Skip to main content

ನಿಜವಾದ ಸ್ನೇಹ, ಪ್ರೀತಿಗೂ ಬೆಲೆ ಎಲ್ಲಿ...?

ಇಂದ Naveen S Gowda
ಬರೆದಿದ್ದುJanuary 23, 2012
noಅನಿಸಿಕೆ

LOVE IS NOT ONLY A PHYSICAL ATTRACTION, LOVE IS NOT ONLY A SECURITY EACH OTHER LOVE IS NOT JUST HOLDING HADS, HUGGING AND KISS,,,, LOVE MEANS SILENT COMMUNICATION, BETWEEN TWO HEARTS such heart love once in a life, if it fail automatically that heat will die, If you are right means, definitely you will get right partner in your life,
- Naveen S Gowda
ಹಾಯ್,
ಇಷ್ಟೊಂದು ಬ್ಲೇಡ್ ಹಾಕ್ತಾ ಇದೀನಿ ಅಂತ ಮನಸಿನಲ್ಲೇ ಉಗಿತಾ ಇದೀರಾ, ಕ್ಷಮಿಸಿ.
ನಾನು ಒಬ್ಬ ಆಶಾದಾಯಕ ಹುಡುಗ ನನಗೆ ನನ್ನದೇ ಆದ ಕೆಲವು ನಿಬಂಧನೆಗಳು, ಶರತ್ತುಗಳು, ದಾರಿ, ಗುರಿ ಹೊತ್ತಿದ್ದವನು. ಹೀಗೆ ಒಮ್ಮೆ ಎಲ್ಲಾ ಓದಿನಲ್ಲ ಮುಂದಿದ್ದ ನಾನು ನನ್ನ ಕೊನೆಯ  ಇಯರ್ ನಲ್ಲಿ ಓದುತ್ತಿರ ಬೇಕಾದರೆ ನನಗೆ ಅರಿವಿಲ್ಲದೆಯೆ ಯಾವುದೋ ಒಂದು ಕಾಲೇಜಿನ ಸಮಸ್ಯೆಯಲ್ಲಿ ತಗುಲಿಕೊಂಡು ಬಿಟ್ಟೆ, ನನಗರಿವಿಲ್ಲದೆಯೆ ಏನಾಗಿದೆ ಎಂದು ಅರಿಯುವಷ್ಟರಲ್ಲಿ ನಾನು ಕಾಲೇಜಿನಿಂದ ರೆಸ್ಟಿಗೇಟ್ ಆಗಿಬಿಟ್ಟೆ , ಆದರೆ ಆಗಿದ್ದು ಮಾತ್ರ ಅವಮಾನ ವಲ್ಲವೆ, ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಅಲ್ಲವೆ. ಜೂನಿಯರ್, ಪ್ರೆಶರ್ ಗಳು, ಲೆಕ್ಚರುಗಳು ಎಲ್ಲರಿಂದ ದೂರವಾದವನೆ  ಮನೆ ಸೇರಿಕೊಂಡೆ.
ಮನೆ ಸೇರಿಕೊಂಡವನಿಗೆ ಎದುರಾಗಿದ್ದು ನನ್ನ ತಂದೆಯ ಹಾರ್ಟ್ ಪ್ರಾಬ್ಲಮ್, ಮನೆಯ ಸಣ್ಣ-ಪುಟ್ಟ ಕೆಲಸ ಮಾಡುತ್ತಾ ಮನೆ ಕಡೆಗೆ ಗಮನ ವಹಿಸಿದ ನನಗೆ ಎಲ್ಲವನ್ನೂ ಮರೆತು ಎಂಜಿನಿಯರ್ ಆಗಬೇಕಿದ್ದವ ಪಂಜರದ ಗಿಳಿಯಾಗಿಟ್ಟೆ,. ಹಾಗೂ ಹೀಗೂ ಜೀವನ ಸಾಗುತ್ತಲೇ ಇತ್ತು.
