ಜೀವ ಹಾಗೂ ಜೀವನ ಕೊಟ್ಟವರಿಗೆ...?
ಹಾಯ್ ಗೆಳೆಯರೆ,ಜೀವನ ಎಂಬುದು ಒ೦ದು ಸುಂದರ ಕವನ, ಇದು ಸುಂದರವಾಗಿ ಕಾಣಲು ಮೊದಲು ನಾವು ಮತ್ತು ನಮ್ಮ ಮನಸ್ಸು ಸುಂದರವಾಗಿರಬೇಕು ಹಾಗೂ ಮನಸ್ಸು ಹಗುರಾಗಿರ ಬೇಕು. ಆದರೆ ನಾವು ಹಾಗು ಹೋಗುಗಳನ್ನ ಮನಸ್ಸಿನಲ್ಲಿ ತುಂಬಿಕೊಂಡು ಸಮಸ್ಯೆಗಳ ಸುಳಿಗೆ ಸಿಲುಕಿ ಪ್ರತಿ ದಿನ, ಪ್ರತಿ ಕ್ಷಣ, ಒಂದಿಲ್ಲಾ ಒಂದು ಸಮಸ್ಯೆಗಳಿಗೆ ಸಿಲುಕಿ ನಲಿಗಾಡುತ್ತಲೇ ಇರುತ್ತೇವೆ.ಆಧುನಿಕ ಜೀವನದಲ್ಲಿ ನಾವು ಎಲ್ಲವನ್ನೂ ಮರೆಯುತ್ತಿದ್ದೇವೆ, ಹೊಸತನದ ಹೊಸ್ತಿಲಲ್ಲಿ, ನಮ್ಮ ತನವನ್ನ ಅಲ್ಲದೆ ಮಾನವೀಯತೆ, ಹಿರಿಯರು, ಕಿರಿಯರು, ಸೇರಿದಂತೆ ಎಲ್ಲವನ್ನೂ ಹಣದಿಂದ ಕೊಳ್ಳಬಹುದೆಂಬ ಹುಚ್ಚು ಕಲ್ಪನೆಯಲ್ಲಿ, ಮಾಯಾ ಕುದುರೆಯ ಬೆನ್ನೇರಿ ಮರು ಭೂಮಿಯಲ್ಲಿ ಓಯಸೀಸ್ ಹುಡುಕಾಟಕ್ಕೆ ನಿಂತಿದ್ದೇವೆ. ಪ್ರೀತಿಇದು ಯಾರಿಗೆ ತಿಳಿದಿಲ್ಲ, ಆದರೆ ಇದರ ವಿಧಗಳು ಎಷ್ಟು, ರೀತಿಗಳು ಎಷ್ಟು, ಅದರ ಭಾವನೆಗಳು ಏನು, ಅದು ಹೇಗಿರುತ್ತದೆ, ಎಂದು ಮಾತ್ರ ಯಾರಿಗೂ ತಿಳಿದಿಲ್ಲ. ಪ್ರೀತಿ ಒಂದು ಸುಂಧರ ಹೂ ತೋಟ ಅದರಲ್ಲಿ ಹತ್ತಾರು ಹೂವುಗಳು ಬೆಳೆದಿರುತ್ತದೆ, ಗುಲಾಬಿ, ಕನಕಾಂಬರ, ಸಂಪಿಗೆ, ಮಲ್ಲಿಗೆ, ಜಾಜಿ, ಮುಂತಾದ ಸುಗಂಧ ಭರಿತ, ಚಂದವಾದ, ಹೂಗಳಿರುತ್ತದೆ. ಆದರೆ ವಿಚಿತ್ರ ನೋಡಿ ಸುಂಧರ ಹೂವುಗಳನ್ನ ಕಾಯಲು ನಾವು ಬಳಸುವುದು ಬೇಲಿ ಗಿಡಗಳ ಸಾಲನ್ನ, ಆದರೆ ಅದೂ ಸಹ ಹೂವುಗಳನ್ನ ಬಿಟ್ಟು ಚೆಂದದಿಂದ ಬೇರೆ ಹೂವುಗಳನ್ನ ಕಾಯುತ್ತಲೇ ಇರುತ್ತದೆ.