Skip to main content

ಮಾಧ್ಯಮ ವ್ಯಾಪಾರ ಹಾಗೂ ದಂಧೆ...

ಇಂದ Naveen S Gowda
ಬರೆದಿದ್ದುDecember 28, 2011
1ಅನಿಸಿಕೆ

ಹೀಗೊಮ್ಮೆ ಸಾಫ್ಟ್ ವೇರ್ ಉದ್ಯೋಗಿದ್ದವನಿಗೆ, ಒಮ್ಮೆಲೆ ಬೇಜಾರಾಗಿ ತನ್ನ ಕೆಲಸಕ್ಕೆ ಗುಡ್ ಬಾಯ್ ಹೇಳಿ ಪತ್ರಿಕೋದ್ಯಮಕ್ಕೆ ಬಂದು ಕುಳಿತೆ. ಮೊದಲೇ ಅನುಭವವಿಲ್ಲದ ನನಗೆ ಹಾಗೋ ಹೀಗೋ ಮಾಡಿ ಒಂದು ಸಣ್ಣ ಹೊಸ ಪತ್ರಿಕೆಯಲ್ಲಿ ಕೆಲಸ ದೊರಕಿಸಿಕೊಂಡೆ. ಅಲ್ಲಿಂದ ಶುರುವಾದ ನನ್ನ ಪತ್ರಿಕೋದ್ಯಮದ ಜೀವನದಲ್ಲಿ ಕೆಲವೇ ಜನಗಳು ಪರಿಚಯವಾಯಿತು. ಆದರೆ ನಾನು ಸಾಫ್ಟ್ ವೇರ್ ಉದ್ಯೋಗಿ ಎಂದು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ, ಯಾರಾದರೂ ತಪ್ಪು ತಿಳಿದು ಕೊಳ್ಳುವರೆಂದು ಹೆದರಿ ಯಾರಿಗೂ ತಿಳಿಸಲೇ ಇಲ್ಲ.
ಆದರೆ ಅಲ್ಲೊಬ್ಬ ಬಕ್ಕೆಟ್ಟು ರಾಜ ಸಂಪಾದಕನಿದ್ದ ಅವನಿಗೆ ಎಲ್ಲರೂ ಅಧೀನರಾಗಿರಬೇಕು ಎನ್ನುವ ಕೊಬ್ಬು, ಆದರೆ ನಾನು ಸ್ವಲ್ಪ ಅಹಂಕಾರದವನೇ ಆದ್ದರಿಂದ ನಾನು ಯಾವುದಕ್ಕೂ ತಲೆ ಕೆಡಿಸಿ ಕೊಳ್ಳುತ್ತಿರಲಿಲ್ಲ, ಹಾಗಾಗಿ ಅವನು ನನ್ನ ಸಂಬಳ ಕೊಡಿಸುವಲ್ಲಿ ರಾಜಕೀಯ ತೆಗೆಯ ತೊಡಗಿದ ಆದರೆ ನಾನು ಮೋದಲೇ ಸಾಫ್ಟ್ ವೇರ್ ಉದ್ಯೋಗಿ ಆಗಿದ್ದರಿಂದ ನನ್ನಲ್ಲಿ ಸ್ವಲ್ಫ್ಪ ಹಣ ಬ್ಯಾಂಕ್ ನಲ್ಲಿ ಇದ್ದಿದ್ದರಿಂದ ಮೂರು ತಿಂಗಳ ವರೆಗೂ ತಲೆ ಕೆಡಿಸಿ ಕೊಳ್ಳಲೇ ಇಲ್ಲ. ಆದ್ರೆ ಇದು ಮಿತಿಮೀರ ತೊಡಗಿತು. ಇದೇ ಸಾಲದೆ ಎಲ್ಲರಿಗೂ ಅಸಮಧಾನ ವಿದ್ದಿದ್ದರಿಂದ ಒಮ್ಮೆಲೆ ಎಲ್ಲರೂ ಒಂದಾಗಿ ಆತನಿಗೆ ಗೇಟ್ ಪಾಸ್ ಕೊಟ್ಟು ಕಳಿಸಿ ಬಿಟ್ಟರು. ನಂತರ ಎಲ್ಲವೂ ಫ್ರೀ ಆಗಿಟ್ಟಿತು.
