Skip to main content

ಸಾಸಿವೆ-ಸೂತಕ ಇಲ್ಲದ ಮನೆ-ಮೊಬೈಲು ಇಲ್ಲದ ಮನುಷ್ಯ!!-(ಹಾಸ್ಯ ಬರಹ)

ಇಂದ venkatb83
ಬರೆದಿದ್ದುDecember 29, 2011
noಅನಿಸಿಕೆ

 ರಾತ್ರಿ ಹೊಟ್ಟೆ ಬಿರ್ಯುವಂತೆ   'ನುಗ್ಗೆ ಕಾಯಿ ಸಾರು ಅನ್ನದ  ಊಟ ಮುಗಿಸಿ 'ಹೊಟ್ಟೆ ಭಾರವನ್ನ'ಕೊಂಚ ತಗ್ಗಿಸಲು ಮನೆ ಮುಂದಿನ ರಸ್ತೆಉದ್ದಕ್ಕೂ  ಅಡ್ಡಾಡಿ  ವಾಪಸು ಬಂದು 
ಗೇಟು ಲಾಕ್ ಮಾಡಿ ಮನೆಯೊಳು ಸೇರಿ ಬಾಗಿಲು ಮುಚ್ಚಿ ನೇರ 'ಶಯನ' ಕೋಣೆಗೆ ನಡೆದೇ- ನಾ'ಏನೇನೋ' ಕನಸು'ಕಾಣುತ್ತ:)
 ಕೊಂಚ ಹೊತ್ತಿನ ನಂತರ  ಅಡುಗೆ ಕೋಣೆಯಿಂದ ಅಂದಿನ ಮುಸುರೆಯ ಪಾತ್ರೆಗಳನ್ನ ತೊಳೆದು  ಕೈಒರೆಸಿಕೊಳ್ಳುತ್ತಾ  
ಒಳ ಬಂದಳು'ಮುದ್ದಿನ ಮಡದಿ'... ಸುಸ್ತಾದಂತೆ ಕಂಡ ಅವಳನ್ನ ನೋಡಿಯೇ 'ಆಶಾಬಲೂನು' ಥುಸ್ಸ್  ಅನ್ದನ್ಗಾಯು, ಆದರೂ 'ಕೂಲ್ -ಮಗಾ- ಕೂಲ್'ಅಂತ ಎನ್ನ ಮನ ಸಂತೈಸುತ್ತ ಆಶಾವಾದಿಯಾಗಿ 'ಅವಳಿಗೆ' 'ಪೂಸಿ' ಹೊಡೆಯ ಹೊರಟೆ!
 ವ್ಯಾಸಲೀನ್ ತೆಗೆದು ಕೊಂಡು , ಅವಳ ಕೈಗೆ ಸವರುತ್ತ ಹೇಳಿದೆ'ಪಾತ್ರೆಗಳನ್ನ ಉಜ್ಜಿ ಉಜ್ಜಿ' ನಿನ್ನ'ಸುಕೋಮಲ' ಕೈಗಳು ಒರಟಾಗಿವೆ ಕಣೆ!,
ಅವಳ ಮುಖಾರವಿಂದ ಅರಳಿದ್ದು , ನನಗೆ 'ಗೆಲುವನ್ನ' ಉಂಟುಮಾಡಿತು,'ಸಕ್ಸೆಸ್ಸ್ ' ಅಂದೇ ನನಗೆ ನಾ:( ಹೌದೂ ಕಣ್ರೀ ಅದ್ಕೆ ನಾ ಒಂದು ನಿರ್ಧಾರಕ್ ಬಂದಿದೀನ್, 'ಈ ನಿರ್ಧಾರ' ಎನ್ನುವ ಅವಳು ಉಪಯೋಗಿಸುವ 'ಆ ಪದ'  ನನಗೆ ಯಾವತ್ತಿಗೂ 'ಅಪಾಯಕಾರಿಯೇ'!
ಮನಏನೋ 'ಕೇಡನ್ನು' ಶಂಕಿಸಿ 'ಊಹೆಗೆ' ತೊಡಗಿತು!! ಮೊದಲು ಬಂದ 'ಊಹೆ' ನಾಳೆಯಿಂದ ಪಾತ್ರೆಉಜ್ಜುವ ಕೆಲಸ ನಿಮ್ದೆ ಎಂದಿರಬಹುದೇ?
