Skip to main content

ಲಾಯರು-ಪೋಲೀಸರ ನಡುವೆ- ಸಾಮಾನ್ಯ ಜನರ ಪಜೀತಿ-ಪಡಿ ಪಾಟಲು

ಇಂದ venkatb83
ಬರೆದಿದ್ದುJanuary 18, 2012
2ಅನಿಸಿಕೆಗಳು

 ಬೆಳಗ್ಗೆ ಅದಾಗಲೇ ಆಫೀಸಿಗ್  ತಡವಾಗಿ, ಎದ್ದೋ ಬಿದ್ದೋ ಅಂತ  ಓಡೋಡಿ   ಹೋಗಿಬಸ್ಸು ಹತ್ತಿ ಕುಳಿತವರು,ನಿಂತವರು,ಪರ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಿ ಬಸು ನಿಲ್ದಾಣದತ್ತ ಹೊರಟವರು,ಆ ಕಡೆ- ಈ ಕಡೆ ಎಲ್ಲೆಲ್ಲೋ  ಕೆಲ್ಸಕ್ಕೆ ಸಂದರ್ಶನಕ್ಕೆ  ಹೋಗ್ತಿದ್ದವ್ರು ,ವಯೋ ವೃದ್ಧರು ,ಶಾಲೆಯಿಂದ ವಾಪಾಸ್ಸು ಮನೆಗೆ ಬರಬೇಕಿದ್ದ ಮಕ್ಕಳು,ಮತ್ತು 'ಆ ರಸ್ತೆ' ಗಳನ್ನ  ನಿತ್ಯದಂತೆ ಉಪಯೋಗಿಸ ಹೊರಟವರು ವಾಹನ ಸವಾರರು ,ಎಲ್ಲರೂ  ನಿನ್ನೆನಮ್ಮ 'ನ್ಯಾಯವಾದಿಗಳ' ಧಿಡೀರ್  ರಸ್ತೆ ತಡೆ, ಗೆ ಸಾಕ್ಷಿಯಾಗಿ ಮಧ್ಯಾಹ್ನ ೧೨ ರಿಂದ ಸಂಜೆ ೫-೬ ರವರಗೆ ರಸ್ತೆಲೆ ಹಿಂದೆಯೂ ಹೋಗಲು ಆಗದೆ, ಮುಂದೆಯೂ ಹೋಗಲುಆಗದೆ, ಊಟ-ತಿಂಡಿ- ನೀರು ಇಲ್ಲದೆ ಬಿರು ಬಿಸಿಲಲ್ಲಿ  'ಬಸವಳಿದು' ನಿಂತಿದ್ದರು... ನ್ಯಾಯವಾದಿಗಳಿಗೆ 'ಹಿಡಿ ಶಾಪ' ಹಾಕುತ್ತಿದ್ದರು, ಯಾರೋ ಒಬ್ಬ  'ಯುವ ನ್ಯಾಯವಾದಿಗೆ' ಪೇದೆಯೊಬ್ಬ ಠಾಣೆಗೆ ಕರೆದೊಯ್ದು  ಹೊಡೆದ ಅಂತ (ಚಾಲನ ಪರವಾನಿಗೆ ಇಲ್ಲದೇ ಚಾಲನೆ) ಅದು ಯಾವತ್ತೋ  ಆದ ಘಟನೆಗೆ  ನಿನ್ನೆ ಧಿಡೀರನೆ 'ಯುವ ನ್ಯಾಯವಾದಿಗಳು', ಹಿರಿಯರೂ ಸೇರಿ  ಸದಾ ಧಟ್ಟಣೆ ಇರ್ವ ಮೈಸೂರು ಬ್ಯಾಂಕ್ ಸರ್ಕಲ್ಲು, ಕಾರ್ಪೋರೇಶನ್  ಸರ್ಕಲ್ಲು, ರಸ್ತೆ ತಡೆ  ಮಾಡಿ, ಸಮಾಧಾನ ಗೋಳಿಸ ಹೋರಟ ಪೋಲೀಸರ ಮೇಲೆಯೂ ಹಲ್ಲೆ ಮಾಡಿ, ಇದನ್ನು ಪ್ರಶ್ನಿಸಿದ ಕೆಲ ವಯೋ ವೃದ್ಧ, ವಯಸ್ಸಾದ ಮಾಮೂಲಿ ಸಾಧಾರಣ 'ಸಾರ್ವಜನಿಕರ' ಮೇಲೆ ಹಲ್ಲೆ ಮಾಡಿ ನ್ಯಾಯವಾದಿಗಳ ಬಗೆಗೆ ಇದ್ದ  ಗೌರವಕ್ಕೆ ಚ್ಯುತಿ ತಂದರು. .  