ಹೀಗೇ ಇರ ಬೇಕಾದರೆ ನಮ್ಮ ಮನೆಯ ಮುಂದೆ  ಮೂರು ಹುಡುಗಿಯರ ಗುಂಪೋಂದು ಬಂದು ಸೇರಿಕೊಂಡಿತು. ಮೊದ ಮೊದಲು ಅವರು ಯಾರೂ ಎಂದೇ ತಿಳಿಯದ ನಮಗೆ ಸುತ್ತ ಮುತ್ತಲಿನ ಜನ, ಸಂತೋಷಣ್ಣ, ಅವರ ತಾಯಿ, ಹುಡುಗರು, ಸ್ನೇಹಿತರು, ಪರಿಚಯಸ್ತರು ಸೇರಿ ಎಲ್ಲರು ರೇಗಿಸ ತೊಡಗಿದರು. ಅವರಲ್ಲಿ ಯಾರನ್ನಾದರೂ ಪಟ್ಟಾಯಿಸುವಂತೆ ರೇಗಿಸುತ್ತಿದ್ದರು. ನಮಗೂ ಗುಡುಗಾಟ ಹಾಗೂ ಹೀಗೂ ದಾರಿಯಲ್ಲಿ ಹೊಗುತ್ತಿದ್ದ ಹುಡುಗಿಯರನ್ನು ಗಮನಿಸ ತೊಡಗಿದೆವು. ನಂತರದ ದಿನಗಳಲ್ಲಿ ಯಾರೂ ಹಿಡಿಸುತ್ತಿರಲಿಲ್ಲ, ಓಬ್ಬಳು ಗಾಳಿಬಂದರೆ ಹಾರಿ ಹೋಗುವ ಸ್ಕೆಲಿಟನ್, ಇನ್ನೊಬ್ಬಳು ಕುಳ್ಳಿ, ಮತ್ತೊಬ್ಬಳು ನೋವಲು ಸ್ವಲ್ಪ ಪರವಾಗಿಲ್ಲ ಎಂದರೂ  ಮೂಗು ಮಾತ್ರ ಊರ ಗಾತ್ರ ಅದರಲ್ಲೂ ಬಾಯಿ ಬಡಕಿ ಬೇರೆ.( ಮುಖವೆಲ್ಲ ಬಂಗಾರ, ಆದರೆ ಮೂಗು ಮಾತ್ರ  ಕೇಳಲೇ ಬೇಡಿ ) ( ದೇಶಕ್ಕೆಲ್ಲಾ ನಾನೊಬ್ಬಳೇ ಎಂಜಿನಿಯರ್ ಎಂಬ ಅಹಂಕಾರ ಬೇರೆ }
ಅವರು ಯಾರು ಏನು ಮಾಡುತ್ತಿದ್ದಾರೆ ಎಂದೇ ತಿಳಿಯದ ನನಗೆ ಕೆಲವು ದಿನಗಳಲ್ಲಿ ತೀಕ್ಕ್ಷ್ಣವಾಗಿ ಗಮನಿಸ ತೊಡಗಿದೆ.
ಅದಾಗುವ ಮೊದಲೇ ಇವರ ಹೆಸರು ಊರಲ್ಲೆಲ್ಲಾ ಅರಿದಾಡ ತೊಡಗಿತ್ತು, ಅಲ್ಲ್ಲಿನ ಲೋಕಲ್ ಹುಡುಗನೊಬ್ಬ ಮೂವರಲ್ಲಿ ಒಬ್ಬಳಾದ ಕುಳ್ಳಿಯ ಹಿಂದೆ ತಿರುಗ ತೊಡಗಿದ್ದ. ಆದರೆ ಇವರು ಮಾತ್ರ ಯಾರಿಗೂ ಸಿಕ್ಕಿರಲಿಲ್ಲ. ಒಂದುದಿನ ಅವರಿಗೆ ಇನ್ನೊಬ್ಬ ಳಾದ  ಸ್ಕೆಲಿಟನ್ ಅವಾಜ್ ಹಾಕಿದ್ದಳಂತೆ, ಇದು ನನ್ನ  ಕಿವಿಗೆ ಬಿತ್ತು. ಅವರು ಮೊದಲೇ ಪೋಲೀ ಹುಡುಗರು ಏನು ಬೇಕಾದರೂ ಮಾಡುವಂತಾ ಕಿರಾತಕರು ಇದು ಸ್ಕೆಲಿಟನ್ ಗೆ ತಿಳಿದಿರಲ್ಲಿಲ್ಲವೇನೋ ಪಾಪ. ಈ ವಿಷಯ ಅವರದ್ದೇ ಗ್ಯಾಂಗಿನಲ್ಲಿದ್ದ ನನ್ನ ಸ್ನೇಹಿತನೊಬ್ಬ ನನಗೆ ತಿಳಿಸಿದ, ಆದರೆ ನನಗೇನು ಆಗಬೇಕು, ಮೊದಲೇ ಸಹಾಯಕ್ಕೆ ಹೋಗಿ ಓದನ್ನೇ ಕಳೆದುಕೊಂಡಿದ್ದ ನಾನು ಸುಮ್ಮನಾದೆ.