ಆಗತಾನೆ ಅರಿಯತೊಡಗಿದ್ದ ಪತ್ರಿಕೋದ್ಯಮ ನನ್ನ ಮನಸ್ಸಿಗೆ ತುಂಬಾ ನೋವು ಉಂಟುಮಾಡಿತ್ತು. ಪತ್ರಿಕೋದ್ಯಮ ಹೀಗೀಗ ವ್ಯಾಪಾರ ಹಾಗೂ ದಂಧೆಯಾಗಿಬಿಟ್ಟಿದೆ  ಎಂದು ಅರಿತುಕೊಂಡ ನಾನು. ನನ್ನ ಪಾಡಿಗೆ ಕೆಲಸಾ ಕಾಯುವಲ್ಲಿ ನಿರತನಾದೆ. ಹಾಗೇ ಮುಂದುವರೆದಂತೆ ಸರಿಯಾದ ಹೆಸರಿಲ್ಲದ ಪತ್ರಿಕೆಯಲ್ಲಿ ಯಾರೂ ಕೆಲಸಮಾಡಲು ಮುಂದೆ ಬರಲಿಲ್ಲವಾದ್ದರಿಂದ ಕೆಲಸದ ಒತ್ತಡ ಜಾಸ್ತಿಯಾಗತೊಡಗಿತು. ಇದರಿಂದಾಗ ದಿನದಿಂದ ದಿನಕ್ಕೆ ತಲೆನೋವಾಗತೊಡಗಿತು. ಇದರಿಂದ ಜಗಳ ಕದನ ಮನಸ್ತಾಪಗಳು ಉಂಟಾಗತೊಡಗಿದವು. ಆದ್ರೆ ಯಾವುಕ್ಕೂ ಎದೆ ಕುಗ್ಗದ ನಾನು ಮಾತ್ರ ಕೆಲಸದಲ್ಲಿ ನಿರಂತರ ತಲ್ಲೀನನಾಗಿ ಹೋದೆ, ಯಾವುದೂ ಆಗುವುದಿಲ್ಲ ಎನ್ನುವ ಮನೋಭಾವ ನನ್ನದು, ಅದರಿಂದಲೇ ಎಲ್ಲವನ್ನೂ ಸಾಧಿಸಬಹುದೆಂದುಕೊಂಡಿದ್ದ ನನಗೆ ಅದು ಅಸಾಧ್ಯ ಎಂದು ತಿಳಿದಿದ್ದು ನಮ್ಮ ಆಫೀಸ್ ಬೇರೆಡೆಗೆ ಬದಲಾದ ನಂತರವೇ.
ನಮ್ಮ ಮನೆಯಿಂದ ಹೊಸ ಆಫೀಸು ಸುಮಾರು ೨೨ ಕಿಲೋಮೀಟರುಗಳಷ್ಟು ದೂರ ವಿದ್ದುದರಿಂದ ದಿನನಿತ್ಯ ನನಗೆ ಕಿರಿ-ಕಿರಿ ಆಗತೊಡಗಿತು, ಆ ಹೊತ್ತಿಗೆ ಸುಮಾರು ಬೆಳೆದು, ತಿಳಿದುಕೊಂದಿದ್ದರಿಂದ ಪತ್ರಿಕೋದ್ಯಮ ಸುಲಭವಲ್ಲ, ಇದು ಹಣಕ್ಕಾಗಿ ಯಾರನ್ನು ಬೇಕಾದರೂ ಏನು ಬೇಕಾದರೂ ಮಾಡುವ ಕುದುರೆ ಓಟ ಎಂದು ಚನ್ನಾಗಿ ಅರಿತಿದ್ದೆ. ಆದರೂ ತಲೆಕೆಡಿಸಿಕೋಳ್ಳದ ನಾನು ನನ್ನ ಬೇಡಿಕೆಗಳನ್ನು ಮುಂದಿಡುವಲ್ಲಿ ಮುಂದಾದೆ, ಅದಕ್ಕೆ ಸೊಪ್ಪು ಹಾಕಿ ನನಗೆ ಕಾಗೆ ಹಾರಿಸುವ ಕೆಲಸದಲ್ಲಿ ಯಶಸ್ವಿಯಾದ ನನ್ನ ಸಂಸ್ಥೆಯವರು ಹಾಗೋ ಹೀಗೋ ಒಂದು ತಿಂಗಳು ತಳ್ಳಿದರು.