ಆ ಪೇದೆಯನ್ನ ಅಮಾನತು ಮಾಡಬೇಕು, ಸ್ವತಹ ಪೋಲೀಸು ಮಹಾ ನಿರ್ದೇಶಕರು,ಕಮೀಶನರೆ -ಬರಬೇಕು ಅಂತೆಲ್ಲ ಮುಷ್ಕರಕ್ಕೆ ಕುಳಿತ  ನ್ಯಾಯವಾದಿಗಳನ್ನ ಸಮಾಧಾನಪಡಿಸಲು  ಅವರೆಲ್ಲ ಬಂದು ನ್ಯಾಯವಾದಿಗಳ ಮುಂದೆ ಶರಣಾಗಿ ಅವ್ರ ಬೇಡಿಕೆ ಪ್ರಕಾರ ಆಪೇದೆಯನ್ನ ವಜಾ ಮಾಡಿದ್ದು ಆಯ್ತು!!.. ಸಾರ್ವಜನಿಕರ ಮೇಲೆ ಹಲ್ಲೆ ಆದಗಲಂತೂಪರಿಸ್ತಿತಿ ಬಹು ಪ್ರಕ್ಚುಬ್ಧವಾಗಿತ್ತು, ಒಂದು ಹಂತದಲಿ ಸಾರ್ವಜನಿಕರು ಮತ್ತುನ್ಯಾಯವಾದಿಗಳ  ಹೊಡೆದಾಟ -ಬಡಿದಾಟ  ಮಾತಿನ ಚಕಮಕಿ ನೋಡಿ  ಲಾತಿ ಚಾರ್ಜ್ ಮಾಡಿ , ಹಾಗೇ ಸೆಕ್ಚನ್ ೧೪೪ ಸಹಾ ಅಲ್ಲಿ ಜಾರಿ ಗೊಳಿಸಲಾಯ್ತು..  ಈ ಧಿಡೀರ  ಮುಷ್ಕರದ ಬಿಸಿ ಮಧ್ಯ ಬೆಂಗಳೂರಿನ ಎಲ್ಲೆಡೆ ವ್ಯಾಪಿಸಿ ಅದರ ಬಿಸಿಗೆ  ಪರಿಣಾಮಕ್ಕೆ, ಬಸ್ಸು-ಕಾರು-ಜೀಪು-ಆಟೋ ಎಲ್ಲವೂ ನಿಂತು  ಎಲ್ಲರೂ ಪರದಾಡಿ,ಪೊಲೀಸರಿಗೂ ಆ ನ್ಯಾಯವಾದಿಗಳಿಗೂ ಮನಸಾರೆ  ಬಯ್ಯುತ್ತಿದ್ದರು..  ಒಬ್ಬ ನ್ಯಾಯವಾದಿಗೆ ಪೇದೆ ಹೊಡೆದು ಬಡಿದು -ಮಾಡಿದ್ದರೆ ಅದನ್ನು ನ್ಯಾಯಾಲಯದಲ್ಲಿ,ಇಲ್ಲವೇ ಅಲ್ಲೇ ಪಕ್ಕದಲ್ಲೀರ್ವ ಪೋಲೀಸು ಮಹಾ ನಿರ್ದೇಶಕರ ಕಚೇರಿಗೆ ಹೋಗಿ ಮನವಿ ಸಲ್ಲಿಸಿ  ಶಾಂತಿಯುತ ಪ್ರತಿಭಟನೆ ನಡೆಸ ಬಹುದಿತ್ , ಆದರೆ ಧಿಡೀರನೆ ಹೇಳದೆಕೇಳದೆ, ಯಾವದೇ ಪರ್ಮಿಷನ್ನು  ಇಲ್ಲದೆ ಮುಷ್ಕರ ಮಾಡಿ ರೋಡ ಬ್ಲಾಕ್ ಮಾಡಿಸಾರ್ವಜನಿಕರ ಮೇಲೆ ಹಲ್ಲೆ ಮಾಡಿದ್ದು ಎಷ್ಟು ಸ್ಸರಿ? ಕಾನೂನು -ನ್ಯಾಯ ಕಾಪಾಡಬೇಕಾದ ಗುರುತರ ಜಾವಾಬ್ಧರಿ ಇರ್ವ ಆ ನ್ಯಾಯವಾದಿಗಳುಕಾನೂನು ಉಲ್ಲಂಘಿಸಿ  ಸಾರ್ವಜನಿಕರ ಪ್ರವೇಶಕ್ಕೆ ಅಡ್ಡಿ ಮಾಡಿ ಹಲ್ಲೆ ಮಾಡಿಬೆಂಗಳೂರಿನ ಇತಿಹಾಸಕ್ಕೆ ಒಂದು  ಕೆಟ್ಟ ದಿನ ಸೇರಿಸಿದರು..ಇದಕ್ಕೆ ಕಾರಣರಾದ ಎಲ್ಲರ ವಿರುದ್ಧ ಪೊಲೀಸರು ನಿರ್ದಾಕ್ಚಿನ್ಯವಾಗಿ ಕ್ರಮ ತೆಗೆದುಕೊಂಡು ಶಿಕ್ಷಿಸಬೇಕು.. ಏನೇ ಯಾರಿಗೂ ತೊಂದ್ರೆ ಆದರೂ ಅವ್ರ  ಮುಷ್ಕರ, ಹೋರಾಟ, ಕ್ಕೆಸಾಮಾನ್ಯ ಜನ  ತಾಪತ್ರಯ ಅನುಭವಿಸಬೇಕೆ? ಇವತ್ತಿನ ಕೆಲ ರಾಜಕಾರಣಿಗಳ  ಹೇಳಿಕೆ ಗಮನಿಸಿ, ಕೆಲವರು ಮಾತ್ರ  ಅದನ ಖಂಡಿಸಿ,ಹಲವರು ಪರ -ವಿರೋಧ ಹೇಳಿಕೆ ಕೊಟ್ತ್ತದ್ದಾರೆ ...ಸಾಮಾನ್ಯ ಜನತೆಯ  'ಸ್ವಾತಂತ್ರ್ಯ ಹರಣ'  ಅಂದ್ರೆ ಇದೆ ಇರಬೇಕು >>>>>ಹಿಂದೊಮ್ಮೆ 'ಕುಮಾರ ಸ್ವಾಮೀ' ಅವ್ರ  ಪಕ್ಷದ -ಮುಷ್ಕರದ ಬಿಸಿ ಮಧ್ಯ ರಾತ್ರಿವರ್ಗೆ ತಟ್ಟಿತ್ತು  ಅದ್ನ ಬೆಂಗಳೂರು ಜನ ಮರೆತಿಲ್ಲ!!   ------------------------------------------------------------------------------------------------------------------->>>>ಇದೀಗ ಬಂದ ಮಾಹಿತಿ: (ಕೃಪೆ- that's  Kannada )ಮಂಗಳವಾರ ಬೆಂಗಳೂರಿನಲ್ಲಿ ವಕೀಲರ ಪುಂಡಾಟಿಕೆ ಅಕ್ಷಮ್ಯ. ತಪ್ಪು ಮಾಡಿದ ವಕೀಲರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಮಹಾದೇವ ಬಿದರಿ ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ವಕೀಲರಿಂದ ಹಲ್ಲೆಗೊಳಗಾದ ಪೇದೆ ಅರುಣ್ ಅವರನ್ನು ಅಮಾನತುಗೊಳಿಸಿಲ್ಲ ಎಂದು ಬಿದರಿ ತಿಳಿಸಿದ್ದಾರೆ.

