Skip to main content

ಪಯಣ

ಬರೆದಿದ್ದುOctober 30, 2011
8ಅನಿಸಿಕೆಗಳು

ನೋ ಒಂದು ಕನಸು ಬಿದ್ದಂತಾಗಿ ಬಿಟ್ಟು ಬಿಡದೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯಲ್ಲೂ ಎಚ್ಚರವಾಗಿ ಎದ್ದು ಕಿಟಕಿಯ ಬಳಿ ಬಂದೆ ಒಂದಕ್ಕೊಂದು ಹನಿ ಮುತ್ತಿಡುತ್ತಾ ಮುಂದೆ ಸಾಗಿದರೆ, ಸಾಲು ಸಾಲಾಗಿ ಸುರಿಯುತಿದ್ದ ಮಳೆಯ ಹನಿಗಳು ಕಿಟಕಿಯ ಗಾಜನ್ನು ಸವರುತ್ತಿತ್ತು, ಕಣ್ಣಂಚ್ಚು, ತುಟಿಯಂಚಲಿ ನಗುವೊಂದು ಮೂಡಿತು. ನೆನಪಿನ ಪಯಣವೊಂದು ಕಣ್ಣೆದುರು ಬಂದಿತ್ತು.  " ಆ ಸಮಯವೇ ಅಂತಹದ್ದು ಎನಿಸುತ್ತದೆ ಯಾರಿಂದ ? ಯಾಕೆ ? ಏನು ? ಈ ಪ್ರಶ್ನೆಗಳಿಗೆ ಉತ್ತರ ಸಿಗುವಷ್ಟರಲ್ಲಿ ತುಂಬ ಹೊತ್ತಾಗಿಹೋಗಿರುತ್ತದೆ. ವಯಸ್ಸು, ಮನಸ್ಸು, ಕನಸು ಯಾವುದರಿಂದ ಹೀಗೆ ಎಂದು ತಿಳಿದು ಕೊಳ್ಳುವ ವ್ಯವಧಾನದ ಅಗತ್ಯ ಇರುವುದಿಲ್ಲ, ಹೀಗೆ ತಾಕಲಾಟಕ್ಕೆ ತೊಡಗಿದ ಮನಸ್ಥಿತಿ ತಹ ಬಂದಿಗೆ ಬರಲು ಬಳಲುತ್ತಿತ್ತು. ಹೀಗೆ ಮಳೆನಿಂತು ತಂಪಾದ ಸಂಜೆ ನಿರ್ಧಾರಕ್ಕೆ ಬರದ ಮನ ಸಾಕಷ್ಟು ಬಳಲಿತ್ತು ಮಳೆ ಆಗಷ್ಟೇ ನಿಂತಿತ್ತು. ಏನೆಂದು ಹೇಳಲಿ ಕೇಳಲಿ ಎನ್ನುವಷ್ಟರಲ್ಲಿ ಮತ್ತೊಮ್ಮೆ ವರುಣ ಭೋರ್ಗರೆದಿದ್ದ ಅವನು ಹೇಳಿದಂತೆ ವರುಣ ತನ್ನ ಪ್ರೀತಿಯನ್ನು ತುಂಬಾ ಬಿರುಸಾಗಿ ಪ್ರದರ್ಶಿಸಿದ್ದ, ಭಾರಿ ಮುನಿದಿದ್ದವನ ಭೋರ್ಗರೆವ ಪ್ರೇಮ ಅದಾಗಿತ್ತು. ನನ್ನ ಅವನ ಸಂಭಾಷಣೆಯಲ್ಲಿ ಏನೆಲ್ಲಾ ಮಾತು ಬಂದು ಹೋಗಿತ್ತು ಅರಿವೇ ಇಲ್ಲ, ಅಂದ ಹಾಗೆ ಮರೆತಿದ್ದೆ ಅವ ಯಾರು ಅಂತ ನಿಮಗೆ ಹೇಳಬೇಕಲ್ಲ ! ಕೇಳಿ ,,,, ಉಸಿರಿಲ್ಲದ ಬಾನಿನಲ್ಲಿ