ಆದರೆ ಊಟ ಆದ ಮೇಲೆ ಮನೆಯ ಟೆರೆಸ್ ಮೇಲೆ ತಿರುಗಾಡುವ ಅಭ್ಯಾಸ ಹೊಂದಿದ್ದ ನಾನು ಹಾಗೇ ಅವರ ಬಗ್ಗೆ ಯೋಚಿಸ ತೊಡಗಿದೆ, ಕೆಲವು ದಿನಗಳು ಗಮನಿಸ ತೊಡಗಿದೆ, ದಾರಿಯಲ್ಲಿ ಅವರನ್ನು ಹಿಂಬಾಲಿಸುವುದು, ರಾತ್ರಿ ಅವರೇನಾದರೂ ಹೊರಗೆ ಹೋದರೆ ಅವರ ಬರುವುದನ್ನು, ಹೊಗುವುದನ್ನು , ಅಂಗಡಿಗೆ ಹೊದರೆ ಹಿಂಬಾಲಿಸುವುದನ್ನು, ಪೋನಿನ ಮೂಲಕ ವಾಚ್  ಮೆನ್ ಗಳಿಂದ ಮಾಹಿತಿ ಪಡೆಯುವುದನ್ನು  ಗಮನಿಸಿದ ನಾನು ಮೊದಲೇ ಪೊಲೀಸ್ ನಲ್ಲಿ ಸ್ವಲ್ಪ ಪರಿಚಯವಿದ್ದದ್ದರಿಂದ ಅದನ್ನು ಉಪಯೋಗಿಸಿ ಅವರನ್ನ ಕೆಲವು ದಿನಗಳ ಮಟ್ಟಕ್ಕೆ ಮಾವನ ಮನೆಗೆ ಕಳುಹಿಸಿದೆ. ಆದರೆ ಇದು ನನ್ನದೇ ಕೆಲಸ ಇರಬಹುದೆಂದು  ಸ್ಕೆಲಿಟನ್ ಮತ್ತು ಗ್ಯಾಂಗ್, ಆ ಲೋಕಲ್ ಹುಡುಗರಿಗೆ ತಿಳಿಯದಂತೆ ಕಾಪಾಡಿಕೊಂಡೆ.
