Skip to main content

ರಾಷ್ಟ್ರೀಯ ಕೃಷಿ ಮೇಳದ ಅವಾಂತರ

ಇಂದ Naveen S Gowda
ಬರೆದಿದ್ದುNovember 28, 2011
noಅನಿಸಿಕೆ

ನಮಸ್ಕಾರ ಗೆಳೆಯರೇ,                               ಇದು ರಾಷ್ಟ್ರೀಯ ಕೃಷಿ ಮೇಳದ ಅವಾಂತರ, ಇದು ನಡೆದಿದ್ದು ೧೬-೧೧-೨೦೧೧ ರಿಂದ ೨೦-೧೧-೨೦೧೧ರ ವರೆಗೆ, ಪ್ರಖ್ಯಾತ  ವಿಧ್ಯಾನಿಲಯವಾದ "ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ"ದಲ್ಲಿ ಇದು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಬಳ್ಳಾರಿ ರಾಷ್ನ್ರೀಯ ಹೆದ್ದಾರಿ-೪ರಲ್ಲಿ ಇರುವ ಯಲಹಂಕ ಸಮೀಪ.ಆದರೆ ಇದು ನಡೆದದ್ದು ಮಾತ್ರ ಕೃಷಿಗೆ ಹಾಗೂ ಕೃಷಿಕರಿಗೆ ಅಲ್ಲ...!!!ಕೃಷಿ ಮೇಳ ಈ ಬಾರಿ ಆಯೋಜಿಸಿದ್ದು, ಇದರ ಉಪಯೋಗ ಪಡೆದಿದ್ದು ಮಾತ್ರ ಪಾನೀಪುರಿ ಅಂಗಡಿ, ಕೂಲ್ ಡ್ರಿಂಕ್ಸ್, ಬಿರಿಯಾನಿ ಅಂಗಡಿ, ಪಲಾವ್ ಮುಂತಾದ ತಿಂಡಿಗಳನ್ನು ಹೊರತು ಪಡಿಸಿದರೆ, ಸಣ್ಣ-ಪುಟ್ಟ ಮಳಿಗೆಗಳನ್ನು ತೆರೆದಿದ್ದ, ಕಬ್ಬಿನ ರಸ, ಆಟಿಕೆಗಳು, ಪ್ಲಾಸ್ಟಿಕ್ ಸಾಮಗ್ರೀಗಳು, ಓಲೆಗಳು, ಮೂಗುತಿಗಳು, ಬಣ್ಫ-ಬಣ್ಣದ ಬಟ್ಟೆಗಳು, ಸೀರೆಗಳು, ಚೂಡಿದಾರ್, ಜೀನ್ಸ್, ಅಂಗಿಗಳು, ಟವೆಲ್ಗಳು ಅಯ್ಯೋ  ಇದರ ಗೋಳು ಕೇಳೋರೇ ಇಲ್ಲ.ಇವರ ಗೋಳು ಹಾಗಿರಲಿ, ಬೆಂಗಳೂರಿನ ಅನೇಕ ಸಾಟಿಇಲ್ಲ ಲಕ್ಷಾಂತರ ಮಂದಿ ಇಲ್ಲಿಗೆ  ( ಬರೋಬ್ಬರಿ ದಿನ ಒಂದಕ್ಕೆ ೨.೫ ರಿಂದ ೩.೫ ಲಕ್ಷ ಜನ ) ದಾವಿಸಿದ್ದರಿಂದ, ಮುಂಕ್ಕಾಲು ಭಾಗ ವ್ಯಾಪಾರವೇ ಕುಸಿದು ಹೋಗಿತ್ತು ಎನ್ನ ಬಹುದು. ಹೇಗೆಂದರೆ ಇಲ್ಲಿ ನಡೆಯುತ್ತಿದ್ದ ಜಾತ್ರೆಗೆ ಬಂದವರು ಕೊನೆಗೆ ಏನಿಲ್ಲ ಎಂದರೂ ಸರಿ ಸುಮಾರು ೧೦೦ ರಿಂದ ೧೦೦೦ದ್ ವರೆಗೆ ವ್ಯಾಪಾರ ಮಾಡಿದವರೆ, ನಿಮಗೂ ಅನುಬಕ್ಕೆ ಬಂದಿರ ಬೇಕು ಹೆಂಗಸರನ್ನ ಎಲ್ಲಿಗಾದರು ಕರೆದುಕೊಂಡು ಹೋದರೆ, ಗಂಡಸರ ಗತಿ ಏನಾಗುವುದೆಂದು. ನೀವೇ ಒಮ್ಮೆ ಲೆಕ್ಕಾ ಹಾಕಿ ಅಲ್ಲಿಗೆ ದಿನ ಒಂದಕ್ಕೆ ಕೋಟಿ ವ್ಯಾಪಾರ ನಡೆದಿರ ಬಹುದೆಂದು. ಊಹಿಸಲೂ ಸಾಧ್ಯವಿಲ್ಲ ಬಿಡಿ.