ನಿಶೆಯೇರಿದೆ ಬಿಸಿಲು,
ಕೆಂಡದಂತೆ ಸುಡುತಿದೆ
ನಡು ಹಗಲಿನ ನೊಸಲು. ಯಾವುದೋ ಕೆಲಸದ ನಿಮಿತ್ತ ಸಕಲೇಶಪುರಕ್ಕೆ ಹೊರಟಿದ್ದೆ, ಬಸ್ಸಿನಲ್ಲಿ ಎಂದಿನ ನನ್ನ ಸಂಗಾತಿಯಾದ ಭೈರಪ್ಪನವರ ಒಂದು ಪುಸ್ತಕ, ನನ್ನ ಐಫಾಡ್ ನನ್ನ ಕೈಬಿಟ್ಟಿರಲಿಲ್ಲ, ಇನ್ನೂ ಬಸ್ಸು ಹೊರಟಾಗ ಭಾರಿ ಬಿಸಿಲು ಕಣ್ಣು ಮುಚ್ಚಿ ಕಿವಿಗೆ ಹೆಡ್ ಫೋನ್ ಸಿಕ್ಕಿಸಿ ಕುಳಿತ ಎಂತಾ ಬಿಸಿಲಿನಲ್ಲೂ ನನಗೆ ತಂಪನ್ನು ನೀಡೋದು ನನ್ನ ಐಫಾಡ್ ನ ನೂರಾರು ಭಾವಗೀತೆಗಳು ನನ್ನದೇ ಆದ ಲೋಕದಲ್ಲಿ ಮುಳಿಗಿದವಳಿಗೆ ಯಾವಾಗ ಮತ್ತೊಂದು ಸ್ಟಾಫ್ ಬಂತು ಎಂದು ಗೊತ್ತಾಗಲಿಲ್ಲ, ಯಾವುದೇ ಒಳ್ಳೆ ಸುಗಂಧದ ವಾಸನೆ ಬಡಿದೆಬ್ಬಿಸಿದಂತಾಯಿತು ಕಣ್ಣು ಬಿಟ್ಟೆ ಮೇಲೆ ಲಗೇಜ್ ಇಡಲು ನಿಂತಿದ್ದ ಧೃಡಕಾಯದ ಅಪರಿಚಿತನ ದರ್ಶನ ನೋಡುತ್ತಿದ್ದಂತೆ ಹಾಯ್ ಎಂದು ತುಂಬಾ ಪರಿಚಿತನಂತೆ ಮಾತಿಗೆ ಶುರು ಹಚ್ಚಿಕೊಂಡ ಕುಳಿತು   ಮಾತನಾಡುವ ವ್ಯವಧಾನವಿಲ್ಲದೆ. ಈ ಮಟ್ಟಿಗೆ ಮಾತಿನ ಹುಚ್ಚೇ ? ! ಎಂದು ಎಸ್, ನೋ ಎಂದು ಮೊಟುಕಾಗಿ ಉತ್ತರಿಸಿದೆ. ನನ್ನ ಕೈಲಿದ್ದ ಭೈರಪ್ಪನವರ ಪುಸ್ತಕ ನೋಡಿ ಅವರ ಬಗ್ಗೆ ಮಾತು ತೆಗೆದೆ ಹವ್ಯಾಸವಾಗಿ ಬೆಳಸಿಕೊಂಡಿರುವ ಸಾಹಿತ್ಯದ ಹುಚ್ಚು ಸಹಜವಾಗಿಯೇ ಅವನ ಮಾತಿಗೆ ಪ್ರತಿಕ್ರಿಯಿಸುತ್ತಾ ಹೋದೆ ತಕ್ಕ ಮಟ್ಟಿಗೆ ಸಾಹಿತ್ಯದ ಅರಿವಿದ್ದ ಅವನಲ್ಲಿ ಊಹೆಗೂ ನಿಲುಕದ ಕಲ್ಪನಾ ಶಕ್ತಿ ಇತ್ತು, ಎಂತಹ ಕಲ್ಪನೆಗಳು ಎಂತಾ ಅದ್ಭುತಾ ಎನಿಸತೊಡಗಿತು, ಆಗಷ್ಟೆ ಸಣ್ಣದಾಗಿ ಶುರುವಾದ ಮಳೆ ನಮ್ಮ ಮಾತುಗಳಿಗೆ ಉತ್ತಮ ಪೂರಕತೆ ನೀಡಿತೆಂದರೆ ಸುಳ್ಳಾಗಲಾರದು. ಮಳೆ ತುಂಬಾ ಸಣ್ಣಗೆ ಬರುತ್ತಿದೆ ಅಲ್ಲವಾ ಅಂದೆ,  ಹಾಗಲ್ಲ ಅದು ಮೇಘರಾಜನ ಪ್ರೇಮ ಸಿಂಚನ ಭೂಮಿಯೂ ಹಾಗೆ ನೋಡಿ ಅವನ ಸಿಂಚನಕ್ಕಾಗಿ ಮೈದಡವಿ ನಿಂತಿದ್ದಾಳೆ, ಸಣ್ಣದಾಗಿ ಒಂದು ಸಣ್ಣ ಕಲ್ಪನೆ ಕೇಳಿ ಹೇಳ್ತೀನಿ ಎನ್ನುತಾ, " ನಲ್ಲನು ತನ್ನ ನಲ್ಲೆಗೆ ತನ್ನ ಪ್ರೇಮದಾಹ್ವಾನವನ್ನು ನೀಡುತ್ತಾನೆ, ಅವಳು ಅದನ್ನು ಒಪ್ಪಿಕೊಂಡಾಗ ದಾರಿಸುಗಮ , ಸಂಭ್ರಮ , ಸಡಗರ, ಆಹ್ಲಾದದ ಅನುಭೂತಿ ಅದೇ ಆಕೆ ತಿರಸ್ಕರಿಸಿದರೆ , ತಿರಸ್ಕೃತನಾದ ಪ್ರೇಮಿಯ ನೊಂದ ಹೃದಯ ತಲ್ಲಣಗೊಂಡು ಪ್ರೇಮದ ಮತ್ತೊಂದು ಬಗೆ ಪ್ರದರ್ಶಿಸುತ್ತದೆ,  ಭೂಮಿಯೇ ನಡುಗಿ ಹೋಗುವಂತೆ ಭೋರ್ಗರಿಸುವ ಹಾಗೆ ರೋದಿಸುತ್ತಾನೆ, ಅದೇ ಜೋರಾಗಿ ಸುರಿವ ಮಳೆ, ತನ್ನ ಆರ್ಭಟನೆಗೆ ತಲ್ಲಣಗೊಂಡ ತನ್ನ ನಲ್ಲೆಯನೋಡಿ ತಕ್ಷಣ ತಣ್ಣಗಾಗುತ್ತಾನೆ ಸೋತು ಶರಣಾದಂತೆ ಅವಳ ಮುಂದೆ ಮೌನವಾಗಿ ಕೂರುತ್ತಾನೆ, ಸೋಲಿಗೆ ಕರಗದ  ಹೆಣ್ಣಿಲ್ಲ ಎಂಬಂತೆ  ಸೋತ ವರುಣನ ಭೂಮಿ ಅವನ ಶರಣಾಗತಿಯನ್ನು ಅಪ್ಪಿ ಒಪ್ಪಿಕೊಳ್ಳುತ್ತಾಳೆ ಆಗಲೇ ಹಸಿರು, ಉಸಿರು", ಜನರ ನಿಟ್ಟಿಸಿರು ನಿಮ್ಮಹಾಗೆ , ಹೇಗೆ ?!!! "  ಅಲ್ಲಿಯವರೆಗೆ ನಿಬ್ಬೆರಗಾಗಿ ಕುಳಿತವಳಿಗೆ ಇವನ ಕಲ್ಪನೆಯ ಮಾತು