Skip to main content

ಸೀ.ಎಂ ಕುರ್ಚಿ -ಬಡ ಬೋರ-ಮತ್ತು ಪಜೀತಿ..................(ಹಾಸ್ಯ ) -೧

ಇಂದ venkatb83
ಬರೆದಿದ್ದುDecember 16, 2011
noಅನಿಸಿಕೆ

    'ಆ ಕುರ್ಚಿ' ಮೇಲೆ  ಕುಳಿತುಕೊಳ್ಳದೆ ಅದನ್ನು ದೂರದಿಂದಲೇ ನೋಡ್ತಾ  ದಿನಂಪ್ರತಿ  ಮನಸಲ್ಲೇ ಅಂದ್ಕೊಳ್ತಾರೆ  'ಅದ್ಯಾವಾಗ ಅವ್ರು ಬರ್ತಾರೋ' ಆಗ್ ನಾ ಇದನ ಬಿಟ್ ಕೊಡಲೇ ಬೇಕು! ಆಗ 'ಈ ಚೇರ್'  ಬಿಟ್ಟು ಕೊಟ್ಟು 'ವ್ಯಾಕುಲನಾಗುವುದರ' ಬದಲಿಗೆ ಅದ್ನ ಇಲ್ಲಿಂದಲೇ 'ಕಣ್ಣ ತುಂಬಾ' ನೋಡಿದರಸ್ಟೇ  ಸಾಕು. ಹೀಗಂತ 'ನೂರೊಂದನೆ ಸಾರಿ'  ಅನ್ಕೊನ್ದ್ರು ನಮ್  ಮಾನ್ಯ 'ತಾತ್ಕಾಲಿಕ ಮುಖ್ಯಮಂತ್ರಿಗಳು' 'ಅವರ್ಗೆ' ತಮ್ಮನಾಗದೆಯೂ  ಅವರು ಮರಳಿ ಬರುವವರೆಗೆ ತಾವು  , ಹಿಂದೊಮ್ಮೆ ಆ  ' ಭರತ' ಪಾದುಕೆಗಳನ ಇಟ್ಟು ಪೂಜೆ ಮಾಡ್ತಾ, ಆಡಳಿತ ನಡೆಸಿದಂತೆ, ತಾವು 'ಆಧುನಿಕ ಭರತ'  ಆಗಿರಬೇಕಾಗಿದ್ದು ಮತ್ತದು  'ಅಚಾನಾಕಾಗ್' ಬಂದಿದ್ದು ಅವರ್ಗೆ ಸೋಜಿಗ ಅನ್ನಿಸ್ತು.. ತಮ್ಮದೇ ಪಕ್ಸ್ಚದವರೂ - ವಿರೋಧಿಗಳೂ  'ಆ ಕುರ್ಚಿ' ಮೇಲೆ ಜೀವನದಲ್ಲಿ ಒಮ್ಮೆಯಾದರೂ 'ಅಂಡನ್ನು'ಊರಿ ಕೆಲ ಸೆಕೆಂಡುಗಳ ಕಾಲವಾದರೂ ಕುಳಿತುಕೊಳ್ಳುವ   ತನ್ಮೂಲಕ 'ಆ ಕುರ್ಚಿಯಲ್ಲಿ'  ಕುಳಿತ 'ಮಾನ್ಯ ..... ಎಂಬ ತಮ್ಮ ಹೆಸರಿನ ಘೋಷಣೆಯ  ಕನಸು ಕಂಡವರಿಗೆ ದಕ್ಕದ 'ಆ ಚೇರು' ಈಗ ತಮಗೆ  'ಏನೇನೂ ಶ್ರಮ ವಹಿಸದೆ'  ದಕ್ಕಿದ್ದಕ್ಕೆ 'ತಮ್ಮ  ಪೂರ್ವಜನ್ಮದ ಪುಣ್ಯವೇ' ಕಾರಣವೆಂದ 'ಶ್ರೀ ಶ್ರೀ ಶ್ರೀ  ಬೂಧಿನಾಥ ಸ್ವಾಮಿಗಳವರ' ನುಡಿ  ಕಿವಿಗೆ ಮತ್ತೊಮ್ಮೆ-ಮಗದೊಮ್ಮೆ ಮಾರ್ಧನಿಸಿ ಮುಖದಲ್ಲಿ 'ಕಳೆ' ಬಂತು..