Skip to main content

ಕವನ

ಬೆಕ್ಕು

ಇಂದ prabhu
ಬರೆದಿದ್ದುJanuary 19, 2019
noಅನಿಸಿಕೆ

ನಮ್ಮ ಮನೆಯ ಮುದ್ದಿನ ಬೆಕ್ಕು
ಅದಕ್ಕಿಲ್ಲ ಸೊಕ್ಕೆಷ್ಟು|
ಹಾಲು ಬೆಣ್ಣೆ ಎದುರಿಗೆ ಇದ್ದರೂ
ಮುಟ್ಟೋದಿಲ್ಲ ಎಷ್ಟೆಷ್ಟು||೧||
ಚಂಗನೆ ಜಿಗಿವ ಇಲಿಯ ಕಂಡರೆ
ತಲೆಗೇರುತ್ತೆ ಸಿಟ್ಟು|
ಟಣ್ಣನೆ ಹಾರಿ ಹಿಡಿದುಕೊಂಡು
ಬಿಡದು ತನ್ನ ಪಟ್ಟು||೨||
ಅಮ್ಮನ ಸುತ್ತ ಸುತ್ತಿ ಸುಳಿದು

ಚಂದಿರ

ಇಂದ prabhu
ಬರೆದಿದ್ದುJanuary 18, 2019
noಅನಿಸಿಕೆ

ಅಮ್ಮ ನನಗೆ ಚಂದಿರ ಬೇಕು
ತಂದು ಕೊಡಮ್ಮ|
ತಮ್ಮನ ಜೊತೆಗೆ ಆಡಲಿಕ್ಕೆ
ಅವನೇ ಬೇಕಮ್ಮ||೧||
ಮಿಂಚಿ ಮಿಣಕೋ ತಾರೆಗಿಂತ
ಚಂದ ಇವನಮ್ಮ|
ಗಗನದಲ್ಲಿ ಸುಮ್ಮನೆ ಒಬ್ಬನೆ
ಓಡುವನಮ್ಮ||೨||
ಹುಣ್ಣಿಮೆಯಲ್ಲಿ ದುಂಡಗಿದ್ದು
ಬೆಳದಿಂಗಳ ಸುರಿಯೋ ಸುಂದರ|
ಅಮವಾಸ್ಯೆ ರಾತ್ರಿ ಎಲ್ಲಿಗೆ ಹೋದ

ನಮ್ಮೆಲ್ಲರದು ಕನ್ನಡ

ಇಂದ prabhu
ಬರೆದಿದ್ದುJanuary 15, 2019
noಅನಿಸಿಕೆ

ನನ್ನದು ಕನ್ನಡ ನಿಮ್ಮದು ಕನ್ನಡ
ನಮ್ಮೆಲ್ಲರದು ಕನ್ನಡ|
ಎನ್ನಡ ಎಕ್ಕಡ ಇತರರ ಮೆಚ್ಚಿಸಿ
ಕಲಿಸಿರಿ ಕಸ್ತೂರಿ ಕನ್ನಡ||೧||
ಕನ್ನಡ ಅಂತ ಅಬ್ಬರಿಸಿ
ಮೇಜನು ಕುಟ್ಟಿದರಾಯ್ತಾ?|
ಬರಿ ಭಾಷಣಕೆ ಸೀಮಿತವಾದರೆ
ಕನ್ನಡ ಬೆಳೆಸಿದಂಗಾಯ್ತ?||೨||
ಕನ್ನಡ ಯಾರ ಗುತ್ತಿಗೆ ಅಲ್ಲ
ಕನ್ನಡಿಗರೆಲ್ಲರ ಸೊತ್ತು|