ಆ ನಂತರ ಕೆಲವೇ ದಿನಗಳಲ್ಲಿ ಅವರ ಸ್ನೇಹ ನನಗಾಯಿತು, ಮಾಹಿತಿ ದೊರೆಯಿತು, ಆದರೆ ಸ್ವಲ್ಪ ಮರವಿನ ಕಾಯಿಲೆ ಹೊಂದಿದ್ದ ನನಗೆ ಅವರ ಹೆಸರುಗಳ ಗುರುತಿರಲಿಲ್ಲ, ಹೆಣ್ಣು ಮಕ್ಕಳಿಲ್ಲದೆ ಬೆಳೆದವನಾದರೂ ಅವರ ಬಗ್ಗೆ ಅಪಾರವಾದ ನಂಬಿಕೆ, ಭಕ್ತಿಯಿದ್ದಂತಾ ಕುಟುಂಬ ನಮ್ಮದು, ಎಲ್ಲರೂ ರೇಗಿಸುತ್ತಿದ್ದ ಹಾಗೆ ನನಗೂ ಸ್ವಲ್ಪ ಅವರ ಪ್ರೀಡಂ, ಜಾಲಿ, ಎಂಜಾಯ್ ಮಾಡುತ್ತಿದ್ದನ್ನ ಕಂಡು ಎಲ್ಲೋ ಒಂದುಕಡೆ ನೋವಾಗುತ್ತಿತ್ತು. ಏಕೆಂದರೆ ಯಾವತ್ತೂ ಹೊರಗೆ, ಸ್ನೇಹಿತರೊಡನೆ, ಯಾವುದಾದರೂ ಸರಿ ಒಂದು ರಾತ್ರಿಯೂ ಊರಿಂದ ಹೊರಗೆ ಕಳೆಯದ ನಾವು ಮನಸ್ಸಿ ನಲ್ಲೇ ನೋಯತೊಡಗಿದೆ.
ಹೀಗಿರಬೇಕಾದರೆ ಅವರ ಸ್ನೇಹವಾಗತೊಡಗಿತು ಅವರು ಏನಾದರೂ ಬೇಕಾದರೆ ನಮ್ಮ ಅಮ್ಮನ ಬಳಿ ಕೇಳುವುದು, ನಮ್ಮ ಮನೆಗೆ ಬರುವುದರಲ್ಲಿದ್ದ ಸ್ನೇಹ ಒಂದುದಿನ ಸಿನೆಮಾಗಾಗಿ ಮನೆಗೆ ಬಂದು ಕೇಳಿದರು. ಅದು ನನ್ನ ಬಳಿ ಇರಲಿಲ್ಲ ಆದರೂ ಬೇರೆ ಸಿನೆಮಾಗಳ ಸಿಡಿಗಳನ್ನ ನಮ್ಮ ಅಮ್ಮನಿಗೆ ಕೊಟ್ಟೆ, ಯಾವುದು ಬೇಕೋ ಅದನ್ನು ತೆಗೆದುಕೊಂಡು ಉಳಿದವುಗಳನ್ನ ವಾಪಾಸ್ ಮಾಡಿದರು, ನಾನು ನನ್ನ ಸ್ನೇಹಿತನಿಂದ "ಮುಂಗಾರು ಮಳೆ " ಸ್ಕೆಲಿಟನ್ ಗೆ ನೀಡಿದೆ.
ನಾನಾಗಿ ನಾನೇ ಮಾತನಾಡಿಸದೆ, ನಮ್ಮ ಅಮ್ಮ ನ ಮುಕಾಂತರ ಅಲ್ಲಿಗೆ ನಿಲ್ಲದ ಸ್ನೇಹ, ನಾನು ನನ್ನ ಸ್ನೇಹಿತರನ್ನ ಮನೆಗೆ ಬರದಂತೆ ಎಲ್ಲರನ್ನೂ ದೂರ ಮಾಡಿದೆ, ಇವರಿಗೆ ತೊಂದರೆ ಯಾಗಬಾರದೆಂದು ಎಲ್ಲರನ್ನೂ ಬರದಂತೆ ಮಾಡಿದೆ. ಹೀಗೆ ಕೆಲದಿನಗಳು ನಡೆಯುತ್ತಿದ್ದ ದಿನಗಳಲ್ಲಿ ಒಮ್ಮೆ ದಿಡೀರನೆ ಬಂದು ಅವರ ಲ್ಯಾಪ್ಟಾಪ್ಫ್ ರಿಪೇರಿ ಮಾಡಿಕೊಡುವಂತೆ ಕೇಳಿದರು. ಸಂಜೆಯಾದ್ದರಿಂದ ನಮ್ಮ ಮನೆಯಲ್ಲೇ ಅವರೊಂದಿಗೆ ರೂಮಿನಲ್ಲಿ ಕುಳಿತು ರಿಪೇರಿ ಮಾಡ ತೊಡಗಿದೆ. ಆದರೆ ಅದು ನಿಮಿಷಗಳಿಗೆ ಮುಗಿಯದ ಕೆಲಸವಾದ್ದರಿಂದ ನನಗೂ ಕೆಲಸ ವಿದ್ದಿದ್ದರಿಂದ ಸ್ವಲ್ಪ ಸಮಯ ಕೇಳಿದೆ ಅವರು ಸ್ಕೆಲಿಟನ್ ಜೊತೆ ಅವರ ಮನೆಗೆ ಹೊರಟು ಹೋದರು.