ಆದರೂ  ಅದೇ 'ಶ್ರೀ ಶ್ರೀ  ಶ್ರೀ ಬೂದಿನಾಥ ಸ್ವಾಮಿಗಳವರು' ಇನ್ನೊಂದು ಮಾತನ್ನು ಸೇರಿಸಿದ್ದರು 'ಮೊಸರನ್ನದಲ್ಲಿ ಕಲ್ಲು' ತರಹ. ಅದು- ನೀವು 'ಈ ಸೀಟಿನಲ್ಲಿ'  ಬಹು ದಿನ ಕುಳಿತುಕೊಳ್ಳುವುದು ಆಗುವುದಿಲ್ಲ. ನಿಮ್ಮ 'ಸ್ಥಾನ ಪಲ್ಲಟವಗಬಹುದು' 'ಆಗದೆಯೂ ಇರಬಹುದು'!! ತಾ-ಮು(ತಾತ್ಕಾಲಿಕ ಮುಖ್ಯಮಂತ್ರಿ) ಗೆ ಆಶ್ಚರ್ಯ!! ಅಲ್ಲ ಇದೆಂತ ಭವಿಷ್ಯ? ಇದನ್ನ ೫೦:೫೦ ತರಹ ಹೇಳಿದ್ರೆ ಅದೆಂಗ್ ಏನೂಂತ ಅರ್ಥ ಮಾಡ್ಕೊಳೋದು? ಸಿಹಿ-ಕಹಿ ಮಿಶ್ರಣದ 'ಈ ಗೂಢ  ಭವಿಷ್ಯ' ಅರ್ಥ ಮಾಡಿಕೊಳಲಾಗದೆ,'ಗೂಢ  ಭವಿಷ್ಯ'ದ  ಕಹಿಯನ್ನ  ದೇವರ ಇಚ್ಚೆಗೆ ಬಿಟ್ಟು   ಸಿಹಿ ನುಡಿಯನ್ನು ಮಾತ್ರ ತಮಗೆ ತೋಚಿದಂತೆ  ಅರ್ಥೈಸಿಕೊಂಡು  ಹಿಗ್ಗಿ ಹೀರೆಕಾಯಾದರು..!! ಹಂಗೂ-ಹಿಂಗೂ  ಕಷ್ಟ ಪಟ್  ೨ ತಿಂಗಳು ಅಧಿಕಾರ ನಡೆಸಿದ್ದಾಯ್ತು, ನಾಡಿನ ಅಭಿವ್ರುದ್ಧಿಯನ್ತು ಆಗಲಿಲ್ಲ ಹಾಗಂತ ವಿಶೇಷವಾದದ್ದು ಏನೂ ನಡೆಯದೆ 'ಜನರೆಲ್ಲಾ'  ಇವತ್ತು -ನಾಳೆ-ನಾಡಿದ್ದು ಏನಾರ 'ವಿಶೇಷ ' ಆಗಬಹುದು-ಮಾಡಬಹುದು  ಅಂತ ಕಾದಿದ್ದೆ ಬಂತು!!..ಈ ಮಧ್ಯೆ ಇವತ್ತೋ-ನಾಳೆಯೋ -ನಾಡಿದ್ದೋ ಅಥವಾ ಈಗಲೋ 'ಅವ್ರು' ಜಾಮೀನು ಸಿಕ್ಕಿ ಇಲ್ಲ 'ಖುಲಾಸೆಯಾಗಿ' ಬರಬಹುದು, ಬಂದು ಮತ್ತೆ 'ಆ ಚೇರಿನ' ಮೇಲೆ  ಕುಳಿತುಕೊಳ್ಳಬಹುದು ಎನ್ನುವ 'ಹಿತ ಶತ್ರುಗಳ ಬೆನ್ ಹಿಂದಿನ ನುಡಿ' ಬೇರೆ ಇವರ ನೆಮ್ಮದಿ ಕೆಡಿಸುತ್ತಿತ್ತು,...    