ವಕೀಲರ ಟ್ರಾಫಿಕ್ ಜಾಮ್ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಅವರು ಸಲ್ಲಿಸಿರುವ 20 ಪುಟಗಳ ಸುದೀರ್ಘ ವರದಿಯನ್ನು ಸ್ವೀಕರಿಸಿ, ಮಾತನಾಡಿದ ಬಿದರಿ ಇನ್ಮುಂದೆ ಯಾರಿಗೇ ಆಗಲಿ ಈ ರೀತಿ ಪುಂಡಾಟಿಕೆ ನಡೆಸಲು ಬಿಡುವುದಿಲ್ಲ. ಇದು ಗುರುತರ ಅಪರಾಧ. 5 ನಿಮಿಷಕ್ಕಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಮಾಡಲು ಯಾವುದೇ ವ್ಯಕ್ತಿ-ಶಕ್ತಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿದರಿ ಹೇಳಿದ್ದಾರೆ. 

'ಎಲ್ಲದಕ್ಕೂ ಒಂದು ಮಿತಿ ಇದೆ. ಕಾನೂನು ಹಿಡಿತದಿಂದ ಪಾರಾಗಬಹುದು ಎಂಬ ಭ್ರಮೆ ಬೇಡ' ಎಂದೂ ಬಿದರಿ ನಗಾರಿ ಬಾರಿಸಿದ್ದಾರೆ.   >>>>>>  ಅದು ಅತಿ ಶೀಘ್ರ ಆಗಲಿ ಎಂಬ ಆಶಯ ನಮ್ಮದು.....    

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

Nanjunda Raju Raju ಗುರು, 02/02/2012 - 18:51

ಮಾನ್ಯರೇ, ಇಲ್ಲಿ ಮುಖ್ಯವಾಗಿ ಗಮನಿಸಬೇಕಾಗಿರುವುದು ಸಮಯ ಪ್ರಜ್ಜ್ಞೆ. ಅಂದರೆ, ಒಬ್ಬ ಪೊಲೀಸ್ ಪೇದೆ. ವಕೀಲರು ಡ್ರೈವಿಂಗ್ ಲೈಸನ್ಸನ್ನು ತೋರಿಸಲಿಲ್ಲವೆಂಬ ಕಾರಣ ನೀಡಿ, ವಾಹನವನ್ನು ತಡೆದು ವಾಹನದ ಬೀಗದಕೈಯನ್ನು ಕಿತ್ತುಕೊಳ್ಳುವ ದರ್ಪವೇಕೆ ಬೇಕಿತ್ತು. ಹೋಗಲಿ ನಂತರ, ಕಾನೂನಿನಂತೆ, ಮೇಲಧಿಕಾರಿಗಳ ಗಮನಕ್ಕೆ ಪ್ರಕರಣವನ್ನು ತಂದು, ವಾಹನ ವಶಪಡಿಸಿಕೊಳ್ಳಬಹುದಿತ್ತು. ಅನುಚಿತವಾಗಿ, ವರ್ತಿಸಿದ್ದರೆ, ಕಾನೂನಿನಂತೆ ವಕೀಲನ ವಿರುದ್ದ ಕ್ರಮ ತೆಗೆದುಕೊಂಡಿದ್ದರೆ. ಪ್ರಪಂಚ ಮುಳುಗುತ್ತಿರಲಿಲ್ಲ. ಹಲ್ಲೆ ಮಾಡಿದ್ದು ಸರಿಯೇ? (ಸುದ್ದಿ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳಲ್ಲಿ ತೋರಿಸಿದಂತೆ) ಒಬ್ಬ ಪೇದೆ ಈ ರೀತಿ ವರ್ತಿಸಿದ್ದು ಸರಿಯೇ? ಒಬ್ಬ ಕಾನೂನು ತಿಳಿದ ಪೇದೆ ಈ ರೀತಿ ವರ್ತಿಸಬಹುದೇ? ಅಥವಾ ವಕೀಲರು ರೌಡಿಯಲ್ಲ, ದರೋಡೆಕೋರನಲ್ಲ. ಕೊಲೆಗಾರನು ಅಲ್ಲ. ಅಲ್ಲವೆ.