ರಾತ್ರಿ ಸುಮಾರು ಹತ್ತು ಘಂಟೆ ಯಾಗಿರಬಹುದು, ನಾನು ಅದನ್ನ ರಿಪೇರಿ ಮಾಡಿ ಮುಗಿಸಿ ಅದರಲ್ಲಿದ್ದ ಪೊಟೋಗಳನ್ನ ನೋಡುತ್ತಿದ್ದೆ, ಅದರಲ್ಲಿದ್ದ ಎಲ್ಲರ ಪೋಟೋ ನೊಡುತ್ತಾ ನೊಡುತ್ತಾ ಅದರಲ್ಲಿದ್ದ ಸ್ಕೆಲಿಟನ್ ಪೊಟೋ ಅತಿಯಾಗಿ ಇಂಪ್ರಸ್ ಮಾಡಿತು. ದಿಡೀರನೆ ನೋಡಿದೆ ನನ್ನ ಪೆನ್ ಡ್ರ್ಯ್ ವ್ ಇರ್ಲಿಲ್ಲ, ತಕ್ಷಣ ಅವರದ್ದೇ ಕೇಳಿ ಪಡೆದ ನಾನು, ಅವರಿಗೆ ಕಾಗೆ ಹಾರಿಸಿ ಇನ್ನು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿ ಲ್ಯಾಪ್ಟಾಪ್ಫ್ ನನ್ನಲ್ಲೇ ಉಳಿಸಿಕೊಂಡೆ. ಬೆಳಿಗ್ಗೆ ಅವರು ಕೆಲಸಕ್ಕೆ ಹೊಗುವವರೆಗೆ ಕಾಣಿಸಲೇ ಇಲ್ಲ, ನಂತರ ಅದರಲ್ಲಿದ್ದ ಸ್ಕೆಲಿಟನ್ ಪೊಟೋಗಳನ್ನ ತೆಗೆದು ನನ್ನ ಕಂಪ್ಯೂಟರ್ ಗೆ ಹಾಕಿಕೊಂಡೆ.
ಕೆಲವೇ ದಿನಗಳಲ್ಲಿ ಯಾರಿಗೂ ಎಂದೂ ಶರಣಾಗದ ನಾನು, ಸ್ವ್ಲಲ್ಪ-ಸ್ವಲ್ಪವಾಗಿ ಸ್ಕೆಲಿಟನ್ ಎಡೆಗೆ ಜಾರಿಬಿದ್ದೆ. ಆದರೆ ವಿದ್ಯಾಭ್ಯಾಸವೇ ನನ್ನ ಜೀವನವಾದ್ದರಿಂದ ಅದನ್ನ ನಮ್ಮ ತಾಯಿಗೆ ತಿಳಿಸಿದೆ, ಅವರಿಗು ಇಷ್ಟವಾಗಿದ್ದ ಒಂಟಿ ಪ್ರಾಣಿಯಂತೆ, ಹುಬ್ಬಚ್ಚಿಯಂತಿದ್ದ ಸ್ಕೆಲಿಟನ್ ಬಗ್ಗೆ ಒಳ್ಳೆಯ್ ಅಬಿಪ್ರಾಯ ಸೂಚಿಸಿದ ನಮ್ಮ ತಾಯಿ ಯೊಚಿಸುವಂತೆ ಹೇಳಿದರು. ಇದನ್ನು ಸೀರಿಯಸ್ಸಾಗಿ ಯೋಚಿಸಿದ ನಾನು  ಪದೇ-ಪದೆ ಪೀಡಿಸುತ್ತಿದ್ದ  ಸಂತೋಷಣ್ಣನಿಗೆ ಕೊನೆಗೊಂದು ದಿನ ಒಪ್ಪಿಗೆ ಸೂಚಿಸಿದೆ. ಸಂದೇಶ ಹೊತ್ತು ಅವಾರು ಸ್ಕೆಲಿಟನ್ ಬಗ್ಗೆ ನಮ್ಮ ತಂದೆಯ ಬಳಿ ಹೇಳಿದರು, ಆದರೆ ಪ್ರತಿಷ್ಠೆಯ ಹಾಗೂ ಮನೆತನದ ಹೆಸರಿನಲ್ಲಿ ಅವರಿಗೆ  ಮುಖಭಂಗಮಾಡಿದ ನಮ್ಮ ತಂದೆ ಅವರಿಗೆ ಆಗುವುದಿಲ್ಲವೆಂದು ನಿರಾಕರಿಸಿಬಿಟ್ಟರು.
