Skip to main content

ಅವರವರ ಭಾವಕ್ಕೆ...(ಕಥೆ)-ಭಾಗ-೩

ಇಂದ venkatb83
ಬರೆದಿದ್ದುDecember 16, 2011
noಅನಿಸಿಕೆ

 ಅಂದಿನ  'ಲ್ಯಾಬಿನ' ಪ್ರಾಯೋಗಿಕ ತರಗತಿಯನ್ನು 'ಬಹು ಪ್ರಯಾಸಪಟ್ಟು' ಮುಗಿಸಿ ಹೊರ ಬಂದ  'ಅವನು' ಮತ್ತು 'ಅವಳು'   ಆ ಲ್ಯಾಬಿನ  ಹೊರಗಿರುವ  ಹುಲ್ಲು ಹಾಸಿನ  ಮೇಲೆ  ಕುಳಿತುಕೊಂಡರು. 'ಅವನು'  ಅಬ್ಬಾ!! ಅಂತೂ - ಇಂತೂ ಆ ಲ್ಯಾಬ್ ಪ್ರಾಕ್ಟಿಕಲ್ ಇವತ್ತಿಗ್ ಮುಗೀತು.. ತುಂಬಾ ಥ್ಯಾಂಕ್ಸ್  ಕಣೆ, ನಿನ್ನಿನ್ದಾಗ್ ನಾನಿವತ್ತು ಬಚಾವ್.. 'ಅವಳು'  ಅಪ್ಪಾ-ತಂದೆ! ಇವತ್ತಿಗೆ ಕೊನೆ ಇನ್ಮೇಲೆ ನೀ 'ನನ್ನಿಂದ'  ಈ ತರಹದ್ ಸಹಾಯವನ್ನ ಎಕ್ಸ್ಪೆಕ್ಟ್ ಮಾಡಬೇಡ..'ನಿಂಗೆ' ಸಹಾಯ ಮಾಡ್ತಾ ,ಆಮೆಲ್ ನಾ ಆ ಲೆಕ್ಚರ್   ಕೈಲಿ  'ಮಂಗಳಾರ್ಚನೆ'  ಮಾಡಿಸಿಕೊಳ್ಳೋಕೆ 'ನನ್ಗಿಸ್ಟವಿಲ್ಲ'. ಇವತ್ತೇ ನಿಂಗೆ ಸಾಹಾಯ ಮಾಡ ನಂಗೆ 'ಜೀವವೇ ಬಾಯಿಗ್ ಬಂದ್ ಹಾಗ್ ಹಾಗಿತ್ತು'.. 'ಅವ್ನು'  ಹೋಗೋಗೆ, ನಾ ನೋಡದಿರೋಳ   ನೀ?  'ನೀನಲ್ಲದಿದ್ದರೂ' ಬೇರಾರ ಹೆಲ್ಪ ಮಾಡೇ ಮಾಡ್ತಾರೆ...  ಏನೋ ನಮಗೆ ಗೊತ್ತಿಲ್ಲದ್ದನ ಹೇಳಮ್ಮ ಅಂದ್ರೆ  'ಸಕತ್ ಬಿಲ್ದಪ್'  ಕೊಡ್ತಿಯ?'ಅವಳು' ಹೌದೋ ಬಿಲ್ದಪೆ ಏನಿವಾಗ?ಹೌದ? ಬೇರೆ ಯರತ್ರನಾರ  ಹೇಳಿಸ್ಕೊತಿಯ? ನೋಡೋಣ ಅದ್ಯಾರು ನಿಂಗ್ ಹೆಲ್ಪ್ ಮಾಡ್ತಾರೆ?   ಒಂದೈದು ನಿಮಿಷ 'ಮೌನ'... ಆ ಐದು ನಿಮಿಷದ  ಮೌನವೇ ಅವರಿಬ್ಬರಿಗೂ ಸಹಿಸಲಾಗದೆ, ಹೇಳಿದ್ರು  ಒಬ್ಬರಿಗೊಬ್ಬರು  'ಸ್ಸಾರೀ ಕಣೆ', 'ಸಾರೀ ಕಣೋ'..ಹೌದು  ಮುಂದೆ ಏನು ನಿನ್ನ  ಪ್ರೋಗ್ರಾಮ್? 'ಅವನ್' ಪ್ರಶ್ನೆ' 'ಅವಳು' -ಇನ್ನೇನಿದೆ?  ಮಾಮೂಲಿನೆ.ಕಾಲೇಜಿಂದ ನೇರವಾಗ್  ಮನೆಗೊಗೋದು ,ಸ್ವಲ್ಪ ಹೊತ್  ಕಂಪುಟರಲ್ಲಿ  ಗೇಂ ಆಡಿ, ಅಮೇಲ್  ಓದ್ಕೊಳೋದು. 'ಅವನು;' -ತಥ್! ಅದು ದಿನ ಇರೋದೆಯ.  ದಿನಾಲೂ ಮನೆಗ್  ಹೋಗೋದ್ ಇದ್ದೆ ಇದೆ,  ಸ್ವಲ್ಪ ಹೊತ್ತು  'ಮಲ್ಲೇಶ್ವರಂ ಮಂತ್ರಿ ಮಾಲ್' ಸುತ್ಕೊಂಡು  'ವಿಂಡೌ  ಶಾಪಿಂಗ್' ಮಾಡಿದ್ರ್ತೆ ಹೇಗೆ?  ಹ್ಹೂ... 'ಅವಳು'  ಒಪ್ಪಿಯಾಯ್ತಲ್ಲ ಇನ್ನೇನು?   ಕಾಲೇಜಿಂದ ನೇರವಾಗಿ  'ಮಲ್ಲೇಶ್ವರಂನ ಮಂತ್ರಿ ಮಾಲ್ ಗೆ' ಬಂದು  ಅದರ ಎದುರಿಗಿರುವ ತಮ್ಮ ಸ್ನೇಹಿತರ ಮನೆಯಲ್ಲಿ   'ಅವಳು'  ತನ್ನ  ಸ್ಕೂಟಿ  ಪಾರ್ಕ್ ಮಾಡಿದಳು, 'ಇವನು' ಆ ಸ್ನೇಹಿಯ್ತೆಯ ಮನೆ ಎದುರಿಗೆ ಖಾಲಿ ಜಾಗದಲ್ಲಿ  ತನ್ನ ಬೈಕು  ಪಾರ್ಕ್ ಮಾಡಿದ. ನಗುತ್ತಲೇ ಸ್ವಾಗತಿಸಿದ ಸ್ನೇಹಿತೆಯ ಮನೆಯೋಳಗೋಗಿ  ಸ್ನೇಹಿತೆ ಕೊಟ್ಟ  ಜೂಸ್  ಕುಡಿದು ಇಬ್ಬರೂ  ಮಂತ್ರಿ ಮಾಲಿಗೆ ಅಡಿಯಿಟ್ಟರು.... ಸ್ನೇಹಿತೆಯ  ಮನೆ ಹತ್ತಿರವಾದ್ದರಿಂದ ಮಂತ್ರಿ ಮಾಲಿನ  'ದುಬಾರೀ ಪಾರ್ಕಿಂಗ್ ಫಿ'  ಕಟ್ಟೋದು ತಪ್ಪಿತು:))  ಸಶೇಷ... 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.