Skip to main content

ಪ್ರೀತಿ ಇರುವುದು

ಬರೆದಿದ್ದುJuly 31, 2014
1ಅನಿಸಿಕೆ

ಪ್ರೀತಿ ಇರುವುದು

ಹಸಿ ಹಸಿ ಘಳಿಗೆಗಳ ಮಾತು,

ಪಿಸು ಬಿಸುಪು ನುಡಿಗಳಲ್ಲಿ ಅಲ್ಲ...

ಸುಪ್ರಭಾತದಿಂದ ಮೊದಲುಗೊಂಡು

ಶುಭರಾತ್ರಿಯ ನಂತರವೂ ನೆನಪಿಸುವ

ಸಂದೇಶಗಳಲ್ಲಲ್ಲ...

ಜನ್ಮ-ವಿವಾಹ--ಪ್ರೇಮಿಗಳ ದಿನದ

ಅರ್ಧ ರಾತ್ರಿಯ ಉಡುಗೊರೆಗಳಲ್ಲಲ್ಲ....

 

ನಿರಂತರ ಅಸಹನೆ-ಉದ್ರೇಕ-ತಾಳ್ಮೆ

ಭಾವೋದ್ವೇಗ-ಸುಖ-ದುಃಖಗಳ

 ನಡುವೆ ಮಾಗಿದ ಪ್ರೀತಿ

ತನ್ನೆದುರಿನ ಬಲಹೀನತೆಯನ್ನೂ

ಪ್ರೀತಿಸುವ ಪ್ರಬುದ್ಡತೆಗೆ 

ತನ್ನನ್ನು ಅರ್ಪಿಸಿಕೊಳ್ಳುವಲ್ಲಿ.

ಹೆಗಲೇರಿರುವ ಜೀವನದ

ಅನಂತ ಭಾರಗಳ ನಡುವೆಯೂ 

ತನ್ನೆಡೆಗೆ ಮಿಡಿಯುವ ಎದೆಯ 

ಭಾರಕ್ಕೆ ಹೆಗಲುಗೊಡುವಲ್ಲಿ

 

ಅನಂತಕ್ಕೆ ಸರಿದುಹೋಗುವ

ಅಂತಿಮದಲ್ಲೂ 

ಅರ್ಪಿಸಿದ ಆತ್ಮಕ್ಕಾಗಿ ತುಡಿಯುವಲ್ಲಿ.

ಲೇಖಕರು

Swapnashashidh…

vimarshe

ನಾನು ಸ್ವಪ್ನಶಶಿಧರ ಭಟ್ಟ , ತೀರ್ಥಹಳ್ಳಿ ನಮ್ಮೂರು...

ಅನಿಸಿಕೆಗಳು

sapna ಮಂಗಳ, 11/08/2016 - 16:17

Hai  swapna  medam nanu thirthahalliyavalu.thumba kushi aythu nimman nodi

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.