ಇನ್ನು ಇದನ್ನೂ ಬದಿಗೊತ್ತಿದರೆ ಇನ್ನು ಉಳಿಯುವುದು ಕಾಲೇಜು ಯುವಕ-ಯುವತಿಯರು, ಇವರನ್ನಂತೂ ಕೇಳಲೇ ಬೇಡಿ, ಅಂತರರಾಷ್ಟ್ರೀಯ ಕೃಷಿ ಮೇಳವನ್ನು ಶಾಪಿಂಗ್ ಮಾಲ್ ಹಾಗೂ ಉದ್ಯಾನವನ ಮಾಡಿಕೊಂಡಿದ್ದರು. ಕಾರಣ ಅಲ್ಲಲ್ಲಿ ಅಕ್ವೇರಿಯಂ ಮಾರಾಟ ಮಳಿಗೆಗಳು, ಕೋಳಿ, ಕುರಿ, ಮೇಕೆ (ಆಡು), ಎತ್ತುಗಳು, ಹೀಮು ಕೋಳಿಗಳು, ಬಾತು ಕೋಳಿಗಳು ಗಳಿಂದ ಕೂಡಿತ್ತು. ಅದರಲ್ಲೂ ತಿಂಡಿಗಳನ್ನು ನೋಡಿದರೆ ಹುಡುಗಿಯರಂತೂ ಆಗೇ ಹೋಯಿತು, ಚಿಕ್ಕಿ, ಬನ್ನು-ಗುಲಕನ್, ಮಂಡಕ್ಕಿ, ಅವಲಕ್ಕಿ, ಮುಂತಾದ ತರ-ತರವಾದ ತಿಂನಿಸುಗಳು. ಹುಡುಗಿಯರ ದಿನಬಳಕೆ ಸಾಮಗ್ರಿಗಳಂತೂ ತುಂಬಿತುಳುಕುತಿದ್ದವು. ಎಲ್ಲಾ ಸ್ಟಾಲ್ ಗಳ ಮುಂದೆ ಮುಗಿಬಿದ್ದ ಹುಡುಗಿಯರ ಸಾಲು, ಹಿಂದೆ ನಿಂತು ಜೇಬಿನಲ್ಲಿ ಹಿಣುಕುತಿದ್ದ ಹುಡುಗರು. ಜೇಬಿಗೆ ಬಿದ್ದ ಕತ್ತರಿಯಲ್ಲಿ ಸಿಲುಕಿಕೊಂಡ ಅಡಕೇ ಕಾಯಿಯಂತಾಗಿದ್ದ ವರು. ಬಂದಾಗ ಹುರುಪು ಹುಮ್ಮಸ್ಸಿನಲ್ಲಿದ್ದ ಹುಡುಗರು ಹೊರ ಹೋಗುವಾಗ ಇಂಗುತಿಂದ ಮಂಗನಂತೆ ಸಪ್ಪೆ ಮುಖ ಹೊತ್ತು ಹೋಗುತ್ತಿದ್ದದ್ದು ಸಾಮಾನ್ಯ ವಾಗಿತ್ತು. ಇನ್ನೂ ಕೆಲವರು ತಮ್ಮ ಸ್ನೇಹಿರಿಂದ ಸಾಲ ಪಡೆದು ಹುಡುಗಿ ಕೇಳಿದ್ದ ನ್ನೆಲ್ಲಾ ಕೊಡಿಸಲು ಪ್ರಯತ್ನ ಪಡುತ್ತಿದ್ದರು.