Skip to main content

ಪ್ರೀತ್ಸೋದು ಸುಲಭನಾ

ಇಂದ nishu
ಬರೆದಿದ್ದುJune 17, 2013
2ಅನಿಸಿಕೆಗಳು

ಪ್ರೀತ್ಸೋದು ಎಷ್ಟು ಕಷ್ಟ ಅಂತ ಅನುಭವಿಸಿದವರಿಗೇ ಗೊತ್ತು.

"ನೀನು ನಂಗೇನೆ" ,"ನೀ ನಂಗೆ ಬೇಕು " ಅಂತೆಲ್ಲ ಡೈಲಾಗ್ ಹೊಡೆದು ಬಕೆಟ್ ಗಟ್ಲೆ ಕಣ್ಣೀರಿಟ್ಟು  ನಿದ್ದೆ ಇಲ್ಲದ,ಸೊಳ್ಳೆ ನರ್ತನದ ರಾತ್ರಿಗಳು .....

ಇದೆಲ್ಲಾ ಬೇಕಿತ್ತಾ? ಅಂತ ೪ ಸಲ ನಂಗೆ ನಾನೇ ಕೇಳಿಕೊಳ್ಳೊಶ್ಟ್ರಲ್ಲಿ  ..ಯಾವುದೋ ತಿಳಿಯದ ಸೆಳೆತ ...ನದಿ ನೀರಿಗೆ ಸಮುದ್ರದ ಸೆಳೆತ ಥರಾ ..

ಧುಮ್ಮಿಕ್ಕಿ ಧುಮ್ಮಿಕ್ಕಿ ಕೊನೆಗೂ ಸಾಗರದ ಉಪ್ಪು ನೀರಲ್ಲಿ ತನ್ನ ಅಸ್ತಿಥ್ವ ಕಳೆದುಕೊಳ್ಳುವ ನದಿಯಂತೆ ನಿನ್ನ ಸೇರುವ ತವಕ .....

ಅಷ್ಟು ದೂರ ಇದ್ರೂ ಜೊತೇಲೆ ಇದ್ದೀಯ ಅನ್ನೋ ನವಿರಾದ ಭಾವನೆ.... ಪ್ರೀತಿ ಅಂದ್ರೆ ಇದೇ ಇರ್ಬೇಕು.....

ನನ್ನೊಳಗೇನೋ ಅರಿಯದ ಹೊಸತನ ,ನಿನ್ನ ಹೆಸರೊಂದಿಗೆ ಶುರುವಾಗುವ ಮುಂಜಾವು,ನಿನ್ನ ದಾರಿ ಕಾಯುವ ಮಧ್ಯಾನ್ನದ ಹೊತ್ತು,ನೀ ಜೋತೆಗಿರ್ಬಾರ್ದಾ ಅಂತ ತವಕಿಸುವ romantic ಮುಸ್ಸಂಜೆ ....

ಕೊನೆಗೂ ನಿನ್ನ ನೆನಪಲ್ಲೇ ಆವರಿಸುವ ನಿದ್ದೆ........ ಇನ್ನು ... curency ಮುಗಿಯುವ ತನಕ ಹರಟುವ ಫೋನ್ ಕಾಲ್ಸ್, ನಕ್ಕು ನಕ್ಕು ಧೊಪ್ಪನೆ ಮಂಚದಿಂದ ಬಿದ್ದು ಮಾಡಿಕೊಳ್ಳುವ ಸೊಂಟ ನೋವು,

ಇನ್ನೆಲ್ಲೋ ಕಿಟಕಿ ಸಂಧಿಯಲ್ಲಿ ಇಣುಕಿ ಸಿಕ್ಕಿಬೀಳುವ ತುಂಟತನದ ಕ್ಷಣಗಳು...... ಮರೀಬೇಕು ಅಂದಷ್ಟು ನೆನಪಾಗೋ ಹಳೇ ದಿನಗಳು ... ನೋಡಬಾರದು ಅಂದುಕೊಂಡಷ್ಟು ಕಣ್ಣೆದುರಿಗೇ ಸುಳಿಯುವ ನೀನು .......

ನೀನೆ ಹೇಳು ಪ್ರೀತ್ಸೋದು ಸುಲಭನಾ !!!!!!!!

ಲೇಖಕರು

nishu

ಹನಿಮುತ್ತು

ಮೂಲ ಮಂಗ್ಳೂರಿನ ಪುಟ್ಟ ಹಳ್ಳಿ,ಇರುವುದು ಬೆಂಗಳೂರು...
ಮೊದಲ ಪ್ರೀತಿ ನನ್ನಲ್ಲಿ ಸಾವಿರ ಸಾಲುಗಳನ್ನು ಹುಟ್ಟಿಸಿಬಿಟ್ಟಿತ್ತು...
ಅವನಿಗಾಗಿಯೇ ಬರಿಯೋಕೆ ಶುರು ಮಾಡಿದ್ರೂ ಹಂಚಿಕೊಳ್ಳೋಣ ಅನಿಸಿ ವಿಸ್ಮಯ ನಗರಿಗೆ ಕಾಲಿಟ್ಟಿದ್ದೇನೆ..
ನಮ್ಮ ಪ್ರೇಮಕ್ಕೆ ನಿಮ್ಮ ಬೆಂಬಲವಿರಲಿ...

ಅನಿಸಿಕೆಗಳು

ಮಣಿಕಂಟ ಭಾನು, 07/14/2013 - 15:21

ಚನ್ನಗ್ಗೀದೆ ಮುಂದಿನ ಕಥೆ ಬರೆಯಿರೀ

sapna ಮಂಗಳ, 11/08/2016 - 16:14

Howdu nishu prithisodu thumba kasta.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.