ಅದ್ಭುತವು, ಆಹ್ಲಾದವು ಆಗಿತ್ತು. ಮಾತಿಲ್ಲದೆ ಕೆಲ ನಿಮಿಷ ಸುಮ್ಮನಾದೆ , ಮತ್ತೆ ನಮ್ಮ ಮಾತುಗಳು ನಮ್ಮ ಹವ್ಯಾಸ, ಸಾಹಿತ್ಯದ ಕಡೆ ಹರಿಯಿತು, ಒಂದು ವಿಷಯ ನಮ್ಮಿಬ್ಬರ ಅರಿವಿಗೆ ಭರದೇ ಹೋದದ್ದು ಏನೆಂದರೆ ಇಷ್ಟೆಲ್ಲಾ ಮಾತನಾಡಿದ ನಾವು ನಮ್ಮ ಹೆಸರುಗಳನ್ನು ತಿಳಿದುಕೊಂಡಿರಲಿಲ್ಲ ಎಂದು, ಅಷ್ಟು ಹೊತ್ತಿಗಾಗಲೇ ನಾವು ಇಳಿಯಬೇಕಾದ ಸಕಲೇಶಪುರ ಬಂತು ಎಂದು ಅರಿವಿಗೆ ಬಂತು ನನ್ನ ಜಗತ್ತಿನ ಅರಿವಾಯಿತು..  ಅವನೊಂದಿಗೆ ಕಳೆದ ಇಷ್ಟು ಹೊತ್ತಲ್ಲಿ ಏನೆಲ್ಲಾ ಮಾತುಕತೆ ನಡೆಯಿತು, ಒಂದೆರಡು ಕಡೆ ಇಳಿದು ಕಾಫಿ ಕುಡಿದು, ತಿಂಡಿ ತಿನ್ನುವಾಗ ಅವನು ತೋರುತ್ತಿದ್ದ ಕೇರ್, ಇಷ್ಟು ಹೊತ್ತಿನಲ್ಲಿ ಒಮ್ಮೆಯೂ ತನಗೆ ಆತನ ಬಗ್ಗೆ ಬೇಸರವಾಗಲಿ, ಮುಜುಗರವಾಗಲಿ, ಅಸಹ್ಯ  ಹುಟ್ಟಿಸುವ ಸನ್ನಿವೇಶವಾಗಲಿ ಬರದೇ ಇದ್ದದ್ದು ಸಹಜವಾಗಿ ಎಲ್ಲಾ ಹೆಣ್ಣುಗಳು ಮನಸ್ಸುಬಯಸುವಂತೆ  ಇಂತಹ ಗೆಳೆಯ ನನಗೆ ಸಿಗಬಾರದೆ ಎಂದು ಅನಿಸಲಿಲ್ಲ ಎಂದರೆ ಆತ್ಮವಂಚನೆಯಾದೀತು. ಬಸ್ಸು ನಿಲ್ದಾಣದ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ ಎಲ್ಲರೂ ಇಳಿಯ ತೊಡಗಿದಂತೆ ನಾವು ಇಳಿದೆವು ಇನ್ನೇನು ನಮ್ಮ ಹೆಸರು, ಪೋನ್ ನಂ. ವಿನಿಮಯ ಮಾಡಿಕೊಳ್ಳೋಣ ಅಂದು ಕೊಳ್ಳೂತ್ತಾ  ಕೇಳುವರಾರು ಎಂಬ ಪ್ರಶ್ನೆ ಮುಂದಾಯಿತು ? ತಡವರಿಸುತ್ತಾ ರಸ್ತೆಯಲ್ಲಿ ನಿಂತಿದ್ದಾಗ, ಇದ್ದಕ್ಕಿದ್ದಂತೆ ಜೋರಾಗಿ ಸುರಿದ ಮಳೆ ನಿಲ್ಲಲ್ಲೂ ಆಶ್ರಯವನ್ನು ಹುಡುಕುವಂತೆ ಮಾಡಿತು ಒಂದು ಜಾಗಕ್ಕೆ ಬಂದು ನಿಂತು ಕೈ, ಮೇಲಿನ ಮಳೆಹನಿ ಒರೆಸುತ್ತಾ ಅವನನ್ನು ಕೇಳೋಣವೆಂದರೆ ಅವನಿಲ್ಲ , ಇಬ್ಬರೂ ಆತುರದಲ್ಲಿ ಎತ್ತಹೋದೆವೋ ತಿಳಿಯಲಿಲ್ಲ,