ನನ್ನ ಮುಖವನ್ನೇ ನೋಡ್ತಾ 'ಈಗೀಗ ನಿಮಗೆ ನನ್ನ ಮೇಲೆ ಪ್ರೀತಿ  ಕಡಿಮೆ ಆದಂಗಿದೆ'  ಧುತ್ತನೆ ಬಂದ ಆ'ಆಪಾದನೆಗೆ' ಎನೆಳುವುದೋ ತೋಚದೆ 'ಬ್ಬೆ ಬ್ಬೆ'  ಅಂದೇ:( ಆದರೂ ಸಾವರಿಸಿಕೊಂಡು ಛೆ ಛೆ ಹಾಗೇನಿಲಹಾಗೇನಿಲ್ಲ, ನಾ ನಿನ್ನ ಎಷ್ಟು ಪ್ರೀತಿಸುತ್ತೇನೆ!, ನಿನ್ನ ಬೇಕು ಬೇಡಗಳನ್ನ  ಪೂರೈಸಿರುವೆ 
ನಿನಗ್ಯಾಕೆಬಂತು ಈ ಸಂಶ್ಯಯ?
ಓಹೋ ಹಾಗೋ?  ನೋಡೋಣ ಈಗ- ಮತ್ತೆ ಮತ್ತೆ  'ನಾಳೆ' ಏನು ವಿಶೇಷವಿದೆ' ಹೇಳಿ ನೋಡೋಣ?
ವಿಶೇಷತೆ? ನಾಳೆ? ಏನು? ಯೋಚಿಸಿದೆ-ಯೋಚಿಸಿದೆ- ಓಹೋ ಅದಾ! ಗೊತ್ತಾಯ್ತು ಕಣೆ--
ನಾಳೆ 'ಕರೀನಾ ಕಪೂರ್' ಗೆ ಜನ್ಮ ದಿನ ರಾ-೧ ನಲ್ಲಿ 'ಚಮಕ್ ಚಲೋ' ಅಂತ ಭಲೇ ಸೊಗಸಾಗಿ ಡ್ಯಾನ್ಸ್ ಮಾಡಿದಾಳೆ ಎಂದೇ:) 
ಅಯ್ಯೋ ಅದಲ್ಲಾರಿ, ಅದಲ್ಲವ? ಮತ್ತೇನು?  ಅಹ ನಾಳೆ 'ಮನಮೋಹನ  ಸಿಂಗ್' ರವರು  ಪಾಕಿಸ್ತಾನದ  ಅದ್ಯಾಕ್ಚ್ಯ  'ಹೋಳು'  ಬೀಡ ಜರ್ದಾರಿನ  ಮೀಟ್  ಮಾಡಿ ಅಮೋಘ  'ನೂರೊಂದನೆ ' ಸಾರಿ  ಭಯೋತ್ಪಾದಕರನ್ನ ನಮಗೆ ಒಪ್ಪಿಸಿ ಎಂದು ಹೇಳುವವರಿದ್ದಾರೆ:) ತತ್ ಅದಲ್ಲಾರಿ,
ಈಗ ಗೊತ್ತಾಯ್ತು 'ದೂರವಾಗ್ತಿರೋ  ಕುರ್ಚೀನ  ನೋಡ್ತಾ ' ಮತ್ತೊಮ್ಮೆ  ಕೂರುವೇನು  ಹತ್ತಿರ -ಹತ್ತಿರ ಬಾ' ಅಂತ ಯೆಡಿಯೂರಪ್ಪ ಅವ್ರು ಹಾಡೋ,ಮಧ್ಯದಲ್ಲೇ ನನ್ನ ಮಾತು ತುಂಡರಿಸಿ, ನೀವು ಸದಾ ಆಹಾಳು ಟೀ.  ವಿ ನ 
ನೋಡ್ತಾ ಬರೀ 'ಆ ವಿಷ್ಯಗಳೆ' ನಿಮ್ ತಲೇಲಿ ತುಂಬಿಕೊಂಡಿವೆ ,ಒಮ್ಮೆ 'ಅವರನ್ನೆಲ್ಲ'ಅದನ್ನೆಲ್ಲ ಮರ್ತು , ಮನೇಲಿ ಹೆಂಡ್ತಿ 'ಇದಾಳೆ'
 ಅನ್ನೋದು ನೆನಪಿರಲಿ!
 ಅವಳ ಆ ಮಾತಿನ ಬಿರು ಬಣಕ್ಕೆ ಪಿಚ್ ಆಗಿ ನಾ ಎದುರಿಗಿನ ಗೋಡೆ ನೋಡಲು  ಕಾಣಿಸಿದವು ಇಬ್ಬರು'ಮಹಾನುಭಾವರ' ಫೋಟೋಗಳು! 'ಅವ್ರೆ' ನಂಗೆ ಸಧ್ಯ ದಿಕ್ಕು! ದೇವ್ರೇ ನಾ ನಿಮ್ನೆ ನಮ್ಬಿದೀನ್, 'ನಾಳೆ'ಏನು ವಿಶೇಷವಿದೆ? ಎಂದು ನನ್ನ 'ಈ ಮಂಕು ಕವಿದಿರುವ ' ಮನಕೆನಿಮ್ಮ ಹಸ್ತ ಇಟ್ಟು ಹೊಳೆಯುವಂತೆಮಾಡಿ!!
 