ನಮ್ಮ ರಾಜ್ಯದಲ್ಲಿ ಪೊಲೀಸರಿಗೆ ವಿಶೇಷ ಗೌರವವಿದೆ. ಅವರು ಸಾರ್ವಜನಿಕರ ನೆಮ್ಮದಿಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಡುತ್ತಾರೆ. ಎಂತಹ ಕಳ್ಳರನ್ನು, ಕೊಲೆಗಾರರನ್ನು ರೌಡಿಗಳನ್ನು ತಮ್ಮ ಜೀವದ ಹಂಗು ತೊರೆದು ಹಿಡಿಯುತ್ತಾರೆ. ಸಾರ್ವಜನಿಕ ಸೇವೆಗಾಗಿ ತಮ್ಮ ಹೆಂಡತಿ ಮಕ್ಕಳ ಹಿತವನ್ನು ಮರೆತು. ಸೇವೆ ಮಾಡುತ್ತಾರೆ. ಆದರೆ ಯಾರೋ ಒಬ್ಬಿಬ್ಬರು ಮಾಡುವ ಕೃತ್ಯಗಳಿಂದ ಸಜ್ಜನರೂ ಸಹ ತಲೆ ತಗ್ಗಿಸ ಬೇಕಾಗುತ್ತದೆ.
 
ಪೇದೆಯ ವರ್ತನೆಯ ವಿರುದ್ದ ದೂರು ಬಂದ ಕೂಡಲೇ ಪರಿಶೀಲಿಸಿ, ಪೇದೆಯ ಠಾಣೆಯ ಮೇಲಧಿಕಾರಿ, ಅಥವಾ ಎ.ಸಿ.ಪಿ.ಅಥವಾ ಡಿ.ಸಿ.ಪಿ. 
ಇವರುಗಳೇ, ಪೇದೆಯ ವಿರುದ್ದ, ಶಿಸ್ತು ಕ್ರಮ ತೆಗೆದುಕೊಂಡು, ಸೇವೆಯಿಂದ ಅಮಾನತ್ತು ಗೊಳಿಸಬಹುದಿತ್ತು.  ನಂತರ ಇಲಾಖಾ ವಿಚಾರಣೆ ನಡೆಸಿ ಆರೋಪ ಸರಿ ಇದ್ದರೇ, ಶಿಕ್ಷೆ ನೀಡಬಹುದಿತ್ತು. ಇಲ್ಲವಾದರೆ, ಶಿಕ್ಷೆಯನ್ನು ಕೈಬಿಡಬಹುದಿತ್ತು. ಇದರಿಂದ ಪೇದೆಗೂ ಯಾವುದೇ ಅನ್ಯಾಯವಾಗುತ್ತಿರಲಿಲ್ಲ.
ಇದನ್ನು ಬಿಟ್ಟು ಉಗುರಿನಿಂದ ಹೋಗುವುದನ್ನು ಕೊಡಲಿ ತೆಗೆದುಕೊಂಡಂತೆ,  ಆ ಪೇದೆಯ ಹಿಂದೆ ಇಡೀ ಇಲಾಖೆಯೇ ಅಲ್ಲದೇ ಸರಕಾರವೇ ಬೆಂಬಲಕ್ಕೆ ನಿಂತಂತಾಯಿತು. ಇದು ಸರಿಯೇ? ಇದು ಪ್ರತಿಷ್ಟೆ ಆಯಿತಷ್ಟೆ. ಇದರಿಂದಾಗಿ ವಕೀಲರು ಮುಷ್ಕರ ಹೂಡುವಂತಾಯಿತು. ಸಾರ್ವಜನಿಕರಿಗೂ ತೊಂದರೆಯಾಯಿತು.