ಏನೆಂದು ತಿಳಿಯಲಿ ಕನಸಾ, ಅದು ಸಾಧ್ಯವಿಲ್ಲ ಕೇವಲ ಕೆಲವೇ ಘಂಟೆಗಳಲ್ಲಿ ಅವನು ನನ್ನ ಕಣ ಕಣದಲ್ಲಿ ಬೆರತು ಹೋಗಿದ್ದ, ಜೋರಾಗಿ ಅತ್ತು ಬಿಡಲೆ ಎನಿಸಿತು, ಆದರೆ ನಾನಿದ್ದ ಸ್ಥಳ ನನ್ನನ್ನ ಎಚ್ಚರಿಸಿತು ಮಾತು, ಮೌನ, ನಗು, ಅಳು ಕನಸು, ಕನವರಿಕೆ, ಮನಸ್ಸು ಈ ಪದಗಳಿಗೆಲ್ಲ ಅರ್ಥವಿಲ್ಲ ಎನಿಸಿತು ಆದರೆ ಮನಸ್ಸು , ಬುದ್ದಿ ಮಾತು ಕೇಳಲು ಸಿದ್ದವಿರಲಿಲ್ಲ, ಎಲ್ಲಾ ಕಡೆ ಹುಡುಕಲು ನಿರ್ಧರಿಸಿದೆ ಎನೆಂದು ಹುಡುಕಲಿ, ಯಾರಿಗೆ ಗೊತ್ತು ಅವನು ಯಾರು, ಏನು, ಎತ್ತ, ಒಂದು ವೇಳೆ ಅವನು ಒಳ್ಳೆಯವನಾಗಿದ್ದು ನನ್ನ ಎಲ್ಲಾ ನಿರೇಕ್ಷೆಗಳಿಗೂ ತಕ್ಕವನಾಗಿದ್ದರೂ , ನನ್ನನೂ ಒಪ್ಪುತ್ತಾನೆ ಎಂಬ ನಂಬಿಕೆಯೇನು? ಹುಚ್ಚು ಮನಸ್ಸು ಕೇಳೋಲ್ಲ ಹೀಗೆ ಕುಳಿತರೆ ನಾನು ಬಂದ ಕೆಲಸವಾಗೋಲ್ಲ,  ಋಣವಿದ್ದರೆ ಮತ್ತೆ ಸಂದಿಸುತ್ತೇವೆ,  ಇಲ್ಲದಿದ್ದರೆ ಒಂದು ಕನಸು ಎಂದು ಮರೆತು ಬಿಡೋಣ ಎಂದು ಕೊಂಡೆ, ಆದರೆ ನನಗೆ ನನ್ನ ಬಗ್ಗೆ ನಗು ಬಂತು ಕನಸು, ಮರೆಯೋದು ನಿಜಾನಾ ಅಂತಾ !!!!!!!!!!!!!!!!!! "ನೀ ಸಿಗದೇ ಬಾಳೊಂದು ಬಾಳೆ ಕೃಷ್ಣ
