ಟದ್ದು ,
ಪುಟ್ಟಿ ಗೆ ಏನು ಹೆಸ್ರು ಇಡುವುದು?
ಅಂತ ತಲೆ ವಿಪರೀತ   ಕೆಡಿಸ್ಕೊಂಡು, ಅವರಿವರು ಹೇಳಿದ್ದು-ಪೇಪರ್-ಬೋರ್ಡು-ಇಂಟರ್‌ನೆಟ್ಎಲ್ಲವನ್ನೂ ಹುಡುಕಾಡಿ ನನ್ನವಳು ಹೇಳಿದ ಯಾವೊಂದು ಹೆಸರುಗಳಿಗೂ ನಾ 'ಕೊಂಕು' ತೆಗೆದು ಅದ್ಕೆ 'ಅಪಾರ್ಥ' ಇದೆ ಅಂತೆಲ್ಲಾ ಹೇಳಿ ಕೊನೆಗೆ ಅವಳನ್ನ ಒಪ್ಪಿಸಿ 'ವಿಜೇತ' ಅಂತ ಹೆಸ್ರು ಇಕ್ಕಿದ್ದು ಎಲ್ಲವೂ ನೆನಪೀಗ್ ಬಂತು...ಆದ್ರೆ ಇದನ್ನೆಲ್ಲ ಪುಟ್ಟಿ ಗೆ ಹೇಳೋಕ್ ಆಗುತ್ತೆಯೇ?ಅಲ್ದೇ ಹೇಳಿದ್ರೂ ಏನು ಅರ್ಥ ಆದೀತು? ಹಾಗೆಯೇ ತಲೆಯಲ್ಲಿ ಅದೊಮ್ಮೆ  ನಾ ಪೆಪರ್ ಒಂದರಲ್ಲಿ ಓದಿದ ಈ ವಿಚಾರ ನೆನಪೀಗ್ ಬಂತು ಪ್ರೇಯಸಿ  ನಮಗೆ ನೆನಪಾಗಿ ಉಳಿಯುವುದು ನಮ್ಮ ಪಾಸ್ವರ್ಡ್ ಆಗಿ!......... ಅಂತ :)))
---------------------------------------------------------------------------------------ವಿ-ಸೂ: ಇದು ಜಸ್ಟ್ ಕಾಲ್ಪನಿಕ ಬರಹ, ಪಾತ್ರಗಳೂ -ಸನ್ನಿವೇಶಗಳೂ- ಎಲ್ಲವೂ... 
 
 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

pavu ಧ, 02/08/2012 - 13:51

ಕಾಲ್ಪನಿಕ ಆದರೂ ತುಂಬಾ ಚೆನ್ನಾಗಿದೆ ವೆಂಕಟ್.

venkatb83 ಮಂಗಳ, 05/22/2012 - 00:47

 

 

 

ಪವಿತ್ರ ಅವ್ರೆ-

ನನ್ ಈ ಹಳೆಯ ಬರಹವನ್ನ ಈಗ ನೋಡಿದೆ...:(೯

ನನ್ ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ...

ಪ್ರತಿಕ್ರಿಯೆಗೆ 

ನನ್ನಿ
\|/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.