ಆದರೆ ಬಹುಮತ ನಮ್ಮಲ್ಲಿದ್ದದ್ದರಿಂದ ಅದು ಮನೆಯಲ್ಲಿ ಪ್ರಸ್ತಾಪವಾಗದೆ ಅಲ್ಲಿಗೇ ಸುಮ್ಮನಾಯಿತು. ನಾವು ನಮ್ಮ ಮನೆಯಲ್ಲಿ ತುಂಬಾ ಸ್ನೇಹಿತರಾಗಿ ಬೆಳೆದ ಕಾರಣ ನಮ್ಮ ತಂದೆಗೆ ವಿರುದ್ದವಾಗಿ ಮಾತನಾಡುವ ಸ್ತಿತಿಯಲ್ಲಿ ಇರಲಿಲ್ಲ..
ಆದರು ಅತಿಯಾದ ಪೋಟೋ ಜೊತೆ ಮಾತು ಕಥೆ, ತುಂಬಾ ಆಳವಾಗಿ ಯೊಚಿಸ ತೊಡಗಿದೆ, ಒಬ್ಬನೇ ಮಾತನಾಡಿಕೊಳ್ಳಲಾರಂಬಿಸಿದೆ, ಪೊಟೋವನ್ನೇ ವಾಸ್ತವಿಕವಾಗಿ ಭಾವಿಸ ತೊಡಗಿದೆ, ಎಲ್ಲವನ್ನೂ ಗಮನಿಸಿದ ಮನೆಯಲ್ಲಿ ಎಂದೂ ಕಾಣದ್ ಸಣ್ಣ-ಪುಟ್ಟ ಜಗಳಗಳಾಗ ತೊಡಗಿದವು. ನಾನು ನನ್ನ ಓದಿನ ಬಗ್ಗೆ ಗಮನಹರಿಸುವಂತೆ ಸೂಚಿಸಿದರು. ನಾನೂ ಸ್ವಲ್ಪ ಆಲಸ್ಯ ಮಾಡಿ ಸ್ಕೆಲಿಟನ್ ತಂಗಿಯೊಡನೆ ಅಸಭ್ಯವಾಗಿ ಬಿಹೇವ್ ಮಾಡ ತೊಡಗಿದೆ. ಆದರೂ ಮನಸ್ಸಿಗೆ ನೋವಾಗ ಗೊಡಗಿತ್ತು, ಆದರೂ ಏನುಮಾಡುವ ಪರಿಸ್ಥಿತಿಯಲ್ಲಿ ಇಲ್ಲದ ಕಾರಣ ಸ್ಕೆಲಿಟನ್ ತಂಗಿಯೊಡನೆ ಜಗಳವಾಡಿಬಿಟ್ಟೆ.