ನನ್ನೆದುರಿಗಿನ  ಆ ಗೋಡೆ ಮೇಲೆ ಇದ್ದ  'ಇಬ್ಬರು ಮಹಾನುಭಾವರ' ಫೋಟೋಗಳು
೧.ವಿಘ್ನ ವಿನಾಯಕ್ 'ಗಣೇಶ'
೨. ಯುದ್ಧದಲ್ಲಿ ನನ್ನ ಬಂದುಗಳನೆ ನಾ ಕೊಲ್ಲಲೋಲ್ಲೇ ಎಂದು ಯುದ್ಧಕ್ಕೆ ಬೆನ್ನು ತೋರಿಸಿದ 'ಪಾರ್ಥ'ಅಕಾ 'ಅರ್ಜುನ' ನಿಗೆ 
'ಗೀತೋಪದೇಶ' ಮಾಡಿ ಮತ್ತೆ ಯುದ್ಧಕ್ಕೆಅಣಿಗೊಳಿಸಿದ 'ಶ್ರೀ ಕೃಷ್ಣ'.. 
ಅವರು ನನಗೆ 'ಆಶೀರ್ವದಿಸಿದರೋ'  ಇಲ್ಲವೋ ನಾ ಕಾಣೆ-ಅರಿಯೆ:
( ಆದರೆ ನನ 'ಮತಿಗ್' ಏನೂಹೊಳೆಯಲಿಲ್ಲ, ಕೊನೆಗ್ ನಾನೇ ಸೋತು, ಲೇ ಇವಳೇ ಈಗೀಗ ನನಗೆ ಆಫೀಸಿನ ಕೆಲಸವಿಪರೀತವಾಗಿದ್ದು , 
ಬಸ್ಸು ಹಿಡಿದು  ಆಫೀಸಿಗೆ-ಮರಳಿ ಮನೆಗ್ ಬರುವಸ್ಟರಲ್ಲಿ 'ಉಸ್ಸಪ್ಪ' ಅನ್ಸುತ್ತೆ:(ಏನೇನೋ ಆಲೋಚನೆಗಳು,ಹಾಳೂ-ಮೂಳು! ಹೀಗಾಗಿ ನನಗೆ 'ನಾಳೆ' ಅತ್ಲಾಗಿರ್ಲಿ, ಇವತ್ತಿನ 'ಈಗಿನ'ಬಗ್ಗೆ ಯೋಚಿಸಲೇ  ಸಮಯಸಿಗುತ್ತಿಲ್ಲ!!  ನಾ ಸೋತೆ -ನೀನೆ ಹೇಳು ನಾಳೆ ಏನು ವಿಶೇಷತೆ?
ಹೆಗಲಿನ ಮೇಲೆ ಹಾಕಿದ ನನ್ನ ಕೈಯನ್ನ 'ಹಲ್ಲಿಯೊಂದೋ-ಜಿರಲೆಯೋ- ಮೈ ಮೇಲೆ ಬಿದ್ದಂತೆಗಾಭಾರಿಯಗ್ ಮೈ ಕೊಡವಿ ಬಿಸಕುವಂತೆ ಎತ್ತಿ ಎಸೆದಳು:( ನಾ ಮುಂದೇನು ಅಂತ ನೋಡಲು- ನಂಗೆಮೊದ್ಲೇ  ಅನುಮಾನ ಇತ್ ! ನೀವು ಬರೀ 'ಬೊಗಳೆ' ಬಿಡೋದೇ ಆಯಿತು,ಬರೀ ಬೂಟಾಟಿಕೆಪ್ರೀತಿ,
ನಾಳಿನ 'ವಿಶೇಷತೆ ' ನಿಮಗೆ ಗೊತ್ತಿಲ್ಲ,ಸ್ಸರಿ ನಾನೇ ಹೇಳ್ತೀನ್ ಆಅದ್ರೆ -ಆದ್ರೆ ನೀವು 'ಅದನ್ನ'ನೆನಪು ಇಟ್ಟುಕೊಳ್ಳದತಪ್ಪಿಗೆ  ನಾಳೆಯಿಂದ 'ಒಂದು' ಕೆಲಸ ಮಾಡಬೇಕು:( 
ಒಹ್ ದೇವ್ರೇ 'ಈ ಹಾಳು ಮರೆವು' ನನಗ್ಯಾಕಪ್ಪ ಕೊಟ್ಟೆ? ಇವಳೋ 'ಅದೇನು' ಅಂತ ಹೇಳದೆ ಆದರೆ-ಗೀದರೆ ಅಂತ ಯಾವ್ದೋ ಕೆಲಸಬೇರೆ ಮಾಡಬೇಕು ಅಂತವ್ಲೇ? ಏನಾ ಕೆಲಸ?
ಏನಾ ವಿಶೇಷತೆ ನಾಳೆ?  ಹಿಂದೆ ಕೆಲ ಸಂದರ್ಭಗಳಲ್ಲಿ ಆದ ಅನುಭವಗಳಿಂದ ಪಾಠ ಕಲಿತಿದ್ದ ನಾ,ಮೊದಲು ಆ ವಿಶೇಷತೆ  ಏನು ಅಂತಹೇಳು, 
ಆಮೇಲೆ 'ಆ ಕೆಲಸ' ಅಂದೇ!೧
ಬಡ್ಕೊಬೇಕು:) ಮದ್ವೇಯಾಗ್ 'ಬರೀ ಒಂದು ವರುಷ' ಅಸ್ಟರಲ್ಲೇ  ನಾ ನಿಮಗೆ 'ನಾಳೆ' ನಮ್ಮ  ಮದುವೆ'ವಾರ್ಷಿಕೋತ್ಸವ' ನೆನಪಿಸಬೇಕು:)ಅಂದ್ಲು, ಅಯ್ಯೋ!!
 