ನಮ್  ತಾ-ಮು  ಗಳು ಈ ಚಿಂತೆಯಲ್ಲೇ ಮುಳುಗಿ ಕೊನೆಗೆ 'ಸ್ತಿತಪ್ರಜ್ನರಂತೆ' ಯೋಚ್ಸಿ  ಹಿಂದೆ ಋಷಿ-ಮುನಿಗಳು ಹೇಳಿದ್ದ  ವಾಕ್ಯವನ್ನ ನೆನಪಿಗೆ ತಂದ್ಕೊಂಡು 'ಯಾವ್ಯ್ದು ನನದಲ್ಲ,ಯಾವುದು ಶಾಶ್ವತವಲ್ಲ' ಇಂದು ನನ್ನದು ನಾಳೆ ಯಾರದೋ', ಅಧ್ರುಸ್ಟ  ಇದ್ದಸ್ಟೇ  ಫಲ' ಹೀಗೆ ಇನ್ನು ಏನೇನೋ ನೆನಪಿಗೆ ತಂದ್ಕಂಡು 'ಸ್ವಯಂ ಸಮಾಧಾನ' ಮಾಡ್ಕೊಂಡ್ರು. ಹೆಂಗೋ 'ಶಿವಾ ನಿನ್ನಮ್ಬಿವ್ನಿ ನೀನೆ ಕಾಪಾಡಪ್ಪ' ಅಂತ  'ಸದಾ ಅಸಹಕಾರ'  ಕೊಡ್ತಾ  ಇದ್ದ ಅಧಿಕಾರಿಗಳು-ಶಾಸಕರು -ಸಚಿವರ' ದಂಡನ್ನು ಇಟ್ಟಕೊಂಡು  ಅಧಿಕಾರ ಮಾಡ್ಕೊಂಡು ಬಂದಿದ್ದ ನಮ್  ತಾ -ಮು ಕಿವಿಗೆ ಬಿದ್ದಿತ್  'ಆ ಕೆಟ್ಟ ಸುದ್ಧಿ' 'ಮುಖ್ಯಮಂತ್ರಿಗಳ ಕುರ್ಚಿ' ಕಳವು!!  ಆಗಿದ್ದು ಇಸ್ಟೇ : ಮಾಮೂಲಿನಂತೆ  ವಿಧಾನ ಸೌಧದಲ್ಲಿ  ' ಮುಖ್ಯಮಂತ್ರಿಗಳ  ಕೋಣೆ'  ಶುಚಿ ಮಾಡಲು ಹೋದ ಕೆಲಸಗಾರನಿಗೆ 'ಮುಖ್ಯಮಂತ್ರಿಗಳ ಚೇರು' ಕಾಣಿಸದೆ ಅಲ್ಲಿ ಇಲ್ಲಿ ಇಡೀ ವಿಧಾ ಸೌಧ ಜಾಲಾಡಿದರೂ ಸಿಗದೇ ಕಂಗಾಲಾಗಿ   ಆ ಸುದ್ಧಿ ಇದ್ದಕ್ಕಿದ್ದಂತೆ 'ಎಲ್ಲ ಶೀಘ್ರ  ಹರಡುವ  ಸಾಂಕ್ರಾಮಿಕ  ರೋಗಗಳನ್ನು' ಮೀರಿಸಿ ದುಪ್ಪಟ್ಟು ವೇಗದಲ್ಲಿ ಇಡೀ ಕರು ನಾಡಿನಾದ್ಯಂತ  ಹರಡಿ ಜನಕ್ಕೆ 'ಕುತೂಹಲದ ವಿಷಯವಾಯ್ತು' ಟೀ ವೀ  ವರಧಿಗಾರರು, ದಿನ ಪತ್ರಿಕೆಗಳ ವರದಿಗಾರರು   ತಾ- ನಾ ಅಂತ ಮುಗಿ ಬಿದ್ದು  ವಿಧಾನ ಸೌಧಕ್ಕೆ ,ತಾ-ಮು ಗಳ 'ಗೃಹ ಕಚೇರಿಗೆ ಕಂ ಮನೆ' ಗೆ   ಲಗ್ಗೆ ಇಟ್ಟರು.   