ಅವರಿಂದ ದೂರವಾಗಲು ನನಗಿದ್ದ ಒಂದು ದಾರಿಯನ್ನು ನನು ಉಪಯೋಗಿಕೊಂಡೆ ಆದರೂ ಬಲು ಕೆಟ್ಟದಾಗಿ ಬಿಹೇವ್ ಮಾಡಿದೆ. ಮನಸ್ಸಿನಲ್ಲಿ ಎಲ್ಲೋ ಒಂದು ಕಡೆ ಅತಿಯಾಗಿ ಸ್ಕೆಲಿಟನ್ ಬಳಿಗೆ ಹೊಗುತ್ತಿದ್ದ ನನ್ನನ್ನು ನಮ್ಮ ಅಮ್ಮ ಆಸೆ ತುಂಬ ತೊಡಗಿದ್ದರು. ( ಲಡ್ಕಿಕೊ ಪಟಾನ ಹೋ ತೋ, ಪೆಹಲೆ ಉಸ್ ಕಿ ಬೆಹೆನ್ ಕೊ ಪಟಾ ವೋ ) ಅಂತ ಅಂದು ಕೊಂಡೇ ಸ್ಕೆಲಿಟನ್ ತಂಗಿಯೊಂದಿಗೆ ಜಗಳವಾಡುತ್ತಿದ್ದ ನಾನಗೆ  ಹದಿನಾಲ್ಕು ತಿಂಗಳುಗಳಲ್ಲಿ, ನನಗೇ ಅರಿವೇ ಇಲ್ಲದೆ ಬಿಟ್ಟು ಬದುಕಲಾರದಷ್ಟು ಪೊಟೋವನ್ನ ಪ್ರೀತಿಸ ತೊಡಗಿದ್ದೆ. ಕೆಲಸಕ್ಕೆ ಹೋಗಿ ರಾತ್ರಿ ತಡವಾಗಿ ಮನೆಗೆ ಬರ ತೊಡಗಿದೆ , ಬೆಳಿಗ್ಗೆ ನಿಧಾನವಾಗಿ ಎಚ್ಚರ ಗೊಳ್ಳುತ್ತಿದ್ದೆ. ಅವರು ಕೆಲಸದಿಂದ ಬರುವ ಮುನ್ನ ಮನೆ ಬಿಡುತ್ತಿದ್ದೆ. ಏನೇ ಮಾಡಿದರೂ ಟುಸ್ಸ್ಸ್ಸ್ಸ್ಸ್ಸ್ಸ್,,,,
ಮನಸ್ಸಿಗೆ ತುಂಬಾ ನೋವಾಗಿದ್ದು ಸ್ಕೆಲಿಟನ್  ಯಾರೋ ಹುಡುಗನೊಂದಿಗೆ ತಿರುಗಾಡುತ್ತಿರುವ ವಿಷಯ ಬೇರೆಯವರ ಬಾಯಿಯಿಂದ ನನ್ನ ಕಿವಿಗೆ ಬಿದ್ದಾಗಲೇ, ನಾನು ನಮ್ಮ ತಾಯಿಗೆ ಹೇಳಿದೆ ಆಗ ತಿಳಿಯಿತು ಅದು ನಿಜ ಎಂದು, ನಮ್ಮ ತಾಯಿ ನನಗೆ ನೊವಾಗಬಾರದೆಂದು ಈ ವಿಷಯ ನನ್ನಿಂದ  ಮುಚ್ಚಿಟ್ಟಿದ್ದರು. ತಡೆಯಲಾರದೆ ನಾನು ಮತ್ತೆ ಸ್ಕೆಲಿಟನ್ ತಂಗಿಗೆ ಇ-ಮೇಲ್ ಮಾಡಿಯೇ ಬಿಟ್ಟೆ " ನಿಮ್ಮ ಅಕ್ಕ ಯಾರೋ ಒಬ್ಬನ ಜೊತೆ ತಿರುಗಾಡುತ್ತಿದ್ದಾರೆ, ಅದರಿಂದಾಗಿ ದಾರಿಯಲ್ಲ್ಲಿಹಾಗು ಮನೆಯ ಸುತ್ತಾ ಜನ ಕೆಟ್ಟದಾಗಿ ಮಾತನಾಡಿಕ್ಕೊಳ್ಳುತ್ತಿದ್ದಾರೆ ಎಂದು.