ಅದರಲ್ಲೂ ಕೆಲವರು ಜೊತೆ ಇಲ್ಲದೆ ಬಂದಿದ್ದವರು ಬೇಕೂ ಎಂದೇ ಹುಡುಗಿಯರನ್ನ ನೋಡಲು ಕಾಲೇಜುಗಳಿಗೆ ಬಂಕ್ ಹೊಡೆದು ಇಲ್ಲಿಗೆ ಬಂದಿದ್ದರು. ಅದರಲ್ಲೂ ಹುಡುಗ- ಹುಡುಗಿ ಎಂದೆ ಏನು ಇಲ್ಲ ಎಲ್ಲರೂ ಕೇವಲ ಸಮಯ ಕಳೆಯಲು ಬಂದಿದ್ದವರು, ಕೃಷಿ ಮೇಳ ನೋಡಿ ಇಡಿ ಶಾಪ ಹಾಕಿದರು, ಅಲ್ಲಿಯ ದೂಳು, ಕಲುಶಿತ ವಾತಾವರಣ, ಬಿಸಿಲು, ದುಬಾರೀ ಬೆಲೆಯ ಊಟ ಮುಂತಾದ ವ್ಯವಸ್ತೆಗಳಿಂದ ಜನ ಬೇಸರ ವ್ಯಕ್ತ ಪ್ಡಿಸುತ್ತಿದ್ದಿದ್ದು ಸಾಮಾನ್ಯವಾಗಿತ್ತು.ರಾಷ್ಟ್ರೀಯ ಕೃಷಿ ಮೇಳದ ಉಪಯೊಗ ಕೃಷಿಕರಿಗೆ ಉಪಯೋಗವಾಯಿತೋ ಬಿಟ್ಟಿತೋ ಗೊತ್ತಿಲ್ಲ ಆದರೆ ವ್ಯಾಪಾರ ಮಾಡುತ್ತಿದ್ದ ಅಂಗ್ಡಿಗಳವರು ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟ್ರು.ಒಂದು ಪ್ಲೇಟ್  ಬಿರಿಯಾನಿ ೧೨೦ ರಿಂದ ೧೮೦ ರೂಪಾಯಿಒಂದು ಪ್ಲೇಟ್  ಚಿತ್ರಾನ್ನ  ೩೦ ರಿಂದ ೫೦ ರೂಪಾಯಿಒಂದು ಪ್ಲೇಟ್  ಮೊಸ್ರನ್ನ ೩೦ ರೂಪಾಯಿಒಂದು ಪ್ಲೇಟ್  ಚಿಕನ್  ಕಬಾಬ್ ೮೦ ರಿಂದ ೧೨೦ ರೂಪಾಯಿ೧೨ ರೂಪಾಯಿಯ ಒಂದು ತಂಪು ಪಾನೀಯ ೨೦ ರಿಂದ್ ೨೫ ರೂಪಾಯಿ.೮ ರೂಪಾಯಿಯ ಒಂದು ಕಬ್ಬಿನ ರಸ ೧೫ ರೂಪಾಯಿ.ಹೀಗೇ ಹೇಳುತ್ತಾ ಹೋದರೆ ಒಂದೇ ಎರಡೇ, ಕೆಲವರಂತೂ ಆಯೋಜಕರಿಂದ ಹಿಡಿದು ಅಂಗಡಿಗಳ ವ್ಯಾಪಾರ ಹಾಗೂ ವತ್ರನೆ ಕಂಡು ಶಾಪ ಹಾಕುತ್ತಾ ಹೊರ ನೆಡೆದರು."ಗಾಂಧಿ ಕೃಷಿ ವಿಶ್ವ ವಿದ್ಯಾನಿಲಯ"ದ   ರಾಷ್ಟ್ರೀಯ ಕೃಷಿ ಮೇಳದ  ಪ್ರಯೋಜನ  ಕೃಷಿಕರಿಗೆ ಏನು ಲಾಭದಾಯಕ ಎಂದು ನನಗೇ ಇನ್ನು ಸರಿಯಾಗಿ ತಿಳಿದಿಲ್ಲ, ಇನ್ನು ಅಲ್ಲಿ ನೆರೆದಿದ್ದವರಿಗೆ ಯಾವ ಮಟ್ಟದ ತಿಳಿಯಿತೋ ದೇವರೇ ಬಲ್ಲ...

ಕೃಷಿ ಮೇಳ ಬರಿಯ ಕುಷಿಗೆ ಮಾತ್ರ ...................

ಲೇಖಕರು

Naveen S Gowda

naveen

Am Very Cool and friendly man.
I love my friends and I lost every thing because of my friends. Still I love my friends.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.