ಹಾಗೆ ಜೀವನವು ಸಹ ಒಂದು ಸುಂಧರ ಹೂ ತೋಟ, ಅದರಲ್ಲಿ ನಾವು ಹೂವುಗಳು ಮಾತ್ರ, ಆದರೆ ಒಂದು ಹೂ ಒಂದು ಹೂ ತೋಟದಲ್ಲಿನ ಎಲ್ಲಾ ಹೂವುಗಳೂ ಒಂದೇ ಆಗಿರ ಬೇಕು ಎಂದು ಯಾವ ಕಾನೂನುಗಳಲ್ಲೂ ಬರೆದೂ ಇಲ್ಲ, ಅದು ಆಗುವುದೂ ಇಲ್ಲ, ಒಂದರಲ್ಲಿ ಮುಳ್ಳು, ಮತ್ತೋಂದರಲ್ಲಿ ಜಿಗುಟು, ಮಗದೊಂದು ಒರಟು ಇರುತ್ತದೆ. ಆದರೆ ಗಮನಿಸ ಬೇಕಾದ್ ವಿಷಯವೆಂದರೆ ಎಲ್ಲದ್ದಕ್ಕೂ ಪ್ರೀತಿಯಿಂದ ಕಾಪಾಡುವ ಕಾಣದ ಪಾಲಕನೊಬ್ಬನೆ.ಆಧುನಿಕ ಬದುಕಿನಲ್ಲಿ ಎಲ್ಲಿಯ ಪ್ರೀತಿ, ಎಲ್ಲಿಯ ಜೀವನ, ಎಲ್ಲಿಯ ಭಾವನೆ, ಯಾರಾದರೂ ಒಬ್ಬ ಹುಡುಗ-ಹುಡುಗಿ ದಾರಿಯಲ್ಲಿ ನಡೆದು ಹೊದರೆ ಅದಕ್ಕೆ ತಪ್ಪು ಕಲ್ಪನೆ ಕಲ್ಪಿಸಿ, ಬಣ್ಣ ಕಟ್ಟಿ ಮಾತನಾಡುವುದನ್ನು ಬಿಟ್ಟು, ನಮ್ಮ ಮನಸ್ಸಿಗೆ ಒಮ್ಮೆ ತಿಳಿ ಏಳೋಣ, ಇದೇ ರೀತಿ ನಾವೋ, ನಮ್ಮ ಮನೆಯ ಯಾವುದೋ ಹೆಣ್ಣು ಮಗುವಿನೊಂದಿಗೆ ನಡೆದು ಹೊಗುತ್ತಿರುವಾಗ ಯಾರಾದ್ರೂ ಆರೀತಿ ಯೋನೆ ಮಾಡಿದ್ರೆ ನಮಗೆ ಆಗುವ ನೋವ್ನ್ನು ಒಮ್ಮೆ ನೆನಪಿಸಿಕೊಳ್ಳೋಣ. ಆದ್ರೆ ಜೀವನ ನಾನು ಹೇಳಿದಷ್ಟು ಸುಲಭವಲ್ಲ ಎಂದು ನನಗೆ ತಿಳಿದಿದೆ.ಕೊನೆಯ ಪಕ್ಷದಲ್ಲಿ ನಾವು ಏನು ಮಾಡುತ್ತಿದ್ದೇವೆ ಎಂದು ತಿಳಿಯದೇ ಮಾಡುವ ಎಷ್ಟೋ ತಪ್ಪುಗಳಿಗೆ ಸಂಭಂಧಗಳು ಕೆಡುವುದು ಬೇಡ, ನಾನು ಅಕ್ಕ, ತಂಗಿ ಗಳಿಲ್ಲದೆ ಬೆಳೆದವನು, ಆದರೆ ಹೆಣ್ಣೆಂದರೆ ಏನು ಎಂದು ನನಗೆ ಅತೀವವಾದ ನಂಬಿಕೆ ಹಾಗೂ ವಿಷ್ವಾಸ ಇದೆ. ಅಷ್ಟೇ ಭಕ್ತಿಯೂ ಇದೆ.ಪ್ರೀತಿ ಕೇವಲ ಹಣದಿಂದ ಬರುವಂತದಲ್ಲ, ಅದರಲ್ಲಿ ಅಪಾರ ಶಕ್ತಿಯಿದೆ, ತಾಯಿ, ತಂಗಿ, ಅಣ್ಣ, ತಮ್ಮ, ಅಪ್ಪ, ಹೆಂಡತಿ, ಮಕ್ಕಳು, ತಾತ, ಅಜ್ಜಿ, ಹ್ತ್ತು ಹಲವು ಸಂಭಂಧಗಳು ಕೇವಲ ಪ್ರೀತಿಯಿಂದಲ್ಲದೆ, ಹಣ್ಣದಿಂದ ಬಂದವುಗಳಲ್ಲ.