ಆದರೆ  ನಿಜ ಸಂಗತಿ ತಿಳಿಯದ ನನಗೆ ಶಾಕ್ ಕಾದಿತ್ತು, ಮೊದಲೇ ಮುಂಗೋಪಿಯಾದ ಅವಳು " ನೀನು ಯಾರು ನಮ್ಮ ವಿಷಯ ಮಾತನಾಡಲು, ಅವರು ನಮ್ಮ ಬಾವ " ಎಂದಳು. ಆದ್ರೆ ನಾನು ಹೇಳಿದು ಎಂದೂ ಇಲ್ಲದ ಕೆಟ್ಟ ಹೆಸರು ಈಗ ಬರುತ್ತಿದೆ ಎಂದು ಹೇಳಬಯಸಿದ್ದೆ, ಆದರೆ ಅವಳು ತಿಳಿದುಕೊಂಡಿದ್ದೇ ಬೇರೆ,
ಮತ್ತೆ ನಾನು ಅವಳನ್ನು ಸಂಧಿಸಿ ಮಾತನಾಡಿದೆ, ಕೊನೆಗೆ ಏನೂ ಬೇಡ ನಿನ್ನ ಸ್ನೇಹ ಕೊಡುವಂತೆ ಬೇಡಿಕೊಂಡೆ, ಆಯಿತು ಎಂದು ಹೇಳಿದ ಅವಳು ಮತ್ತೆ ಅದೇ ದ್ವೇಷ ಸಾಧಿಸ ತೊಡಗಿದಳು. ಮನಸ್ಸಿನಲ್ಲಿ ಹೆಣ್ಣು ನೆನೆದಂತೆ ಆಗಲೇ ಇಲ್ಲ .
ಅದ್ರೆ ಮನಸ್ಸಿಗೆ ತುಂಬಾನೋವಾಗುತ್ತಿದ್ದರೂ, ನಾನೇ ಮಾಡಿದ ಸ್ವಯಂ ಅಪರಾಧ. ಅದರಿಂದಾಗಿ ನನಗೆ ಉಳಿದಿದ್ದು ಮಾತ್ರ ಸ್ಕೆಲಿಟನ್ ವೇಲು, ಅವಳ ವೇಲನಲ್ಲಿದ ಗೆಜ್ಜೆ, ಅವಳಿಂದ ನಾನು ನನ್ನ ಬೈಕ್ ತರುವ ದಿನ ತೆಗೆದುಕೊಂಡ ೫೦ ರೂಪಾಯಿಯ ನೋಟು, ಅವಳ ನೆನಪು ಹಾಗೂ ಪೋಟೋ ಮಾತ್ರ,,,,
ಆದರೆ ನನಗೆ ನನ್ನ ಎಜುಕೇಶನ್  ಮತ್ತೆ ನನಗೆ ಸಿಕ್ಕಿತು...
ಇನ್ನೂ ತುಂಬಾ ಹೇಳುವ ಆಸೆ ಆದರೆ ಮನಸ್ಸಿಗೆ ಹಾಗೂ ಮನುಷ್ಯತ್ವಕ್ಕೆ ಬೆಲೆಕೊಡದ, ಹಣಕ್ಕೆ ಬೆಲೆಕೊಡುವ,ಮನಸ್ಸೇ ಇಲ್ಲದ ಹುಡುಗಿಯ ಬಗ್ಗೆ ಎಷ್ಟು ಮಾತನಾಡಿದರೂ ವೇಸ್ಟ್
ನಿಜವಾದ ಸ್ನೇಹಕ್ಕೂ ಪ್ರೀತಿಗೂ ಬೆಲೆ ಎಲ್ಲಿ...?

ಲೇಖಕರು

Naveen S Gowda

naveen

Am Very Cool and friendly man.
I love my friends and I lost every thing because of my friends. Still I love my friends.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.