ಪ್ರಾರ್ಥನೆ

ಇಂದ prabhu
ಬರೆದಿದ್ದುJanuary 13, 2019
noಅನಿಸಿಕೆ

ತಾಯಿ ಶಾರದೆ ನಮಿಸುವೆ ನಿನಗೆ
ವಿದ್ಯೆಯ ಕಲಿಸು ಬೇಗನೆ ನಮಗೆ|
ಮುದ್ದು ಮಕ್ಕಳ ಮನವಿ ಆಲಿಸು
ಶುದ್ಧಾಕ್ಷರಗಳ ನಮಗೆ ಕಲಿಸು||೧||
ಕೂಡಿಸಿ ಕಳೆದು ಬಾಗಿಸಿ ಗುಣಿಸುವ
ಲೆಖ್ಖಗಳೆಲ್ಲ ತಟ್ಟನೆ ಕಲಿಸು|
ಹಿಂದಿ ಇಂಗ್ಲೀಷ್ ವಿಜ್ಞಾನವೆಲ್ಲ
ಕನ್ನಡದಂತೆ ಅರಗಿಸಿ ಕುಡಿಸು||೨||
ಗುರುಗಳು ಹೇಳುವ ಪಾಠಗಳೆಲ್ಲ

ಟಿ ವಿ

ಇಂದ prabhu
ಬರೆದಿದ್ದುJanuary 12, 2019
noಅನಿಸಿಕೆ

ಟಿ ವಿಯ ನೋಡಲು ಕುಳಿತರೆ ಅಮ್ಮಗೆ
ಜಗದ ಪರಿವೆ ಇರಲ್ಲ|
ಒಲೆಯ ಮೇಲಿನ ಅನ್ನ ಸೀದರೂ
ಲಕ್ಷವೇ ಇರೋಲ್ಲ||೧||
ಹಾಲು ಉಕ್ಕಲಿ ಬೆಕ್ಕು ಕುಡಿಯಲಿ
ಗಮನವೇ ಅತ್ತ ಕೊಡೋಲ್ಲ|
ಸಾರು ಪಲ್ಯಕೆ ಉಪ್ಪು ಹೆಚ್ಚಿ
ಅಪ್ಪನ ಬೈಗುಳ ತಪ್ಪೊಲ್ಲ||೨||
ಸುದ್ದಿಯ ನೋಡಲು ಅಪ್ಪಗೆ ಸಿಗದೆ
ಸಿಟ್ಟಲಿ ಹೋಗುವ ಹೊರಗೆ|

ನನ್ನ ವೇಷ

ಇಂದ prabhu
ಬರೆದಿದ್ದುJanuary 11, 2019
noಅನಿಸಿಕೆ

ಅಜ್ಜ ನಿನ್ನ ಚಾಳೀಸ ಕೊಡು
ಹಾಕಿಕೊಳ್ಳುವೆ ನಾನು|
ಕೋಲನು ಹಿಡಿದು ಮೆಲ್ಲಗೆ ನಡೆದು
ಗಾಂಧೀ ತಾತಾ ಆಗುವೆನು||೧||
ಕೋಟನು ತೊಟ್ಟು ಗುಲಾಬಿ ಇಟ್ಟು
ಚಾಚಾ ನೆಹರು ಆಗುವೆನು|
ಸೈನಿಕ ವೇಷವ ಧರಿಸಿ ಇಂದೇ
ಸುಭಾಸಚಂದ್ರನಾಗಿ ಕಾಣುವೆನು||೨||
ಸಂವಿಧಾನದ ಪುಸ್ತಕ ಎದೆಗಿಟ್ಟು
ಬಾಬಾಸಾಹೇಬ್ ಆಗುವೆನು|

ಯುವಶಕ್ತಿ (ಎನ್ ಎಸ್ ಎಸ್ ಗೀತೆ)

ಇಂದ prabhu
ಬರೆದಿದ್ದುJanuary 9, 2019
noಅನಿಸಿಕೆ

ಕೆರೆಯ ಸುತ್ತ ಬೇಲಿ ಹಚ್ಚಿ
ಜೀವ ಜಲವ ರಕ್ಷಿಸಿ|
ನೀರ ಮೂಲ ನೆಲೆಯ ಹುಡುಕಿ
ಹರಿದು ಬರಲು ಯತ್ನಿಸಿ||೧||
ಒಬ್ಬರೊಂದು ಗಿಡವ ಹಚ್ಚಿ
ನಾಡ ಬರವ ಅಳಿಸೋಣ|
ಮಣ್ಣ ಸವಕಳಿ ತಡೆಯಲು
ಮರಗಿಡಗಳ ಬೆಳಸೋಣ ||೨||
ಮನೆಗೊಂದು ಶೌಚವನು ಕಟ್ಟಿಸಿ
ಸ್ವಚ್ಚತೆಯ ಅರಿವು ಮೂಡಿಸೋಣ|