ಇಷ್ಟು ಒಳ್ಳೆಯ ಜೀವನ, ಬಧುಕು, ಬಟ್ಟೆ, ಆಹಾರ, ಸೂರು ಮುಂತಾದವುಗಳನ್ನ ಕೊಟ್ಟವರಿಗೆ, ಒಂದು ಒಳ್ಳೆಯ ಹುಡುಗ ಅಥವಾ ಹುಡುಗಿ ( ವಧು-ವರ)ಯನ್ನ ಆಯ್ಕೆ ಮಾಡುವ ಶಕ್ತಿ ಇರುವುದಿಲ್ಲವೆ. ಅವರಿಗೂ ಆಸೆ, ಮಮಕಾರ, ಪ್ರೀತಿ ಇರುವುದಿಲ್ಲವೆ. ಜೀವ ಹಾಗೂ ಜೀವನ ಕೊಟ್ಟವರಿಗೆ, ನಮ್ಮ ಜೀವ ಹಾಗೂ ಜೀವನದ ಮೇಲೆ ಅಧಿಕಾರ ಕೊಡದಿದ್ದರೂ ಸರಿ, ಕೋನೆಗೆ ಅವರ ಮನಸ್ಸು ನೋಹಿಸುವಾಗ ಒಮ್ಮೆ ನಾವು ಯೊಚಿಸಲೇ ಬೇಕು, ಮುಂದೊಂದು ದಿನ ನಾವು ಅದೇ ಸ್ಥಾನ್ಕ್ಕೆ ಬರುವವರೇ ಎಂದು. ಓಂದು ಸಲಹೆ, ಉಪದೇಷ, ಅನುಭವ ಏನಾದರೂ ತಿಳಿಯಿರಿ ಪರವಾಗಿಲ್ಲ ;- ಜೀವನದಲ್ಲಿ ನಾವು ಎಷ್ಟು 'ನಿಯ್ಯತ್ತಿನಿಂದ' ಇರುವೆವೋ ಅಷ್ಟೇ "ನಿಯ್ಯತ್ತಿ" ಹುಡುಗ ಅಥವಾ ಹುಡುಗಿ ನಮಗೆ ಸಿಗುತ್ತಾರೆ. ನಾವು ಜೀವನದಲ್ಲಿ ಏನನ್ನು ಬೇಕಾದರೂ ಮಾಡಿ, ಹೇಗೆ ಬೇಕಾದರೂ ಬಧುಕಿ, ಸಂಪಾದನೆ ಮಾಡಿ ಆದರೆ ಜೀವ್ನ್ ಸಂಗಾತಿಯ ವಿಷಯದಲ್ಲಿ ಮಾತ್ರ ನಾವು, physically, Mentally, ಸೇರಿ Heart ನಲ್ಲಿ ಮಾತ್ರ ಸ್ವಚ್ಚವಾಗಿರಲು ಬಯಸಿದರೆ, ನಮ್ಮ ಜೀವನದಲ್ಲಿ ಅಂತಾವರೆ ಜೀವನ ಸಂಗಾತಿ ಯಾಗುತ್ತಾರೆ. ನಾವು ಮಾತ್ರ ಹಾಳಾಗಿ ಹೋಗಿ ಹತ್ತಾರು ಆಟಗಳನ್ನ ಆಡಿ, ನಮ್ಮ ಸಂಗಾತಿ ಸರಿಯಾಗಿರ ಬೇಕು ಎನ್ನುವುದು ಎಷ್ಟು ಮಾತ್ರ ಸರಿ ನೀವೇ ಹೇಳಿ...?ಇದು ಬರಿಯ ಹುಡುಗರಿಗಲ್ಲ, ಹುಡುಗಿಯರಿಗೆ ಮೊದಲಾಗಿ 'Advance and Young generation' (ಜನರೇಶನ್) ಕಾಲೇಜು ಹುಡುಗಿಯರಿಗೆ. ನಾವು ಯಾವುದರಲ್ಲಿ ಅದ್ವಾನ್ಸ್ ಎಂದು ಮುಂದಿನ ಲೇಖನದಲ್ಲಿ ವಿವರಿಸುತ್ತೇನೆ.
ಸಾಲುಗಳು
- 924 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