- ಅಯ್ಯೋ ಎನ್ನ ಮತಿಯೇ! ನೀನಗದ್ಯಾವ 'ಗೆದ್ದಲು' ಹಿಡಿದಿತ್ತು? ಹ್ಹಿಹಿ ಅಂತ, ಒಹ್ ಅದಾ ಅದು ನಂಗೆಮೊದ್ಲೇ ಗೊತ್ತಿತ್ತು!ನೋಡೋಣ ನಿ ಹೆಂಗ್  ಪ್ರತಿಕ್ರಿಯಿಸುತ್ತೀಯೋ ಅಂತ ಅದ್ಕೆ ಒಂದು 'ಡವ್' ಅಸ್ಟೇಎಂದೇ.. ಓಹೋ ನಂಗೆ ಗೊತ್ತಿಲ್ವ ನಿಮ್ಮ ಬಗ್ಗೆ, 
ಈ ವರಸೆನಾ ನೋಡದೆ-ಅರೀದೆ ಇರೋದ? ನೀವ್ಸೋತಂಗೆಯ, ಈಗ ನಾ ಹೇಳಿದ್ದು ಮಾಡಿ,ಇನ್ನು 'ವ್ಯರ್ಥ' ವಾದಿಸ್ ಉಪಯೋಗವಿಲ್ಲ,  ಸ್ಸರಿಸ್ಸರಿ'ಮಾರಾಯ್ತಿ' 
ಹೇಳು ನಿನಗಾಗಿ 'ಆ ಚಂದ್ರನನ್ನ ತರಲೆ'! 
ನಗಾಗಿ  ನಾ ಏನು ಮಾಡಬೇಕು? ಎಂದೇ ರೊಮ್ಯಾಂಟಿಕ್ ಮನದಿಂದ :) ನಂಗೆ ಚಂದ್ರ ಲೋಕದಪಾರಿಜಾತ ಬೇಡ , ನಾಳೆ ಹೊರಗಡೆ ಹೋಗಿ , 
ಮೊಬೈಲು ಇಲ್ಲದ' ವ್ಯಕ್ತಿಯನ್ನ ಹುಡುಕಿ ಅದನ್ನುನಿರೂಪಿಸಿ ಎಂದಳು!! ಒಹ್ ಮೈ ಗಾಡ್! ಅಲ್ಲ ಕಣೆ ಈಗೆಗ ೧೫೦ಕ್ಕೆ ಹಳೆ ಫೋನು, ೫೦೦ಕ್ಕೆ ಹೊಸಫೋನು ಸಿಗುತ್ತವೆ:) ಅಂಥದರಲ್ಲಿ ಈಗ 'ಮೊಬೈಲು' ಇರದ ಮನುಷ್ಯರು ಈ ನಗರದಲ್ಲಿ ಏನು ದೇಶದಲ್ಲ್ಲಿಏನು ಇಡೀ'ಜಗತ್ತಿನಲ್ಲಿ'  ಹುಡುಕಾಡಿದರೂ ಸಿಗಲ್ಲ!! ಬೇರೆ ಏನಾರ ಹೇಳು ಮಾಡುತೀನಿ ಎಂದೆ. 
 