ನಾ ತಾಳಲಾರೆ ಈ ವಿರಹ ಕೃಷ್ಣ " ಮುಂದೆ ನನಗೆ ವಹಿಸಿದ್ದ ಕೆಲಸ ೩ ದಿನಕ್ಕೆ ಮುಗಿಯ ಬೇಕಿತ್ತು ಆದರೆ ಬೇಸರ ನಡುವೆ ಆ ಸಮಯದಲ್ಲಿ ಮುಗಿಸಲಾಗದೆ ೫ ದಿನದ ನಂತರ ಮತ್ತೆ ಬಸ್ ನಿಲ್ದಾಣಕ್ಕೆ ಬಂದೆ ಮೊದಲೆ ರಿಸರ್ವ್ ಮಾಡಿದ್ದ ನನ್ನ ಸೀಟಿನತ್ತ ಹೋದಾಗ ಅಲ್ಲಿ ನನಗೆ ಭೈರಪ್ಪನವರ ಹೊಸದೊಂದು ಕಾದಂಬರಿ ನನಗೆ ಆಹ್ವಾನ ನೀಡುತ್ತಿತ್ತು, ಪುಸ್ತಕ ತೆರೆದಾಗ ದೊರತದ್ದು ಅರುಣ್ ಎಂಬುವರ ಬಯೋಡೆಟಾ ಅತ್ತ ಇತ್ತ ನೋಡಿತಿದ್ದವಳಿಗೆ ನನ್ನ ಕಣ್ಣನ್ನ ನಾನೆ ನಂಬದಾಗಿದ್ದೆ , ನಾನೆ ಅರುಣ್ ಎಂದು ಬಂದು ಕುಳಿತ.ಕಂಡಕ್ಟರ್ ಬಂದು ಇವತ್ತಾದರೂ ಹೋಗುತ್ತಿರೋ ಅಥವಾ ಇನ್ನೂ ಯಾರಿಗಾದರೂ ಕಾಯುತ್ತಿದ್ದಿರೋ ಸಾರ್ ಎಂದಾಗ, ಬೇಕಾದವರು ಬಂದಾದ ಮೇಲೆ ಇನ್ನೇನ್ ಸ್ವಾಮಿ, ರೈಟ್ ರೈಟ್ ಎಂದ,,,,,,,,,,,,,,,,,,,,,,, ದಣಿದ ಜೀವಕೆ ಮತ್ತೆ ಕನಸನುಣಿಸಿ
ಕುಣಿಸಿರುವ ನೀರೆ ನೀನು ಯಾರೆ ?
ಯಾರೆ ಚದುರೆ, ನೀನು ಯಾರೆ ಚದುರೆ ?
ಬಗೆಗಣ್ಣ ತೆರೆಸಿದ ಭಾವಮದಿರೆ ನನ್ನ ಪ್ರಶ್ನೆಗಳಿಗೆ ಉತ್ತರಸಿಕ್ಕಿತ್ತು, ನನ್ನೇಲ್ಲಾ ನಿರೀಕ್ಷೆಗಳು ನನಗೆ ಒತ್ತಾಸರೆ ಒದಗಿಸಿತ್ತು. ಮೌನ ಮಾತಾಗಿ ಅವನ ಎದೆಗೊರಗಿದ್ದೆ. ಕನಸು , ಪ್ರೀತಿ, ವಿರಹ , ಎಲ್ಲಾ ಒಂದೇ ಪಯಣದಲ್ಲಿ ನನಗೆ ಜೊತೆಯಾಗಿ ಬಂದಿತ್ತು. ಇನ್ನೆಂದು ಬಿಡದ ಪಯಣ ನಮ್ಮದಾಗಲಿ ಎಂದು ಆ ಅವನ ಕೈಯನ್ನು ಕೊಂಚ ಬಿಗಿಯಾಗೆ ಹಿಡಿದಿದ್ದೆ.
(ಒಂದು ಮುದ್ದಾದ ಜೋಡಿ ನೋಡಿ ಹುಟ್ಟಿದ ನನ್ನ ಕಲ್ಪನೆ ನಿಮ್ಮ ಮುಂದೆ, ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಕಲ್ಪನಾ ಲೋಕಕ್ಕೆ ಸ್ವಾಗತ )