ಮುಷ್ಕರ ಹೂಡಿದ ಕೂಡಲೇ, ಸ್ಠಳಕ್ಕೆ ಮೇಲಧಿಕಾರಿಗಳು ಹೋಗಿದ್ದರೆ ಇಷ್ಟೆಲ್ಲಾ ಹಗರಣಗಳಾಗುತ್ತಿರಲಿಲ್ಲವೆನಿಸುತ್ತದೆ. ಇದರಿಂದಾಗಿ ವಕೀಲರು ಮುಷ್ಕರ ಹೂಡಲು ಕುಮ್ಮಕ್ಕು ನೀಡಿದಂತಾಯಿತು. ಇಂತಹ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಮೇಲಧಿಕಾರಿಗಳು ಸ್ಠಳಕ್ಕೆ ಹೋಗಿ ಸಾರ್ವಜನಿಕ ಹಿತದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಿದ್ದು ಈ ಹಿಂದೆ ನಡೆದಿರುತ್ತವೆ. ಅದನ್ನು ಬಿಟ್ಟು ಹಲ್ಲೆಯಾಗಿಲ್ಲ. ಸುಳ್ಳು ಹಾಗೇನಾದರೂ ಆಗಿದ್ದರೆ, ನ್ಯಾಯಾಲಯದಲ್ಲಿ ಪ್ರಶ್ನಿಸಿ, ಆರೋಪಿತ ಪೇದೆಯನ್ನು ಅಮಾನತ್ತು ಮಾಡುವುದಿಲ್ಲ ಹಟ ಹಿಡಿಯಬಾರದಿತ್ತು.
ಇಲ್ಲಿ ಇನ್ನೊಂದು ತಪ್ಪಾಗಿದ್ದೆಂದರೆ, ವಕೀಲರು ಮುಷ್ಕರ ಮಾಡಿದ್ದು, ಸಿಟಿ ಸಿವಿಲ್ ಕೋರ್ಟ್ ಸುತ್ತಲ ಮುತ್ತಲ ರಸ್ತೆಗಳಲ್ಲಿ, ಕೂಡಲೇ ಪೊಲೀಸರು ಸಾರ್ವಜನಿಕ ವಾಹನ ಚಾಲಕರಿಗೆ ರಸ್ತೆ ಬಂದಾಗಿರುವ ವಿಷಯ ತಿಳಿಸಿ, ಬೇರೆ ರಸ್ತೆಗಳಲ್ಲಿ ಹೋಗುವಂತೆ ಸೂಚನೆ ನೀಡಬಹುದಿತ್ತು. ಆ ಕೆಲಸ ಯಾರೂ ಮಾಡಲಿಲ್ಲ.  ಬಹುತೇಕ ಎರಡು ಕಿ.ಮೀ, ಅಂತರದವರೆಗೆ ವಾಹನ ಸಂಚಾರ ಬಂದಾಯಿತು. ಒಂದು ರೀತಿಯಲ್ಲಿ ಪೊಲೀಸರು ಮುಷ್ಕರದಲ್ಲಿ ಪಾಲ್ಗೊಂಡಂತಾಯಿತು.