ಬೇಡ ಬೇಡ ಅಂದರೂ ನನಗೆ ಆ ಹೊತ್ತಿನಲ್ಲಿ ಹಿಂದೊಮ್ಮೆ 'ಮಹಾತ್ಮ ಬುದ್ಧ' ಹೇಳಿದ ಸಾಸಿವೆ-ಸೂತಕವಿಲ್ಲದ ಮನೆ ಇಲ್ಲ ಎಂಬ ಮಾತುನೆನಪಿಗೆ ಬಂತು..ಛೆ ಈ ಅಧುನಿಕ ಯುಗದಲ್ಲಿ ಮೊಬೈಲುಇಲದೆ ಯಾರಾದರೂ ಇರಲು ಸಾಧ್ಯವೇ?
 ಅದು ಅಸಂಭವ:) ದೇವ್ರೇ ನೀನೆ ದಿಕ್ಕು ಅಂತ, ಆಯ್ತುಪ್ರಯತ್ನಿಸುತೀನಿ ಎಂದೆ.. ಮಂಚದ ಮೇಲೆ ಬಿದ್ದದ್ದು ಅಸ್ಟೇ, ಬರೀ ಚಿಂತೆಯೇ:) 
ಎಲ್ಲಿ ಹುಡುಕುವುದುಮೊಬೈಲು ಇಲ್ಲದ ಮನುಶರನ್ನ? 
 
ಬೆಳಗ್ಗೆ ರಜಾ ದಿನವಾದ್ದರಿಂದ  ತಿಂಡಿ-ಕಾಫೀ ಮುಗಿಸಿ ಮೊಬೈಲು ಇಲ್ಲದ ಮಾನವರನ್ನ ಹುಡುಕಲುಹೊರ ನಡೆದೇ, ಹ್ಹೊಗ್ತಾ ಹೇಳಿದೆ'ಮಡದಿಗೆ' ಹೊರಗೆ ಹೋಗ್ತಿದೀನ್ ಕಣೆ, 
ಅದೇ ಆ ಕೆಲಸದಮೇಲೆ,ಬಹುಶ ಬರುವುದು 'ಲೇಟ' ಆಗಬಹುದು ಎಂದೆ, ಹೋಗಿ ಬನ್ನಿ 'ವಿಜಯೀಭವ' ಅಂದಳು!೧ ಕೈಬೀಸಿ ನಮ್ಮ ಮನೆಯಿಂದ ಆಚೆ ಬಂದು ಮೊದಲು ನನ್ನ 'ಧಿವ್ಯ' ಧೃಸ್ಟಿ ಗೆ ಬೀಳುವವರಾರು  ಅಂತನೋಡಲು,ದೂರದಲ್ಲಿ ಬೆಳಗಿನಾ ವಾಕು ಮುಗಿಸಿ ಮರಳುತ್ತಿದ್ದ 'ಹಿರಿಯರೊಬ್ಬರು' ಕಾಣಿಸಿದರು, ಒಹ್ದೇವ್ರೇ ಮನೆ ಮುಂದೇನೆ ಯಾರೋ ಮೊಬೈಲು ಇಲ್ದೆ ಇರ್ವವರನ್ನ ಕರುಣಿಸಿದೆಯ ನಿನಗೆ ಸಲಾಂಅಂದೇ!,
 