ಮತ್ತೆ ಎರಡನೇ ತಿಂಗಳು ಅದೇ ಕಾಗೆ ಹಾರಿಸುವ ಕೆಲಸಕ್ಕೆ ಮುಂದಾದವರಿಗೆ ನಾನು ನನ್ನ ಸಹನೆ ಕಳೆದುಕೊಂಡು ರಾಜೀನಾಮೆ ಎಂಬ ಅಸ್ತ್ರ ಪ್ರಯೋಗಿಸಿದ ನಾನು ಅವರನ್ನು ತಡೆ ಹಿಡಿದೆ. ಆದರೆ ಇದನ್ನು ಬಲವಾಗಿ ಅರಿತ ಅವರು ಮತ್ತೆ ನನ್ನ ಮುಗ್ಧತೆಯನ್ನು ಬಳಸಿಕೊಂಡು ಮತ್ತೊಂದು ತಿಂಗಳು ತಳ್ಳಿದರು. ಆದರೆ ಅಷ್ಟರಲ್ಲಿ ಹೊಸ ಕೆಲಸದವರನ್ನು ಯಾರಿಗೂ ತಿಳಿಯದೇ ಹುಡುಕಿಕೊಂಡಿದ್ದ ಅವರು ನಮಗೇ ಯಾರ ಸಹಾಯವೂ ಬೇಕಾಗಿಲ್ಲ ಎಂಬಂತೆ ನಡೆದುಕೊಳ್ಳಲು ಆರಂಭಿಸಿದರು. ಆದರೂ ಅವರು ನನ್ನನ್ನು ಬಿಟ್ಟು ಕೊಡಲು ಸಾಧ್ಯವೇ ಇಲ್ಲ ವೆಂಬಂತೆ ಬೆಳೆದು ನಿಂತಿದ್ದ ನನ್ನನ್ನು ಹೇಗಾದರೂ ಮತ್ತೆ ಕಾಗೆ ಹಾರಿಸುವ ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ ನನ್ನ ಕೆಲಸಕ್ಕೆ ಸರಿಯಾದ ನ್ಯಾಯ ಹಾಗೂ ಬೆಲೆಸಿಗದಿದ್ದಲ್ಲಿ ಕೆಲಸ ಮಾಡಿಯೂ ಪ್ರಯೋಜನವಿಲ್ಲವೆಂದು ಅರಿತ ನಾನು ಕೊನೆಗೊಮ್ಮೆ ರಾಜೀನಾಮೆ ಪತ್ರ ಕೊಟ್ಟು ಹೊರ ಬಂದೆ.
ಆದರೆ ಅದಕ್ಕೂ ಕಾಗೆಹಾರಿಸ ತೊಡಗಿದರು, ನನ್ನ ರಾಜೀನಾಮೆ ಪತ್ರ ಹರಿದು ಹಾಕುವುದು, ಕಬ್ಬನ್ನ್ ಉದ್ಯಾನವನ ಕೊಡಿಸುವುದಾಗಿ ಕಾಗೆ ಹಾರಿಸ ತೊಡಗಿದರು, ಆದರೆ ಯಾವುದಕ್ಕೂ ಬಗ್ಗದ ನಾನು ನನ್ನ ಪತ್ರದಲ್ಲಿ ತಿಳಿಸಿದಂತೆ ರಾಜೀನಾಮೆ ಕೊಟ್ಟ ದಿನದಿಂದ ೧೦ ದಿನಗಳಿಗೆ ನಾನು ಕೆಲಸಕ್ಕೆ ನಮಸ್ಕರಿಸಿ ಹೊರ ಬಂದೆ.
ಈಗಿನ ಮಾಧ್ಯಮಗಳು ಬರಿಯ ಜಾತಿ ರಾಜಕಾರಣ ಅಲ್ಲದೆ, ರಾಜಕೀಯ ವ್ಯಕ್ತಿಗಳ ಕೀಲಿ ಕೊಟ್ಟಂತೆ ಹಾಡುವ ಆಟದ ವಸ್ತುಗಳಾಗಿವೆ. ಯಾವ ಜಾತಿ, ಯಾವ ರಾಜಕಾರಣಿ ಎಲ್ಲಿಯ ಮನೋಭಾವ, ಯಾರಿಗೆ ಏನು ಮಾಡ ಬೇಕೆಂಬ ಅರಿವಿದ್ದರೆ ಸಾಕು. ಪಕ್ಷ, ಜಾತಿ, ನೀತಿ, ಕುಲ, ಮತಕ್ಕೆ ಓಲೆ ಹಚ್ಚುವ ಬದಲು ಸಮಾಜಕ್ಕೇನಾದರೂ ಮಾಡಬೇಕು ಹಾಗು ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಮಾಧ್ಯಮ ಎಂದರೆ ಏನು ಎಂಬ ಅರಿವು ಮೂಡಿದರೆ ಸಾಕು.