ರೊಟ್ಟಿ

ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ಅಮ್ಮ ನನಗೂ ಹಿಟ್ಟನು ಕೊಡು
ಜೋಳದ ರೊಟ್ಟಿಯ ಮಾಡುವೆನು|
ಕೊಣಮಗಿಯಲ್ಲಿ ಹಿಟ್ಟನು ಹಾಕಿ
ಬಿಸಿ ನೀರನು ಸುರುವುವೆನು||೧||
ಗಂಟಾಗದ ರೀತಿ ಮೆಲ್ಲಗೆ ಕಲಿಸಿ
ಉಳ್ಳಿಯ ಮಾಡುವೆನು|
ಪಟ ಪಟ ಬಡೆದು ದುಂಡಗೆ ಮಾಡಿ
ಹಂಚಲಿ ಹಾಕುವೆನು||೨||
ರೊಟ್ಟಿಯು ಬೆಂದು ಹೊಟ್ಟೆಯು ಉಬ್ಬಲು
ಪುಟ್ಟಿಗೆ ಹಾಕುವೆನು|

ಕಾಲದ ಗೆಳೆಯ ಗಡಿಯಾರ

ಇಂದ prabhu
ಬರೆದಿದ್ದುJanuary 8, 2019
noಅನಿಸಿಕೆ

ಟಿಕ್ ಟಿಕ್ ಎನ್ನುತ ಓಡುತಲಿರುವ
ಓ ಗಡಿಯಾರ|
ಕಾಲದ ಗೆಳೆಯನೆ ನಿನ್ನದು
ಎಂಥ ಚಮತ್ಕಾರ||೧||
ರವಿಯ ನೆರಳೆ ಆಗಿನ ಕಾಲ
ಕಿವಿಯನು ಹಿಂಡುವ ನಂತರ ಕಾಲ|
ಸೆಲ್ಲು ಸೋಲಾರ ಇಂದಿನ ಕಾಲ
ಮುಂದೆನಿದೆಯೋ ನಿನ್ನಯ ಜಾಲ||೨||
ಪಾಠದ ಹೊತ್ತು ವೇಗದಿ ನಡೆ
ಆಟದ ವೇಳೆ ಮೆಲ್ಲಗೆ ಸಾಗು|

ನೆಪ

ಇಂದ prabhu
ಬರೆದಿದ್ದುJanuary 3, 2019
noಅನಿಸಿಕೆ

ಅಮ್ಮಾ ತುಂಬಾ ಚಳಿ ಇದೆ
ಉಣ್ಣಿ ಸ್ವೇಟರ್ ಹಾಕು|
ಕಾಲಿಗೆ ಚೀಲ ಕೈಗೆ ಗೌಸು
ತಲೆಗೆ ಟೊಪ್ಪಿಗೆ ಬೇಕು||೧||
ಶಾಲೆಗೆ ಹೋಗು ಅಂದ್ರೆ ಹೇಗೆ
ಇಂಥ ಕೊರೆವ ಚಳೀಲಿ|
ಬೆಚ್ಚಗೆ ಒಲೆಯ ಮುಂದೆ
ಕೂಡ್ರುವೆನು ಮನೇಲಿ||೨||
ಚಳಿಗೆ ಹೆಚ್ಚು ಕಮ್ಮಿ ಆದ್ರೆ
ನಿನಗೆ ಕಷ್ಟ ಕಣಮ್ಮ|
ನನ್ನ ಪಾಲನೆ ಮಾಡೋದು