 
 
ಅವರು ಹತ್ತಿರ ಬರುತ್ತಿದ್ದಂತೆ ಅನಿಸಿತು ಎನಗೆ-ಖಂಡಿತ ಇವರ ಹತ್ತಿರಮೊಬೈಲು ಇರಲಿಕಿಲ್ಲ, ಸ್ವಾಮೀನಮಸ್ಕಾರ, ನಿಮ್ಮತ್ರ ಮೊಬೈಲು ಇದೆಯಾ ಅಂದೇ? ಪ್ರಸಂನವದವಾಗಿದ 
ಅವ್ರ ಮುಖ ಚಹರೆ'ಹರಳೆಣ್ಣೆ'ಕುಡಿದಂತಾಗಿ- ಮುಖ ಗಂಟಿಕ್ಕಿಕೊಂಡು, ಇದೆ, ಆದರೂ ಕೊಡಲ್ ಅಂದವ್ರೆ ದುರ ದುರನೆ'ದುರ್ದಾನ;'
 ತೆಗೆದು ಕೊಂಡವರಂತೆಹೋಗಬೇಕೆ:) 
 
 
ತತ್! ಮೊದಲ ಪ್ರಯತ್ನಕ್ಕೆ  ವಿಘ್ನವೇ? ಮುಂದೆ  ಹೋಗಲು ಒಬ್ಬ ತರಕಾರಿ ಬಂಡಿ ದೂಡಿಕೊಂಡುಬರುತ್ತಿದ್ದ, ಮನ ಹೇಳಿತು ಅವನ ಹತ್ತಿರ 
ಖಚಿತವಾಗಲೂ ಮೊಬೈಲು ಇರ್ಲಕ್ಕಿಲ್ಲ, ಅವನಿಗೆ ಅದರಅವಶ್ಯಕತೆ ಇಲ್ಲ, ಏನ್ ಬೋರಣ್ಣ ಹೆಂಗಿದೀಯ -ಹೆಂಗೈತೆ ವ್ಯಾಪಾರ ಅಂದೇ?ನನ್ನನ್ನ ವಿಚಿತ್ರವಾಗ್ನೋಡ್, ನನ್ನೆಸ್ರು ಬೋರಣ್ಣ ಅಲ್ಲ ಸೋಮಿ, ಸುಂದ್ರೂ ಅಂತ!! ಯಾಪಾರ ಹೆಂಗೋ ಇದೆ ಅಂದ, ಹೌದುನಿನ್ನ ಹತ್ತಿರ
 ಮೊಬೈಲು ಇದೆಯಾ ಅಂದೇ(ಮನದಲ್ಲಿ ಇರದಿರಲಪ್ಪ ಎಂಬ ಹರಕೆ) ನಂಗೆ ಈ ಮೊಬೈಲುಅಂದ್ರೆ  ಆಗಿ  ಬರಲ್ಲ  ಸೋಮಿ , ಆದರೂ ---
 