ಇನ್ನು ವಕೀಲರು,  ಎಲ್ಲ ಕಾನೂನ್ನು ತಿಳಿದವರು. ನ್ಯಾಯಕ್ಕಾಗಿ ಹೋರಾಡುತ್ತಿರುವವರು. ಸಾರ್ವಜನಿಕರಾದ ನಾವು ದೃಶ್ಯ ಮಾಧ್ಯಮದಲ್ಲಿ ನೋಡಿದಂತೆ, ಹಲ್ಲೆ ನಡೆದಂತೆ ಕಾಣುತ್ತದೆ. ಹಲ್ಲೆ ಮಾಡಿದವರು ಮತ್ತು ಹಲ್ಲೆಗೊಳಗಾದವರು. ಇಬ್ಬರೂ ಕಾನೂನು ತಿಳಿದವರೇ, ಆದರೆ, ನ್ಯಾಯವಾದಿಗಳು ಹತಾಶರಾಗಿ, ಪೋಲೀಸ ಅಧಿಕಾರಿಗಳು ಸ್ಪಂದಿಸದ ಕಾರಣ, ಆವೇಷಕ್ಕೊಳಗಾಗಿ, ಮುಷ್ಕರ ಹೂಡಿರುತ್ತಾರೆ. ಅದರ ಬದಲು, ಪ್ರತಿಭಟನೆಯ ಪ್ರತೀಕವಾಗಿ, ಕಪ್ಪು ಪಟ್ಟಿ ಧರಿಸಿಯೋ, ನ್ಯಾಯಾಲ್ಯದ ವೇಳೆಯ ನಂತರ ಘೋಷಣೆ ಕೂಗಬಹುದಿತ್ತು. ಪೊಲೀಸ್ ಅಧಿಕಾರಿಗಳು ಸ್ಪಂಧಿಸದಿದ್ದರೇ,  ಸರ್ಕಾರದ ಗಮನ ಸೆಳೆಯಬೇಕಾಗಿತ್ತು.  ಅದಕ್ಕೂ ಸ್ಪಂದಿಸದಿದ್ದರೇ,  ಅವರು ನ್ಯಾಯಾಲಯದಲ್ಲಿ ಪ್ರಕರಣಗಳಿಗೆ ಹಾಜರಾಗದೇ ಮುಷ್ಕರ ಹೂಡಬಹುದಿತ್ತು. ರಸ್ತೆ ಬಂದ್ ಮಾಡಿದ್ದು ಸರಿಯಲ್ಲ. ಆದರೆ ಈ ಬಗ್ಗೆ ಮೆಚ್ಚಿಕೊಳ್ಳುವ ಅಂಶವೆಂದರೆ, ವಕೀಲರ ಸಂಘದ ಅಧ್ಯಕ್ಷ್ಯರು ದೃಷ್ಯ ಮಾಧ್ಯಮದಲ್ಲಿ ಬೇಷರತ್ತಾಗಿ  ಕ್ಷಮೆ ಕೇಳಿದ್ದು. ಆತುರದಿಂದ ಸದಸ್ಯರು ಮಾಡಿದ ತಪ್ಪಿಗೆ ಕ್ಷಮೆ ಕೇಳಿದ್ದು ತುಂಬಾ ನೋವಿನ ಸಂಗತಿ. ಏನಾದರೂ ಪುನ್ಃ ಇಂತಹ ಪ್ರಕರಣಗಳು ಮರುಕಳಿಸದಿರಲಿ ಎಂದು ಪೋಲೀಸ್ ಇಲಾಖೆಯನ್ನು ಮತ್ತು ವಕೀಲರ ಸಂಘವನ್ನು ಈ ಮೂಲಕ ಕೋರೋಣ. ಅಲ್ಲವೆ? ವಂದನೆಗಳೊಡನೆ.
               

venkatb83 ಶುಕ್ರ, 02/03/2012 - 17:44

ನಂಜುಂಡ ವರೆನಿಮ್ಮ ಪ್ರತಿಕ್ರಿಯೆ ತಡವಾಗಿ ನೋಡ್ತಿರ್ವೆ..ಘಟನೆಯ  ವಿಶ್ಲೇಷಣೆಯನ್ನ ತರ್ಕಬದ್ದವಾಗಿ ಮಾಡಿದೀರಾ.  ಆವತ್ತಿನ ಸ್ತಿತಿಯಲ್ಲಿ  ನೋಡಲಾಗಿ ಅಲ್ಲಿ ಸಾಮಾನ್ಯ ಜನತೆಯ ಪಾಡು  'ಎರಡು ಮದಗಜಗಳ ಕಾದಾಟಕ್ಕೆ ನಡುವೆ ಸಿಕ್ಕ ತುಳಿತಕ್ಕೊಳಗಾದ ಬಡಪಾಯಿ ಹುಲ್ಲು'ನೆನಪಿಸಿತು..ತಮ್ಮ ಪ್ರತಿಕ್ರಿಯೆಗೆ ವಂದನೆಗಳು.. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.