ಅದು 'ಮಹಾನಗರಿಯ'  ಮಹಾ ಸುದ್ಧಿಯಾಯ್ತು , ಇತ್ತ ಮಹಾನಗರಿ ಬೆಂಗಳೂರಿನ ಸಮೀಪದ ಹಳ್ಳಿಯೊಂದರ  'ಬಡ ಬೋರ' ಬೆಳ್ಳ ಬೆಳಗ್ಗೆ  ಎದ್ದು  ಚಾಪೆ ಮಡಚಿಟ್ಟು, ಪ್ಲಾಸ್ಟಿಕ್ಕಿನ ದೊಡ್ಡ ಬಾಟಲಿಯಲ್ಲಿ  ನೀರು ತುಂಬಿಕೊಂಡು  'ಬೆಳಗ್ಗಿನ ಪಾಪ ಕರ್ಮ' ಮುಗಿಸಲು ಊರ ಆಚೆ ಇರೋ ಖಾಲಿ ಜಾಗದತ್ತ ಹೊರಟ.ತಂದೆ ತಾಯ್ ಇಟ್ಟ ಹೆಸರು 'ಬೋರಣ್ಣ'  ಅಂತ ಮಾತ್ರ  ಆದರೆ ಈ 'ಬಡ  ಬೋರ' ಅಂತ ಅವ್ನು ಹೆಸರುವಾಸಿಯಾಗಿದ್ದು  ಅವನ 'ಆರ್ಥಿಕ ಸ್ಥಿತಿ'  ಕಂಡು ಊರವರು ಕರೆದದ್ದಕ್ಕೆ ಅಲ್ಲ, ಅವನು ಕೊಂಚ ಎತ್ತರಕ್ಕೆ ಕಾಣಿಸುತ್ತಿದ್ದರಿಂದ ಅವನಿಗಿಂತ  ಕೊಂಚವೇ ಕುಳ್ಳಗಿದ್ದ ಅವನ್ ಕೆಲ ಸ್ನೇಹಿತರು ಅದರಲ್ಲೂ  ಸಾಬರ  ಹುಡುಗ ಹಾಜಿ  ಈ ಬೋರನನ್ನ  'ಬಡಾ ಬೋರ' ಅಂತ ಕರೆದದ್ದೇ  ಶುರುವಾಯ್ತು.ಹೀಗೆ ಬಡಾ ಹೋಗಿ ಬಡವನಾದ  'ನಮ್ ಬೋರಂಗೆ' ಅದ್ಯಾಕೋ 'ಎಡಗಣ್ಣು ಬಿಟ್ಟು ಬಿಡದೆ ಹೊಡ್ಕೊಳ್ತಿದೆ' ಅಂತನ್ಸ್ತು. ಎಡಗಣ್ಣು ಅದುರುವುದು ಶುಭ ಶಕುನವಂತೂ ಅಲ್ಲ , ಅಪ್ಪಿ-ತಪ್ಪಿ ಯಾರ್ಯಾರ ಹುಡ್ಗೀರ  ಎದುರ್ ಬಂದ್ರೆ  ಆಗ ಈ ಕಣ್ಣು ಹೀಗ್ ಹೊಡ್ಕೊಂದ್ರೆ ಆ ಹುದ್ಗೀಯ ಹಾರಾತ್-ಚೀರಾಟ್ ಕೇಳಿ ಜನ ರೋಮಾನ್ಚಿತರಾಗ್  'ಬೆಲ್ ಬೆಳಗ್ಗೆ ಪಾದರಕ್ಷೆ ಸಮೇತ  ಮಾಡೋ ನೂರಾರು ಕೈಗಳ ಉಚಿತ ದೇಹ ಮರ್ಧನೆ' ನೆನಸ್ಕೊಂಡು ದೇಹ ಕಂಪಿಸಿತು!!.      ಇನ್ನೂ ಇದೆ................ 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.