ಇದರಿಂದಾಗಿ ನಾನು ಪತ್ರಿಕೋಧ್ಯಮ ಎಂದರೆ ಬರಿಯ ಹಣ ಹಾಗೂ ಹೆಸರು ಮಾಡುವ ಒಂದು ಭೂಗತ ಲೋಕ ಎಂದು ಅರಿತೆ. ಪತ್ರಿಕೋಧ್ಯಮ ಬರಿಯ ಹೆಸರಿಗೆ ಮಾತ್ರ ಜನರಿಗೆ ಆದರೆ ಅದರಲ್ಲಿ ನಡೆಯುವುದೆಲ್ಲಾ ಮೋಸ, ಒಬ್ಬರನ್ನು ತುಳಿದು ಮತ್ತೋಬ್ಬರು ಮೇಲೆ ಬರುವುದು, ಇವರು ಅವರನ್ನು ನಿಂದಿಸುವುದು, ಅವರು ಇವರನ್ನು ನಿಂದಿಸುವುದು. ಒಟ್ಟಿನಲ್ಲಿ ಪತ್ರಿಕೋಧ್ಯಮ ಬರಿಯ ಧಂಧೆ, ಆದರೆ ಇದರಲ್ಲಿ ಯಾರೋ ಕೆಲವರು ಮಾತ್ರ ಅವಿರತವಾಗಿ ಶ್ರಮಿಸುತ್ತಿರುವರು, ಅವರಿಗೆ ಬೆಲೆ ಹಾಗು ಮಾನ್ಯತೆಇಲ್ಲ, ಯಾರಾದರೂ ನ್ಯಾಯ ಎತ್ತಿ ಹಿಡಿಯಲು ಪ್ರಯತ್ನಿಸಿದರೆ ಅವರ ಗತಿ ಹರೋ-ಹರ. ಪ್ರತಿಯೊಂದೂ ಮಾಧ್ಯಮಗಳು ಅವರದ್ದೇ ಆದ ಪಕ್ಷಗಳಿಗೆ ಪೂರಕವಾಗಿ ಕೆಲಸ ಮಾಡುವುದು ಬಿಟ್ಟು ಸಮಾಜದ ಉದ್ದಾರಕ್ಕಾಗಿ ದುಡಿಯುವುದಕ್ಕೆ ಪ್ರಯತ್ನಿಸಬೇಕಾಗಿ ವಿನಂತಿ...

 ಮಾಧ್ಯಮ ಬರಿಯ ರಾಜಕೀಯಪಕ್ಷ, ರಾಜಕಾರಣಿ, ಜಾಹಿರಾತುಗಳಿಗೆ ಸೀಮಿತವಾಗದೆ,,,
"ಹಸಿದವರಿಗೆ ಅನ್ನ, ಧಣಿದವರಿಗೆ ನೀರು, ಬೆಂದವರಿಗೆ ಸೂರು, ಕತ್ತಲ ಬಧುಕಿಗೆ ದಾರಿದೀಪ ಆಗಬೇಕೆಂಬ ನನ್ನ ಆಶಯ ನನಸಾಗುವುದು ಸಂಶಯ"
ಇದರಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮಿಸಿ,,,

ಲೇಖಕರು

Naveen S Gowda

naveen

Am Very Cool and friendly man.
I love my friends and I lost every thing because of my friends. Still I love my friends.....

ಅನಿಸಿಕೆಗಳು

sup (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 01/16/2012 - 14:58

super

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.