 
ಮಧ್ಯಕ್ಕೆ  ಅವನ  ಮಾತು  ತುಂಡರಿಸಿ , ಅಬ್ಬ ಸಧ್ಯ ಸಿಕ್ಕನಲ್ಲ ಒಬ್ಬ ಮೊಬೈಲು ಇಲ್ಲದ ವ್ಯಕ್ತಿ ಅನ್ತಿರಲು,ಜೇಬಿನ ಹೊಳ  ಹೋದವನ ಕೈ'ಒಂದು' 
ಮೊಬೈಲು ಸಮೇತ ಆಚೆ ಬರಬೇಕೆ? ನ ಪಿಚ್ ಆಗಿನೋಡ್ತಿರಲು ಅವನು ಹೇಳಿದ- ನೋಡಿ ಸೋಮಿ ನಂಗೂ ಮೊಬೈಲಿಗೂ ಅಸ್ಟಕ್ಕಸ್ಟೇ
 ಈಗೀಗ'ಹಾಪ್ಕಾಮ್ಸ್' ನೋರು ತರಕಾರಿಯ ರೇಟು 'ಹೆಹ್ಚು -ಕಡಮೆ' ಅಗೊದ್ನ ಮೊಬೈಲ್ಗಿಗೆ  'ಎಸ ಎಂ ಎಸ'ಮಾಡ್ತಾರೆ ಅದ್ಕೆನಾ ಇರ್ಲಿ ಅಂತ ಒಂದು (ಒಂದೆನ ?)ಮಡಗಿದಿನಿ  ಅಂದ:( ೨ ನೆದೂ ವಿಫಲ,
 
ಮುಂದೆ ಹೋಗಲು 'ಚಿಂದಿ ಆಯುವ' ಇಬ್ಬರು ಹುಡುಗರು ಕಾಣಿಸಿದರು, ಒಬ್ಬ 'ಕೊಳವೆ ಕೊಳವೇರಿ' ಇದ್ಯಾವ್ವ್ದು ಕೊಳವೆ- ಕೊಲವೆರೀ? 
ಅಂತ ತಲೆ ಕೆರೆದುಕೊಳ್ಳುತ್ತಾ ಹತ್ತಿರ ಹೋದೆ ,ಅವನೋ 'ವಿಚಿತ್ರ'ಡ್ಯಾನ್ಸ್ ಮಾಡುತ್ತಿದ್ದ  'ಹೊಟ್ಟೆ' ನೋವು ಬಂದಂತೆ!! ಇನ್ನೊಬ್ಬ ನೋಡುತ್ತಿದ್ದ  ಇವನಹತ್ತಿರ ಮೊಬೈಲು ಇಲ್ಲ ಅನ್ಸುತ್ತೆ ಅಂತ ಹತ್ತಿರ ಹೋಗಿ ,
ನಿನ ಹತ್ತಿರ ಮೊಬೈಲು ಇಲ್ಲ ಅಲ್ಲವೇ?ಅಂದೇ.
ಕಿವಿ ಮುಚ್ಚಿದ್ದ ಕೂದಲಿನ  ಒಳಗೆ ಕೈ ಹಾಕಿ ಕಿವಿಗೆ ಸಿಕ್ಕಿಸಿದ್ದ ಮೊಬೈಲಿನ ವಾಯರ್ ತೆಗೆದು 'ಎನ್ನ'ಅಂದ? ಅಯ್ಯೋ ಅಯ್ಯೋ 
ಇದೂ ವೇಸ್ಟೂ ಅಂತ ಮುನ್ನಡೆದೆ:( ಆಮೇಲೆ ಎಲ್ಲೆಲ್ಲಿ ಹೋಗಿ ಯಾರನ್ನೇಕೇಳಿದರೂ ಒಬ್ಬರ ಹತ್ತಿರ ಒಂದು, ಇನ್ನೊಬ್ಬರ ಹತ್ತಿರ ಎರಡು, ಮತ್ತೊಬ್ಬನ ಹತ್ತಿರ, 
ಮೂರು ಮೊಬೈಲು,ಒಂದೇ ಹೆಚ್ಚು, ಎರಡು ಜಾಸ್ತಿ, ಮೂರು ಒವರಯ್ತು ಅನಿಸ್ತು ನಂಗೆ!
ಯಾಕೋ 'ಒಂದು ಸಾರಿ ಉಂಡವನು ಯೋಗಿ, ಎರಡು ಸಾರಿ ತಿಂದವ್ನು ಭೋಗಿ ಮೂರು ಸಾರಿತಿಂದವನು ರೋಗಿ, 
ನಾಲ್ಕು ಸಾರಿ ತಿಂದವನನ್ನ ಹೊತುಕೊಂಡು ಹೋಗಿ ಎಂಬ ನುಡಿ ನೆನಪಾಯ್ತು!!
 