ಲೇಖಕರು

ಪಾರ್ವತಿ.ಜಿ.ಆರ್

ಹಾಗೇ ಸುಮ್ಮನೆ,,,,,,,,,,,,

ನನ್ನ ಬಗ್ಗೆ ಹೇಳೊಕ್ಕೆ ಅಂತ ವಿಶೇಷ ಎನು ಇಲ್ಲ, ನಾನು ಕನ್ನಡತಿ ಎಂಬ ಹೆಮ್ಮೆ , ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ, ,
ಬದುಕು ಜಟಕಾ ಬಂಡಿ, ವಿದಿ ಅದರ ಸಾಹೇಬ , ಕುದುರೆ ನೀನ್ ಅವನು ಪೇಳ್ ದಂತೆ ಪಯಣಿಗರು, ಮದುವೆಗೋ ಮಸಣಕೋ
ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು, ಮಂಕು ತಿಮ್ಮ,,,,,,,,,,,,,,,,,,

ಅನಿಸಿಕೆಗಳು

ನವೀನ್ ಚ೦ದ್ರ ಶುಕ್ರ, 11/04/2011 - 21:22

ಕಲ್ಪನೆ ತುಂಬಾ ಚೆನ್ನಾಗಿದೆ ಕಥೆನೋ ಅಥವಾ ನಿಜ ಅನುಭವನೋ ಎಂದು ಭಾಸವಾಗುವುವಂತಿದೆ  ಶುಭವಾಗಲಿ

ಪಾರ್ವತಿ.ಜಿ.ಆರ್ ಗುರು, 12/01/2011 - 14:13

ಧನ್ಯವಾದಗಳು ಸಾರ್,

Jyothi Subrahmanya ಮಂಗಳ, 12/20/2011 - 19:36

ಸೊಗಸಾದ ಕಥೆ... ಕಲ್ಪನೆಗಿಂತ ವಾಸ್ತವದಲ್ಲೂ ಹೀಗೆ ಅವರವರು ಬಯಸಿದ ಆತ್ಮಸಂಗಾತಿ ಸಿಗುವಂತಾದರೆ... ಬಹಳ ಚೆನ್ನ ಅಲ್ಲವೇ ಪಾರ್ವತಿಯವರೇ??? ಮುದ್ದಾದ ಕಲ್ಪನೆ ಹೆಣೆದು ನಮ್ಮಮುಂದಿರಿಸಿದ್ದಕ್ಕೆ ಧನ್ಯವಾದಗಳು... 

ಬೆನ್ನು ತಟ್ಟಿದ್ದಕ್ಕೆ, ನಿಮಗೂ ವಂದನೆಗಳೂ,ಜ್ಯೋತಿಯವರೆ

anjali n n ಗುರು, 01/05/2012 - 16:39

ಚೆನ್ನಾಗಿದೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/21/2012 - 17:22

ಏನ್ ಪಾರ್ವತಿ ಯವರೇ ...........ಕವನವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಾ...................ಅಭಿನಂದನೆ ಗಳು.............ನಿಮ್ಮ ಮೊಬೈಲ್  ನಂಬರ್ ತಿಳಿಸಿ .............

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/28/2012 - 19:09
Mohankumar.R ಶುಕ್ರ, 04/06/2012 - 17:08

ತು೦ಬಾ ಚೆನ್ನಾಗಿದೆ... ಅದ್ಭುತ ಕಲ್ಪನೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.