 
ಆಮೇಲೆ ನಾ ಸಂದರ್ಶಿಸಿದ ಜನರ ಆಧಾರದ ಮೇಲೆ ಈ 'ಸಂಶೋಧನೆ' ಮಾಡಿದೆ..
ಈ ಮೊಬೈಲಿನಲಿ ಬರೀ ೧ ಮೆಗ್ ಪಿಕ್ಸೆಲ್  ಕ್ಯಾಮೆರ ಇದೆ ಅದ್ಕೆ ಆ ಮೊಬೈಲು ಖರೀದಿಸಿದೆ ಅದರಲ್ಲಿ ೩ ಮೇಗ ಪಿಕ್ಸೆಲ್ ಇದೆ!
 
ಇದರಲ್ಲಿ ಬರೀ ಎಫ್ ಮ್ ಇದೆ, ಅದರಲ್ಲಿ ಮ್ಯೂಸಿಕ್ ಪ್ಲೇಯರ್ ಇದೆ
ಇದರಲ್ಲಿ ಬರೀ ೫ ಜೀ ಬಿ ಇದೆ, ಅದು ೧೦ ಜೀ ಬಿ ಅದ್ಕೆ
ಇದು ಇನ್ಕಮಿಂಗ್, ಅದು ಅವುಟ್ ಗೊಇಂಗ್ - ಅಲ್ರೀ ಎರಡು ಸಿಂ ಇರೋ ಮೊಬೈಲು  ಇದೆ ಅಂದೇ, ರ್ರೀ ಸೋಮಿ ಅದು ನಮಗೂಗೊತ್ತು!! 
ಆದ್ರೆ ಇಸ್ತ್ ಕಡಮೆ ರೇಟಿಗೆ ಮೊಬೈಲು ಸಿಗ್ತಿವೆ, ಇನ್ನೊಂದೂ ಇರ್ಲಿ ಬಿಡಿ ಎನ್ನೋದೇ:(
 
 
ಒಟ್ಟಿನಲ್ಲಿ ಯಾರೊಬ್ಬರೂ ಮೊಬೈಲು ಇಲ್ಲದಿರುವವರು ಸಿಗಲಿಲ್ಲ, ಮತ್ತು ಮೊಬೈಲು ಇದ್ದು ,ನಂಗೆಸಿಕ್ಕಿದ ಆ ಎಲ್ಲರೂ ಆ ೧-೨-೩ ಮೊಬೈಲ್ನ
 ಗುಣ-ವಿಷೆಶತೆಗಳಿಂದಲೂ ಖುಷಿಯಾಗಿರದೆ 'ಇನ್ನೊಂದಕ್ಕಾಗಿ'ತಹತಹಿಸುತ್ತಿದ್ದರು:)
ಇರುವುದೆಲ್ಲವ ಬಿಡದೆ! ಇಲ್ಲದಿದಿರ್ವದರೆಡೆಗೆ  ತುಡಿವುದೇ ಜೀವನ ಅಂತ ಕವಿವರ್ಯರ ಸಾಲು ಬದಲಾಯಿಸಿದೆ,ಆದರೆ 
ನಾ ಮನೆಗೆ 'ಮೊಬೈಲು' ಇಲ್ಲದಿರುವವರನ್ನೇ ಹುಡುಕಿ ಕರೆದೊಯ್ದು  ನಾ'ಬಚಾವ್' ಆಗಬೇಕಿತ್ತಲ್ಲ!  ಆಗಿಂದ ಹುಡುಕುತ್ತಲೇ ಇರ್ವೆ,ಇನ್ನೂ ಸಿಕ್ಕಿಲ್ಲ!! 
 
ನಿಮ್ಮ ಹತ್ತಿರ ಮೊಬೈಲು ಇಲ್ಲವೆ?
ನಿಮಗೆ ಯಾರದ್ರೂ ಮೊಬೈಲು ಇಲ್ಲದಿರುವವರು ಗೊತ್ತೇ?
ಸಂಪರ್ಕಿಸಿ 
ಮಂಕುದಿಣ್ಣೆ@ಮಂಕುತಿಮ್ಮನದಿಬ್ಬ.ಕಾಂ.
 
 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.